ETV Bharat / state

ಮೊದಲು ಪೂರ್ಣ ಬಜೆಟ್​ ಓದಲಿ ನಂತರ ಕಾಂಗ್ರೆಸ್​ನವರು ಆರೋಪ ಮಾಡಲಿ: ಬಸವರಾಜ್ ಬೊಮ್ಮಾಯಿ - Attack against Congress

''ಮೊದಲು ಪೂರ್ಣ ಬಜೆಟ್​ನ್ನು ಓದಲಿ ನಂತರ, ಕಾಂಗ್ರೆಸ್​ನವರು ಆರೋಪ ಮಾಡಲಿ'' ಎಂದು ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

Basavaraj Bommai  Attack against Congress  Haveri
ಬಸವರಾಜ್ ಬೊಮ್ಮಾಯಿ (ETV Bharat)
author img

By ETV Bharat Karnataka Team

Published : Jul 27, 2024, 6:52 PM IST

ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಮಾತನಾಡಿದರು. (ETV Bharat)

ಹಾವೇರಿ: ''ಕಾಂಗ್ರೆಸ್​ನವರು ಮೊದಲು ಪೂರ್ಣ ಬಜೆಟ್​ ಓದಲಿ ನಂತರ ಆರೋಪ ಮಾಡಲಿ. ಯಾವ ಇಲಾಖೆಗೆ ಎಷ್ಟು ದುಡ್ಡು ಬಂದಿದೆ ಎಂಬುದನ್ನು ತಿಳಿದಕೊಳ್ಳಲಿ. ಅದೇ ಅಕೌಂಟ್​ಗೆ ಹಿಂದೆ ಯುಪಿಎ ಸರ್ಕಾರ ಇದ್ದಾಗ ಎಷ್ಟು ಬಂದಿತ್ತು? ಕಾಂಗ್ರೆಸ್​ನವರು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡ್ತಿದ್ದಾರೆ'' ಎಂದು ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು.

ನಗರದಲ್ಲಿ ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಕಾಂಗ್ರೆಸ್​ನವರು ಅನುದಾನ ಬಂದೇ ಇಲ್ಲ ಅಂತಾರೆ'' ಎಂದ ಅವರು, ''44,870 ಕೋಟಿ ಹಣವನ್ನು ಡೆವಲ್ಯೂಷನ್ ಆಪ್ ಫಂಡ್​ನಲ್ಲಿ ಕರ್ನಾಟಕಕ್ಕೆ ಕೊಟ್ಟಿದಾರೆ. ಈ ಬಗ್ಗೆ ಸೋಮವಾರ ಎಲ್ಲಾ ಮಾಹಿತಿ ಬಿಡುಗಡೆ ಮಾಡುವೆ'' ಎಂದು ತಿಳಿಸಿದರು.

''ಕೇಂದ್ರ ಸರ್ಕಾರದಿಂದ ಕರ್ನಾಟಕದ ಪ್ರಗತಿಗೆ ಎಲ್ಲ ರೀತಿಯ ನೆರವು ನೀಡಲಾಗಿದೆ. ಜೊತೆಗೆ ಇನ್ನಷ್ಟು ಅನುದಾನ ಕೊಡಬೇಕಿದೆ. ಭದ್ರಾ ಮೇಲ್ದಂಡೆ ಯೋಜನೆಗೆ 5,000 ಕೋಟಿ ಬಾಕಿ ಅನುದಾನ ಕೇಳಿದ್ದೇವೆ. ಕಾಂಗ್ರೆಸ್​ನವರು ಸುಮ್ಮನೆ ಆರೋಪ ಮಾಡಿಕೊಂಡು ಕೂತಿದ್ದಾರೆ. ಅನುದಾನ ಹರಿಯಲು ಪ್ರಾರಂಭ ಆಗಿದೆ, ಇನ್ಮುಂದೆ ಹೆಚ್ಚಿನ ಅನುದಾನ ಹರಿಯುತ್ತಲೇ ಇರುತ್ತೆ'' ಎಂದರು.

''ಮುಡಾ ಹಗರಣದ ಕುರಿತು ನಾಳೆ ಬಿಜೆಪಿ- ಜೆಡಿಎಸ್ ಸಭೆ ಇದೆ. ಸಭೆಯಲ್ಲಿ ಹೋರಾಟದ ರೂಪುರೇೆಷೆ ಬಗ್ಗೆ ಚರ್ಚೆ ಮಾಡುತ್ತೇವೆ. ಮುಡಾ ಹಗರಣದಲ್ಲಿ ತಪ್ಪಾಗಿಲ್ಲ ಎಂದರೆ ತನಿಖೆಗೆ ಏಕೆ ವಹಿಸಿದ್ದಾರೆ. ತನಿಖೆಯಿಂದ ಎಲ್ಲವೂ ಗೊತ್ತಾಗಲಿದೆ'' ಎಂದು ಬೊಮ್ಮಾಯಿ ಪ್ರಶ್ನಿಸಿದರು.

ಸಿಎಂ ಸಿದ್ದರಾಮಯ್ಯ ಬಿಜೆಪಿಯವರು ಮನೆ ಮುರುಕುರು ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ ಅವರು, ''ಒಂದೂವರೆ ವರ್ಷದಲ್ಲಿ ಮನೆ ಮುರುಕರು ಯಾರು ಎಂದು ಜನಕ್ಕೆ ಗೊತ್ತಾಗಿದೆ. ಮನೆ‌ ಮುರುಕರು ಯಾರು ಅಂತ ಜನ ತೀರ್ಮಾನ ಮಾಡುತ್ತಾರೆ. ಜನರೇ ಸರ್ಟಿಫಿಕೇಟ್ ಕೊಡ್ತಾರೆ'' ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದನ್ನೂ ಓದಿ: ಹೆಚ್​ಡಿಕೆ ಸರ್ವನಾಶ ಮಾಡೋದಕ್ಕೇ ನೋಡ್ತಿದ್ದಾರೆ, ’ಮಲಗಿದ್ರು- ಎದ್ರೂ’ ಅದನ್ನೇ ಬಯಸುತ್ತಾರೆ: ಡಿ.ಕೆ. ಶಿವಕುಮಾರ್​ - D K Shivakumar reaction on HDK

ETV Bharat Logo

Copyright © 2024 Ushodaya Enterprises Pvt. Ltd., All Rights Reserved.