ತುಮಕೂರು: ಲೋಕಸಭೆಯ ಚುನಾವಣೆಗೆ ಎರಡನೇ ಹಂತದ ಮತದಾನ ಆರಂಭವಾಗಿದೆ. ಸಿದ್ಧಗಂಗಾ ಮಠ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಸಿದ್ದಲಿಂಗ ಸ್ವಾಮೀಜಿ ಮೊದಲು ಮತಹಕ್ಕು ಚಲಾಯಿಸಿದರು. ಮತದಾನಕ್ಕೂ ಮುನ್ನ ಮಠದಲ್ಲಿ ಗೋವುಗಳಿಗೆ ಸ್ವಾಮೀಜಿ ಹಣ್ಣು ತಿನ್ನಿಸಿ ಮತಗಟ್ಟೆಗೆ ಆಗಮಿಸಿದರು.
ಮತದಾನದ ಬಳಿಕ ಮಾತನಾಡಿದ ಸಿದ್ಧಲಿಂಗ ಸ್ವಾಮೀಜಿ, ದೇಶದಲ್ಲಿ ಕಡ್ಡಾಯವಾಗಿ ಮತದಾನ ಮಾಡಬೇಕಿದೆ. ಹಾಗಾದರೆ ಮಾತ್ರ ಶೇಕಡಾ 100ರಷ್ಟು ಮತದಾನ ಪ್ರಮಾಣವಾಗಲಿದೆ. ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನದ ಜಾಗೃತಿಯಾಗಿದೆ. ಆದರೆ, ಹೆಚ್ಚಿನ ವಿದ್ಯಾವಂತರಾದ ನಗರ ಪ್ರದೇಶದಲ್ಲಿ ಇರುವಂತವರು ಮತದಾನ ಮಾಡಲು ನಿರಾಸಕ್ತಿ ತೋರುತ್ತಿದ್ದಾರೆ. ಇದು ಆಗಬಾರದು ಎಂದು ಹೇಳಿದರು.
ಪ್ರಜಾಪ್ರಭುತ್ವ ಉಳಿಯಬೇಕಾದರೆ ಪ್ರತಿಯೊಬ್ಬರು ಕಡ್ಡಾಯವಾಗಿ ನಿಷ್ಠೆಯಿಂದ ಮತದಾನ ಮಾಡಬೇಕಿದೆ. ತಮ್ಮ ನಾಯಕನನ್ನು ಆಯ್ಕೆ ಮಾಡಿಕೊಳ್ಳುವಂತಹ ಅವಕಾಶವನ್ನು ಜನರಿಗೆ ಪ್ರಜಾಪ್ರಭುತ್ವ ನೀಡಿದೆ. ರಾಜ್ಯದಲ್ಲಿ ಅತಿ ಹೆಚ್ಚು ಬಾರಿ ಚುನಾವಣೆಯಲ್ಲಿ ಮತದಾನ ಮಾಡಿರುವಂತಹ ಕೀರ್ತಿ ಶಿವಕುಮಾರ ಸ್ವಾಮೀಜಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ಇದನ್ನೂ ಓದಿ: LIVE UPDATE: ಲೇಖಕಿ ಸುಧಾಮೂರ್ತಿ, ರಾಹುಲ್ ದ್ರಾವಿಡ್, ನಟ ಗಣೇಶ್ರಿಂದ ಮತದಾನ - Lokasabha Election 2024