ETV Bharat / state

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಗ್ರಾಚ್ಯುಟಿ ಸವಲತ್ತು ಘೋಷಣೆ - ಕರ್ನಾಟಕ ಬಜೆಟ್​

ಬಜೆಟ್
ಬಜೆಟ್
author img

By ETV Bharat Karnataka Team

Published : Feb 16, 2024, 10:03 AM IST

Updated : Feb 16, 2024, 11:59 AM IST

11:48 February 16

ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಗ್ರಾಚ್ಯುಟಿ ಸವಲತ್ತು ಘೋಷಣೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಮಕ್ಕಳ ಪ್ರಾರಂಭಿಕ ಶಿಕ್ಷಣ ಮತ್ತು ಆರೈಕೆಯಲ್ಲಿ ಸಾಮರ್ಥ್ಯ ಅಭಿವೃದ್ಧಿಗೆ 20,000 ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸಲು 10 ಕೋಟಿ ರೂ. ಗಳನ್ನು ಒದಗಿಸಲಾಗುವುದು.

ಅಂಗನವಾಡಿ ಮೂಲಕ ಕೈಗೊಳ್ಳುವ ಚಟುವಟಿಕೆಗಳನ್ನು ಸುಗಮಗೊಳಿಸಲು 90 ಕೋಟಿ ರೂ. ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್‌ಗಳನ್ನು ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಮೇಲ್ವಿಚಾರಕಿಯರಿಗೆ ಒದಗಿಸಲಾಗುವುದು

ರಾಜ್ಯದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 1,000 ಅಂಗನವಾಡಿಗಳಿಗೆ ಸ್ವಂತ ಕಟ್ಟಡಗಳನ್ನು 200 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗುವುದು.

ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸವಲತ್ತುಗಳನ್ನು ನೀಡಲಾಗುವುದು.

11:46 February 16

ಕಾಯಿಲೆಪೀಡಿತ ವ್ಯಕ್ತಿಗಳಿಗೆ ಪ್ರತಿ ಮಾಹೆ 1000 ರೂಪಾಯಿ ಪ್ರೋತ್ಸಾಹಧನ

  • ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗಳ ಆರೈಕೆಗಾಗಿ ಪ್ರತಿ ಮಾಹೆ 1000 ರೂ. ಪ್ರೋತ್ಸಾಹಧನ
  • ನಿರಾಶ್ರಿತ ಬೌದ್ಧಿಕ ವಿಕಲಚೇತನರ ಆರೈಕೆ ಮತ್ತು ಸಂರಕ್ಷಣೆಗಾಗಿ 4 ಅನುಪಾಲನಾ ಗೃಹಗಳನ್ನು ಎರಡು ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು.
  • ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಒದಗಿಸಲು ಇನ್ನೂ ಬಾಕಿಯಿರುವ 1,500 ವಿಶೇಷಚೇತನರಿಗೆ 2024-25ನೇ ಸಾಲಿನಲ್ಲಿ ದ್ವಿಚಕ್ರ ವಾಹನಗಳನ್ನು ವಿತರಿಸಲಾಗುವುದು.
  • ಲಿಂಗತ್ವ ಅಲ್ಪಸಂಖ್ಯಾತರ ಬದುಕನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಮೈತ್ರಿ ಯೋಜನೆಯಡಿ ನೀಡುವ ಮಾಸಾಶನವನ್ನು 800 ರೂ.ಗಳಿಂದ 1,200 ರೂ.ಗಳಿಗೆ ಹೆಚ್ಚಿಸಲಾಗುವುದು.
  • ಮಾಜಿ ದೇವದಾಸಿಯರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳ ಘೋಷಣೆ
  • ಪ್ರಸ್ತುತ ನೀಡುತ್ತಿರುವ ಮಾಸಾಶನವನ್ನು 1500 ರೂ.ಗಳಿಂದ 2000 ರೂ.ಗಳಿಗೆ ಹೆಚ್ಚಿಸಲಾಗುವುದು.
  • ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ವಿಶೇಷ ಪ್ಯಾಕೇಜ್ ಅನ್ನು ನೀಡಲಾಗುವುದು.
  • ನಿವೇಶನ ಹೊಂದಿರುವ ವಸತಿ ರಹಿತರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಂದ ವಸತಿ ಸೌಲಭ್ಯ ಕಲ್ಪಿಸಲಾಗುವುದು.
  • ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಿ, ನಡೆಸಲಾಗುವುದು. ಪುನರ್ವಸತಿ ಕಲ್ಪಿಸಲು ಮರುಸಮೀಕ್ಷೆ
  • 2024-25ನೇ ಸಾಲಿನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ 86,423 ಕೋಟಿ ರೂ.ಗಳನ್ನು ಒದಗಿಸಲಾಗುವುದು.
  • ಮಕ್ಕಳ ಉದ್ದೇಶಿತ ಯೋಜನೆಗಳಿಗೆ 2024-25ನೇ ಸಾಲಿನಲ್ಲಿ 54,617 ಕೋಟಿ ರೂ.ಗಳನ್ನು ಒದಗಿಸಲಾಗುವುದು

11:37 February 16

ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್‌ ಸ್ಥಾಪನೆ

  • ಆರೋಗ್ಯ ಇಲಾಖೆ
  • ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಆಧುನಿಕ ಕ್ರಿಟಿಕಲ್ ಕೇರ್ ಬ್ಲಾಕ್‌ಗಳನ್ನು ಸ್ಥಾಪನೆ
  • ಈಗಾಗಲೇ 15 ಜಿಲ್ಲೆಗಳಲ್ಲಿ ನಿರ್ಮಾಣ ಕಾರ್ಯ ಪ್ರಾರಂಭ
  • ಪ್ರಸಕ್ತ ಸಾಲಿನಲ್ಲಿ ಉಡುಪಿ, ದಾವಣಗೆರೆ, ವಿಜಯಪುರ, ಮೈಸೂರು, ಮಂಡ್ಯ, ಧಾರವಾಡ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ 187 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ಕಾಮಗಾರಿಗಳನ್ನು ಪ್ರಾರಂಭ
  • ಮುಂದಿನ ಸಾಲಿನಲ್ಲಿ ಉಳಿದ 9 ಜಿಲ್ಲೆಗಳಲ್ಲಿಯೂ ಕ್ರಿಟಿಕಲ್ ಕೇರ್ ಬ್ಲಾಕ್‌ಗಳನ್ನು ಸ್ಥಾಪನೆ
  • ತಾಲ್ಲೂಕು ಆಸ್ಪತ್ರೆಗಳಿಲ್ಲದ ಆನೇಕಲ್, ನೆಲಮಂಗಲ, ಹೊಸಕೋಟೆ, ಶೃಂಗೇರಿ, ಖಾನಾಪುರ, ಶಿರಹಟ್ಟಿ ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ಪ್ರಸಕ್ತ ಸಾಲಿನಲ್ಲಿ 100 ಹಾಸಿಗೆ ಸಾಮರ್ಥ್ಯದ ತಾಲ್ಲೂಕು ಆಸ್ಪತ್ರೆಗಳನ್ನು 280 ಕೋಟಿ ರೂ. ಗಳ ವೆಚ್ಚದಲ್ಲಿ ನಿರ್ಮಾಣ
  • ಆರೋಗ್ಯ ಇಲಾಖೆಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ದುರಸ್ತಿ ಮತ್ತು ಉನ್ನತೀಕರಣಕ್ಕೆ 75 ಕೋಟಿ ರೂ. ಗಳ ಅನುದಾನ
  • ಬೆಂಗಳೂರಿನ ಕೆ.ಸಿ. ಜನರಲ್ ಆಸ್ಪತ್ರೆ ಆವರಣದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಮತ್ತಿತರ ಮೂಲಸೌಕರ್ಯ ಕಾಮಗಾರಿಗಳನ್ನು 150 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗುವುದು
  • ಗ್ರಾಮೀಣ ಪ್ರದೇಶದ ಜನರಿಗೆ 24x7 ತುರ್ತು ಆರೋಗ್ಯ ಸೇವೆಯನ್ನು ನೀಡಲು ಮುಂದಿನ 2 ವರ್ಷಗಳಲ್ಲಿ 350 ಕೋಟಿ ರೂ.ಗಳ ವೆಚ್ಚದಲ್ಲಿ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಈ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ.
  • ಪ್ರಸಕ್ತ ಸಾಲಿನಲ್ಲಿ 15 ಸಮುದಾಯ ಆರೋಗ್ಯ ಕೇಂದ್ರಗಳನ್ನು ಮಾನವ ಸಂಪನ್ಮೂಲದೊಂದಿಗೆ ಕಾರ್ಯಗತ
  • ಕಲ್ಯಾಣ ಕರ್ನಾಟಕ ಭಾಗದಲ್ಲಿ 46 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 221 ಕೋಟಿ ರೂ.ಗಳ ವೆಚ್ಚದಲ್ಲಿ KKRDB ಮೂಲಕ ಸ್ಥಾಪನೆ

11:36 February 16

ಕೃಷಿ ಭಾಗ್ಯ ಯೋಜನೆ ಮರು ಜಾರಿಗೆ 200 ಕೋಟಿ ರು. ಅನುದಾನ

  • ಕೃಷಿ ಇಲಾಖೆ
  • ಕೃಷಿ ಕ್ಷೇತ್ರವನ್ನು ಸುಸ್ಥಿತರ ಮತ್ತ ಲಾಭದಾಯಕವನ್ನಾಗಿ ಮಾಡಲು ಕರ್ನಾಟಕ ರೈತ ಸಂವೃದ್ಧಿ ಯೋಜನೆ ಜಾರಿ
  • ಕೃಷಿ ಮತ್ತು ಪೂರಕ ಚಟುವಟಿಕೆಗಳ ನೀತಿ ಮತ್ತು ಯೋಜನೆಗಳ ಸಂಯೋಜನೆ ಹಾಗು ಪರಿಣಾಮಕಾರಿ ಅನುಷ್ಟಾನಕ್ಕೆ ಕೃಷಿ, ತೋಟಗಾರಿಕೆ, ರೇಷ್ಮೆ, ಮೀನುಗಾರಿಕೆ, ಸಹಕಾರ, ಪಶುಸಂಗೋಪನೆ ಇಲಾಖೆಗಳ ನಡುವೆ ಸಮನ್ವಯ ಸಾಧಿಸಿದಲು ಮುಖ್ಯಮಂತ್ರಿಗಳ ಅಧ್ಯಕತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ
  • ಕೃಷಿ ಭಾಗ್ಯ ಯೋಜನೆ ಮರು ಜಾರಿಗೆ 200 ಕೋಟಿ ರೂ. ಅನುದಾನ
  • ನಶಿಸುತ್ತಿರುವ ಸ್ಥಳೀಯ ತಳಿಗಳ ಸಂರಕ್ಷಣೆಗೆ ಸಮುದಾಯ ಬೀಜ ಬ್ಯಾಂಕ್​ ಸ್ಥಾಪನೆ
  • ನಮ್ಮ ಮಿಲ್ಲೇಟ್​ ಎಂಬ ಹೊಸ ಕಾರ್ಯಕ್ರಮ ಜಾರಿ
  • ಕೀಟ, ರೋಗ ಮತ್ತು ಪೋಷಕಾಂಶಗಳ ನಿರ್ವಹಣೆಗೆ ರಾಯಚೂರು ಕೃಷಿ ವಿವಿಯಿಂದ ಇ-ಸ್ಯಾಪ್​ ತಂತ್ರಾಂಶ ಪರಿಚಯ
  • ಆಹಾರ ಸಂಸ್ಕರಣಾ ಆಯುಕ್ತಾಲಯ ರಚನೆ
  • ಕೃಷಿ, ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ ಮತ್ತು ರಫ್ತು ಉತ್ತೇಜಿಸಲು ಕೆಪೆಕ್​ ಬಲಪಡಿಸಲು 80 ಕೋಟಿ ರೂ ಅನುದಾನ, ವಿನಾಮ ನಿಲ್ದಾಣಗಳ ಬಳಿಯಲ್ಲಿ ಆಹಾರ ಪಾರ್ಕ್​ ಸ್ಥಾಪನೆ
  • ರೈತ ಉತ್ಪಾದಕ ಸಂಸ್ಥೆಗಳನ್ನು ಸದೃಢಪಡಿಸಿ ಸಂಬಂಧಪಟ್ಟ ತರಬೇತಿ ನೀಡಲು ಸ್ಟಾರ್ಟ್ ಅಪ್​ ಪ್ರಾರಂಭ
  • ಮಂಡ್ಯ ಜಿಲ್ಲೆಯ ವಿ.ಸಿ ಫಾರಂನಲ್ಲಿ ಕೃಷಿ ವಿವಿ ಸ್ಥಾಪನೆ

11:26 February 16

ಮರು ಸಿಂಚನ ಯೋಜನೆಗೆ 10 ಕೋಟಿ ರೂ. ಅನುದಾನ

  • ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ
  • ಸರ್ಕಾರಿ ಶಾಲಾ ಕಾಲೇಜು ಕೊಠಡಿ ನಿರ್ಮಾಣ, ದುರಸ್ತಿ, ಶೌಚಾಲಯ ನಿರ್ಮಾಣಕ್ಕೆ 850 ಕೋಟಿ
  • ಆಯ್ದ ಸರ್ಕಾರಿ ಶಾಲೆ ಸಿಎಸ್ಆರ್ ಅನುದಾನದಡಿ ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಅಭಿವೃದ್ಧಿ
  • 3-5 ನೇ ತರಗತಿ ಮಕ್ಕಳಿಗೆ ಗಣಿತ ಗಣಕ ಕಾರ್ಯಕ್ರಮ
  • ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಮರು ಸಿಂಚನ ಯೋಜನೆಗೆ 10 ಕೋಟಿ ಅನುದಾನ
  • 2 ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆ ಕನ್ನಡ ಇಂಗ್ಲೀಷ್ ದ್ವಿಭಾಷಾ ಮಾಧ್ಯಮ ಶಾಲೆಗಳಾಗಿ ಪರಿವರ್ತನೆ
  • ರಾಜ್ಯದ ಎಲ್ಲಾ ಸರ್ಕಾರಿ ಶಾಲೆ, ಕಾಲೇಜುಗಳಿಗೆ ಉಚಿತ ನೀರು, ವಿದ್ಯುತ್ ಸೌಲಭ್ಯಕ್ಕೆ 25 ಕೋಟಿ
  • ಶಾಲಾ ಕಾಲೇಜು ಖಾಲಿ ಹುದ್ದೆ ಭರ್ತಿಗೆ ಕ್ರಮ

11:25 February 16

ರಾಜ್ಯ ಶಿಕ್ಷಣ ನೀತಿ ಶೀಘ್ರ ಅನುಷ್ಠಾನ

  • ಉನ್ನತ ಶಿಕ್ಷಣ
  • ರಾಜ್ಯ ಶಿಕ್ಷಣ ನೀತಿ ಶೀಘ್ರ ಅನುಷ್ಠಾನ
  • 30 ಸರ್ಕಾರಿ ಮಹಿಳಾ ಪ್ರಥನ ದರ್ಜೆ ಕಾಲೇಜು,ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಉನ್ನತೀಕರಣಕ್ಕೆ 30 ಕೋಟಿ
  • ಸರ್ಕಾರಿ ಕಾಲೇಜುಗಳ ಮೂಲಭೂತ ಸೌಲಭ್ಯಕ್ಕೆ 250 ಕೋಟಿ,ಸರ್ಕಾರಿ ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಕಾಲೇಜು ಕಾಮಗಾರಿಗೆ 120 ಕೋಟಿ ಅನುದಾನ
  • ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿವಿಯನ್ನು ಐಐಟಿ ಮಾದರಿ ಅಭಿವೃದ್ಧಿಗೆ 500 ಕೋಟಿ
  • ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜು ಕಟ್ಟಡ 54 ಕೋಟಿ,ಕಲಾ ವಾಣಿಜ್ಯ ಕಾಲೇಜು ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ 116 ಕೋಟಿ

11:25 February 16

ಭದ್ರಾವತಿಯಲ್ಲಿ ಅತ್ಯಾಧುನಿಕ ಮೀನು ಮಾರುಕಟ್ಟೆ ಸ್ಥಾಪನೆ

  • ಮೀನುಗಾರಿಕೆ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ದೃಷ್ಟಿಯಿಂದ ಮುಂದಿನ ವರ್ಷಗಳಲ್ಲಿ 3,000 ಕೋಟಿ ರೂ.ಗಳಷ್ಟು ಬೃಹತ್ ಗಾತ್ರದ ವಿವಿಧ ಯೋಜನೆಗಳ ಗುರಿ
  • ಹೊನ್ನಾವರ ತಾಲ್ಲೂಕಿನ ಮಂಕಿ/ ಕಾಸರಕೋಡದಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರ ಸ್ಥಾಪನೆ
  • ಭದ್ರಾವತಿಯಲ್ಲಿ ಅತ್ಯಾಧುನಿಕ ಮೀನು ಮಾರುಕಟ್ಟೆ ಸ್ಥಾಪನೆ
  • ಆಕ್ವಾ ಪಾರ್ಕ್‌ಗಳ ಸ್ಥಾಪನೆ
  • ಭಟ್ಕಳ ತಾಲ್ಲೂಕಿನ ಮುರುಡೇಶ್ವರದಲ್ಲಿ ಸುಸಜ್ಜಿತ ಮೀನುಗಾರಿಕೆ ಹೊರ ಬಂದರು ನಿರ್ಮಾಣ
  • ವಿಜಯಪುರದ ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ.
  • ಮತ್ಸ್ಯ ಆಶಾಕಿರಣ ಯೋಜನೆಯಡಿ ಮೀನುಗಾರಿಕೆ ನಿಷೇಧಾವಧಿಯಲ್ಲಿ ಕರಾವಳಿಯ ಮೀನುಗಾರರಿಗೆ ನೀಡುತ್ತಿರುವ ಪರಿಹಾರ ಮೊತ್ತದ ರಾಜ್ಯದ ಪಾಲನ್ನು 1,500 ರೂ.ಗಳಿಂದ 3,000 ರೂ.ಗಳಿಗೆ ಏರಿಕೆ
  • ಸಮುದ್ರ ಮೀನುಗಾರಿಕೆಗೆ ತೆರಳಿದವರು ಅಪಘಾತ / ಅನಾರೋಗ್ಯಕ್ಕೆ ಒಳಗಾದರೆ ತ್ವರಿತವಾಗಿ ದಡಕ್ಕೆ ತರಲು 7 ಕೋಟಿ ರೂ ವೆಚ್ಚದಲ್ಲಿ ರಾಜ್ಯದಲ್ಲೇ ಪ್ರಥಮ ಸಮುದ್ರ ಆಂಬುಲೆನ್ಸ್ ಖರೀದಿ
  • 2024-25ನೇ ಸಾಲಿನಲ್ಲಿ 10,000 ವಸತಿರಹಿತ ಮೀನುಗಾರರಿಗೆ ರಾಜ್ಯ ಸರ್ಕಾರದ ವಿವಿಧ ವಸತಿ ಯೋಜನೆಗಳಡಿಯಲ್ಲಿ ಮನೆಗಳನ್ನು ನಿರ್ಮಿಸಲು ಸಹಾಯಧನ
  • ನಬಾರ್ಡ್ ಸಹಯೋಗದಲ್ಲಿ 20 ಕೋಟಿ ರೂ ವೆಚ್ಚದಲ್ಲಿ ರಾಜ್ಯದಲ್ಲಿನ 16 ಮೀನು ಮರಿ ಉತ್ಪಾದನಾ ಕೇಂದ್ರಗಳ ಉನ್ನತೀಕರಣ
  • ಚಿತ್ರದುರ್ಗ, ಹೊಳಲ್ಕೆರೆ ಮತ್ತು ಹೊಸದುರ್ಗ ತಾಲ್ಲೂಕುಗಳ ಗಣಿಬಾಧಿತ ಪ್ರದೇಶದಲ್ಲಿ ಮೀನುಗಾರಿಕೆ ಕೈಗೊಳ್ಳಲು 6 ಕೋಟಿ ರೂ ವೆಚ್ಚ

11:23 February 16

ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ 9 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹಣೆ ಗುರಿ‌

  • ಗಣಿ ಮತ್ತು ಭೂವಿಜ್ಞಾನ
  • 2023-24 ನೇ ಆರ್ಥಿಕ ವರ್ಷದಲ್ಲಿ ಜನವರಿ ತಿಂಗಳ ಅಂತ್ಯದವರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ 5,658 ಕೋಟಿ ರೂ ಸಂಗ್ರಹ‌
  • ಕಳೆದ ಸಾಲಿಗೆ ಹೋಲಿಸಿದರೆ ಗಣಿಗಾರಿಕೆಯಿಂದ ಸ್ವೀಕೃತವಾದ ರಾಜಸ್ವದಲ್ಲಿ 22% ಏರಿಕೆ
  • 2024-25ನೇ ಸಾಲಿಗೆ, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ 9,000 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿ‌ ನಿಗದಿ

11:15 February 16

ಕೆರೆ ಅಭಿವೃದ್ಧಿ, ಚೆಕ್ ಡ್ಯಾಂ ನಿರ್ಮಾಣಕ್ಕೆ 200 ಕೋಟಿ ರೂಪಾಯಿ ಅನುದಾನ

  • ಸಣ್ಣ ನೀರಾವರಿ
  • ಕೆರೆ ಅಭಿವೃದ್ಧಿ, ಚೆಕ್ ಡ್ಯಾಂ, ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ 200 ಕೋಟಿ
  • ರಾಯಚೂರು, ಮೈಸೂರು, ಚಿತ್ತಾಪುರ, ಜೇವರ್ಗಿ, ಯಲಬುರ್ಗಾ ಕೆರೆ ಕಂ ಬ್ಯಾಬೇಜ್ ಯೋಜನೆಗಳಿಗೆ 850 ಕೋಟಿ

11:13 February 16

ನೀರಾವರಿ ಯೋಜನೆಗಳಿಗೆ ಅನುದಾನ ಹಂಚಿಕೆ

  • ಕೆಆರ್​ಎಸ್ ಬೃಂದಾವನ ಖಾಸಗಿ ಸಹಭಾಗಿತ್ವದಲ್ಲಿ ವಿಶ್ವದರ್ಜೆಯ ಪ್ರವಾಸೋದ್ಯಮ ಆಕರ್ಷಣೀಯ ಕೇಂದ್ರವಾಗಿ ಉನ್ನತೀಕರಣ
  • ಧಾರವಾಡ ನೆಲ ಜಲ ನಿರ್ವಹಣೆ ಸಂಸ್ಥೆ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ವಾಟರ್ ಮ್ಯಾನೇಜ್ಮೆಂಟ್ ಆಗಿ ಉನ್ನತೀಕರಣ
  • 7280 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆಗಳ ಪೂರ್ಣ
  • ಕೃಷ್ಣಾ ಜಲಭಾಗ್ಯದಡಿ ಏತ ನೀರಾವರಿ ಯೋಜನೆಗಳನ್ನು 3779 ಕೋಟಿ ವೆಚ್ಚದಲ್ಲಿ ಅನುಷ್ಠಾನ
  • ಕೊಪ್ಪಳ ಜಿಲ್ಲೆಯ ಕೆರೆ ತುಂಬಿಸುವ ಯೋಜನೆಗೆ 970 ಕೋಟಿ
  • ಮಸ್ಕಿ ವ್ಯಾಪ್ತಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ನಾರಾಯಣಪುರ ಬಲದಂಡೆಯಿಂದ 990 ಕೋಟಿ ಯೋಜನೆ
  • ಅರ್ಕಾವತಿ ಯೋಜನೆಗಳಿಗೆ 2000 ಕೋಟಿ
  • ಬೆಣ್ಣೆತೊರಾ ಜಲಾಶಯಕ್ಕೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ 365 ಕೋಟಿ

11:12 February 16

ಮದ್ಯ ದರ ಏರಿಕೆ

  • ಅಬಕಾರಿ ಇಲಾಖೆ
  • ಮದ್ಯದ ಘೋಷಿತ ಸ್ಲಾಬ್‌ಗಳನ್ನು ತರ್ಕಬದ್ಧಗೊಳಿಸುವ ಮೂಲಕ ನೆರೆ ರಾಜ್ಯಗಳ ಮದ್ಯದ ಬೆಲೆಗಳಿಗೆ ಅನುಗುಣವಾಗಿ IML ಹಾಗೂ ಬಿಯರ್‌ನ ಸ್ಲಾಬ್‌ಗಳ ಪರಿಷ್ಕರಣೆ
  • ಅಬಕಾರಿ ಇಲಾಖೆಯ ಎಲ್ಲಾ ಸೇವೆಗಳ ಡಿಜಿಟಲೀಕರಣ, ಇಲಾಖೆಯು ಒದಗಿಸುವ ವಿವಿಧ ಸೇವೆಗಳಿಗೆ ಸಮಯದ ಮಿತಿ ನಿಗದಿ ಹಾಗೂ ಸ್ವಯಂಚಾಲಿತ ಅನುಮೋದನೆಗೂ ಅವಕಾಶ
  • 2023-24ನೇ ಸಾಲಿನ ಜನವರಿ ತಿಂಗಳ ಅಂತ್ಯದವರೆಗೆ, ಅಬಕಾರಿ ತೆರಿಗೆಯಿಂದ 28,181 ಕೋಟಿ ರೂಪಾಯಿ ಸಂಗ್ರಹ
  • 2024-25ನೇ ಸಾಲಿಗೆ 38,525 ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿ ನಿಗದಿಪಡಿಸಲಾಗಿದೆ.

11:08 February 16

ಶಿಕ್ಷಕರು, ಉಪನ್ಯಾಸಕರ ನೇಮಕ ಪ್ರಕ್ರಿಯೆ ಪ್ರಾರಂಭ

  • ಶಿಕ್ಷಕರು, ಉಪನ್ಯಾಸಕರ ನೇಮಕ ಪ್ರಕ್ರಿಯೆ ಪ್ರಾರಂಭಿಸಲಾಗುವುದು
  • ರಾಜ್ಯ ಶಿಕ್ಷಣ ನೀತಿ ಜಾರಿಗೆ ಸಮಿತಿ
  • ಸಮಿತಿ ವರದಿ ನೀಡಿದ ಬಳಿಕ ರಾಜ್ಯದಲ್ಲಿ ಜಾರಿ

10:57 February 16

ಮೇಕೆದಾಟು ಯೋಜನೆಗೆ ಆದ್ಯತೆ

  • ರೈತ ವಿರೋಧ ಎಪಿಎಂಸಿ ಕಾಯ್ದೆಗೆ ಶೀಘ್ರದಲ್ಲೇ ಪರಿಷತ್‌ನಲ್ಲಿ ಅನುಮೋದನೆ
  • ಮೇಕೆದಾಟು ಯೋಜನೆಗೆ ಆದ್ಯತೆ
  • ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್​ ಪಾಸ್​

10:51 February 16

ಡಿಸಿಸಿ ಬ್ಯಾಂಕ್​ಗಳಿಗೆ 130 ಕೋಟಿ ಬಿಡುಗಡೆಗೆ ನಿರ್ಧಾರ

  • ಡಿಸಿಸಿ ಬ್ಯಾಂಕ್​ಗಳಿಗೆ 130 ಕೋಟಿ ಬಿಡುಗಡೆಗೆ ನಿರ್ಧಾರ
  • ಸುಸ್ತಿ ಸಾಲ ಮನ್ನಾ ಮಾಡಲು ನಿರ್ಧಾರ, 57 ಸಾವಿರ ರೈತರಿಗೆ ಅನುಕೂಲ
  • 450 ಕೋಟಿ ರೂಪಾಯಿ ಬ್ಯಾಂಕ್​ಗಳಿಗೆ ಅನುದಾನ
  • ತೋಟಗಾರಿಕೆ ಬೆಳೆಗಳಿಗೂ ಎಂಎಸ್​ಪಿ ನೀಡಲು ಕೇಂದ್ರಕ್ಕೆ ಆಗ್ರಹ

10:50 February 16

2025 ರ ವೇಳೆಗೆ 44 ಕಿಮೀ ಮೆಟ್ರೋ ಮಾರ್ಗ ಸೇರ್ಪಡೆ

  • ಹಂದಿ, ಕೋಳಿ ಸಾಕಾಣಿಕೆಗೆ ಪ್ರೋತ್ಸಾಹ
  • ಸಮುದ್ರ ಮೀನುಗಾರಿಕೆಗೆ ತೆರಳಿದವರ ರಕ್ಷಣೆಗಾಗಿ 'ಸಮುದ್ರ ಆಂಬ್ಯುಲೆನ್ಸ್​' ಖರೀದಿ
  • 2025 ರ ವೇಳೆಗೆ 44 ಕಿಮೀ ಮೆಟ್ರೋ ಮಾರ್ಗ ಸೇರ್ಪಡೆ
  • ಚಿಕ್ಕಮಗಳೂರಿನಲ್ಲಿ ಸ್ಪೈಸ್ ಪಾರ್ಕ್
  • ವಿಜಯಪುರ ಅಲಮೇಲದಲ್ಲಿ ತೋಟಗಾರಿಕೆ ಕಾಲೇಜ್
  • ಮೂರು ಜಿಲ್ಲೆಗಳಲ್ಲಿ ಆಹಾರ ಪಾರ್ಕ್
  • ಮೀನುಗಾರಿಕೆ - 3000 ಕೋಟಿ ಯೋಜನೆ
  • ಹೊನ್ನಾವರ ಮೀನುಗಾರಿಕೆ ಸಂಶೋಧನಾ ಕೇಂದ್ರ
  • ಮುರುಡೇಶ್ವರ ಹೊರಬಂದರು ನಿರ್ಮಾಣ

10:42 February 16

ರಾಜಸ್ವ ಕೊರತೆಯ ಬಜೆಟ್

  • 2024-25 ಸಾಲಿನಲ್ಲಿ ಒಟ್ಟು 1,05,246 ಕೋಟಿ ರೂ. ಸಾಲದ ಮೊರೆ
  • 2024-25 ಸಾಲಿನಲ್ಲಿ ರಾಜಸ್ವ ಕೊರತೆಯ ಬಜೆಟ್
  • ಅಂದಾಜು 27,354 ಕೋಟಿ ರೂ. ಆದಾಯ ಕೊರತೆಯ ಬಜೆಟ್ ಮಂಡನೆ

10:35 February 16

ಬಜೆಟ್​ ಮಂಡನೆ ವೇಳೆ ವಿಪಕ್ಷಗಳಿಂದ ಗದ್ದಲ

  • ವಿಧಾನಸಭೆಯಲ್ಲಿ ಬಜೆಟ್​ ಮಂಡನೆ ವೇಳೆ ಗದ್ದಲ ಆರಂಭ
  • ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವ ವಿಪಕ್ಷಗಳು
  • ಬಜೆಟ್​ನಲ್ಲಿ ಸುಳ್ಳು ಹೇಳಲಾಗುತ್ತಿದೆ ಎಂದು ಆರೋಪ
  • ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿರುವ ವಿಪಕ್ಷಗಳು
  • ಗದ್ದಲ ನಡುವೆಯೇ ಬಜೆಟ್ ಮಂಡಿಸುತ್ತಿರುವ ಸಿದ್ದರಾಮಯ್ಯ

10:34 February 16

ಜಿಎಸ್​ಟಿ ಸಂಗ್ರಹ ಶೇಕಡಾ 18 ರಷ್ಟು ಹೆಚ್ಚಳ- ಸಿದ್ದರಾಮಯ್ಯ

  • ಜಿಎಸ್​ಟಿ ಸಂಗ್ರಹ ಶೇಕಡಾ 18 ರಷ್ಟು ಹೆಚ್ಚಳವಾಗಿದೆ
  • ಹಿಂದಿನ ಸರ್ಕಾರದ ವೈಫಲ್ಯದಿಂದ ರಾಜ್ಯಕ್ಕೆ 59,274 ಕೋಟಿ ಜಿಎಸ್​ಟಿ ನಷ್ಟ
  • ಸೆಸ್​ ಸರ್ಚಾರ್ಜ್​ ಹೆಚ್ಚಿಸಿದರೂ ರಾಜ್ಯಕ್ಕೆ ನೀಡುವುದಿಲ್ಲ

10:24 February 16

2024-25 ನೇ ಸಾಲಿನಲ್ಲಿ ಶೇಕಡಾ 6.6 ರಷ್ಟು ರಾಜ್ಯದ ಬೆಳವಣಿಗೆ ದರ ಗುರಿ

  • 2024-25 ನೇ ಸಾಲಿನಲ್ಲಿ ಶೇಕಡಾ 6.6 ರಷ್ಟು ರಾಜ್ಯದ ಬೆಳವಣಿಗೆ ದರ ಗುರಿ
  • ಗ್ರಾಮೀಣ ಮಟ್ಟದಲ್ಲಿ ಆಧುನಿಕ ಶಿಕ್ಷಣ ನೀಡಲಾಗುತ್ತಿದೆ
  • ಕೌಶಲ್ಯಾಭಿವೃದ್ಧಿ ಕ್ಷೇತ್ರಕ್ಕೆ ಹೆಚ್ಚಿನ ಮನ್ನಣೆ
  • ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಶಾಲೆಗಳ ಅಭಿವೃದ್ಧಿ
  • ಈ ಆಯವ್ಯಯ ಮುಂದಿನ ರಾಜಕೀಯ ನಡೆಯ ಸಂಕೇತವಾಗಲಿದೆ

10:24 February 16

ಬಜೆಟ್​ ಮಂಡನೆ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿ

  • ಬಜೆಟ್​ ಮಂಡನೆ ವೇಳೆ ಕೇಂದ್ರ ಸರ್ಕಾರ ವಿರುದ್ಧ ಕಿಡಿ
  • ಕಡಿಮೆ ಅವಧಿಯಲ್ಲಿ ಉಚಿತ ಗ್ಯಾರಂಟಿಗಳು ಜಾರಿ
  • ಜನರ ಆಶೋತ್ತರಗಳನ್ನು ಈಡೇರಿಸುವತ್ತ ಗ್ಯಾರಂಟಿಗಳು
  • ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಸ್ಥಿತಿ ಕೆಟ್ಟಿಲ್ಲ
  • ನಮ್ಮ ಗ್ಯಾರಂಟಿಗಳನ್ನೇ ನಕಲಿ ಮಾಡಲಾಗುತ್ತಿದೆ
  • ಬಿಜೆಪಿ ನಾಯಕರನ್ನು ಟೀಕಿಸಿದ ಸಿದ್ದರಾಮಯ್ಯ

10:19 February 16

2024-25ನೇ ಸಾಲಿನ ಬಜೆಟ್​ ಮಂಡಿಸುತ್ತಿರುವ ಸಿದ್ದರಾಮಯ್ಯ

  • 2024-25ನೇ ಸಾಲಿನ ಬಜೆಟ್​ ಮಂಡಿಸುತ್ತಿರುವ ಸಿದ್ದರಾಮಯ್ಯ
  • ಸಂವಿಧಾನದ ಆಶಯದಂತೆ ಕರ್ನಾಟಕದ ಮಾದರಿ ಬಜೆಟ್​ ಇದಾಗಿದೆ
  • ನಟ ಡಾ.ರಾಜ್​ಕುಮಾರ್​ರ ಹಾಡೊಂದನ್ನು ಪ್ರಸ್ತಾಪಿಸಿದ ಸಿಎಂ

10:13 February 16

ಬಜೆಟ್ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ

  • ವಿಧಾನಸಭೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ಆರಂಭ
  • ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಂಪುಟ ಸಭೆ
  • ಸಂಪುಟ ಸಭೆ ಮುಕ್ತಾಯ
  • 2024-25ನೇ ಸಾಲಿನ ರಾಜ್ಯ ಬಜೆಟ್ ಪ್ರಸ್ತಾವಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ

10:09 February 16

ದಾಖಲೆಯ 15ನೇ ಬಜೆಟ್​ ಮಂಡಿಸಲಿರುವ ಸಿದ್ದರಾಮಯ್ಯ

  • 1995ರಲ್ಲಿ ಎಚ್.ಡಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯ ಅವರು ಮೊದಲ ಬಜೆಟ್‌ ಮಂಡಿಸಿದ್ದರು
  • 1995 ಮತ್ತು 1996ರಲ್ಲಿ ದೇವೇಗೌಡರು ಸಿಎಂ ಆಗಿದ್ದಾಗ, 1997, 1998, 1999ರಲ್ಲಿ ಜೆ.ಎಚ್‌. ಪಟೇಲ್‌ ಸಂಪುಟದಲ್ಲಿ ಹಣಕಾಸು ಸಚಿವರಾಗಿ ಸಿದ್ದರಾಮಯ್ಯ ಬಜೆಟ್‌ ಮಂಡಿಸಿದ್ದರು
  • ತಮ್ಮದೇ 5 ವರ್ಷಗಳ ಅಧಿಕಾರವಧಿಯಲ್ಲಿ (2013 ರಿಂದ 2018) ಐದು ಬಾರಿ ಬಜೆಟ್​ ಮಂಡಿಸಿದ್ದಾರೆ

09:56 February 16

ಸೂಟ್​ಕೇಸ್​ ಬದಲು ಚರ್ಮದ ಬ್ಯಾಗ್​ನಲ್ಲಿ ಬಜೆಟ್​ ಪ್ರತಿ ತಂದ ಸಿದ್ದರಾಮಯ್ಯ

  • ಸಿಎಂ ಸಿದ್ದರಾಮಯ್ಯ ಅವರು ಬಜೆಟ್​ ಮಂಡನೆ ಮಾಡಲು ವಿಧಾನಸಭೆಗೆ ಆಗಮಿಸಿದರು
  • ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ ಸಿಎಂ ಸಿದ್ದರಾಮಯ್ಯ
  • ತಮ್ಮ ಎರಡನೇ ಅವಧಿಯ ಮೊದಲ ಪೂರ್ಣಕಾಲಿಕ ಬಜೆಟ್ ಮಂಡಿಸುತ್ತಿರುವ ಸಿಎಂ ಸಿದ್ದರಾಮಯ್ಯ
  • ಸೂಟ್​ಕೇಸ್​ಗೆ ಬದಲಾಗಿ ಚರ್ಮದ ಬ್ಯಾಗ್​ನಲ್ಲಿ ಬಜೆಟ್​ ಪ್ರತಿಗಳನ್ನು ತಂದರು

09:08 February 16

15ನೇ ಬಜೆಟ್​ ಮಂಡಿಸಲಿರುವ ಸಿಎಂ ಸಿದ್ದರಾಮಯ್ಯ

ಬೆಂಗಳೂರು: 14 ಬಾರಿ ಬಜೆಟ್ ಮಂಡಿಸಿ ದಾಖಲೆ ಬರೆದಿರುವ ಸಿಎಂ ಸಿದ್ದರಾಮಯ್ಯ ಇಂದು ತಮ್ಮ 15ನೇ ಆಯವ್ಯಯ ಮಂಡಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗೆ ಅನುದಾನ ಹೊಂದಿಸಿ, ಅಭಿವೃದ್ಧಿಗೂ ಹಣಕಾಸು ಕೊರತೆಯಾಗದ ರೀತಿ ಹೊರೆ ಇಲ್ಲದ ಉಳಿತಾಯ ಲೆಕ್ಕ ಪತ್ರ ಮಂಡನೆ ಮಾಡಲು ಸಾಧ್ಯತೆ ಇದೆ.

ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ಸಿಎಂ ಭೇಟಿ ಮಾಡಿದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಬಜೆಟ್ 2024 ಅನುಮೋದನೆ ಪಡೆದರು. ಬಳಿಕ ವಿಧಾನಸಭೆಗೆ ಆಗಮಿಸಿದರು. 10.15ರಿಂದ ಬಜೆಟ್ ಮಂಡನೆ ಆರಂಭಿಸಿದ್ದಾರೆ. ಈ ಬಾರಿ ಗ್ಯಾರಂಟಿ ಯೋಜನೆಗೆ ಅನುದಾನ ಹೊಂದಿಸಿ, ಅಭಿವೃದ್ಧಿಗೂ ಹಣಕಾಸು ಕೊರತೆಯಾಗದ ರೀತಿ ಹೊರೆ ಇಲ್ಲದ ಉಳಿತಾಯ ಲೆಕ್ಕ ಪತ್ರ ಮಂಡನೆ ಮಾಡುವ ಸಾಧ್ಯತೆ ಇದೆ.

Last Updated : Feb 16, 2024, 11:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.