ETV Bharat / state

ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಗಾಂಜಾ ದಂಧೆಕೋರರು ಸೆರೆ - Marijuana Sellers Arrest

ಪೊಲೀಸರ ಮೇಲೆ ಹಲ್ಲೆಗೈದು ಪರಾರಿಯಾಗಲು ಯತ್ನಿಸಿದ 12 ಮಂದಿ ಗಾಂಜಾ ಮಾರಾಟಗಾರರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗಾಂಜಾ ಮಾರಾಟಗಾರರ ಬಂಧನ
ಗಾಂಜಾ ಮಾರಾಟಗಾರರಿಂದ ಪೊಲೀಸರು ವಶಕ್ಕೆ ಪಡೆದ ಮಾಲು (ETV Bharat)
author img

By ETV Bharat Karnataka Team

Published : Aug 9, 2024, 3:21 PM IST

Updated : Aug 9, 2024, 5:43 PM IST

ಪೊಲೀಸ್ ಕಮಿಷನರ್​ ಎನ್.ಶಶಿಕುಮಾರ್ (ETV Bharat)

ಹುಬ್ಬಳ್ಳಿ: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಗಾಂಜಾ ಮಾರಾಟಗಾರರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿ, 2.50 ಲಕ್ಷ ರೂಪಾಯಿ ಮೌಲ್ಯದ 2.5 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ ಎಂದು ಹು-ಧಾ ಪೊಲೀಸ್ ಕಮಿಷನರ್​ ಎನ್.ಶಶಿಕುಮಾರ್ ತಿಳಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಡಿಶಾದ ಕೇಶಬಚಂದ್ರ, ನೀಲಾಂಬರ ರಾವುತ್, ಉತ್ತರಖಂಡದ ಮುಹ್ಮದ್ ಅಲಿ, ಹಾವೇರಿಯ ತೌಸಿಫ್ ಅಹ್ಮದ್, ಹುಬ್ಬಳ್ಳಿಯ ಪವನ್​, ಸಿದ್ಧಾರ್ಥ, ಮಂಜುನಾಥ್​, ನದೀಂ, ವಿಠ್ಠಲ, ಶಾನವಾಜ, ಗಣಪತಸಾ, ಕಾರ್ತಿಕ
ಸೇರಿ 12 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಇವರಿಂದ ಒಟ್ಟು 5 ಲಕ್ಷ ರೂ. ಮೌಲ್ಯದ ಕಾರು, ಎರಡು ತಲ್ವಾರ್, ಡ್ರ್ಯಾಗರ್, 10 ಮೊಬೈಲ್ ಫೋನ್​ಗಳು ಹಾಗೂ 2 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಗಬ್ಬೂರ ಕ್ರಾಸ್​ ಬಳಿ ಆರೋಪಿಗಳನ್ನು ಕರೆದೊಯ್ದು ಪಂಚನಾಮೆ ನಡೆಸುತ್ತಿದ್ದಾಗ, ಕೇಶಬಚಂದ್ರ, ನೀಲಾಂಬರ ಮತ್ತು ತೌಸಿಫ್ ಎಂಬವರು ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದರು. ಸಿಸಿಬಿ ವಿಭಾಗದ ಪಾಟೀಲ ಮತ್ತು ಹೆದ್ದೇರಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕಿಮ್ಸ್‌ಗೆ ದಾಖಲಿಸಲಾಗಿದೆ ಎಂದು ಹೇಳಿದರು.

ಗಾಂಜಾ ಮಾರಾಟ- ನಾಲ್ವರ ಬಂಧನ: ಮತ್ತೊಂದೆಡೆ, ಧಾರವಾಡದ ಕೋಳಿಕೇರಿ ನುಚ್ಚಂಬ್ಲಿ ಬಾವಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಖಚಿತ ಮಾಹಿತಿ ಮೇರೆಗೆ ಧಾರವಾಡದ ಶಹರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಕೊಲ್ಹಾಪುರದ ಸೈಫ್​ ಅಲಿ, ಶಬ್ಬೀರ್ ಸುತಾರ್, ಸಂಕೇಶ್ವರ ಹತ್ತಿರದ ಸೊಲ್ಲಾಪುರದ ಸಂಕೇತ್ ಬಾಳು ಕೋತ್, ಧಾರವಾಡದ ಸಂದೀಪ್ ದಯಾನಂದ ಸಳಕೆ, ಹಜರತ್​ ಅಲಿ ಮಕಾನಾದಾರ ಬಂಧಿತರು ಎಂದು ಕಮಿಷನರ್​ ಎನ್.ಶಶಿಕುಮಾರ್ ಮಾಹಿತಿ ನೀಡಿದರು.

ಇವರು ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಿದ್ದು, ಕಾರ್ಯಾಚರಣೆ ನಡೆಸಿ ಆರೋಪಿತರಿಂದ 1,942 ಗ್ರಾಂ ಗಾಂಜಾ, 1,200 ನಗದು, ಎರಡು ಸ್ಮಾರ್ಟ್ ಫೋನ್, ಒಂದು ಬ್ಯಾಗ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಧಾರವಾಡ ಶಹರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್​ ಎನ್.ಸಿ.ಕಾಡದೇವರಮಠ ನೇತೃತ್ವದಲ್ಲಿ ಪ್ರಕರಣವನ್ನು ಬೇಧಿಸಲಾಗಿದೆ ಎಂದು ತಿಳಿಸಿದರು.

ಡಿಸಿಪಿಗಳಾದ ಮಹಾನಿಂಗ ನಂದಗಾವಿ, ರವೀಶ್ ಸಿ.ಆರ್.ಮತ್ತಿ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

ಇದನ್ನೂ ಓದಿ: 'ತಂದೆ - ತಾಯಿ ಮತ್ತು ನಾನು ಮಾತ್ರ ದುಡಿಯಬೇಕೆ?' ಎಂದ ತಮ್ಮನ ಎದೆಗೆ ಚಾಕು ಇರಿತ: ಅಣ್ಣನ ಬಂಧನ - stabbed to death

Last Updated : Aug 9, 2024, 5:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.