ಮೈಸೂರು: "ತಾಯಿಯವರಿಗೆ 'ನನ್ನ ವಿಚಾರದಿಂದ ಅವರಿಗೆ(ಸಿದ್ದರಾಮಯ್ಯ)ಕಳಂಕ ಬಂತು' ಎಂದು ಮೊದಲು ಬೇಸರವಾಗಿದ್ದು ಸತ್ಯ. ಆಮೇಲೆ ತಪ್ಪು ಮಾಡಿಲ್ಲ ಅನ್ನೋದು ಅವರಿಗೆ ಸ್ಪಷ್ಟವಾಗಿದೆ" ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಸೋಮವಾರ ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಯಾವತ್ತು ಸಾರ್ವಜನಿಕ ಜೀವನದಲ್ಲಿ ನನ್ನ ತಾಯಿ ಬಂದಿರಲಿಲ್ಲ. ಈಗ ವಿನಾಕಾರಣ ನಮ್ಮ ತಾಯಿ ಹೆಸರನ್ನು ಎಳೆದು ತರಲಾಗುತ್ತಿದೆ. ಹೀಗಾಗಿ ನಾವು ಕಾನೂನು ಹೋರಾಟಕ್ಕೆ ಮುಂದಾಗಿದ್ದೇವೆ. ಇದು ಟಾರ್ಗೆಟ್ ಸಿದ್ದರಾಮಯ್ಯ ಹಾಗೂ ಟಾರ್ಗೆಟ್ ಕಾಂಗ್ರೆಸ್ ಆಗಿದೆ. ಸಿದ್ದರಾಮಯ್ಯರನ್ನು ರಾಜಕೀಯವಾಗಿ ಮುಗಿಸಿದರೆ ಕಾಂಗ್ರೆಸ್ ಶಕ್ತಿ ಕುಂದುತ್ತದೆ ಎಂಬುದು ಬಿಜೆಪಿಗೆ ಗೊತ್ತಿದೆ. ಇದೇ ಕಾರಣಕ್ಕೆ ಈ ಷಡ್ಯಂತ್ರ ಮಾಡಲಾಗುತ್ತಿದೆ".
"ನನ್ನ ತಂದೆಯ ಪರವಾಗಿ ಹೈಕಮಾಂಡ್ ಜತೆ ಇಡೀ ರಾಜ್ಯ ಕಾಂಗ್ರೆಸ್ ಸಹ ಇದೆ. ತಂದೆ ದೆಹಲಿಗೆ ಹೋಗುತ್ತಾರೆ, ನಾನು ಅವರ ಜೊತೆ ಹೋಗುವುದಿಲ್ಲ. ಆವರು ಯಾವ ತಪ್ಪು ಮಾಡಿಲ್ಲ, ಆದ್ದರಿಂದ ಎದೆಗುಂದಿಲ್ಲ. ತಂದೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಬಿಜೆಪಿಯವರು ಯಾವ ಆಧಾರದ ಮೇಲೆ ರಾಜೀನಾಮೆ ಕೇಳುತ್ತಿದ್ದಾರೆ ಗೊತ್ತಿಲ್ಲ. ಎಲ್ಲರ ಮೇಲೂ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಂಡು ಸುಳ್ಳು ಕೇಸು ಹಾಕಿದರೆ ಏನು ಮಾಡುವುದು?. ನಮಗೆ ನ್ಯಾಯಾಲಯದ ಮೇಲೆ ನಂಬಿಕೆ, ವಿಶ್ವಾಸ ಇದೆ" ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ಅಂತಿಮ ಗೆಲುವು ಸತ್ಯದ್ದೇ ಆಗಿರಲಿದೆ ಎಂಬುದು ನನ್ನ ದೃಢ ನಂಬಿಕೆ: ಸಿದ್ದರಾಮಯ್ಯ - CM Siddaramaiah
ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ: ಹೈಕೋರ್ಟ್ನಲ್ಲಿ ನಡೆದ ವಾದವೇನು? - Muda Scam