ETV Bharat / state

ಚನ್ನಪಟ್ಟಣ ಉಪಚುನಾವಣೆಗೂ ಸಿಎಂ ಬದಲಾವಣೆಗೂ ಯಾವುದೇ ಸಂಬಂಧವಿಲ್ಲ: ಸಚಿವ ಚಲುವರಾಯಸ್ವಾಮಿ

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕದನ ಕಣ ರಂಗೇರಿದೆ. ಒಂದೆಡೆ ಎನ್​ಡಿಎ ನಾಯಕರು ಇನ್ನೊಂದೆಡೆ ಕಾಂಗ್ರೆಸ್​ ನಾಯಕರು ಈ ಕ್ಷೇತ್ರವನ್ನು ಗೆಲ್ಲಲು ರಣತಂತ್ರ ಹೆಣೆಯುತ್ತಿದ್ದಾರೆ.

MINISTER CHELUVARAYASWAMY
ಸಚಿವ ಚಲುವರಾಯಸ್ವಾಮಿ (ETV Bharat file photo)
author img

By ETV Bharat Karnataka Team

Published : Oct 28, 2024, 1:39 PM IST

ಬೆಂಗಳೂರು: ಪ್ರತಿಷ್ಠೆಯ ಕಣವಾಗಿರುವ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ್ರು ಒಂದು ವಾರವೇ ಪ್ರಚಾರ ಮಾಡಲಿ. ಸರ್ವೋಚ್ಚ ನಾಯಕರಾಗಿದ್ರು ಅವರೇ ಸೋತಿಲ್ವ ಎಂದು ಸಚಿವ ಚಲುವರಾಯಸ್ವಾಮಿ ಪ್ರಶ್ನಿಸಿದರು.

ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಕ್ಷೇತ್ರದಲ್ಲಿ ದೇವೇಗೌಡರು ಒಂದು ವಾರ ವಾಸ್ತವ್ಯ ಹೂಡುತ್ತಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ನಾವು ಪ್ರಚಾರ ಮಾಡಬೇಡಿ ಅನ್ನೋಕಾಗುತ್ತಾ?. ಸೋಲು ಗೆಲುವನ್ನ ಜನತೆ ಆ ಕ್ಷಣ ತೀರ್ಮಾನ ಮಾಡ್ತಾರೆ ಎಂದು ಹೇಳಿದರು.

ಸಚಿವ ಚಲುವರಾಯಸ್ವಾಮಿ (ETV Bharat)

ಮೂರು ಕ್ಷೇತ್ರಗಳನ್ನು ಗೆಲ್ಲುವ ವಿಶ್ವಾಸ; ಚನ್ನಪಟ್ಟಣ ವಿಧಾನಸಭೆ ಚುನಾವಣೆಗೂ ಸಿಎಂ ಬದಲಾವಣೆಗೂ ಯಾವುದೇ ಸಂಬಂಧವಿಲ್ಲ. ಸಿಎಂ ಬದಲಾವಣೆ ವಿಚಾರ ಇದೀಗ ಅಪ್ರಸ್ತುತ. ಅದನ್ನು ಚರ್ಚೆ ಮಾಡುವ ಅವಶ್ಯಕತೆ ಇಲ್ಲ. ಚನ್ನಪಟ್ಟಣ ಸೇರಿದಂತೆ ನಾವು ಮೂರು ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಸಚಿವ ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಸರ್ಕಾರದ ಗ್ಯಾರಂಟಿ ಯೋಜನೆ, ಸರ್ಕಾರದ ಸಾಧನೆಗಳ ಮೇಲೆ ನಾವು ಮತ ಕೇಳ್ತೀವಿ. ಗ್ಯಾರಂಟಿಗಳು ಒಕ್ಕಲಿಗ ಸಮುದಾಯಕ್ಕೂ ತಲುಪುತ್ತಿವೆ. ನಮಗೆ ಸಿಎಂ ಸಿದ್ದರಾಮಯ್ಯ ಅವರು ಯಾವುದೇ ಟಾಸ್ಕ್ ಅಂತ ನೀಡಿಲ್ಲ. ಆದರೆ ಹಳೇ ಮೈಸೂರು ಭಾಗದ ನಾವೆಲ್ಲ ಚನ್ನಪಟ್ಟಣದಲ್ಲಿ ಪ್ರಚಾರ ಮತ್ತು ಚುನಾವಣಾ ತಂತ್ರಗಾರಿಕೆಯನ್ನು ಮಾಡುತ್ತೇವೆ ಎಂದು ಹೇಳಿದರು.

ಹಳೇ ಮೈಸೂರು ಭಾಗದ ನಾವೆಲ್ಲ ಅಲ್ಲಿರುತ್ತೇವೆ. ಮುಂಬೈ ಕರ್ನಾಟಕದವರು ಶಿಗ್ಗಾಂವಿಯಲ್ಲಿ ಇರುತ್ತಾರೆ. ಹೈದರಾಬಾದ್ ಕರ್ನಾಟಕದವರು ಸಂಡೂರಿನಲ್ಲಿ ಇರುತ್ತಾರೆ. ನಾವು ಗೆದ್ದೇ ಗೆಲ್ತೀವಿ, ಉಸ್ತುವಾರಿ ಸಚಿವರು ಹೊಣೆ ಹೇಗೆ ಹೊರ್ತಾರೆ ಎಂದು ಚಲುರಾಯಸ್ವಾಮಿ ಪ್ರಶ್ನಿಸಿದರು.

ಇದನ್ನೂ ಓದಿ: ಏನೇ ಕುತಂತ್ರ ಮಾಡಿದರೂ ಜನರು ನಿಖಿಲ್​ನನ್ನು ಗೆಲ್ಲಿಸುತ್ತಾರೆ: ಹೆಚ್​.ಡಿ. ಕುಮಾರಸ್ವಾಮಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.