ETV Bharat / state

ಬೆಂಗಳೂರು: ಲಾಲ್‌ಬಾಗ್ ಫ್ಲವರ್‌ಶೋಗೆ ಇಂದು ತೆರೆ; 8 ಲಕ್ಷಕ್ಕೂ ಅಧಿಕ ವೀಕ್ಷಕರ ಭೇಟಿ - Lalbagh Flower Show

ಲಾಲ್​ಬಾಗ್​ನಲ್ಲಿ ಆಯೋಜಿಸಲಾಗಿರುವ ಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆ ಬೀಳಲಿದೆ.

flower show
ಲಾಲ್‌ಬಾಗ್‌ ಪುಷ್ಪ ಪ್ರದರ್ಶನ (ETV Bharat)
author img

By ETV Bharat Karnataka Team

Published : Aug 18, 2024, 10:56 PM IST

ಬೆಂಗಳೂರು: ಸ್ವಾತಂತ್ರೋತ್ಸವದ ಅಂಗವಾಗಿ ಆಗಸ್ಟ್ 8ರಿಂದ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿರುವ 216ನೇ ಪುಷ್ಪ ಪ್ರದರ್ಶನಕ್ಕೆ ಸೋಮವಾರ ತೆರೆ ಬೀಳಲಿದೆ.

ಕಳೆದ ಹತ್ತು ದಿನಗಳಿಂದ ಪುಷ್ಪ ಪ್ರದರ್ಶನಕ್ಕೆ ಮಕ್ಕಳಿಂದ ವೃದ್ಧರವರೆಗೂ ಲಕ್ಷಾಂತರ ಜನರು ಭೇಟಿ ನೀಡಿದ್ದಾರೆ. ದೇಶ-ವಿದೇಶಗಳಿಂದ ಅದರಲ್ಲೂ ಅಮೆರಿಕ, ಬ್ರಿಟನ್, ನೆದರ್‌ಲ್ಯಾಂಡ್, ಇಟಲಿಯ ನೂರಾರು ಪ್ರವಾಸಿಗರು ಆಗಮಿಸಿ ಹೂಗಳ ಸೌಂದರ್ಯ ಕಣ್ತುಂಬಿಕೊಂಡಿದ್ದಾರೆ. ರಜಾ ದಿನಗಳಲ್ಲಿಯೂ ವೀಕ್ಷಕರ ಮಹಾಪೂರವೇ ಆಗಮಿಸಿದ್ದು, ಇಂದು ಭಾನುವಾರವಾದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರ ಆಗಮನವಾಗಿತ್ತು.

ಪ್ರತಿ ವರ್ಷ ಒಂದೊಂದು ವಿಶೇಷತೆಗಳೊಂದಿಗೆ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ತೋಟಗಾರಿಕಾ ಇಲಾಖೆಯು ಫಲಪುಷ್ಪ ಪ್ರದರ್ಶನವನ್ನು ಹಮ್ಮಿಕೊಳ್ಳುತ್ತಿದೆ. ಈ ಬಾರಿ ಸಂವಿಧಾನ ಶಿಲ್ಪಿ ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ವಿಷಯಾಧರಿತ ಫಲಪುಷ್ಪ ಪ್ರದರ್ಶನ ನಡೆಯುತ್ತಿದೆ.

flower show
ಲಾಲ್‌ಬಾಗ್‌ ಪುಷ್ಪ ಪ್ರದರ್ಶನ (ETV Bharat)

ಹೂವಿನಿಂದ ನಿರ್ಮಿಸಲಾಗಿದ್ದ ಹಳೆಯ ಸಂಸತ್ ಭವನದ ಮಾದರಿ, ಅಂಬೇಡ್ಕರ್ ವಿಷಯಾಧರಿತ ಮಾದರಿಗಳು ನೋಡುಗರನ್ನು ಆಕರ್ಷಿಸುತ್ತಿವೆ. ಸಿಂಬಿಡಿಯಂ, ಆರ್ಕಿಡ್, ಬ್ರೊಮಿಲಿಯಾಸ್ ಮತ್ತು ಆಂಥೋರಿಯಂ ಹೂವುಗಳ ಪಿರಮಿಡ್, ಹಳೆ ಸಂಸತ್ ಭವನದ ಮೇಲೆ ರಾಷ್ಟ್ರ ಲಾಂಛನ, ಕಬ್ಬನ್ ಪಾರ್ಕ್ ಪಿರಮಿಡ್, ವಿವಿಧ ಸಂಸ್ಥೆಗಳಿಂದ ಹೂ ಕುಂಡಗಳ ಪ್ರದರ್ಶನ, ಭಗವಾನ್ ಬುದ್ಧ, ಹಳದಿ ಸೇವಂತಿಗೆ ಪಿರಮಿಡ್, ಬಿಗೋನಿಯಾ ಹೂವುಗಳ ಪಿರಮಿಡ್ ವಿಶೇಷ ಆಕರ್ಷಣೆಯಾಗಿದ್ದರೆ, ಇವುಗಳೊಂದಿಗೆ ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೋವಿನ ಜೋಡಣೆ, ಥಾಯ್ ಅಟ್ಸ್, ಒಣಹೂವಿನ ಜೋಡಣೆ ಮತ್ತು ಪೂರಕ ಕಲೆಗಳ ಪ್ರದರ್ಶನ ಜನರ ಮನಸೂರೆಗೊಂಡಿದೆ.

"ನಿತ್ಯವೂ ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವು ಉಪಯುಕ್ತ ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಯಾದ ಈ ಫಲಪುಷ್ಪ ಪ್ರದರ್ಶನ ವೀಕ್ಷಣೆ ಮಾಡಲು ಇನ್ನೂ ಹಲವು ಗಣ್ಯರು ಆಗಮಿಸುವುದಾಗಿ ಹೇಳಿದ್ದಾರೆ" ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್ ಮಾಹಿತಿ ನೀಡಿದ್ದಾರೆ.

''ವಾರಾಂತ್ಯ ಹಾಗೂ ರಜಾ ದಿನಗಳಲ್ಲಿ ವೀಕ್ಷಕರ ಮಹಾಪೂರವೇ ಹರಿದು ಬಂದಿದೆ. ಭಾನುವಾರ (ಆಗಸ್ಟ್ 18) 61,850 ಮಕ್ಕಳು ಮತ್ತು 41,650 ವಯಸ್ಕರು ಸೇರಿ ಒಟ್ಟು 1,03,500 ಜನರು ಭೇಟಿ ನೀಡಿದ್ದರು. 39.5 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಆಗಸ್ಟ್ 8ರಂದು ಪ್ರಾರಂಭವಾದ ಈ ಪ್ರದರ್ಶನಕ್ಕೆ ಇದುವರೆಗೆ ಮಕ್ಕಳು ಮತ್ತು ವಯಸ್ಕರು ಸೇರಿ ಒಟ್ಟು 8,41,789 ಮಂದಿ ಭೇಟಿ ನೀಡಿದ್ದಾರೆ. 2,85,15,980 ರೂ. ಹಣ ಸಂಗ್ರಹವಾಗಿದೆ'' ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯ ದಿನದಂದು 2 ಲಕ್ಷ ಜನರಿಂದ ಲಾಲ್​ಬಾಗ್​ ಫಲಪುಷ್ಪ ಪ್ರದರ್ಶನ ವೀಕ್ಷಣೆ - Lalbagh Flower Show

ETV Bharat Logo

Copyright © 2024 Ushodaya Enterprises Pvt. Ltd., All Rights Reserved.