ETV Bharat / state

ಹಾವೇರಿ : ಎಲ್ಲರದ್ದೂ ಬೇರೆ ಬೇರೆ ವೃತ್ತಿ, ಹಬ್ಬದಲ್ಲಿ ಅವಿಭಕ್ತ ಕುಟುಂಬಸ್ಥರನ್ನು ಒಂದೆಡೆ ಸೇರಿಸುವ ಗಣೇಶ - Ganesha idol - GANESHA IDOL

ಹಾವೇರಿ ತಾಲೂಕಿನ ಗುತ್ತಲ ಗ್ರಾಮದಲ್ಲಿನ ಅವಿಭಕ್ತ ಕುಟುಂಬವೊಂದು ಗಣೇಶ ಮೂರ್ತಿಗಳನ್ನು ತಯಾರಿಸುತ್ತಾ ಬಂದಿದೆ. ಇವರಲ್ಲಿನ ಬಹುತೇಕ ಮನೆಯ ಸದಸ್ಯರು ಸರ್ಕಾರಿ ಹಾಗೂ ಖಾಸಗಿ ಕೆಲಸದಲ್ಲಿದ್ದರೂ ಗಣೇಶ ಹಬ್ಬ ಬಂದಾಗ ಒಟ್ಟು ಸೇರುತ್ತಾರೆ. ಈ ಮೂಲಕ ತಾತ ಮುತ್ತಾತನ ಕಾಲದಿಂದಲೂ ನಡೆಸಿಕೊಂಡು ಬಂದ ಗಣೇಶ ಮೂರ್ತಿ ತಯಾರಿಕೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

GANESHA IDOL BY JOINT FAMILY
ಗಣೇಶನ ಮೂರ್ತಿ ತಯಾರಿಕೆಗೆ ಒಂದಾಗುವ ಅವಿಭಕ್ತ ಕುಟುಂಬ (ETV Bharat)
author img

By ETV Bharat Karnataka Team

Published : Sep 2, 2024, 6:35 PM IST

Updated : Sep 2, 2024, 7:47 PM IST

ಉಪನ್ಯಾಸಕ ವೀರೇಶ ನೆಗಳೂರುಮಠ ಮಾತನಾಡಿದರು (ETV Bharat)

ಹಾವೇರಿ : ತಾಲೂಕಿನ ಗುತ್ತಲ ಗ್ರಾಮದಲ್ಲೊಂದು ಗಣಪತಿ ಮೂರ್ತಿ ತಯಾರಿಸುವ ವಿಶಿಷ್ಟ ಅವಿಭಕ್ತ ಕುಟುಂಬವಿದೆ. ನೆಗಳೂರುಮಠ ಹೆಸರಿನ ಈ ವಿಶಿಷ್ಠ ಕಲಾವಿದ ಕುಟುಂಬದಲ್ಲಿ ನಲವತ್ತಕ್ಕೂ ಅಧಿಕ ಸದಸ್ಯರಿದ್ದಾರೆ. ಇವರಲ್ಲಿ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ 10ಕ್ಕೂ ಅಧಿಕ ಜನರು ನೌಕರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಿದ್ದರೂ ಗಣೇಶನ ಹಬ್ಬ ಬಂದ್ರೆ ಸಾಕು ಸದಸ್ಯರೆಲ್ಲರೂ ಗುತ್ತಲದ ಮನೆಗೆ ಬಂದು ಸೇರುತ್ತಾರೆ.

ಕೆಲವರು ತಿಂಗಳ ಕಾಲ ಮೊದಲೇ ಮುಂದೆ ಬಂದು ಗಣೇಶ ಮೂರ್ತಿಗಳನ್ನು ತಯಾರಿಸುತ್ತಾರೆ. ಇನ್ನು ಕೆಲವರು ಗಣೇಶ ಮೂರ್ತಿಗಳು ತಯಾರಾದ ನಂತರ ಬಣ್ಣ ಹಚ್ಚಲು 40ಕ್ಕೂ ಅಧಿಕ ಸದಸ್ಯರು ಗುತ್ತಲಕ್ಕೆ ಬರುತ್ತಾರೆ. ತಮ್ಮ ಸರ್ಕಾರಿ ಕೆಲಸಕ್ಕೆ ವಾರದ ಕಾಲ ರಜೆ ಹಾಕಿ ಗಣೇಶ ಮೂರ್ತಿಗೆ ಬಣ್ಣ ಬಳಿಯಲು ಧಾವಿಸುತ್ತಾರೆ.

Ganesha idol
ಗಣೇಶನ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಕುಟುಂಬಸ್ಥರು (ETV Bharat)

ಇನ್ನೂ ಕೆಲವರು ದೂರದ ಬೆಂಗಳೂರು, ಮೈಸೂರು, ಮುಂಬೈಯಿಂದ ಖಾಸಗಿ ಕೆಲಸಕ್ಕೆ ರಜೆ ಹಾಕಿ ಗಣೇಶ ಮೂರ್ತಿಗೆ ಬಣ್ಣ ಹಚ್ಚಲು ಬರುತ್ತಾರೆ. ಗಣೇಶನ ಹಬ್ಬ ಹತ್ತಿರವಾಗುತ್ತಿದ್ದಂತೆ ನೆಗಳೂರುಮಠ ಮನೆ ಗಣೇಶನ ಮೂರ್ತಿ ತಯಾರಿಸುವ ಕಾರ್ಖಾನೆಯಂತೆ ಭಾಸವಾಗುತ್ತೆ. ಕೆಲವರು ಕೈಯಲ್ಲಿ ಕುಂಚ ಹಿಡಿದು ಬಣ್ಣ ಬಳಿಯುತ್ತಿದ್ದರೆ, ಇನ್ನೂ ಕೆಲವರು ಗಣೇಶ ಮೂರ್ತಿಗಳಿಗೆ ಅಂತಿಮ ಹಂತದ ಸ್ಪರ್ಶ ನೀಡುತ್ತಾರೆ.

ಶತಮಾನದಿಂದ ಈ ಕುಟುಂಬ ಗಣೇಶ ಮೂರ್ತಿಗಳನ್ನು ತಯಾರಿಸುತ್ತಾ ಬಂದಿದೆ. ಸಂಪೂರ್ಣ ಮಣ್ಣಿನ ಮತ್ತು ಪರಿಸರ ಪ್ರೇಮಿ ಬಣ್ಣಗಳನ್ನು ಈ ಕುಟುಂಬ ಬಳಸುತ್ತದೆ. ಗುತ್ತಲ ಪಟ್ಟಣದ ಪ್ರಮುಖ ವೃತ್ತಗಳಲ್ಲಿ ಸ್ಥಾಪಿಸುವ ಸಾರ್ವಜನಿಕ ಗಣೇಶ ಮೂರ್ತಿಗಳನ್ನ ಈ ಕುಟುಂಬದ ಸದಸ್ಯರೇ ಮಾಡುವುದು ವಿಶೇಷ. ಈ ಕುಟುಂಬದ ಸದಸ್ಯರು ಈ ರೀತಿ ಉನ್ನತ ಸ್ಥಾನ ಗಳಿಸಲು ಗಣೇಶ ಮೂರ್ತಿಗಳನ್ನು ಸೇವೆಯಂದು ಪರಿಗಣಿಸಿರುವುದೇ ಕಾರಣ ಎಂದು ಈ ಕುಟುಂಬದ ಸದಸ್ಯರು ಹೇಳುತ್ತಾರೆ.

Ganesha idol
ಗಣೇಶನ ಮೂರ್ತಿಗೆ ಬಣ್ಣ ಬಳಿಯುತ್ತಿರುವುದು (ETV Bharat)

ಭಕ್ತರು ನೀಡುವ ಹಣ ಪಡೆಯುವ ಕುಟುಂಬಸ್ಥರು: ಹೀಗಾಗಿ ಗಣೇಶ ಮೂರ್ತಿಗಳನ್ನು ತಯಾರಿಸಲು ಈ ಕುಟುಂಬದ ಸದಸ್ಯರು ಯಾವುದೇ ಕೆಲಸದಲ್ಲಿದ್ದರೂ ಬಿಟ್ಟು ಗುತ್ತಲ ಗ್ರಾಮಕ್ಕೆ ಬರುತ್ತಾರೆ. ಈ ಮನೆಗೆ ಹೊಸದಾಗಿ ಬರುವ ಸೊಸೆಯಂದಿರು ಮತ್ತು ಅಳಿಯಂದಿರು ಸಹ ಗಣಪತಿ ಮೂರ್ತಿ ತಯಾರಿಸುತ್ತಾರೆ. ಗಣೇಶ ಮೂರ್ತಿಗೆ ಬಣ್ಣ ಬಳಿಯುತ್ತಾರೆ. ಈ ಕುಟುಂಬದ ಇನ್ನೊಂದು ವಿಶೇಷ ಅಂದರೆ ಇವರು ನೀಡುವ ಗಣೇಶ ಮೂರ್ತಿಗಳಿಗೆ ಯಾವುದೇ ದರ ನಿಗದಿ ಮಾಡುವುದಿಲ್ಲ. ಭಕ್ತರು ಎಷ್ಟು ಹಣ ನೀಡುತ್ತಾರೆಯೋ ಅಷ್ಟನ್ನೇ ಪಡೆಯುವ ಈ ಕುಟುಂಬ ಗಣೇಶ ಮೂರ್ತಿಯನ್ನ ಭಕ್ತರಿಗೆ ನೀಡುತ್ತಾರೆ.

ಈ ಕುಟುಂಬದ ನಿಜಗುಣಯ್ಯ ಆರಂಭಿಸಿರುವ ಈ ಗಣೇಶ ಮೂರ್ತಿ ತಯಾರಿಕೆಯನ್ನ ಮಕ್ಕಳು, ಮೊಮ್ಮಕ್ಕಳು ಮುಂದುವರೆಸಿಕೊಂಡು ಬಂದಿದ್ದಾರೆ. ಈ ಕುಟುಂಬದ ಗಣೇಶ ಮೂರ್ತಿ ತಯಾರಿಕೆಗೆ ಶತಮಾನದ ಹಿನ್ನೆಲೆ ಇದೆ. ನಿಜಗುಣಯ್ಯ ಅವರ ಕಲಾಪರಂಪರೆಯನ್ನು ಉಳಿಸಿಕೊಂಡು ಸೇವೆಯನ್ನ ಮುಂದುವರೆಸಿಕೊಂಡು ಹೋಗುವುದೇ ನಮ್ಮ ಜವಾಬ್ದಾರಿ ಎನ್ನುತ್ತಾರೆ ಈ ಕುಟುಂಬದ ಸದಸ್ಯರು.

Ganesha idol
ಗಣೇಶನ ಮೂರ್ತಿ ತಯಾರಿಸಿರುವುದು (ETV Bharat)

ಕುಟುಂಬಸ್ಥರು ಒಂದೆಡೆ ಸೇರುವುದರಿಂದ ಹಬ್ಬದ ವಾತಾವರಣ: ಈ ಕುರಿತು ಉಪನ್ಯಾಸಕ ವೀರೇಶ ನೆಗಳೂರುಮಠ ಅವರು ಮಾತನಾಡಿದ್ದು, 'ನಾನು ಇಲ್ಲಿ ಸುಮಾರು ಐದಾರು ವರ್ಷಗಳಿಂದ ಈ ಸೇವೆ ಸಲ್ಲಿಸುತ್ತಿದ್ದೇನೆ. ನಾನು ಪಿಯು ಉಪನ್ಯಾಸಕನಾಗಿದ್ದೇನೆ. ಈಗ ಗಣಪತಿ ಮಾಡುವುದು ಹಾಗೂ ಬಣ್ಣವನ್ನು ಬಳಿಯುವುದನ್ನ ಮಾಡುತ್ತಿದ್ದೇನೆ. ಇಲ್ಲಿ ಬರುವುದರಿಂದ ಅಣ್ಣ ತಮ್ಮಂದಿರು, ಚಿಕ್ಕಪ್ಪ, ದೊಡ್ಡಪ್ಪ , ನಮ್ಮ ಅತ್ತೆ, ಮಾವ ಎಲ್ಲರೂ ಸೇರುವುದರಿಂದ ಹಬ್ಬದ ವಾತಾವರಣ ಕೂಡಿರುತ್ತದೆ. ಎಲ್ಲರೂ ಸೇರಿ ಸೇವೆಯನ್ನ ಸಲ್ಲಿಸುವುದರಿಂದ ಬಹಳ ಖುಷಿಯಾಗಿದೆ' ಎಂದಿದ್ದಾರೆ.

ಈ ಬಗ್ಗೆ ಶಿಕ್ಷಕಿ ಶ್ರೀಗೌರಿ ನೆಗಳೂರುಮಠ ಅವರು ಮಾತನಾಡಿ, 'ನಾವು ಚಿಕ್ಕ ವಯಸ್ಸಿನಿಂದ ಇಲ್ಲಿಗೆ ಬರುತ್ತಿದ್ದೇವೆ. ನಮ್ಮ ಚಿಕ್ಕಪ್ಪ ಅವರು ಗಣೇಶನ ಮೂರ್ತಿ ಮಾಡುತ್ತಾರೆ. ಅದಕ್ಕೋಸ್ಕರ ನಾವು ಪ್ರತಿವರ್ಷವೂ ಬರುತ್ತೇವೆ' ಎಂದು ಹೇಳಿದ್ದಾರೆ.

ಶಿಕ್ಷಕಿ ರಾಜಶ್ರೀ ನೆಗಳೂರುಮಠ ಅವರು ಮಾತನಾಡಿ, 'ನಾವು ನೈಸರ್ಗಿಕ ಗಣಪತಿಗಳನ್ನು ತಯಾರು ಮಾಡುತ್ತಿದ್ದೇವೆ. ಈ ಕೆಲಸ ಬಹಳ ಕಷ್ಟಪಟ್ಟು ಮಾಡುತ್ತಿದ್ದೇವೆ. ಎಲ್ಲಾ ಸದಸ್ಯರು ಒಟ್ಟಿಗೆ ಸೇರಿ ಎರಡು ತಿಂಗಳಿನಿಂದ ನಿದ್ರೆಗೆಟ್ಟು ಗಣಪತಿ ತಯಾರಿಸುತ್ತಿದ್ದೇವೆ' ಎಂದಿದ್ದಾರೆ.

ಈ ವಿಶಿಷ್ಟ ಕುಟುಂಬವನ್ನ ಗುತ್ತಲ ಗ್ರಾಮಸ್ಥರು ಸಹ ವಿಶೇಷ ಗೌರವದಿಂದ ಕಾಣುತ್ತಾರೆ. ಇಂತಹ ಕುಟುಂಬ ನಮ್ಮ ಗ್ರಾಮದಲ್ಲಿರುವುದು ಗ್ರಾಮದ ಹೆಮ್ಮೆ ಎನ್ನುತ್ತಾರೆ ಜನರು.

ಇದನ್ನೂ ಓದಿ : ಬೆಳಗ್ಗೆ ಇಡ್ಲಿ, ದಿನವಿಡೀ ಪಾನ್​ ವ್ಯಾಪಾರ: ಈಗ ಪರಿಸರಸ್ನೇಹಿ ಗಣೇಶನ ತಯಾರಿಸುತ್ತಿರುವ ಕಾಯಕಯೋಗಿ! - story of a hard worker

Last Updated : Sep 2, 2024, 7:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.