ETV Bharat / state

ಬೆಂಗಳೂರು: ಇಂದಿನಿಂದ ಐತಿಹಾಸಿಕ ಕರಗ ಉತ್ಸವ, 9 ದಿನಗಳ ಕಾಲ ವಿಶೇಷ ಪೂಜೆ - Karaga Fest

ಇಂದಿನಿಂದ ಏ.23ರವರೆಗೆ 9 ದಿನಗಳ ಕಾಲ ಐತಿಹಾಸಿಕ ಕರಗ ಉತ್ಸವ ವಿಜೃಂಭಣೆಯಿಂದ ನಡೆಯಲಿದೆ. ಉತ್ಸವಕ್ಕಾಗಿ ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

KARAGA FEST
KARAGA FEST
author img

By ETV Bharat Karnataka Team

Published : Apr 15, 2024, 7:17 AM IST

Updated : Apr 15, 2024, 11:12 AM IST

ಬೆಂಗಳೂರು: ವಿಶ್ವವಿಖ್ಯಾತ ಐತಿಹಾಸಿಕ ಕರಗಕ್ಕೆ ಅಧಿಕೃತವಾಗಿ ಸೋಮವಾರ ಚಾಲನೆ ನೀಡಲಾಗುತ್ತಿದ್ದು, ಈ ಬಾರಿಯೂ ಜ್ಞಾನೇಂದ್ರ ಅವರೇ ಕರಗ ಹೊರಲಿದ್ದಾರೆ. ಇಂದಿನಿಂದ ಏ.23ರವರೆಗೆ ನಡೆಯಲಿರುವ ಕರಗ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ತೀರ್ಮಾನಿಸಲಾಗಿದೆ.

ಇನ್ನು ಈ ಬಾರಿ ದ್ರೌಪದಿ ದೇವಿಯ ಕರಗ ಮಹೋತ್ಸವಕ್ಕೆ ಭರ್ಜರಿ ಸಿದ್ಧತೆಯನ್ನೂ ನಡೆಸಲಾಗಿದೆ. ಏಪ್ರಿಲ್ 23 ರ ಚೈತ್ರ ಮಾಸದ ಪೂರ್ಣಿಮೆಯಂದು ದ್ರೌಪದಿ ದೇವಿಯ ಹೂವಿನ ಕರಗ ಜರುಗಲಿದೆ. ಕರಗಕ್ಕೆ ಸರ್ಕಾರ ಹಾಗೂ ಬಿಬಿಎಂಪಿಯಿಂದ ಎಲ್ಲ ರೀತಿಯ ಸೌಲಭ್ಯಗಳು ಲಭ್ಯವಾಗಿದ್ದು, ಕರಗ ವ್ಯವಸ್ಥಾಪನ ಸಮಿತಿಯಿಂದ ಪ್ರತಿಬಾರಿಯಂತೆ ಈ ಬಾರಿಯೂ ಪಕ್ಷಾತೀತವಾಗಿ ಉತ್ಸವ ನಡೆಯಲಿದೆ.

ಕರಗ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ಈ ಕುರಿತು ಮಾತನಾಡಿದ್ದು, ಮಸ್ತಾನ್ ಸಾಬ್ ದರ್ಗಾಕ್ಕೆ ಕರಗ ಹೋಗೆ ಹೋಗುತ್ತೆ, ಮೊದಲಿನಿಂದಲೂ ಇರುವ ಸಂಪ್ರದಾಯದಂತೆ ಕರಗ ನಡೆಯಲಿದೆ. ಯಾವುದೇ ಸಂಪ್ರದಾಯಗಳನ್ನು ಕಡಿತಗೊಳಿಸಲಾಗುವುದಿಲ್ಲ. ಶಾಂತಿ ಸೌಹಾರ್ದದಿಂದ ಕರಗ ಉತ್ಸವ ನಡೆಯಲಿದೆ ಎಂದು ಹೇಳಿದ್ದಾರೆ.

ಈ ಬಾರಿ ವೀರಕುಮಾರರಿಗೆ ಕೆಂಪು ವಸ್ತ್ರ ಹಾಗೂ ಮೈಸೂರು ಪೇಟ ಹಾಗೂ ದೀಕ್ಷೆ ಪಡೆಯುವರಿಗೆ ಖಡ್ಗ ನೀಡಲು ಮುಂದಾಗಿದ್ದೇವೆ. ಸುಮಾರು 800 ವರ್ಷಗಳ ಇತಿಹಾಸ ಇರೋ ಕರಗ ಉತ್ಸವ ನಾಡಪ್ರಭು ಕೆಂಪೇಗೌಡರ ಕಾಲದಿಂದಲೂ ಅಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ಬಾರಿ ಜ್ಞಾನೇಂದ್ರ ಅವರು 13 ನೇ ಬಾರಿ ಕರಗ ಹೊರುವರು, ರಾಜ್ಯ ಸೇರಿದಂತೆ ವಿದೇಶದಿಂದಲು ಈ ಉತ್ಸವ ನೋಡಲು ಲಕ್ಷಾಂತರ ಭಕ್ತಾಧಿಗಳು ಬರಲಿದ್ದಾರೆ ಎಂದಿದ್ದಾರೆ.

9 ದಿನ ವಿಶೇಷ ಪೂಜೆ: ಕರಗ ಉತ್ಸವದ ಮೊದಲ ದಿನ ಧ್ವಜಾರೋಹಣ ಮಾಡಿ ಉತ್ಸವಕ್ಕೆ ಚಾಲನೆ ನೀಡಲಾಗುತ್ತದೆ. 9 ದಿನಗಳವರೆಗೆ ನಿತ್ಯ ಅಮ್ಮನಿಗೆ ವಿಶೇಷ ಪೂಜೆ ಮಾಡುತ್ತೇವೆ. ಏಪ್ರಿಲ್ 23 ರ ರಾತ್ರಿ 12 ಗಂಟೆಗೆ ಬೆಂಗಳೂರು ಕರಗ ನಡೆಯಲಿದೆ. ಇನ್ನು ಈ ಉತ್ಸವಕ್ಕೆ ರಾಜ್ಯದ ಗಣ್ಯರು ಸೇರಿದಂತೆ ಮಠಾಧೀಶರು ಅಗಮಿಸುತ್ತಾರೆ. ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಎಲ್ಲರಿಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕರಗ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.

ಕರಗವು ಕರ್ನಾಟಕದ ಪ್ರಸಿದ್ಧ ಜಾನಪದ ಆಚರಣೆಯಾಗಿದ್ದು, ಆದಿಶಕ್ತಿ ದ್ರೌಪದಿಯನ್ನು, ವಹ್ನಿಕುಲ ಕ್ಷತ್ರಿಯ ಜನಾಂಗ ಆರಾಧಿಸುತ್ತದೆ. ಶತಮಾನಗಳ ಇತಿಹಾಸ ಹೊಂದಿರುವ ವಿಶ್ವಪ್ರಸಿದ್ಧ ಬೆಂಗಳೂರು ಕರಗಕ್ಕೆ ತನ್ನದೇ ಆದ ವಿಶೇಷ ಮಹತ್ವವಿದೆ. ಮೈಸೂರು ದಸರಾದಂತೆಯೇ ಬೆಂಗಳೂರು ಕರಗವೂ ಕೂಡ ರಾಜ್ಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ

ಇದನ್ನೂ ಓದಿ: ಏ.15ರಿಂದ ಐತಿಹಾಸಿಕ ಬೆಂಗಳೂರು ಕರಗ ಮಹೋತ್ಸವ - Bengaluru Karaga Mahotsava

Last Updated : Apr 15, 2024, 11:12 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.