ETV Bharat / state

ರಾಜ್ಯಾದ್ಯಂತ 54 ಕಡೆ ಸರ್ಕಾರಿ ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ - Lokayukta Raid

ಆದಾಯಕ್ಕಿಂತ ಹೆಚ್ಚು ಆಸ್ತಿ ಸಂಪಾದಿಸಿರುವ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗಿನಿಂದಲೇ ಸರ್ಕಾರಿ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸುತ್ತಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

ಲೋಕಾಯುಕ್ತ ದಾಳಿ
ಲೋಕಾಯುಕ್ತ ದಾಳಿಗೊಳಗಾದ ಸರ್ಕಾರಿ ಅಧಿಕಾರಿಗಳ ನಿವಾಸಗಳು (ETV Bharat)
author img

By ETV Bharat Karnataka Team

Published : Jul 19, 2024, 9:25 AM IST

Updated : Jul 19, 2024, 10:37 AM IST

ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ಸರ್ಕಾರಿ ಅಧಿಕಾರಿಗಳ ಬೇಟೆ ಮುಂದುವರೆಸಿದ್ದಾರೆ. ಇಂದು ಬೆಳಗ್ಗಿನಿಂದಲೇ ರಾಜ್ಯಾದ್ಯಂತ ಕಾರ್ಯಾಚರಣೆ ಆರಂಭಿಸಿದ್ದಾರೆ. ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿಯ ನಿವಾಸಗಳು ಹಾಗು ಅವರಿಗೆ ಸಂಬಂಧಿಸಿದ ಇತರೆ ಸ್ಥಳಗಳ ಮೇಲೆ ದಾಳಿ ನಡೆಯುತ್ತಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ತುಮಕೂರು, ಮೈಸೂರು, ಕೊಳ್ಳೇಗಾಲ ಯಾದಗಿರಿ ಸೇರಿದಂತೆ ಒಟ್ಟಾರೆ 54 ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ಲೋಕಾಯುಕ್ತ ದಾಳಿ ವೇಳೆ ಚಿನ್ನ, ನಗದು ಪತ್ತೆ
ಲೋಕಾಯುಕ್ತ ದಾಳಿ ಪತ್ತೆಯಾದ ಬೆಲೆ ಬಾಳುವ ವಾಚ್‌ಗಳು (ETV Bharat)

ಲೋಕಾಯುಕ್ತ ದಾಳಿಗೊಳಗಾದ ಅಧಿಕಾರಿಗಳ ವಿವರ:

  • ಸಿ.ಟಿ.ಮುದ್ದುಕುಮಾರ್ - ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ, ಇನ್ವೆಸ್ಟ್ ಕರ್ನಾಟಕ ಫೋರಮ್, ಬೆಂಗಳೂರು
  • ಬಲವಂತ್ - ಯೋಜನಾ ನಿರ್ದೇಶಕ, ಯಾದಗಿರಿ ಜಿಲ್ಲಾ ಪಂಚಾಯತ್
  • ಆರ್.ಸಿದ್ಧಪ್ಪ - ಹಿರಿಯ ಪಶುವೈದ್ಯ, ಪ್ರಾಥಮಿಕ ಪಶುವೈದ್ಯಕೀಯ ಕೇಂದ್ರ, ರಾಮೇಶ್ವರ, ದೊಡ್ಡಬಳ್ಳಾಪುರ ತಾಲೂಕು
  • ಕೆ.ನರಸಿಂಹಮೂರ್ತಿ - ಪೌರಾಯುಕ್ತ, ಹೆಬ್ಬಗೋಡಿ ಸಿಎಂಸಿ
  • ಬಿ.ವಿ.ರಾಜಾ - ಪ್ರಥಮ ದರ್ಜೆ ಸಹಾಯಕ, ಕೆಐಎಡಿಬಿ (ಭೂಸ್ವಾಧೀನ ಅಧಿಕಾರಿ), ಬೆಂಗಳೂರು
  • ರಮೇಶ್‌ ಕುಮಾರ್ - ಜಂಟಿ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ, ಬೆಂಗಳೂರು
  • ಅತ್ತರ್ ಅಲಿ - ಕಾನೂನು ಮಾಪನಶಾಸ್ತ್ರದ ಉಪ ನಿಯಂತ್ರಕ, ಬೆಂಗಳೂರು ವಿಭಾಗ
  • ನಾಗೇಶ್.ಬಿ - ಅಧ್ಯಕ್ಷ, ಅಂತರಗಂಗೆ ಗ್ರಾಮ ಪಂಚಾಯತ್, ಭದ್ರಾವತಿ ತಾಲೂಕು
  • ಪ್ರಕಾಶ್ - ಉಪ ನಿರ್ದೇಶಕ, ತೋಟಗಾರಿಕಾ ಇಲಾಖೆ, ಶಿವಮೊಗ್ಗ
  • ಚೇತನ್ ಕುಮಾರ್.ಎಸ್ - ಕಾರ್ಮಿಕ ಅಧಿಕಾರಿ, ಕಾರ್ಮಿಕ ಇಲಾಖೆ, ಮಂಡ್ಯ ವಿಭಾಗ
  • ಮಂಜುನಾಥ್.ಟಿ.ಆರ್ - ಪ್ರಥಮ ದರ್ಜೆ ಸಹಾಯಕ, ಬೆಂಗಳೂರು ಉತ್ತರ ಉಪ ವಿಭಾಗ ಕಚೇರಿ

ಮಂಗಳೂರು ಪಾಲಿಕೆ ಆಯುಕ್ತರ ನಿವಾಸದ ಮೇಲೆ ದಾಳಿ: ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಆನಂದ್ ಸಿ.ಎಲ್. ನಿವಾಸದ ಮೇಲೆ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಲೋಕಾಯುಕ್ತ ದಾಳಿ ವೇಳೆ ಚಿನ್ನ, ನಗದು ಪತ್ತೆ
ಲೋಕಾಯುಕ್ತ ದಾಳಿ ವೇಳೆ ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆ (ETV Bharat)

ಲೇಬರ್ ಇನ್ಸ್​ಪೆಕ್ಟರ್ ಮನೆ ಮೇಲೆ ದಾಳಿ: ಮೈಸೂರಿನ ಶಾರದಾದೇವಿ ನಗರದಲ್ಲಿರುವ ಲೇಬರ್ ಇನ್ಸ್‌ಪೆಕ್ಟರ್ ಚೇತನ್ ಮನೆ ಮೇಲೆ ದಾಳಿ ಮಾಡಿದ್ದು, ದಾಖಲಾತಿ ಪರಿಶೀಲನೆ ನಡೆಯುತ್ತಿದೆ.

ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತರ ಮೇಲೆ ದಾಳಿ: ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ ರಮೇಶ್ ಕುಮಾರ್ ಅವರ ಬೆಂಗಳೂರಿನ ಮನೆ ಮತ್ತು ಕೊಳ್ಳೇಗಾಲದಲ್ಲಿರುವ ಸಂಬಂಧಿ ಪುಟ್ಟಸ್ವಾಮಿ ಮನೆ ಮೇಲೂ ದಾಳಿ ನಡೆದಿದೆ.

ಯಾದಗಿರಿ ಜಿ.ಪಂ.ಯೋಜನಾಧಿಕಾರಿ ಮೇಲೆ ದಾಳಿ: ಯಾದಗಿರಿ ಜಿ.ಪಂ.ಯೋಜನಾಧಿಕಾರಿ ಬಲವಂತ ರಾಠೋಡ ಅವರ ಸರ್ಕಾರಿ ನಿವಾಸ ಮತ್ತು ವಿಜಯಪುರ ನಗರದಲ್ಲಿನ ಮನೆ ಮೇಲೂ ದಾಳಿ ನಡೆದಿದೆ.

ತೋಟಗಾರಿಕಾ ಇಲಾಖೆ ಉಪ ನಿರ್ದೇಶಕರ ಮೇಲೆ ದಾಳಿ: ಶಿವಮೊಗ್ಗ ಜಿಲ್ಲೆಯ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಪ್ರಕಾಶ್ ಅವರ ಮನೆ ಹಾಗೂ ಭದ್ರಾವತಿ ತಾಲೂಕು ಅಂತರಗಂಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಪ್ರಕಾಶ್ ಅವರ ಮನೆ ಹಾಗೂ ಗ್ರಾಮ ಪಂಚಾಯತಿ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.

ಶೋಧ ವೇಳೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಪತ್ತೆ: ಮನೆ ಮೇಲೆ ದಾಳಿ ನಡೆಸಿದ ಸಂದರ್ಭ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಜತೆಗೆ ದುಬಾರಿ ವಾಚ್​, ಬೆಳ್ಳಿ, ನಗದು ಪತ್ತೆಯಾಗಿದೆ.

ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ
ಅಧಿಕಾರಿಗಳ ನಿವಾಸಗಳ ಮೇಲೆ ಲೋಕಾಯುಕ್ತ ದಾಳಿ (ETV Bharat)

ಇದನ್ನೂ ಓದಿ: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರ ಅತೃಪ್ತಿ; ಕೆಲವು ಸಚಿವರನ್ನು ಕೈ ಬಿಡಲು ಆಗ್ರಹ - CLP Meeting

Last Updated : Jul 19, 2024, 10:37 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.