ಹಾಸನ: ತಿರುಪತಿ ದೇವಾಲಯದ ಲಡ್ಡಿನಲ್ಲಿ ಪ್ರಾಣಿಗಳ ಕೊಬ್ಬು ಮಿಶ್ರಣವಾದ ಬಗ್ಗೆ ಭಾರಿ ವಿವಾದ ಕೇಳಿ ಬಂದ ಹಿನ್ನೆಲೆಯಲ್ಲಿ ಈ ಬಾರಿಯ ಹಾಸನಾಂಬ ಜಾತ್ರಾ ಮಹೋತ್ಸವದಲ್ಲಿ ಇಸ್ಕಾನ್ ಲಡ್ಡು ವಿತರಿಸಲು ಚಿಂತನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಸತ್ಯಭಾಮ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಮಂಗಳವಾರ ಮಾಧ್ಯಮಕ್ಕೆ ಮಾಹಿತಿ ನೀಡಿದ ಅವರು, "ಅ.24ರಂದು ಹಾಸನಾಂಬೆ ದೇಗುಲದ ಬಾಗಿಲು ತೆರೆಯಲಾಗುವುದು. ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೂ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ವರ್ಷದಿಂದ 300 ರೂ. ಕೊಟ್ಟು ಟಿಕೆಟ್ ಪಡೆದವರಿಗೆ ಒಂದು ಲಡ್ಡು, 1 ಸಾವಿರ ರೂ ನೀಡಿ ಟಿಕೆಟ್ ಪಡೆದವರಿಗೆ ಎರಡು ಲಡ್ಡು ಕೊಡಲು ನಿರ್ಧರಿಸಲಾಗಿದೆ. ಹೂವಿನ ಅಲಂಕಾರ, ನಗರ ಸೌಂದರ್ಯೀಕರಣಕ್ಕೆ ಗಮನ ಕೊಡಲಾಗಿದೆ. ಈ ಬಾರಿ ತಿರುಪತಿ ಲಡ್ಡು ವಿವಾದವಾದ ಹಿನ್ನೆಲೆಯಲ್ಲಿ ಹಾಸನಾಂಬೆ ದೇವಾಲಯದ ಪಾವಿತ್ರ್ಯತೆ ಹಾಗು ಲಡ್ಡಿನ ಗುಣಮಟ್ಟ ಕಾಪಾಡಿಕೊಳ್ಳಲು ಜಿಲ್ಲಾಡಳಿತ ಮುಂದಾಗಿದೆ. ಈ ನಿಟ್ಟಿನಲ್ಲಿ ಹಾಸನಾಂಬೆಯ ಭಕ್ತರಿಗೆ ಇಸ್ಕಾನ್ ಲಡ್ಡು ವಿತರಿಸಲು ನಿರ್ಧರಿಸಲಾಗಿದೆ" ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಮಳೆ ಹಾನಿ ಬಗ್ಗೆ ಜಿಲ್ಲಾಧಿಕಾರಿ ಮಾಹಿತಿ: "ತೀವ್ರ ಮಳೆಯಿಂದ 271 ಮನೆಗಳಿಗೆ ಹಾನಿಯಾಗಿದೆ. 56 ಕೊಟ್ಟಿಗೆಗೆ ಮನೆ ಹಾನಿಯಾಗಿದೆ. ಒಟ್ಟು 861 ಹೆಕ್ಟೇರ್ ಕೃಷಿ ಬೆಳೆ, 445 ತೊಟಗಾರಿಕೆ ಬೆಳೆ ಹಾನಿಯಾಗಿದೆ. ವಿವಿಧ ನಗರ ಮತ್ತು ಗ್ರಾಮಗಳ ಕಡೆ ರಸ್ತೆ ಹಾಳಾಗಿದೆ" ಎಂದು ಅತಿವೃಷ್ಠಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಲಡ್ಡು ತುಪ್ಪದ ಕಲಬೆರಕೆ ವಿವಾದ: ಪ್ರಾಯಶ್ಚಿತ್ತವಾಗಿ ತಿರುಪತಿಯಲ್ಲಿ ಮಹಾಶಾಂತಿ ಹೋಮ - Shanti Homam in Tirumala