ETV Bharat / state

ಬಿಜೆಪಿ ನಾಯಕರ ಜೊತೆ ಸವದಿ ಓಡಾಟ; ನನ್ನ ಮನಸ್ಸಲ್ಲಿ ಏನಿದೆ ಅಂತಾ ಯಾರಿಗೂ‌ ಗೊತ್ತಿಲ್ಲ ಎಂದ ಶಾಸಕ - ಅಣ್ಣಾಸಾಹೇಬ ಜೊಲ್ಲೆ

ನನ್ನ ಮನಸ್ಸಿನಲ್ಲಿ ಏನಿದೆ ಎಂದು ಯಾರಿಗೂ ತಿಳಿದುಕೊಳ್ಳಲು ಆಗಲ್ಲ ಎಂದು ಶಾಸಕ ಲಕ್ಷ್ಮಣ ಸವದಿ ಅವರು ತಿಳಿಸಿದ್ದಾರೆ.

ಶಾಸಕ ಲಕ್ಷ್ಮಣ ಸವದಿ
ಶಾಸಕ ಲಕ್ಷ್ಮಣ ಸವದಿ
author img

By ETV Bharat Karnataka Team

Published : Jan 29, 2024, 7:33 PM IST

ಶಾಸಕ ಲಕ್ಷ್ಮಣ ಸವದಿ

ಬೆಳಗಾವಿ : ಶಾಸಕ ಲಕ್ಷ್ಮಣ ಸವದಿ ಬಿಜೆಪಿಗೆ ಹೋಗ್ತಾರೆ ಎನ್ನುವ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಬಿಜೆಪಿ ನಾಯಕರ ಜತೆಗೆ ಸವದಿ ಓಡಾಡುತ್ತಿದ್ದಾರೆ. ತಮ್ಮ ವಾಹನದಲ್ಲಿ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಬಿಜೆಪಿ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಜೊತೆಗೆ ಸೋಮವಾರ ಡಿಸಿಸಿ ಬ್ಯಾಂಕ್ ಸಾಮಾನ್ಯ ಸಭೆಗೆ ಬಂದಿದ್ದರು.

ಬೆಳಗಾವಿಯ ಡಿಸಿಸಿ ಬ್ಯಾಂಕ್​ಗೆ ಬರುವ ಮುನ್ನ ಲಕ್ಷ್ಮಣ ಸವದಿ ನಿವಾಸದಲ್ಲಿ ಗೌಪ್ಯ ಚರ್ಚೆ ಮಾಡಲಾಗಿದೆ. ಸದಾಶಿವ ನಗರದಲ್ಲಿರುವ ನಿವಾಸದಲ್ಲಿ ಚರ್ಚೆ ನಡೆಸಿ, ಊಟ ಮಾಡಿದ ಬಳಿಕ ಡಿಸಿಸಿ ಬ್ಯಾಂಕ್ ಸಾಮಾನ್ಯ ಸಭೆಗೆ ಆಗಮಿಸಿದರು. ಡಿಸಿಸಿ ಬ್ಯಾಂಕ್​ನಲ್ಲಿ ಸಾಮಾನ್ಯ ಸಭೆ ನಡೆದಿದ್ದು, ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ, ನಿರ್ದೇಶಕರಾದ ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಎಲ್ಲ ನಿರ್ದೇಶಕರು ಪಾಲ್ಗೊಂಡಿದ್ದರು.

ಸಭೆಗೂ ಮೊದಲು ಮಾಧ್ಯಮಗಳ ಜೊತೆಗೆ ಮಾತನಾಡಿದ ಲಕ್ಷ್ಮಣ ಸವದಿ, ಬೋರ್ಡ್ ಮೀಟಿಂಗ್ ಮಾಡುವ ಸಲುವಾಗಿ ಬಂದಿದ್ದೇವೆ. ವಿಶೇಷತೆ ಏನೂ ಇಲ್ಲ. ಎಲ್ಲರೂ ಸೇರಿ ಮೀಟಿಂಗ್ ಮಾಡ್ತೀವಿ ಎಂದಿದ್ದಾರೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನು ಚುನಾವಣೆ ಒಳಗೆ ಕೆಳಗಿಳಿಸುತ್ತಿರಾ? ಎಂಬ ಪ್ರಶ್ನೆಗೆ, ಅದೆಲ್ಲವೂ ಊಹಾಪೋಹ. ಯಾವ ಟೀಂ ಇಲ್ಲ, ರಮೇಶ ಕತ್ತಿ ಇರಲಿ, ನಾನಿರಲಿ ಪಕ್ಷಾತೀತವಾಗಿಯೇ ನಡೆದುಕೊಂಡು ಬಂದಿದ್ದೇವೆ. ಒಂದೂವರೆ ವರ್ಷದಲ್ಲಿ ಚುನಾವಣೆ ಬರುತ್ತೆ ಎಂದರು.

ನನ್ನ ಮುಂದೆ ಅಂತಹ ಪ್ರಶ್ನೆಯೇ ಬಂದಿಲ್ಲ: ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸವದಿ, ಅಂತಹ ಯಾವುದೇ ಬೆಳವಣಿಗೆ ಪ್ರಸ್ತಾವನೆ ನನ್ನ ಮುಂದೆ ಈವರೆಗೂ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಸವದಿಯವರನ್ನು ಬಿಜೆಪಿಗೆ ಕರೆತರಲು ಒಂದು ಟೀಂ ರೆಡಿಯಾಗಿದೆಯಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಎಲ್ಲ ಸಹಜವಾಗಿ ನಡೆಯುವಂತದ್ದು. ಅವರು ಟೀಂ ಮಾಡಿದ್ದಾರೋ, ಇಲ್ಲವೋ ನನಗೆ ಗೊತ್ತಿಲ್ಲ. ನಾನು ಕಾಂಗ್ರೆಸ್ ಪಕ್ಷದ ಚಿಹ್ನೆಯ ಮೇಲೆ ಆಯ್ಕೆಯಾಗಿದ್ದೇನೆ. ಕಾಂಗ್ರೆಸ್ ಪಕ್ಷದ ಶಾಸಕನಾಗಿ ಕೆಲಸ ಮಾಡ್ತಿದ್ದೀನಿ. ಅಂತಹ ಪ್ರಶ್ನೆ ನನ್ನ ಮುಂದೆ ಇಲ್ಲ. ಇನ್ನು ನಾನಾಗಲಿ, ನನ್ನ ಮಗನಾಗಲಿ ಲೋಕಸಭೆಗೆ ಸ್ಪರ್ಧೆ ಮಾಡಲ್ಲ. ಅದಕ್ಕಾಗಿ ಅರ್ಜಿಯನ್ನೂ ಸಹ ಹಾಕಿಲ್ಲ ಎಂದು ಹೇಳಿದ್ದಾರೆ.

ಲಕ್ಷ್ಮಣ ಸವದಿ ಮನಸ್ಸಿನಲ್ಲಿ ಏನಿದೆ? ಎಂದು ತಿಳಿದುಕೊಂಡು ನಂತರ ಮಾತಾಡ್ತಿನಿ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಮನಸ್ಸಿನಲ್ಲಿ ಏನಿದೆ ಎಂದು ಯಾರಿಗೂ ತಿಳಿದುಕೊಳ್ಳಲು ಆಗಲ್ಲ. ಅದು ನನಗೆ ಮತ್ತು ಆ ಭಗವಂತನಿಗೆ ಮಾತ್ರ ಗೊತ್ತು ಎಂದು ಹೇಳಿದ್ದಾರೆ.

ತೀರ್ಮಾನ ಮಾಡೋದು ನಾನು ಅಲ್ವೆ?: ಇನ್ನು ಬಿ ಎಲ್‌ ಸಂತೋಷ ಅವರು ನಿಮ್ಮನ್ನ ಸಂಪರ್ಕ ಮಾಡೋಕೆ ಪ್ರಯತ್ನ ಮಾಡಿದ್ದಾರಾ? ಎಂಬುದಕ್ಕೆ ಅವರು ಯಾರೂ ನನ್ನ ಸಂಪರ್ಕ ಮಾಡಿಲ್ಲ. ಈಗ ಆ ಪ್ರಶ್ನೆ ಉದ್ಭವಿಸಲ್ಲ. ಅವರಿಗೆ ಅವಶ್ಯಕತೆ, ಅನಿವಾರ್ಯ ಇದ್ದಾಗ ಸ್ವಾಭಾವಿಕವಾಗಿ ಕೇಳ್ತಾರೆ. ಆದರೆ ತೀರ್ಮಾನ ಮಾಡೋದು ನಾನು ಅಲ್ವೆ? ಎಂದು ಪ್ರಶ್ನಿಸಿದ್ದಾರೆ.

ಸಿಎಂ ಅವರು ನಮ್ಮ ಮನೆಯ ಯಜಮಾನ‌ ಇದ್ದಹಾಗೆ. ಅವರು ನನ್ನ ಜೊತೆ ಮಾತನಾಡೋದು ತಪ್ಪಾ? ಎಂದು ಪ್ರಶ್ನಿಸಿದ ಲಕ್ಷ್ಮಣ ಸವದಿ, ನಾನು ಪಕ್ಷ ಬಿಡ್ತಿನಿ ಎಂದಾದರೆ ಅವರು ಏನಾದ್ರು ಹೇಳೋಕೆ ಸಾಧ್ಯ ಎಂದಿದ್ದಾರೆ. ಇನ್ನು ಇತ್ತೀಚಿಗೆ ಡಿಕೆಶಿ ಭೇಟಿ ಮಾಡಿ ಮಾತುಕತೆ ಮಾಡಿದ್ದಕ್ಕೆ ನಮ್ಮ ಕ್ಷೇತ್ರದಲ್ಲಿ ಒಂದು ನೀರಾವರಿ ಯೋಜನೆ ಮಂಜೂರಾಗಿದೆ. ಅದರ ಟೆಂಡರ್ ಪ್ರಕ್ರಿಯೆ ಆಗಿದೆ. ಅದನ್ನು ಭೂಮಿ ಪೂಜೆ ಮಾಡಿ ಚಾಲನೆ ನೀಡಿ ಎಂದು ಹೇಳೋಕೆ ಹೋಗಿದ್ದೆ. ಹೀಗಾಗಿ ಡಿಕೆಶಿ ಭೇಟಿಯಾಗಿ ಮಾತಾಡಿದ್ದೇನೆ ಅಷ್ಟೇ ಎಂದಿದ್ದಾರೆ.

ನಾವು ಇರ್ತಿವಿ, ನೀವು ಇರ್ತಿರಿ : ನನ್ನ ಹಣೆಬರಹದಲ್ಲಿ ಏನೇನಿದೆ ಎನ್ನುವುದು ಯಾರಿಗೂ ಗೊತ್ತಿಲ್ಲ ಎಂದ ಲಕ್ಷ್ಮಣ ಸವದಿ, ಅಲ್ಲಿ ಡಿಸಿಎಂ ಆಗಿದ್ರು ಇಲ್ಲೂ ಸಹ ಡಿಸಿಎಂ ಆಗ್ತಿರಿ ಎಂಬ ಮಾಧ್ಯಮಗಳ ಪ್ರಶ್ನೆಗೆ, ನೋಡೋಣ ಮುಂದೆ ಕಾಲ ಇದೆ. ನಾವು ಇರ್ತಿವಿ, ನೀವು ಇರ್ತಿರಿ ಎಂದರು.

ಇದನ್ನೂ ಓದಿ: ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ, ನನ್ನ ನಿಲುವು ಸ್ಪಷ್ಟವಾಗಿದೆ: ಲಕ್ಷ್ಮಣ್ ಸವದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.