ETV Bharat / state

ಸ್ವಾತಂತ್ರ್ಯ ಪೂರ್ವದಲ್ಲಿ ಲೀಸ್​ಗೆ ನೀಡಿದ್ದ ಅರಣ್ಯ ಪ್ರದೇಶ ವಾಪಸ್​ ಪಡೆಯಲಾಗುವುದು: ಸಚಿವ ಈಶ್ವರ ಖಂಡ್ರೆ - ಅರಣ್ಯ ಸಚಿವ ಈಶ್ವರ​ ಖಂಡ್ರೆ

ಲೀಸ್​ಗೆ ನೀಡಿದ್ದ ಸುಮಾರು 7 ಸಾವಿರ ಎಕರೆ ಅರಣ್ಯ ಭಾಗ ವಶಕ್ಕೆ ಪಡೆಯಬೇಕಿದೆ ಎಂದು ಅರಣ್ಯ ಸಚಿವ ಈಶ್ವರ​ ಖಂಡ್ರೆ ತಿಳಿಸಿದ್ದಾರೆ.

Etv Bharatminister-eshwar-khandre-reaction-on-forest-area-given-on-lease
ಸ್ವಾತಂತ್ರ್ಯ ಪೂರ್ವದಲ್ಲಿ ಲೀಸ್​ಗೆ ಕೊಟ್ಟಿದ್ದ ಅರಣ್ಯ ಪ್ರದೇಶ ವಾಪಾಸ್​ ಪಡೆಯಲಾಗುವುದು: ಸಚಿವ ಈಶ್ವರ್ ಖಂಡ್ರೆ
author img

By ETV Bharat Karnataka Team

Published : Feb 10, 2024, 8:48 PM IST

ಸಚಿವ ಈಶ್ವರ್ ಖಂಡ್ರೆ

ಮೈಸೂರು: "ಸ್ವಾತಂತ್ರ್ಯ ಪೂರ್ವದಲ್ಲಿ ಲೀಸ್​ಗೆ ಕೊಟ್ಟಿದ್ದ ಅರಣ್ಯ ಪ್ರದೇಶವನ್ನು ವಾಪಸ್ ಪಡೆಯಲಾಗುವುದು" ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಮೈಸೂರಿನ ಅರಣ್ಯ ಭವನದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

"ಬಹುದೊಡ್ಡ ಕಂಪನಿಗಳ ವಶದಲ್ಲಿ ಅರಣ್ಯ ಪ್ರದೇಶವಿದೆ. ಶೇ. 95ರಷ್ಟು ಭಾಗ ಅರಣ್ಯ ಪ್ರದೇಶ ಮಡಿಕೇರಿ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಇದೆ. ಸುಮಾರು 7 ಸಾವಿರ ಎಕರೆ ಅರಣ್ಯ ವಶಕ್ಕೆ ಪಡೆಯಬೇಕಿದೆ. ಕೆಲವು ಪ್ರಕರಣಗಳು ನ್ಯಾಯಾಲಯದಲ್ಲಿವೆ. ಮುಂದಿನ 6 ತಿಂಗಳುಗಳ ಕಾಲಾವಕಾಶದಲ್ಲಿ ಹಿಂದಕ್ಕೆ ಪಡೆಯುತ್ತೇವೆ. ಬಂಡೀಪುರ ಪಶ್ಚಿಮಘಟ್ಟದ ದಟ್ಟ ಅರಣ್ಯ. ಇಲ್ಲಿ ಕಾಡುಪ್ರಾಣಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಿದೆ. ಕಿರಿಕಿರಿಯಾಗದಂತೆ ಎಲ್ಲ ಕ್ರಮ ವಹಿಸಲಾಗಿದೆ. ಸುಮಾರು 7 ಸಾವಿರ ಎಕರೆ ಜಮೀನು ವಿವಿಧ ಹಂತದಲ್ಲಿ ಲೀಸ್ಟ್ ಪಿರಿಯಡ್ ಅಂತ್ಯವಾಗಿದೆ" ಎಂದರು.

"ನೂರಾರು ಕೋಟಿ ರೂಪಾಯಿ ಬಾಕಿ ವಸೂಲಿ ಮಾಡಬೇಕು. ಜಮೀನು ವಾಪಸ್ ಪಡೆಯುವ ಬಗ್ಗೆ ಚಿಂತಿಸಲಾಗಿದೆ. ದಿನದಿಂದ ದಿನಕ್ಕೆ ಕಾಡುಪ್ರಾಣಿಗಳು ಹೆಚ್ಚಾಗುತ್ತಿವೆ. ರಾಜ್ಯದಲ್ಲಿ ಆನೆಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಪ್ರಾಣಿ- ಮಾನವ ಸಂಘರ್ಷ ತಡೆಯಬೇಕಿದೆ. ಕಾನೂನು ತೊಡಕುಗಳನ್ನು ನಿವಾರಿಸಿ ಜಮೀನುಗಳನ್ನು ವಾಪಸ್ ಪಡೆಯಕೊಳ್ಳುತ್ತೇವೆ. ಒತ್ತುವರಿ ತೆರವು ಕಾರ್ಯವನ್ನು ಮಾಡುತ್ತಿದ್ದೇವೆ" ಎಂದು ತಿಳಿಸಿದರು.

ಅರಣ್ಯ ಸಂಪತ್ತಿನ ಗಡಿ ಸಮೀಕ್ಷೆಗೆ 6 ತಿಂಗಳ ಗಡುವು: "ಹಸಿರು ಅರಣ್ಯೀಕರಣ ವಲಯದ ಒಂದೆ ಸರ್ವೇ ನಂಬರ್​ನಲ್ಲಿ ಅರಣ್ಯ ಭೂಮಿ, ಕೃಷಿ ಹಾಗೂ ವಾಸಸ್ಥಾನವು ಇರುವುದರಿಂದ ಅನೇಕ ತೊಂದರೆಗಳು ಎದುರಾಗುತ್ತಿವೆ. ಇದರ ನಿವಾರಣೆಗೆ ಜಂಟಿ ಸರ್ವೇ ನಡೆಸಿ, ಅರಣ್ಯ ಸಂಪತ್ತು ಗಡಿ ನಿಗದಿಪಡಿಸಲು 6 ತಿಂಗಳ ಗಡುವು ನೀಡಲಾಗಿದೆ. ಬಹುತೇಕ ಕಡೆಗಳಲ್ಲಿ ಕಂದಾಯ ಗ್ರಾಮ, ಅರಣ್ಯ ಭೂಮಿ ಹಾಗೂ ಖಾಸಗಿ ಭೂಮಿಗಳ ವಿಂಗಡಿಸುವುದು ಬಹುದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಅಂತಹ ಪ್ರದೇಶಗಳಲ್ಲಿ ಕಂದಾಯ ಹಾಗೂ ಅರಣ್ಯ ಅಧಿಕಾರಿಗಳ ತಂಡ ಜಂಟಿ ಸಮೀಕ್ಷೆ ನಡೆಸಿ ಆಯಾ ಭೂಮಿಯನ್ನು ಕಾನೂನು ರೀತಿ ವಿಂಗಡಿಸುವಂತೆ ಸೂಚಿಸಲಾಗಿದೆ" ಎಂದು ಹೇಳಿದರು.

ಕಾಡು ಪ್ರಾಣಿಗಳನ್ನು ರಕ್ಷಣೆ ಮಾಡಿದ ನಂತರ ಅವುಗಳನ್ನು ಬೇರೆ ರಾಜ್ಯಗಳ ಗಡಿಗಳಲ್ಲಿ ಬಿಡಲಾಗುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, "ಪ್ರಾಣಿಗಳನ್ನು ರಕ್ಷಣೆ ಮಾಡಿದ ಮೇಲೆ ನಮ್ಮ ಅರಣ್ಯದಲ್ಲಿಯೇ ಬಿಡಲಾಗುವುದು, ಕೇರಳ ಗಡಿ ಅಥವಾ ತಮಿಳುನಾಡಿನ ಗಡಿಗೆ ಬಿಡುವುದಿಲ್ಲ" ಎಂದು ಸಚಿವರು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಹಾವೇರಿ: ಭೂಸ್ವಾಧೀನಕ್ಕೆ ಬಂದ ಅಧಿಕಾರಿಗಳೆದುರು ಆತ್ಮಹತ್ಯೆಗೆ ಯತ್ನಿಸಿದ ರೈತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.