ETV Bharat / state

ಅಧಿವೇಶನಕ್ಕೂ ಮುನ್ನ ಪರಿಷತ್ ಪ್ರತಿಪಕ್ಷ ನಾಯಕನ ಆಯ್ಕೆಯಾಗುತ್ತಾ? ಆಕಾಂಕ್ಷಿಗಳು ಯಾರು?, ಬಿಜೆಪಿ ಲೆಕ್ಕಾಚಾರವೇನು? - Council Opposition Leader - COUNCIL OPPOSITION LEADER

ರಾಜ್ಯ ವಿಧಾನಮಂಡಲ ಅಧಿವೇಶನಕ್ಕೂ ಮೊದಲು ಪರಿಷತ್ ಪ್ರತಿಪಕ್ಷ ನಾಯಕನ ಆಯ್ಕೆಯಾಗುತ್ತಾ ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ಜೋರಾಗಿದೆ. ಈ ನಿಟ್ಟಿನಲ್ಲಿ ಆಕಾಂಕ್ಷಿಗಳು ಯಾರು? ಬಿಜೆಪಿ ಲೆಕ್ಕಾಚಾರವೇನು? ಎಂಬುದನ್ನು ನೋಡೋಣ.

Bengaluru  Council Opposition Leader
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಯಾರು? (ETV Bharat)
author img

By ETV Bharat Karnataka Team

Published : Jul 12, 2024, 8:51 AM IST

Updated : Jul 12, 2024, 9:03 AM IST

ಬೆಂಗಳೂರು: ಸೋಮವಾರದಿಂದ ವಿಧಾನ ಮಂಡಲ ಅಧಿವೇಶನ ಆರಂಭಗೊಳ್ಳುತ್ತಿದೆ. ಅಷ್ಟರಲ್ಲಿ ವಿಧಾನ ಪರಿಷತ್ತಿಗೆ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡುವ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆ. ಆಡಳಿತ ಪಕ್ಷದಿಂದ ಪ್ರತಿಪಕ್ಷದ ಸಾಲಿಗೆ ಬಂದು ಆರು ತಿಂಗಳ ಕಾಲ ಉಭಯ ಸದನಗಳ ಪ್ರತಿಪಕ್ಷ ನಾಯಕನ ನೇಮಿಸಲು ವಿಳಂಬ ಮಾಡಿದ್ದ ಬಿಜೆಪಿಗೆ ಈಗ ಮತ್ತೊಮ್ಮೆ ಲೋಕಸಮರದ ನಂತರ ಮೇಲ್ಮನೆಯಲ್ಲಿ ಅಂತಹದ್ದೇ ಸನ್ನಿವೇಶ ಎದುರಾಗಿದೆ.

ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕನ ಸ್ಥಾನ ತೆರವಾಗಿದೆ. ವರ್ಷದ ಹಿಂದೆಯೂ ಈ ಸ್ಥಾನವನ್ನು ಖಾಲಿಯಾಗಿಟ್ಟೇ ಎರಡು ಅಧಿವೇಶನ ಮುಗಿಸಿದ್ದ ಬಿಜೆಪಿ ಈಗ ಮತ್ತೊಮ್ಮೆ ಅಂತಹದ್ದೇ ಸ್ಥಿತಿ ಎದುರಿಸುವಂತಾಗಿದೆ. 2023ರ ಮೇ ತಿಂಗಳಿನಲ್ಲಿಯೇ ಕಾಂಗ್ರೆಸ್ ಸರ್ಕಾರ ರಚಿಸಿದರೂ ಬಿಜೆಪಿಗೆ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡಲು ಆರು ತಿಂಗಳು ಬೇಕಾಯಿತು. ನವೆಂಬರ್​ನಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಮತ್ತು ಡಿಸೆಂಬರ್​ನಲ್ಲಿ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಿತು. ಏಳು ತಿಂಗಳಿನಲ್ಲಿಯೇ ಮತ್ತೊಮ್ಮೆ ಪರಿಷತ್ ಪ್ರತಿಪಕ್ಷದ ನಾಯಕನ ಸ್ಥಾನ ಖಾಲಿಯಾಗಿದ್ದು ಯಾರನ್ನು ನೇಮಿಸಬೇಕು ಎನ್ನುವ ಗೊಂದಲ ಪಕ್ಷದಲ್ಲಿದೆ.

ರವಿಕುಮಾರ್​ಗೆ ಸ್ಥಾನ?: ಸದ್ಯ ಪರಿಷತ್ ಪ್ರತಿಪಕ್ಷದ ಸಚೇತಕರಾಗಿರುವ ರವಿಕುಮಾರ್ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಇವರ ಜೊತೆ ಹಿರಿಯ ನಾಯಕರ ಸಿ.ಟಿ.ರವಿ ಕೂಡ ಪರಿಷತ್ ಸದಸ್ಯರಾಗಿ ಆಯ್ಕೆಯಾಗಿದ್ದು, ಪ್ರತಿಪಕ್ಷದ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇವರ ಜೊತೆ ಮತ್ತೋರ್ವ ನಾಯಕ ಚಲವಾದಿ ನಾರಾಯಣಸ್ವಾಮಿಯೂ ಆಕಾಂಕ್ಷಿಯಾಗಿದ್ದಾರೆ. ಪಕ್ಷದ ಬಹುತೇಕ ಎಂಎಲ್​ಸಿಗಳಿಗೆ ರವಿಕುಮಾರ್ ಹೆಸರಿನ ಪರವಾಗಿದ್ದಾರೆ. ಸಂಘ, ಪಕ್ಷ ಮತ್ತು ಯಡಿಯೂರಪ್ಪ ಈ ರೀತಿ ಎಲ್ಲ ಆಯಾಮದಲ್ಲಿಯೂ ಸಲ್ಲುವ ವ್ಯಕ್ತಿ ರವಿಕುಮಾರ್ ಆಗಿದ್ದಾರೆ. ಅನುಭವಿ, ಉತ್ತಮ ಸಂಘಟಕ, ಪಕ್ಷಕ್ಕೆ ಸಲ್ಲಿಸಿರುವ ಸೇವೆ ಹಾಗೂ ಹಿಂದುಳಿದ ವರ್ಗಕ್ಕೆ ಸೇರಿದ ವ್ಯಕ್ತಿಯೂ ಆಗಿರುವ ಹಿನ್ನೆಲೆಯಲ್ಲಿ ರವಿಕುಮಾರ್ ಅವರನ್ನೇ ಪ್ರತಿಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.

ಹೈಕಮಾಂಡ್ ತಂತ್ರವೇನು?: ವಿಧಾನಸಭಾ ಚುನಾವಣೆಯಲ್ಲಿ ಪರಾಜಿತಗೊಂಡಿದ್ದ ಸಿ.ಟಿ.ರವಿ ಅವರನ್ನು ಪರಿಷತ್​ಗೆ ಆಯ್ಕೆ ಮಾಡಿ ಕಳುಹಿಸಲಾಗಿದೆ. ಇದರ ಹಿಂದೆ ಪರಿಷತ್ ಪ್ರತಿಪಕ್ಷದ ನಾಯಕನ ಸ್ಥಾನ ನೀಡುವ ಕಾರಣವಿದೆ ಎನ್ನುವ ಮಾತುಗಳು ಪಕ್ಷದ ಪಡಸಾಲೆಯಲ್ಲಿ ಕೇಳಿಬರುತ್ತಿವೆ. ಆದರೆ, ವಿಧಾನಸಭೆ ಪ್ರತಿಪಕ್ಷದ ನಾಯಕ ಅಶೋಕ್ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು ಪರಿಷತ್​ನಲ್ಲಿಯೂ ಅದೇ ಸಮುದಾಯಕ್ಕೆ ನೀಡುವ ಸಾಧ್ಯತೆ ಕಡಿಮೆ. ಒಂದು ವೇಳೆ ಅಶೋಕ್ ಅವರನ್ನು ಪ್ರತಿಪಕ್ಷದ ನಾಯಕನ ಸ್ಥಾನದಿಂದ ತೆರವುಗೊಳಿಸಿ ಬೇರೆ ಜವಾಬ್ದಾರಿ ವಹಿಸುವ ಸಂದರ್ಭ ಬಂದಲ್ಲಿ ಆಗ ಸಿ.ಟಿ.ರವಿ ಹೆಸರು ಪರಿಷತ್ ಪ್ರತಿಪಕ್ಷದ ನಾಯಕನ ಸ್ಥಾನಕ್ಕೆ ಆಯ್ಕೆ ಮಾಡುವುದು ಬಹುತೇಕ ಖಚಿತ. ಆದರೆ, ಸದ್ಯದ ಮಟ್ಟಿಗೆ ಈಗ ಅಂತಹ ಸ್ಥಿತಿ ಇಲ್ಲ. ಸದ್ಯ ಸರ್ಕಾರದ ಹಗರಣಗಳ ಹೋರಾಟದ ವಿಚಾರ ವಿಷಯಾಂತರವಾಗಬಾರದು ಎನ್ನುವ ಕಾರಣಕ್ಕೆ ಬಿಜೆಪಿ ಹೈಕಮಾಂಡ್ ಶಾಸಕಾಂಗ ಪಕ್ಷದ ನಾಯಕರ ಬದಲಾವಣೆಗೆ ಕೈಹಾಕಲ್ಲ ಎನ್ನಲಾಗುತ್ತಿದೆ.

ಮುಂಚೂಣಿಯಲ್ಲಿ ಸಿ.ಟಿ.ರವಿ: ಸಿ.ಟಿ.ರವಿ ಉತ್ತಮ ವಾಗ್ಮಿ, ಪಕ್ಷದ ನಿಷ್ಟಾವಂತ ಕಾರ್ಯಕರ್ತ. ಯಡಿಯೂರಪ್ಪ ಸಂಪುಟದಲ್ಲಿದ್ದಾಗ ಸಂಘಟನೆಗೆ ಬರುವಂತೆ ಪಕ್ಷ ನೀಡಿದ್ದ ನಿರ್ದೇಶನ ಪಾಲಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಿದ್ದವರು. ಪಕ್ಷದ ಶಿಸ್ತಿನ ಸಿಪಾಯಿ, ಕ್ರಿಯಾಶೀಲತೆ, ರಾಜಕೀಯ ಅನುಭವದ ಆಧಾರದಲ್ಲಿ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸುವ ಚಾಕಚಕ್ಯತೆ ಇರುವ ಹಿನ್ನೆಲೆಯಲ್ಲಿ ಸಿ.ಟಿ.ರವಿ ಬಿಜೆಪಿಗೆ ಉತ್ತಮ ಆಯ್ಕೆಯಾದರೆ ಒಕ್ಕಲಿಗ ಸಮುದಾಯಕ್ಕೇ ಉಭಯ ಸದನಗಳಲ್ಲಿಯೂ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಲು ಕಷ್ಟಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಸದ್ಯದ ಮಟ್ಟಿಗೆ ಸಿ.ಟಿ.ರವಿಗೆ ಅವಕಾಶ ಸಿಗುವುದು ಅನುಮಾನ ಎನ್ನಲಾಗುತ್ತಿದೆ.

ಇನ್ನು ಚಲವಾದಿ ನಾರಾಯಣಸ್ವಾಮಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿಕೊಂಡು ದಲಿತ ಸಮುದಾಯಗಳ ಪರ ಧ್ವನಿ ಎತ್ತಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಸದನದಲ್ಲಿಯೂ ದಲಿತ ಪರ ದನಿಯಾಗಿ ಕೆಲಸ ಮಾಡಿದ್ದಾರೆ. ಆದರೆ ಇಷ್ಟು ಮಾತ್ರದಿಂದಲೇ ಅವಕಾಶ ಸಿಗುವುದು ಅನುಮಾನವಾಗಿದೆ. ಅವರಿಂದ ಇನ್ನಷ್ಟು ಸೇವೆಯ ನಿರೀಕ್ಷೆಯಲ್ಲಿ ಪಕ್ಷವಿದೆ ಎಂದು ಬಿಜೆಪಿ ನಾಯಕರೇ ಹೇಳುತ್ತಾರೆ.

ಸದ್ಯ ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ರಾಧಾಮೋಹನ್ ದಾಸ್ ಅಗರ್ವಾಲ್ ನೇಮಕಗೊಂಡ ನಂತರ ಮೊದಲ ಕಾರ್ಯಕಾರಿಣಿ ಪೂರ್ಣಗೊಂಡಿದ್ದು, ನಂತರ ನಡೆದ ಅನೌಪಚಾರಿಕ ಸಭೆಯಲ್ಲಿ ಪರಿಷತ್ ಪ್ರತಿಪಕ್ಷ ನಾಯಕರ ಆಯ್ಕೆ ವಿಷಯದ ಕುರಿತು ಚರ್ಚೆಯಾಗಿದೆ. ಆಕಾಂಕ್ಷಿಗಳ ಪಟ್ಟಿಯೊಂದಿಗೆ ಅಗರ್ವಾಲ್ ದೆಹಲಿಗೆ ತೆರಳಿದ್ದು, ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸದ್ಯ ಸೋಮವಾರ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇದ್ದು ರಾಧಾಮೋಹನ್ ದಾಸ್ ಅಗರ್ವಾಲ್ ಕೂಡ ಆಗಮಿಸುತ್ತಿದ್ದಾರೆ. ಆ ವೇಳೆ ವಿರೋಧ ಪಕ್ಷದ ನಾಯಕನ ಹೆಸರಿನೊಂದಿಗೆ ಬರುವ ಸಾಧ್ಯತೆ ಇದೆ. ಇಲ್ಲವೇ ಭಾನುವಾರವೇ ಹೆಸರು ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಂದು ವೇಳೆ ಈ ಅಧಿವೇಶನದಲ್ಲಿ ಪರಿಷತ್ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡದೇ ಇದ್ದಲ್ಲಿ ಬಹುತೇಕ ದೊಡ್ಡ ಮಟ್ಟದ ಬದಲಾವಣೆಯ ಚಿಂತನೆಯಲ್ಲಿ ಹೈಕಮಾಂಡ್ ಇದೆ ಎನ್ನುವ ಸಾಧ್ಯತೆ ಇದೆ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ. ಬಹುಶಃ ಅಶೋಕ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ಮಾಡಿ ಪ್ರತಿಪಕ್ಷದ ನಾಯಕರನ್ನಾಗಿ ಸುನೀಲ್ ಕುಮಾರ್ ಅವರನ್ನು ನೇಮಿಸಲಾಗುತ್ತದೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಇದು ಸತ್ಯವೇ ಆದಲ್ಲಿ ಆಗ ಪರಿಷತ್​ನ ಪ್ರತಿಪಕ್ಷದ ನಾಯಕರನ್ನಾಗಿ ಸಿಟಿ ರವಿ ಅವರ ಹೆಸರನ್ನು ಪರಿಗಣಿಸಲಾಗುತ್ತದೆ ಎನ್ನಲಾಗುತ್ತಿದೆ.

ಸದ್ಯದ ಮಟ್ಟಿಗೆ ಸೋಮವಾರದ ಕಲಾಪ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕರ ಉಪಸ್ಥಿತಿಯಲ್ಲಿ ಆರಂಭವಾಗಲಿದೆಯೋ ಅಥವಾ ಆ ಸ್ಥಾನವನ್ನು ಖಾಲಿ ಇರಿಸಿಯೇ ಕಲಾಪ ಆರಂಭಗೊಳ್ಳಲಿದೆಯೋ ಎನ್ನುವ ಪ್ರಶ್ನೆಗೆ ಸ್ವತಃ ರಾಜ್ಯ ಬಿಜೆಪಿ ನಾಯಕರ ಬಳಿಯೇ ಉತ್ತರವಿಲ್ಲದಂತಾಗಿದೆ. ಭಾನುವಾರ ರಾತ್ರಿಯವರೆಗೂ ಕಾದು ನೋಡಬೇಕಿದೆ.

ಸಿ.ಟಿ.ರವಿ ಪ್ರತಿಕ್ರಿಯೆ: ಸಿ.ಟಿ.ರವಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ''ಪಕ್ಷ ಪರಿಷತ್ ಸ್ಥಾನಕ್ಕೆ ಕಳಿಸಿದೆ, ಬಂದಿದ್ದೇನೆ. ಪ್ರತಿಪಕ್ಷದ ನಾಯಕ ಸ್ಥಾನದ ಆಕಾಂಕ್ಷಿ ನಾನಲ್ಲ. ಪಕ್ಷದ ಆದೇಶ ಪಾಲನೆಯಷ್ಟೇ ನನ್ನ ಕರ್ತವ್ಯ. ಕಾರ್ಯಕರ್ತನಾಗಿ ಪಕ್ಷದ ಸೂಚನೆ ಪಾಲಿಸುವುದಷ್ಟೇ ನನ್ನ ಕೆಲಸ" ಎಂದಿದ್ದಾರೆ. ಇನ್ನು ರವಿಕುಮಾರ್, ಸದ್ಯ ನಾನು ಪ್ರತಿಪಕ್ಷದ ಸಚೇತಕನಾಗಿದ್ದೇನೆ. ಪಕ್ಷ ನನಗೆ ನೀಡಿರುವ ಜವಾಬ್ದಾರಿ ನಿರ್ವಹಣೆ ಮಾಡುತ್ತೇನೆ. ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ" ಎಂದಿದ್ದಾರೆ.

ಪರಿಷತ್ ವಿರೋಧ ಪಕ್ಷದ ನಾಯಕ ಯಾರಾಗುತ್ತಾರೆ. ಯಾವಾಗ ಆಗುತ್ತಾರೆ ಎನ್ನವ ಕುತೂಹಲ ಬಿಜೆಪಿ ಪಾಳಯದಲ್ಲಿ ಮೂಡಿದ್ದು, ಇದಕ್ಕೆ ಹೈಕಮಾಂಡ್ ಯಾವಾಗ ತೆರೆ ಎಳೆಯಲಿದೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ಥಾನ ಗೆಲ್ಲಲು ಕಾಂಗ್ರೆಸ್ ವಿಫಲ: ಸತ್ಯಶೋಧನಾ ಸಮಿತಿಯಿಂದ ಪರಾಮರ್ಶೆ - Fact finding committee meeting

Last Updated : Jul 12, 2024, 9:03 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.