ETV Bharat / state

ಸತತ ಮಳೆಯಿಂದ ಕೋಡಿ ಬಿದ್ದ ಮದಗದ ಕೆರೆ: ರೈತರ ಮೊಗದಲ್ಲಿ ಮಂದಹಾಸ - Madagadakere Lake

ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಇತಿಹಾಸ ಪ್ರಸಿದ್ಧ ಮದಗದ ಕೆರೆ ಕೋಡಿ ಬಿದ್ದಿದೆ.

MADAGADAKERE LAKE
ಮದಗದ ಕೆರೆ (ETV Bharat)
author img

By ETV Bharat Karnataka Team

Published : Jul 27, 2024, 4:24 PM IST

ಸತತ ಮಳೆಯಿಂದ ಕೋಡಿ ಬಿದ್ದ ಮದಗದ ಕೆರೆ: ರೈತರ ಮೊಗದಲ್ಲಿ ಮಂದಹಾಸ (ETV Bharat)

ಚಿಕ್ಕಮಗಳೂರು: ಜಿಲ್ಲೆಯ ಪಶ್ಚಿಮ ಘಟ್ಟಗಳ ಸಾಲು, ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಕೆಮ್ಮನಗುಂಡಿ, ಸೇರಿದಂತೆ ಸುತ್ತ ಮುತ್ತಲ ಗುಡ್ಡ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿವುದರಿಂದ ಜಿಲ್ಲೆಯ ಎಲ್ಲ ಕೆರೆಗಳು ಭರ್ತಿಯಾಗಿ ಹೊರ ಚೆಲ್ಲುತ್ತಿವೆ.

ಜಿಲ್ಲೆಯ ವಿಶಾಲವಾದ ಹಾಗೂ ಜಾನಪದ ಸಾಹಿತ್ಯಕ್ಕೆ ಸಾಕ್ಷಿಯಾಗಿರುವ ಮದಗದ ಕೆರೆ ಕೂಡ ಸತತ ಮಳೆಯಿಂದ ಕೋಡಿ ಬಿದ್ದಿದೆ. ಬೇಸಿಗೆಯಲ್ಲಿ ಭಾಗಶಃ ಬತ್ತಿಹೋಗಿದ್ದ ಮದಗದ ಕೆರೆಗೆ ಇದೀಗ ಮತ್ತೆ ಜೀವಕಳೆ ಬಂದಿದ್ದರಿಂದ ಸ್ಥಳೀಯ ರೈತರಲ್ಲಿ ಸಂತಸ ಹಾಗೂ ಸಂಭ್ರಮದ ವಾತಾವರಣ ನಿರ್ಮಾಣ ಮಾಡಿದೆ. ತುಂಬಿ ತುಳುಕುತ್ತಿರುವ ಹಾಗೂ ಸಮುದ್ರದಂತೆ ಭಾಸವಾಗುವ ಮದಗದ ಕೆರೆ ಕಾಣಲು ನೂರಾರು ಜನ ಆಗಮಿಸುತ್ತಿದ್ದಾರೆ. ಕೋಡಿ ಬಿದ್ದು ಹರಿಯುತ್ತಿರುವ ಕೆರೆ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

336 ಹೆಕ್ಟೇರ್, 2,036 ಎಕರೆ ವಿಸ್ತೀರ್ಣ ಹೊಂದಿರುವ ಜಿಲ್ಲೆಯ ಬೃಹತ್ ಕೆರೆ ಇದಾಗಿದೆ. ಸುತ್ತಲೂ ಮುಗಿಲೆತ್ತರದ ಬೆಟ್ಟ - ಗುಡ್ಡಗಳು ಮಧ್ಯದಲ್ಲಿ ಕೆರೆ ನಿರ್ಮಾಣವಾಗಿದೆ. ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದಲ್ಲಿ ಹರಡಿಕೊಂಡಿರುವ ಈ ಕೆರೆ, ಲಕ್ಷಾಂತರ ಎಕರೆ ಭೂಮಿಗೆ ನೀರನ್ನು ನೀಡುವ ರೈತರ ಜೀವಾಳವಾಗಿದೆ. ಪಶ್ಚಿಮ ಘಟ್ಟಗಳ ಸಾಲಲ್ಲಿ ಇದೀಗ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆ, ಕೆರೆಗೆ ತುಂಬಾ ದೊಡ್ಡ ಪ್ರಮಾಣದಲ್ಲಿ ನೀರು ಹರಿದುಕೊಂಡು ಬರುತ್ತಿದೆ.

ಈ ಕೆರೆ ಭರ್ತಿಯಾದರೆ ಕಡೂರು ತಾಲೂಕಿನ ನೀರಿನ ಬವಣೆ ತಪ್ಪಲಿದ್ದು, ಕೋಡಿ ಬಿದ್ದು ನಂತರ ಚಿತ್ರದುರ್ಗ ಜಿಲ್ಲೆಯ ಮಾರಿಕಣಿವೆ ಡ್ಯಾಂ ಸೇರಲಿದೆ. ಕೆರೆ ತಪ್ಪಲಿನ 34 ಹಳ್ಳಿಯ ಜನ - ಜಾನುವಾರುಗಳಿಗೆ ಈ ನೀರೇ ಜೀವ ಜಲವಾಗಿದ್ದು, ಕೆರೆಯಲ್ಲಿ ನೀರು ಕಂಡು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಕಳೆದ ವರ್ಷ ಸರಿಯಾದ ಪ್ರಮಾಣದಲ್ಲಿ ಹಾಗೂ ನಿಗದಿತ ಸಮಯಕ್ಕೆ ಮಳೆಯಾಗದ ಹಿನ್ನೆಲೆ ತುಂಬಾ ತಡವಾಗಿ ಈ ಕೆರೆ ತುಂಬಿ ಕೋಡಿ ಬಿದ್ದಿತ್ತು. ಆದರೆ, ಈ ವರ್ಷ ನಿರಂತರವಾಗಿ ಹಲವು ದಿನಗಳಿಂದ ಈ ಭಾಗದಲ್ಲಿ ಮಳೆ ಬೀಳುತ್ತಿರುವ ಹಿನ್ನೆಲೆ ಬಹುಬೇಗ ಭರ್ತಿಯಾಗಿದೆ.

ಇದನ್ನೂ ಓದಿ: ಕೆಆರ್​​ಎಸ್ ಡ್ಯಾಂನಿಂದ 1.3 ಲಕ್ಷ ಕ್ಯೂಸೆಕ್​ ನೀರು ಬಿಡುಗಡೆ: ಎಚ್ಚರ ವಹಿಸಲು ಜನರಿಗೆ ಸೂಚನೆ - KRS Dam Water Released

ETV Bharat Logo

Copyright © 2024 Ushodaya Enterprises Pvt. Ltd., All Rights Reserved.