ETV Bharat / state

ಕುಮಾರಸ್ವಾಮಿ ,ಯಡಿಯೂರಪ್ಪ ಸರ್ಕಾರದ ಅವಧಿಯಲ್ಲಿ ಶಿಕ್ಷಣದಲ್ಲಿ ಕ್ರಾಂತಿಕಾರಕ ಬದಲಾವಣೆ: ರೇವಣ್ಣ - Legislative Council Election - LEGISLATIVE COUNCIL ELECTION

ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಚಿವ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

Former minister HD Revanna spoke at the press conference.
ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. (ETV Bharat)
author img

By ETV Bharat Karnataka Team

Published : May 22, 2024, 9:50 PM IST

Updated : May 22, 2024, 10:34 PM IST

ಮಾಜಿ ಸಚಿವ ರೇವಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. (ETV Bharat)

ಹಾಸನ:ಈ ಕಾಂಗ್ರೆಸ್​ ಸರ್ಕಾರ ಬಂದು ಒಂದು ವರ್ಷ ಆಗಿದೆ. ವರ್ಷದಲ್ಲಿ ಸರ್ಕಾರದ ಕೊಡುಗೆ ಏನು ? ಶಿಕ್ಷಣ ಇಲಾಖೆಯಲ್ಲಿ ಗೊಂದಲ ಎಬ್ಬಿಸಲಾಗಿದೆ. ಸಚಿವರೇ ದಮ್ಕಿ ಹಾಕ್ತಾರೆ ಎನ್ನುವ ಮಾತಿದೆ. ಯಾರೂ ಕೂಡ ಹೆದರಬೇಕಾಗಿಲ್ಲ. ನಿಮ್ಮ ಜೊತೆ ನಾವಿದ್ದೇವೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದರು

ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಹಾಸನದಲ್ಲಿ ಶಾಸಕ ಎ.ಮಂಜು, ಸ್ವರೂಪ್ ಪ್ರಕಾಶ್ ಹಾಗೂ ಅಭ್ಯರ್ಥಿ ವಿವೇಕಾನಂದ ಜೊತೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ರಾಜ್ಯದಲ್ಲಿ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಟ್ಟು ಹೊಸ ಪದವಿ, ಹೈಸ್ಕೂಲ್, ಪದವಿ ಪೂರ್ವ ಕಾಲೇಜು ಸ್ಥಾಪನೆ ಮಾಡಿದ್ದು, ಮಾಜಿ ಸಿಎಂ ಕುಮಾರಸ್ವಾಮಿ ಅವರು. ಶಾಲಾ ಶಿಕ್ಣಕರು, ಪದವಿ ಉಪನ್ಯಾಸಕರು ಹೆಚ್ಚು ನೇಮಕ ಆಗಿದ್ದು ಕೂಡ ಕುಮಾರಸ್ವಾಮಿ ಆಡಳಿತದಲ್ಲಿ ಎಂದು ರೇವಣ್ಣ ಹೇಳಿದರು.

ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಸೇರಿ ಶಿಕ್ಷಣದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಿದ್ದರು. ನಾನು ಯಾವ ಸಚಿವರ ಹೆಸರನ್ನು ಹೇಳೋದಿಲ್ಲ. ನಮ್ಮಲ್ಲೇ ಇದ್ದವರು ಹೋಗಿದ್ದಾರೆ. ಅವರು ಆಡಳಿತ ಪಕ್ಷ ಸೇರಿ ವರ್ಷ ಆಯ್ತಲ್ಲ. ಶಿಕ್ಷಣ ಕ್ಷೇತ್ರ ಹಾಗೂ ಶಿಕ್ಷಕರಿಗೆ ಕೊಡುಗೆ ಏನಿದೆ ಎಂದು ವಾಗ್ದಾಳಿ ನಡೆಸಿದರು.

ನನಗೆ ದೇವರ ಆಶೀರ್ವಾದ ಇದೆ. ಹಾಸನ ಜಿಲ್ಲೆಯ ಜನರು ಯಾರೂ ಕೂಡ ಆತಂಕ ಪಡುವ ಅವಶ್ಯಕತೆ ಇಲ್ಲ. ನಾನು ಜಿಲ್ಲೆಯ ಜನತೆಗೆ ಋಣಿಯಾಗಿ ಇದ್ದೇನೆ. ಅಧಿಕಾರ ಇರಲಿ, ಇಲ್ಲದಿರಲಿ, ಅಧಿಕಾರಕ್ಕಾಗಿ ಹೋರಾಟ ಮಾಡಿಲ್ಲ. ಲೋಕಸಭಾ ಚುನಾವಣೆಯಲ್ಲಿ ಗೆಲುವು - ಸೋಲು ಸಹಜ. ನಮ್ಮ ತಂದೆ ದೇವೇಗೌಡರು ರಾಜಕೀಯವಾಗಿ ನೆಲೆ ಊರಲು ಈ ಜಿಲ್ಲೆಯೇ ಕಾರಣ. ಈ ಹಿಂದೆ ಇದ್ದವರು ಗೆಲ್ಲಿಸಿದ ಬಳಿಕ ತಿರುಗಿ ನೋಡ್ತಾ ಇರಲಿಲ್ಲ. ಈಗ ನಮ್ಮ ಅಭ್ಯರ್ಥಿ, ತಮ್ಮ ಸಂಬಳ ಸೇರಿದಂತೆ ಸಂಪೂರ್ಣ ಅನುದಾನ ಶಿಕ್ಷಕರಿಗೆ ಮೀಸಲಿಡುವೆ ಎಂದಿದ್ದು, ಹೀಗೆ ಘೋಷಣೆ ಮಾಡಿದ ವ್ಯಕ್ತಿ ಹಿಂದೆ ಯಾರೂ ಇರಲಿಲ್ಲ ಎಂದು ಅಭ್ಯರ್ಥಿ ಪರ ಮತಯಾಚನೆ ಮಾಡಿದರು.

ಮರಿತಿಬ್ಬೇಗೌಡ ವಿರುದ್ಧ ಟೀಕೆ :ಈಗ ಕಾಂಗ್ರೆಸ್​​ನಿಂದ ಸ್ಪರ್ಧಿಸಿರುವ ವ್ಯಕ್ತಿ ಇಲ್ಲೇ ಇದ್ದು, ಸಕಲ ಸವಲತ್ತು ಅನುಭವಿಸಿದರು. ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರು ಈ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ? ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಶಿಕ್ಷಣ ಕ್ಷೇತ್ರ ಕುಸಿಯುತ್ತಿದೆ. ಅದ್ದರಿಂದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿವೇಕಾನಂದಗೆ ಮತ ನೀಡಿ ಎಂದು ಮನವಿ ಮಾಡಿದರು.

ಇನ್ನು ಶೀಘ್ರವಾಗಿ ಬಿಜೆಪಿ - ಜೆಡಿಎಸ್ ನಾಯಕರ ಜಂಟಿ ಸಭೆ ನಡೆಸುತ್ತೇವೆ. ನಮ್ಮ ಜಿಲ್ಲೆಗೆ ಕಾಂಗ್ರೆಸ್​ನಿಂದ ಐಐಟಿ ತಪ್ಪಿ ಹೋಗಿದೆ. ಅವರು ಅಂದು ನಮ್ಮ ಜಿಲ್ಲೆಯ ಪಟ್ಟಿ ಕಳುಹಿಸಿದರೆ ಆಗಿರೋದು. ರಾಜಕಾರಣದಲ್ಲಿ ಕೃತಜ್ಞತೆ ಇರಬೇಕು. ಓರ್ವ ಸಾಮಾನ್ಯನು ಸಹ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದರು ಎಂದು ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ವಿರುದ್ಧ ರೇವಣ್ಣ ಟೀಕೆ ಮಾಡಿದ್ದಾರೆ.

ಪ್ರಜ್ವಲ್ ಬಗ್ಗೆ ಗೊತ್ತಿಲ್ಲ ಎಂದ ರೇವಣ್ಣ:ಪೆನ್​​ಡ್ರೈವ್​ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡಿದೆ. ತಮ್ಮ ಮಗನ ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ತಂದೆ, ಜೆಡಿಎಸ್ ಶಾಸಕ ಹೆಚ್​​​ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಅವರ ವಿಚಾರ ತನಗೇನೂ ಗೊತ್ತಿಲ್ಲ. ನಾನು ಯಾರ ಬಗ್ಗೆಯೂ ಮಾತನಾಡಲ್ಲ ನನಗೇನೂ ಗೊತ್ತಿಲ್ಲ. ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ ಎಂದು ಹೇಳಿದರು.

ಇದನ್ನೂಓದಿ:ನನ್ನ ರಾಜಕೀಯ ಜೀವನದಲ್ಲಿ ಯಾವತ್ತೂ ಫೋನ್ ಕದ್ದಾಲಿಕೆಯಂಥ ನೀಚ ಕೆಲಸ ಮಾಡಿಲ್ಲ: ಸಿದ್ದರಾಮಯ್ಯ - phone tapping Allegation

Last Updated : May 22, 2024, 10:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.