ETV Bharat / state

ರಾಜ್ಯದ 62 ಕಡೆ ಲೋಕಾಯುಕ್ತ ದಾಳಿ: 13 ಆರೋಪಿತ ಸರ್ಕಾರಿ ಅಧಿಕಾರಿಗಳ ಖಜಾನೆ ಮಾಹಿತಿ ಹೀಗಿದೆ - Lokayukta Raid

ರಾಜ್ಯದ ವಿವಿಧ 13 ಜನ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನು ಪರಿಶೀಲಿಸಿ, ಪ್ರತಿಯೊಬ್ಬ ಅಧಿಕಾರಿಯ ಬಳಿ ಲಕ್ಷಾಂತರ ಮೌಲ್ಯದ ಆಸ್ತಿ ಪತ್ತೆ ಮಾಡಿದ್ಧಾರೆ.

Lokayukta Raid
ರಾಜ್ಯದ 62 ಕಡೆ ಲೋಕಾಯುಕ್ತ ದಾಳಿ
author img

By ETV Bharat Karnataka Team

Published : Mar 27, 2024, 9:59 PM IST

ಬೆಂಗಳೂರು: ಆದಾಯದ ಮೂಲಕ್ಕಿಂತಲೂ ಹೆಚ್ಚು ಅಸಮತೋಲಿತ ಆಸ್ತಿ ಹೊಂದಿದ್ದ ರಾಜ್ಯದ ವಿವಿಧ 13 ಜನ ಸರ್ಕಾರಿ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ಬುಧವಾರ ದಾಳಿ ನಡೆಸಿ ಮಾಡಿ ಬಿಸಿ ಮುಟ್ಟಿಸಿದ್ದಾರೆ. ಈ ವೇಳೆ ಸರ್ಕಾರಿ ಅಧಿಕಾರಿಗಳ ಖಜಾನೆಯ ವಿವರ ಬಟಾಬಯಲಾಗಿದೆ. ಪ್ರತಿಯೊಬ್ಬ ಅಧಿಕಾರಿಯ ಬಳಿ ಲಕ್ಷಾಂತರ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಬೆಂಗಳೂರು ನಗರ, ಉಡುಪಿ, ಕಾರವಾರ, ಮಂಡ್ಯ, ಮೈಸೂರು, ಕೊಡಗು, ಧಾರವಾಡ, ಬೀದರ್, ಕೋಲಾರ, ವಿಜಯಪುರ, ಚಿಕ್ಕಬಳ್ಳಾಪುರ, ಮತ್ತು ಬೆಳಗಾವಿ ಜಿಲ್ಲಾ ಲೋಕಾಯುಕ್ತ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಒಟ್ಟು 13 ಪ್ರಕರಣಗಳಲ್ಲಿ ಆರೋಪಿತ ಅಧಿಕಾರಿಗಳಿಗೆ ಸಂಬಂಧಿಸಿದ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳು ಸೇರಿದಂತೆ ಒಟ್ಟು 62 ಸ್ಥಳಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ಶೋಧ ಕಾರ್ಯ ಕೈಗೊಂಡಿದ್ದಾರೆ. ಈ ವೇಳೆ ಪತ್ತೆಯಾದ ಸಂಪತ್ತಿನ ಮಾಹಿತಿ ಇಲ್ಲಿದೆ.

  • ರಂಗನಾಥ ಎಸ್.ಪಿ.: ಬೆಂಗಳೂರಿನ ಬಿಬಿಎಂಪಿಯ ಯಲಹಂಕ ವಲಯದ ಬ್ಯಾಟರಾಯನಪುರ ಮುಖ್ಯ ಅಭಿಯಂತರ ಈ ರಂಗನಾಥ. ಇವರಿಗೆ ಸಂಬಂಧಿಸಿದ ಒಟ್ಟು 5 ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದ್ದು 2 ನಿವೇಶನಗಳು, 2 ವಾಸದ ಮನೆಗಳು, 2 ವಾಣಿಜ್ಯ ಸಂಕೀರ್ಣಗಳು, 2.5 ಎಕರೆ ಕೃಷಿ ಜಮೀನು, 7 ಲಕ್ಷ ನಗದು, 31.86 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳು, 36 ಲಕ್ಷ ರೂ. ಬೆಲೆ ಬಾಳುವ ವಾಹನಗಳು, 24 ಲಕ್ಷ ನಿಶ್ಚಿತ ಠೇವಣಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಮಾಹಿತಿ ನೀಡಿದೆ.
  • ಕೃಷ್ಣಗೌಡ: ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಅಗಸನಪುರ ಗ್ರಾಮ ಪಂಚಾಯಿತಿಯ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಾಗಿ ಕೃಷ್ಣಗೌಡ ಕೆಲಸ ಮಾಡುತ್ತಿದ್ದಾರೆ. ಆರೋಪಿತ ಅಧಿಕಾರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, 5 ನಿವೇಶನಗಳು, 1 ವಾಸದ ಮನೆ, 1.66 ಲಕ್ಷ ನಗದು, 35 ಲಕ್ಷ ಮೌಲ್ಯದ ಚಿನ್ನಾಭರಣಗಳು, 12 ಲಕ್ಷ ಮೌಲ್ಯದ ವಾಹನಗಳು, 97.90 ಬೆಲೆ ಬಾಳುವ ಇತರೆ ವಸ್ತು ಮತ್ತು ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ.
  • ಎಂ.ಎಂ. ಫಯಾಜ್ ಅಹಮದ್: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಪಂಚಾಯಿತಿಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಇಂಜಿನಿಯರ್ ಈ ಫಯಾಜ್ ಅಹಮದ್. ಈ ಆರೋಪಿತರಿಗೆ ಸೇರಿದ 5 ಸ್ಥಳಗಳಲ್ಲಿ ದಾಳಿ ಮಾಡಲಾಗಿದೆ. 2 ವಾಸದ ಮನೆಗಳು, 4 ಎಕರೆ ಕೃಷಿ ಜಮೀನು, 48,070 ರೂ. ನಗದು, 2.95 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳು, 24.75 ಲಕ್ಷ ಬೆಲೆಬಾಳುವ ವಾಹನಗಳು, 53.81 ಲಕ್ಷ ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
  • ಬಿ.ವಿ. ಜಯಣ್ಣ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಈ ಜಯಣ್ಣ. ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 2 ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. 1 ನಿವೇಶನ, 3 ವಾಸದ ಮನೆಗಳು, 5.33 ಎಕರೆ ಕೃಷಿ ಜಮೀನು, 9.20 ಲಕ್ಷ ನಗದು, 8.63 ಲಕ್ಷ ಮೌಲ್ಯದ ಚಿನ್ನಾಭರಣ, 25.70 ಲಕ್ಷ ಮೌಲ್ಯದ ವಾಹನಗಳು, 10 ಲಕ್ಷ ರೂ. ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳನ್ನು ಪತ್ತೆ ಮಾಡಲಾಗಿದೆ.
  • ಯತೀಶ: ರಾಮನಗರ ಜಿಲ್ಲೆಯ ಬಿಡದಿ ಹೋಬಳಿಯ ಮಂಚನಾಯಕನಹಳ್ಳಿ ಗ್ರಾಮ ಪಂಚಾಯಿತಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಯತೀಶ. ಆರೋಪಿತ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. 4 ನಿವೇಶನಗಳು,1 ವಾಸದ ಮನೆ, 5.31 ಲಕ್ಷ ನಗದು, 25.55 ಬೆಲೆ ಬಾಳುವ ಚಿನ್ನಾಭರಣಗಳು, 22.98 ಲಕ್ಷ ಬೆಲೆ ಬಾಳುವ ವಾಹನಗಳು, 39.59 ಲಕ್ಷ ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರೆ ವಸ್ತುಗಳು ಪತ್ತೆ ಹಚ್ಚಲಾಗಿದೆ.
  • ಸದಾಶಿವಯ್ಯ: ಚಿಕ್ಕಬಳ್ಳಾಪುರ ಜಿಲ್ಲೆಯ ಕೆಆರ್​ಐಡಿಎಲ್​ನ ಕಾರ್ಯಪಾಲಕ ಅಭಿಯಂತರ ಈ ಸದಾಶಿವಯ್ಯ. ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. 3 ವಾಸದ ಮನೆಗಳು, 80,000 ನಗದು, 20 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳು, 8.5 ಲಕ್ಷ ಬೆಲೆಬಾಳುವ ವಾಹನಗಳು, 24.70 ಲಕ್ಷ ಬೆಲೆ ಬಾಳುವ ಗೃಹೋಪಯೋಗಿ ಮತ್ತು ಇತರ ವಸ್ತುಗಳು ಪತ್ತೆಯಾಗಿವೆ.
  • ಪ್ರಕಾಶ್ ರೇವಣ್ಕರ್: ಕಾರವಾರದ ಕಿರಿಯ ಅಭಿಯಂತರರಾಗಿರುವ ಪ್ರಕಾಶ್ ರೇವಣ್ಕರ್ ಅವರಿಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ದಾಳಿ ಮಾಡಲಾಗಿದೆ. 1 ನಿವೇಶನ, 5 ವಾಸದ ಮನೆಗಳು, 42 ಸಾವಿರ ನಗದು, 2.81 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳು, 9.20 ಲಕ್ಷ ರೂ. ಮೌಲ್ಯದ ವಾಹನಗಳು ಪತ್ತೆಯಾಗಿವೆ.
  • ರೂಪಾ ಎಂ.: ಉಡುಪಿ ಜಿಲ್ಲೆಯ ಅಬಕಾರಿ ಇಲಾಖೆಯ ಜಿಲ್ಲಾ ಆಯುಕ್ತರಾಗಿ ರೂಪಾ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಒಟ್ಟು 5 ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. 5 ವಾಸದ ಮನೆಗಳು, 8-18 ಎಕರೆ ಕೃಷಿ ಜಮೀನು, 1.06 ಲಕ್ಷ ನಗದು, 13 ಲಕ್ಷ ಮೌಲ್ಯದ ಚಿನ್ನಾಭರಣಗಳು, 14 ಲಕ್ಷ ಮೌಲ್ಯದ ವಾಹನಗಳು, 33 ಲಕ್ಷ ಬೆಲೆಬಾಳುವ ಗೃಹೋಪಯೋಗಿ ವಸ್ತುಗಳನ್ನು ಪತ್ತೆ ಹಚ್ಚಲಾಗಿದೆ.
  • ಸದಾಶಿವ ಜಯಪ್ಪ ಕರಗಾರ್: ಗ್ರೇಡ್-1 ಸೆಕ್ರೆಟರಿಯಾಗಿರುವ ಸದಾಶಿವ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮ ಪಂಚಾಯಿತಿಯ ಪ್ರಭಾರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ. ಈ ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 2 ಸ್ಥಳಗಳಲ್ಲಿ ದಾಳಿ ಮಾಡಲಾಗಿದೆ. 1 ನಿವೇಶನ, 2 ವಾಸದ ಮನೆಗಳು, 3-22 ಗುಂಟೆ ಕೃಷಿ ಜಮೀನು 13,300 ರೂ ನಗದು, 6.84 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳು, 3.03 ಲಕ್ಷ ಬೆಲೆಬಾಳುವ ವಾಹನಗಳು ಪತ್ತೆಯಾಗಿವೆ.
  • ಮಹೇಶ್‌ಚಂದ್ರಯ್ಯ ಹಿರೇಮಠ: ಧಾರವಾಡ ಜಿಲ್ಲೆಯ ಬೀಜ ಅಭಿವೃದ್ಧಿ ಘಟಕದ ವಲಯ ಅರಣ್ಯಾಧಿಕಾರಿ ಈ ಮಹೇಶ್‌ಚಂದ್ರಯ್ಯ. ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 6 ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. 7 ನಿವೇಶನಗಳು, 1 ವಾಸದ ಮನೆ, 27 ಎಕರೆ ಕೃಷಿ ಜಮೀನು. 3 ಲಕ್ಷ ನಗದು, 32 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳು, 11.50 ಲಕ್ಷ ಬೆಲೆಬಾಳುವ ವಾಹನಗಳು, ರೂ 5 ಲಕ್ಷ ಬೆಲೆಬಾಳುವ ಇತರ ಮತ್ತು ಗೃಹೋಪಯೋಗಿ ವಸ್ತುಗಳನ್ನು ಪತ್ತೆ ಹಚ್ಚಲಾಗಿದೆ.
  • ಷಣ್ಮುಕಪ್ಪ ಭಿಕ್ಷಾ ತೀರ್ಥ: ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಎಆರ್​ಟಿಓ ಆಗಿ ಷಣ್ಮುಕಪ್ಪ ಕೆಲಸ ಮಾಡುತ್ತಿದ್ದಾರೆ. ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 7 ಸ್ಥಳಗಳಲ್ಲಿ ದಾಳಿ ಮಾಡಲಾಗಿದೆ. 3 ನಿವೇಶನಗಳು, 3 ವಾಸದ ಮನೆಗಳು, 48 ಎಕರೆ ಕೃಷಿ ಜಮೀನು, 2.82 ಲಕ್ಷ ನಗದು, 33.80 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳು, 42 ಲಕ್ಷ ಬೆಲೆಬಾಳುವ ವಾಹನಗಳು ಪತ್ತೆಯಾಗಿವೆ.
  • ಶಿವಕುಮಾರಸ್ವಾಮಿ: ಬೀದರ್ ಜಿಲ್ಲೆಯ ಕಾರಂಜಾ ಯೋಜನೆಯ ಕಾರ್ಯಪಾಲಕ ಅಭಿಯಂತರ ಈ ಶಿವಕುಮಾರಸ್ವಾಮಿ. ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಳ್ಳಲಾಗಿದೆ. 3 ನಿವೇಶನಗಳು, 4 ವಾಸದ ಮನೆಗಳು, 2 ಎಕರೆ ಕೃಷಿ ಜಮೀನು, 1 ಲಕ್ಷ ನಗದು, 24 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳು, 19 ಲಕ್ಷ ಬೆಲೆಬಾಳುವ ವಾಹನಗಳು, 20 ಲಕ್ಷ ಮೌಲ್ಯದ ಉಳಿತಾಯ ಖಾತೆ ಮತ್ತು ಗೃಹೋಪಯೋಗಿ ವಸ್ತುಗಳನ್ನು ಪತ್ತೆ ಮಾಡಲಾಗಿದೆ.
  • ನಾಗರಾಜಪ್ಪ: ರಾಮನಗರ ಜಿಲ್ಲೆಯ ಮಾಗಡಿ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ಈ ನಾಗರಾಜಪ್ಪ. ಆರೋಪಿತ ಸರ್ಕಾರಿ ನೌಕರರಿಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ದಾಳಿ ಮಾಡಲಾಗಿದೆ. 1 ನಿವೇಶನ, 6 ವಾಸದ ಮನೆಗಳು, 13 ಎಕರೆ ಕೃಷಿ ಜಮೀನು, 11.50 ಲಕ್ಷ ರೂ. ನಗದು, 25 ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳು, 40 ಲಕ್ಷ ಬೆಲೆಬಾಳುವ ವಾಹನಗಳು ಪತ್ತೆಯಾಗಿವೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ವಿತರಣೆಗೆ ಅನುಮತಿ ಕೊಡಿಸಲು ಲಂಚಕ್ಕೆ ಬೇಡಿಕೆ ಆರೋಪ: ಇಬ್ಬರು ಪೊಲೀಸ್ ಸಿಬ್ಬಂದಿ ಲೋಕಾಯುಕ್ತ ವಶಕ್ಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.