ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕಾಗಿದ್ದು, ಜಲಾಶಯಗಳಲ್ಲಿ ನೀರಿನ ಮಟ್ಟ ಮತ್ತಷ್ಟು ಹೆಚ್ಚಳವಾಗಿದೆ. ಕೆಲವು ಜಲಾಶಗಳು ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ನದಿಗೆ ಬಿಡಲಾಗುತ್ತಿದೆ. ಸದ್ಯ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ಒಳ ಹರಿವು, ಹೊರ ಹರಿವು ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ.
ಕ್ರಸ್ಟ್ ಗೇಟ್ವೊಂದರ ಚೈನ್ ಲಿಂಕ್ ತುಂಡಾಗಿ ಬಹಳ ಆತಂಕ ಉಂಟು ಮಾಡಿದ್ದ ವಿಜಯ ನಗರ ಜಿಲ್ಲೆಯ ಹೊಸಪೇಟೆಯ ಮುನಿರಾಬಾದ್ ಬಳಿಯಿರುವ ತುಂಗಭದ್ರಾ ಜಲಾಶಯ ಮತ್ತೆ ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗುವ ಆಶಾಭಾವನೆ ಮೂಡಿಸಿದೆ. ಜಲಾನಯನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬಂದಿದೆ. ಬಹುತೇಕ ಜಲಾಶಯ ಭರ್ತಿಯಾಗಿದ್ದು, ಮುಂದಿನ ವಾರದಿಂದ ನೀರನ್ನು ಹೊರಬಿಡುವ ಸಾಧ್ಯತೆ ಇದೆ.
ತುಂಗಭದ್ರಾ ಜಲಾಶಯದ ನೀರಿನ ಮಟ್ಟ
- ಗರಿಷ್ಠ ಮಟ್ಟ : 1,633 ಅಡಿ
- ಇಂದಿನ ಮಟ್ಟ : 1631.06 ಕ್ಯೂಸೆಕ್
- ಇಂದಿನ ಒಳ ಹರಿವು : 30,031 ಕ್ಯೂಸೆಕ್
- ಇಂದಿನ ಹೊರ ಹರಿವು : 15,234 ಕ್ಯೂಸೆಕ್
- ನದಿಗೆ : 5,170 ಕ್ಯೂಸೆಕ್
- ಇಂದಿನ ಸಾಮರ್ಥ್ಯ : 98.01 ಟಿಎಂಸಿ
- ಗರಿಷ್ಠ ಸಾಮರ್ಥ್ಯ : 105.788 ಟಿಎಂಸಿ
ತುಂಗಭದ್ರಾ ಜಲಾಶಯ ಭರ್ತಿಯಾಗಲು ಇನ್ನೂ 1.94 ಅಡಿ ಮಾತ್ರ ಬಾಕಿ ಇದೆ. ಒಂದೇ ದಿನದಲ್ಲಿ 2 ಟಿಎಂಸಿ ನೀರು ಸಂಗ್ರಹವಾಗಿದ್ದು ಗಮನಾರ್ಹ. ಕಿತ್ತುಹೋಗಿದ್ದ ಗೇಟ್ 19ಅನ್ನು ಬಂದ್ ಮಾಡಿದ ನಂತರ 27 ಟಿಎಂಸಿ ನೀರು ಸಂಗ್ರಹಗೊಂಡಿದ್ದು ಮತ್ತೊಂದು ಖುಷಿ ವಿಚಾರ. ಈಗ ಒಳ ಹರಿವು ಹೆಚ್ಚಳವಾಗಿದ್ದು, ಸದ್ಯದಲ್ಲೇ ಭರ್ತಿಯಾಗಲಿದೆ.
ಆಲಮಟ್ಟಿ ಜಲಾಶಯದ ನೀರಿನ ಮಟ್ಟ
- ಜಲಾಶಯದ ಗರಿಷ್ಠ ನೀರಿನ ಮಟ್ಟ : 123.081 ಟಿಎಂಸಿ
- ಇಂದಿನ ನೀರಿನ ಮಟ್ಟ : 117.038 ಟಿಎಂಸಿ
- ಒಟ್ಟು ಎತ್ತರ : 519.60 ಮೀಟರ್
- ಇಂದಿನ ನೀರಿನ ಪ್ರಮಾಣ : 519.25 ಮೀಟರ್
- ಇಂದಿನ ನೀರಿನ ಒಳಹರಿವು : 1,32,611 ಕ್ಯೂಸೆಕ್
- ಇಂದಿನ ನೀರಿನ ಹೊರಹರಿವು : 1,32,611 ಕ್ಯೂಸೆಕ್
ಕಬಿನಿ ಜಲಾಶಯದ ನೀರಿನ ಮಟ್ಟ
- ಗರಿಷ್ಠ ಮಟ್ಟ : 2284 ಅಡಿ (ft)
- ಇಂದಿನ ಮಟ್ಟ : 2283.63 ಅಡಿ (ft)
- ಇಂದಿನ ಒಳ ಹರಿವು : 8,025 ಕ್ಯೂಸೆಕ್
- ಇಂದಿನ ಹೊರ ಹರಿವು : 70,000 ಕ್ಯೂಸೆಕ್
ಕೆಆರ್‌ಎಸ್ ಜಲಾಶಯದ ನೀರಿನ ಮಟ್ಟ
- ಗರಿಷ್ಠ ಮಟ್ಟ : 124.80 ಅಡಿ (ft)
- ಇಂದಿನ ಮಟ್ಟ : 124.39 ಅಡಿ (ft)
- ಇಂದಿನ ಒಳ ಹರಿವು : 11,729 ಕ್ಯೂಸೆಕ್
- ಇಂದಿನ ಹೊರ ಹರಿವು : 10,715 ಕ್ಯೂಸೆಕ್
ಇದನ್ನೂ ಓದಿ: ಮುಂಗಾರು ಆರ್ಭಟ: ಮೂರು ದಿನ ಭಾರೀ ಮಳೆ ಸಾಧ್ಯತೆ, ನಿಮ್ಮ ಜಿಲ್ಲೆಯ ಹವಾಮಾನ ವರದಿ ಹೀಗಿದೆ - Karnataka Rain Forecast