ಬೆಂಗಳೂರು: ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರಿದೆ. ಮೊದಲ ಹಂತದಲ್ಲಿ ಮತದಾನ ನಡೆಯಲಿರುವ 14 ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ಕಾರ್ಯ ನಡೆಯುತ್ತಿದೆ. ಬಿರು ಬಿಸಿಲಿನಲ್ಲೂ ಅಭ್ಯರ್ಥಿಗಳು ಮತಬೇಟೆ ನಡೆಸುತ್ತಿದ್ದಾರೆ. ಏ.26ಕ್ಕೆ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ.
ರಾಜ್ಯದಲ್ಲಿ ಕಣದಲ್ಲಿರುವ ಅಭ್ಯರ್ಥಿಗಳ ಬಗ್ಗೆ ಮತದಾರರು ಮೂಲ ಮಾಹಿತಿ ತಿಳಿದುಕೊಳ್ಳವುದು ಅತ್ಯಗತ್ಯ. ಚುನಾವಣೆಗೆ ಸ್ಪರ್ಧಿಸಲು ವಿದ್ಯಾರ್ಹತೆಯ ಅಗತ್ಯವಿಲ್ಲ. ಆದರೆ, ವಿದ್ಯಾವಂತ ಜನಪ್ರತಿನಿಧಿಗಳಿದ್ದರೆ ಆಡಳಿತದಲ್ಲಿ ಸುಧಾರಣೆ ತರಬಹುದು ಎಂಬುದು ಸಾಮಾನ್ಯವಾಗಿ ಕೇಳಿಬರುವ ಅಭಿಪ್ರಾಯ.
ಹಾಗಂತ, ವಿದ್ಯಾರ್ಹತೆಯೊಂದೇ ದಕ್ಷ ಆಡಳಿತ ನೀಡಬಲ್ಲದು ಎನ್ನುವಂತಿಲ್ಲ. ಆದರೂ ನಮ್ಮನ್ನು ಪ್ರತಿನಿಧಿಸುವವರ ವಿದ್ಯಾರ್ಹತೆಗಳೇನು ಎಂಬ ಬಗ್ಗೆ ಮತದಾರರಲ್ಲಿ ಕುತೂಹಲವೂ ಇದ್ದೇ ಇರುತ್ತೆ. ಈ ಬಾರಿ ರಾಜ್ಯದಲ್ಲಿ ತಮ್ಮನ್ನು ಪ್ರತಿನಿಧಿಸಲು ಚುನಾವಣಾ ಆಖಾಡಕ್ಕಿಳಿದಿರುವ ಪ್ರಮುಖ ಅಭ್ಯರ್ಥಿಗಳ ವಿದ್ಯಾರ್ಹತೆ ಏನು ನೋಡೋಣ.
ಜೆಡಿಎಸ್, ಬಿಜೆಪಿ, ಕಾಂಗ್ರೆಸ್‌ನ ಪ್ರಮುಖ ಅಭ್ಯರ್ಥಿಗಳ ಪೈಕಿ 6 ಮಂದಿ ಪದವಿ ಶಿಕ್ಷಣದ ವಿದ್ಯಾರ್ಹತೆ ಹೊಂದಿದ್ದಾರೆ. ಈ ಪೈಕಿ ನಾಲ್ವರು ಅಭ್ಯರ್ಥಿಗಳು ಬಿಎ ಮತ್ತು ಕಾನೂನು (LLB) ಪದವಿ ಹೊಂದಿದ್ದಾರೆ. ಬಿಜೆಪಿ, ಜೆಡಿಎಸ್, ಕಾಂಗ್ರೆಸ್‌ನ 5 ಮಂದಿ ಅಭ್ಯರ್ಥಿಗಳು ಇಂಜಿನಿಯರಿಂಗ್ ಪದವಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ನೀಡಿದ ಅಫಿಡವಿಟ್ನಲ್ಲಿ ಮಾಹಿತಿ ನೀಡಿದ್ದಾರೆ. ಒಬ್ಬ ಅಭ್ಯರ್ಥಿ 7ನೇ ಕ್ಲಾಸ್‌ವರೆಗೆ ಶಿಕ್ಷಣ ಪಡೆದಿದ್ದಾರೆ. ಇನ್ನು 3 ಮಂದಿ ಅಭ್ಯರ್ಥಿಗಳು PUCವರೆಗೆ ವಿದ್ಯಾರ್ಹತೆ ಹೊಂದಿದ್ದಾರೆ. ಇಬ್ಬರು MBBS, MD ವಿದ್ಯಾರ್ಹತೆ ಹೊಂದಿದ್ದಾರೆ. 4 ಅಭ್ಯರ್ಥಿಗಳು ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇನ್ನು ಒಬ್ಬ ಅಭ್ಯರ್ಥಿ PHD ಪಡೆದುಕೊಂಡಿದ್ದಾರೆ.
ಯಾರ ವಿದ್ಯಾರ್ಹತೆ ಏನು?:
1. ಬೆಂಗಳೂರು ಕೇಂದ್ರ ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ಪಿ.ಸಿ.ಮೋಹನ್
ವಿದ್ಯಾರ್ಹತೆ: PUC
ಕಾಂಗ್ರೆಸ್ ಅಭ್ಯರ್ಥಿ: ಮನ್ಸೂರ್ ಅಲಿ ಖಾನ್
ವಿದ್ಯಾರ್ಹತೆ: BBM
2. ಬೆಂಗಳೂರು ಉತ್ತರ ಕ್ಷೇತ್ರ:
ಕಾಂಗ್ರೆಸ್ ಅಭ್ಯರ್ಥಿ: ಪ್ರೊ.ರಾಜೀವ್ ಗೌಡ
ವಿದ್ಯಾರ್ಹತೆ: Phd, MA
ಬಿಜೆಪಿ ಅಭ್ಯರ್ಥಿ: ಶೋಭಾ ಕರಂದ್ಲಾಜೆ
ವಿದ್ಯಾರ್ಹತೆ: MA (social service)
3. ಬೆಂಗಳೂರು ಗ್ರಾಮಾಂತರ ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ಡಾ.ಸಿ.ಎನ್.ಮಂಜುನಾಥ್
ವಿದ್ಯಾರ್ಹತೆ: MBBS, MD, DM (Cardiology)
ಕಾಂಗ್ರೆಸ್ ಅಭ್ಯರ್ಥಿ: ಡಿ.ಕೆ.ಸುರೇಶ್
ವಿದ್ಯಾರ್ಹತೆ: PUC
4. ಬೆಂಗಳೂರು ದಕ್ಷಿಣ ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ತೇಜಸ್ವಿ ಸೂರ್ಯ
ವಿದ್ಯಾರ್ಹತೆ: BA, LLB
ಕಾಂಗ್ರೆಸ್ ಅಭ್ಯರ್ಥಿ: ಸೌಮ್ಯ ರೆಡ್ಡಿ
ವಿದ್ಯಾರ್ಹತೆ: BE (Chemical Eng.)
5. ಚಾಮರಾಜನಗರ ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ಎಸ್.ಬಾಲರಾಜು
ವಿದ್ಯಾರ್ಹತೆ: BE (Civil Eng.)
ಕಾಂಗ್ರೆಸ್ ಅಭ್ಯರ್ಥಿ: ಸುನೀಲ್ ಬೋಸ್
ವಿದ್ಯಾರ್ಹತೆ: PUC
6. ಚಿಕ್ಕಬಳ್ಳಾಪುರ ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ಡಾ.ಕೆ.ಸುಧಾಕರ್
ವಿದ್ಯಾರ್ಹತೆ: MBBS
ಕಾಂಗ್ರೆಸ್ ಅಭ್ಯರ್ಥಿ: ರಕ್ಷಾ ರಾಮಯ್ಯ
ವಿದ್ಯಾರ್ಹತೆ: MBA
7. ಚಿತ್ರದುರ್ಗ ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ಗೋವಿಂದ ಕಾರಜೋಳ
ವಿದ್ಯಾರ್ಹತೆ: SSLC
ಕಾಂಗ್ರೆಸ್ ಅಭ್ಯರ್ಥಿ: ಬಿ.ಎನ್.ಚಂದ್ರಪ್ಪ
ವಿದ್ಯಾರ್ಹತೆ: MA (Social science)
8. ದಕ್ಷಿಣ ಕನ್ನಡ ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ಕ್ಯಾಪ್ಟನ್ ಬ್ರಜೇಶ್ ಚೌಟ
ವಿದ್ಯಾರ್ಹತೆ: IIM (Business Mgt.)
ಕಾಂಗ್ರೆಸ್ ಅಭ್ಯರ್ಥಿ: ಆರ್.ಪದ್ಮರಾಜ್
ವಿದ್ಯಾರ್ಹತೆ: BA, LLB
9. ಹಾಸನ ಕ್ಷೇತ್ರ:
ಜೆಡಿಎಸ್ ಅಭ್ಯರ್ಥಿ: ಪ್ರಜ್ವಲ್ ರೇವಣ್ಣ
ವಿದ್ಯಾರ್ಹತೆ: BE
ಕಾಂಗ್ರೆಸ್ ಅಭ್ಯರ್ಥಿ: ಶ್ರೇಯಸ್ ಪಟೇಲ್
ವಿದ್ಯಾರ್ಹತೆ: BBM
10 ಕೋಲಾರ ಕ್ಷೇತ್ರ:
ಜೆಡಿಎಸ್ ಅಭ್ಯರ್ಥಿ: ಎಂ.ಮಲ್ಲೇಶ್ ಬಾಬು
ವಿದ್ಯಾರ್ಹತೆ: MBA
ಕಾಂಗ್ರೆಸ್ ಅಭ್ಯರ್ಥಿ: ಕೆ.ವಿ.ಗೌತಮ್
ವಿದ್ಯಾರ್ಹತೆ: BE
11. ಮಂಡ್ಯ ಕ್ಷೇತ್ರ:
ಜೆಡಿಎಸ್ ಅಭ್ಯರ್ಥಿ: ಹೆಚ್.ಡಿ.ಕುಮಾರಸ್ವಾಮಿ
ವಿದ್ಯಾರ್ಹತೆ: B.Sc
ಕಾಂಗ್ರೆಸ್ ಅಭ್ಯರ್ಥಿ: ವೆಂಕಟರಮಣೆಗೌಡ
ವಿದ್ಯಾರ್ಹತೆ: B.Sc
12. ಮೈಸೂರು ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ಯದುವೀರ್ ಒಡೆಯರ್
ವಿದ್ಯಾರ್ಹತೆ: BA
ಕಾಂಗ್ರೆಸ್ ಅಭ್ಯರ್ಥಿ: ಲಕ್ಷ್ಮಣ್
ವಿದ್ಯಾರ್ಹತೆ: BE
13. ತುಮಕೂರು ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ವಿ.ಸೋಮಣ್ಣ
ವಿದ್ಯಾರ್ಹತೆ: BA
ಕಾಂಗ್ರೆಸ್ ಅಭ್ಯರ್ಥಿ: ಎಸ್.ಪಿ.ಮುದ್ದಹನುಮೇಗೌಡ
ವಿದ್ಯಾರ್ಹತೆ: BA, LLB
14. ಉಡುಪಿ-ಚಿಕ್ಕಮಗಳೂರು ಕ್ಷೇತ್ರ:
ಬಿಜೆಪಿ ಅಭ್ಯರ್ಥಿ: ಕೋಟಾ ಶ್ರೀನಿವಾಸ್ ಪೂಜಾರಿ
ವಿದ್ಯಾರ್ಹತೆ: 7th class
ಕಾಂಗ್ರೆಸ್ ಅಭ್ಯರ್ಥಿ: ಜಯಪ್ರಕಾಶ್ ಹೆಗ್ಡೆ
ವಿದ್ಯಾರ್ಹತೆ: BA, LLB
ಇದನ್ನೂ ಓದಿ: ಅಶ್ವಿನಿ ಪುನೀತ್ ರಾಜ್ಕುಮಾರ್ ಕುರಿತು ಅವಹೇಳನಕಾರಿ ಹೇಳಿಕೆ: ಕಿಡಿಗೇಡಿಗಳ ವಿರುದ್ಧ ಕ್ರಮ- ಪರಮೇಶ್ವರ್ - G Parameshwar