ETV Bharat / state

ಬೈಕ್​ಗೆ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದು ಇಬ್ಬರ ಸಾವು: ಬೆಂಕಿ ಕೆನ್ನಾಲಿಗೆಗೆ ಬಸ್​​ ಸುಟ್ಟು ಕರಕಲು - Hassan accident - HASSAN ACCIDENT

ಹಾಸನದಲ್ಲಿ ಸರ್ಕಾರಿ ಬಸ್​ ಚಲಿಸುತ್ತಿದ್ದ ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್​ ಸವಾರರು ಮೃತಪಟ್ಟಿದ್ದಾರೆ.

ಬೈಕ್​ಗೆ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ
ಬೈಕ್​ಗೆ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ
author img

By ETV Bharat Karnataka Team

Published : Apr 24, 2024, 7:11 AM IST

Updated : Apr 24, 2024, 11:35 AM IST

ಬಸ್​​ ಸುಟ್ಟು ಕರಕಲು

ಹಾಸನ: ಸರ್ಕಾರಿ ಬಸ್ಸೊಂದು ಬೈಕ್​ಗೆ ಡಿಕ್ಕಿ ಹೊಡೆದು ಸವಾರರಿಬ್ಬರು ಮೃತಪಟ್ಟು, ಬಸ್​ ಹೊತ್ತಿ ಉರಿದಿರುವ ಘಟನೆ ಮಂಗಳವಾರ ಚನ್ನರಾಯಪಟ್ಟಣ ತಾಲೂಕಿನ ಬೇಡಿಗನಹಳ್ಳಿ ಸರ್ಕಲ್ ಬಳಿ ನಡೆದಿದೆ. ತಿಪಟೂರು ತಾಲೂಕಿನ ಬಿದರೆಕೆರೆ ಗ್ರಾಮದ ರೇಣುಕಪ್ಪ (42) ಮತ್ತು ಇದೇ ಗ್ರಾಮದ ರವೀಶ್​ (25) ಮೃತ ದುರ್ದೈವಿಗಳು.

ಚಿಕ್ಕಮಗಳೂರು ಘಟಕದ ಕೆಎಸ್​ಆರ್​ಟಿಸಿ ಬಸ್​​​ ಬೆಂಗಳೂರು ಕಡೆಯಿಂದ ಬರುತ್ತಿದ್ದು, ಬೇಡಿಗನಹಳ್ಳಿ ಸರ್ಕಲ್​ ಬಳಿ ಮುಂದಿದ್ದ ಬೈಕ್​ಗೆ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಬೈಕ್​ನಲ್ಲಿದ್ದ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಬೈಕ್​ನ​ ಭಾಗಗಳು ಬೇರೆ ಬೇರೆಯಾಗಿವೆ.

ಡಿಕ್ಕಿ ರಭಸಕ್ಕೆ ಹೊತ್ತಿ ಉರಿದ ಬಸ್​: ಬಸ್​ ಮತ್ತು ಬೈಕ್​ ಡಿಕ್ಕಿ ಹೊಡೆದ ತಕ್ಷಣವೇ ಬಸ್​ನ ಇಂಧನ ಟ್ಯಾಂಕ್ ಸೋರಿಕೆಯಾಗಿದೆ. ಪರಿಣಾಮ ಬಸ್​ಗೆ ಬೆಂಕಿ ಹೊತ್ತಿಕೊಂಡಿದೆ. ಕೂಡಲೇ ಬಸ್​ ಚಾಲಕ ಪ್ರಯಾಣಿಕರನ್ನು ತುರ್ತಾಗಿ ಕೆಳಗೆ ಇಳಿಸಿ ಪ್ರಾಣ ಉಳಿಸಿದ್ದಾರೆ. ನೋಡ ನೋಡುತ್ತಲೇ ರಸ್ತೆ ಮಧ್ಯೆ ಬಸ್​​ ಸಂಪೂರ್ಣ ಬೆಂಕಿ ಕೆನ್ನಾಲಿಗೆಗೆ ಸಿಲುಕಿ ಸುಟ್ಟಿದೆ.

ಘಟನೆಯ ಮಾಹಿತಿ ಪಡೆದು ಅಗ್ನಿಶಾಮಕ ದಳದ ಸಿಬ್ಭಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಚನ್ನರಾಯಪಟ್ಟಣ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಯಾದಗಿರಿ: ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವು - Three Boys Died

Last Updated : Apr 24, 2024, 11:35 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.