ETV Bharat / state

ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಮನವೊಲಿಕೆ ಯಶಸ್ವಿ, ಜಗದೀಶ್ ಶೆಟ್ಟರ್ ‌ನಿರಾಳ - Jagadish Shettar

ರಾಮದುರ್ಗದ ‌ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರೊಂದಿಗೆ ಜಗದೀಶ್ ಶೆಟ್ಟರ್ ಸಂಧಾನ ಯಶಸ್ವಿಯಾಗಿದೆ.

jagadish-shettar
ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್
author img

By ETV Bharat Karnataka Team

Published : Apr 5, 2024, 4:40 PM IST

ಮಾಜಿ ಶಾಸಕ ಮಹಾದೇವಪ್ಪ ಯಾದವಾಡ

ಬೆಳಗಾವಿ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ತಟಸ್ಥರಾಗುಳಿದಿದ್ದ ರಾಮದುರ್ಗದ ಮಾಜಿ ಶಾಸಕ ಮಹಾದೇವಪ್ಪ ಯಾದವಾಡ ಅವರ ಮನವೊಲಿಸುವಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಯಶಸ್ವಿಯಾಗಿದ್ದಾರೆ.

ನಿನ್ನೆ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಬಳಿಕ ಇಂದು ರಾಮದುರ್ಗದ ಮಹಾದೇವಪ್ಪ ಯಾದವಾಡ ನಿವಾಸಕ್ಕೆ ಭೇಟಿ ನೀಡಿದ ಜಗದೀಶ್ ಶೆಟ್ಟರ್ ಮಾತುಕತೆ ನಡೆಸಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ, ಜಿಲ್ಲಾಧ್ಯಕ್ಷ ಸುಭಾಷ್ ‌ಪಾಟೀಲ ಜತೆಗಿದ್ದರು.

ಎರಡು ದಶಕಗಳ ಕಾಲ ಶೆಟ್ಟರ್ ಜತೆಗೆ ಗುರುತಿಸಿಕೊಂಡಿದ್ದ ಮಹಾದೇವಪ್ಪ ಯಾದವಾಡ ಕಳೆದ ವಿಧಾನಸಭೆ ‌ಚುನಾವಣೆಯಲ್ಲಿ ಟಿಕೆಟ್ ಸಿಗದಿದ್ದಕ್ಕೆ ಬಿಜೆಪಿ ನಾಯಕರೊಂದಿಗೆ ಮುನಿಸಿಕೊಂಡಿದ್ದರು. ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮುಂದಾಗಿದ್ದರು. ಆಪರೇಶನ್ ಹಸ್ತಕ್ಕೂ ಕೈ ಹಾಕಿದ್ದರು. ಇದರಿಂದ ಅಲರ್ಟ್ ಆದ ಶೆಟ್ಟರ್ ಖುದ್ದು ಯಾದವಾಡರ ಮನೆಗೆ ಭೇಟಿ ನೀಡಿ, ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಜಗದೀಶ್ ಶೆಟ್ಟರ್ ಭೇಟಿ ಬಳಿಕ ಮಹಾದೇವಪ್ಪ ಯಾದವಾಡ ಮಾತನಾಡಿ, ಸುರೇಶ ಅಂಗಡಿ ಅವರಿಗೆ ನೀಡಲಾಗುತ್ತಿದ್ದ 27 ಸಾವಿರ ಲೀಡ್‌ ಅನ್ನು ಈ ಸಲವೂ ಜಗದೀಶ್ ಶೆಟ್ಟರ್‌ಗೆ ನೀಡುತ್ತೇವೆ. ಶೆಟ್ಟರ್ ಗೆಲುವಿಗೆ ರಾಮದುರ್ಗದಲ್ಲಿ ‌ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಮಹಾದೇವಪ್ಪ ಯಾದವಾಡ ನಿವಾಸದಲ್ಲಿ ಶೆಟ್ಟರ್ ಉಪಹಾರ ಸೇವಿಸಿದರು. ಮಲ್ಲಣ್ಣ ಯಾದವಾಡ ಸೇರಿ ಮತ್ತಿತರರು ಉಪಸ್ಥಿತರಿದ್ದರು.

ಇದನ್ನೂ ಓದಿ: ಸಿದ್ದರಾಮಯ್ಯಗೆ ಸಿಎಂ ಸ್ಥಾನ ಕಳೆದುಕೊಳ್ಳುವ ಭಯ ಕಾಡ್ತಿದೆ: ಜಗದೀಶ್​ ಶೆಟ್ಟರ್ - BELAGAVI LOK SABHA CONSTITUENCY

ETV Bharat Logo

Copyright © 2024 Ushodaya Enterprises Pvt. Ltd., All Rights Reserved.