ETV Bharat / state

ಹುಬ್ಬಳ್ಳಿ: ಡಿಜಿಟಲ್ ಅರೆಸ್ಟ್ ಭಯ ಮೂಡಿಸಿ ನಿವೃತ್ತ ಬ್ಯಾಂಕ್ ನೌಕರನ 95 ಲಕ್ಷ ರೂ. ಎಗರಿಸಿದ ಕಳ್ಳರು! - ONLINE FRAUD

ಡಿಜಿಟಲ್ ಅರೆಸ್ಟ್ ಮಾಡಿಸುವುದಾಗಿ ಬೆದರಿಕೆ ಹಾಕಿ ನಿವೃತ್ತ ಬ್ಯಾಂಕ್ ನೌಕರರೊಬ್ಬರಿಗೆ 95 ಲಕ್ಷ ರೂಪಾಯಿ ವಂಚಿಸಿದ ಘಟನೆ ನಡೆದಿದೆ.

ಹು-ಧಾ ಸೈಬರ್ ಕ್ರೈಂ ಪೊಲೀಸ್ ಠಾಣೆ
ಹು-ಧಾ ಸೈಬರ್ ಕ್ರೈಂ ಪೊಲೀಸ್ ಠಾಣೆ (ETV Bharat)
author img

By ETV Bharat Karnataka Team

Published : Oct 22, 2024, 4:03 PM IST

ಹುಬ್ಬಳ್ಳಿ: ಅಕ್ರಮ ಜಾಹೀರಾತು, ಆಶ್ಲೀಲ ವಿಡಿಯೋ, ಸಾರ್ವಜನಿಕರಿಗೆ ಹಿಂಸೆ ನೀಡುವ ಸಂದೇಶ ಕಳಹಿಸುತ್ತೀರಿ ಎಂದು ಮುಂಬೈ ಪೊಲೀಸರ ಹೆಸರಿನಲ್ಲಿ ಬೆದರಿಸಿ ಧಾರವಾಡದ ನಿವೃತ್ತ ಬ್ಯಾಂಕ್ ನೌಕರನಿಗೆ ಬರೋಬ್ಬರಿ 95.50 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ಧಾರವಾಡದ ಗಣಪತಿ ಎಸ್ ಎಂಬುವರು ಹಣ ಕಳೆದುಕೊಂಡಿದ್ದು, ಈ ಕುರಿತು ಹು-ಧಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 'ವಾಟ್ಸಪ್ ಮೂಲಕ ಸಂಪರ್ಕ ಮಾಡಿರುವ ಅಪರಿಚಿತರು ನಿಮ್ಮ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವರದಿಯೊಂದನ್ನು ತೋರಿಸಿ, ಡಿಜಿಟಲ್ ಅರೆಸ್ಟ್ ಮಾಡುವುದಾಗಿ ಹೇಳಿ ಹೆದರಿಸಿದ್ದಾರೆ. ನಂತರ ಬ್ಯಾಂಕ್ ಖಾತೆಗಳ ಮಾಹಿತಿ ಪಟೆದುಕೊಂಡು ಕೇಸ್​ನಿಂದ ಪಾರು ಮಾಡುವುದಾಗಿ ನಂಬಿಕೆ ಬರುವಂತೆ ಮಾತನಾಡಿ ಸೆ.27ರಂದು 62.50 ಲಕ್ಷ ಮತ್ತು ಅ.7ರಂದು 26 ಲಕ್ಷ ಹಾಗೂ ಅ.8ರಂದು 7 ಲಕ್ಷ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹೂಡಿಕೆ ಹೆಸರಲ್ಲಿ 11.24 ಲಕ್ಷ ವಂಚನೆ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸಿ ಲಾಭ ಕೊಡುವುದಾಗಿ ನಂಬಿಸಿ ನಗರದ ವ್ಯಕ್ತಿಗೆ 11.24 ಲಕ್ಷ ರೂಪಾಯಿ ವಂಚಿಸಲಾಗಿದೆ. ನಗರದ ಮಂಜುನಾಥ ಎಸ್ ಹಣ ಕಳೆದುಕೊಂಡವರು.

'ಮೊದಲು ಪೆನ್ನಿ ಸ್ಟಾಕ್ ಮಾಹಿತಿ ಕೊಟ್ಟು ಶೇ.20 ರಷ್ಟು ಲಾಭ ಮಾಡಿಕೊಟ್ಟಿದ್ದರು. ನಂತರ ಶೇ.200 ರಷ್ಟು ಲಾಭ ಕೊಡುವುದಾಗಿ ಹೇಳಿ 11.24 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ಅನಯ ಸ್ಮಿತ್, ಗೀತಿಕಾ ಆನಂದ, ಮೋತಿಲಾಲ್ ಓಸ್ವಾಲ್ ಎಂಬುವರು ಮೋಸ ಮಾಡಿದ್ದಾರೆ' ಎಂದು ಹು-ಧಾ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮಜುನಾಥ್ ಪ್ರಕರಣ ದಾಖಲಿಸಿದ್ದಾರೆ.

ಸೈಬರ್ ಕ್ರೈಂಗಳ ಬಗ್ಗೆ ಜಾಗೃತೆ ಮೂಡಿಸುವ ಅಭಿಯಾನಗಳು ನಡೆಯುತ್ತಿದ್ದರೂ ಕೂಡ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ. ಮೊಬೈಲ್ ಮೂಲಕ ಸಂಪರ್ಕಿಸುವ ಅಪರಿಚಿತರ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ.

ಬೈಕ್ ಕಳ್ಳ ಅರೆಸ್ಟ್: ಬೈಕ್ ಕಳ್ಳತನ ಮಾಡುತ್ತಿದ್ದ ಓರ್ವನನ್ನು ಬಂಧಿಸಿ, 5.80 ಲಕ್ಷ ಮೌಲ್ಯದ 12 ಬೈಕ್ ಮತ್ತು 1.10 ಲಕ್ಷ ರೂ ನಗದು ಹಣ ವಶಪಡಿಸಿಕೊಳ್ಳುವಲ್ಲಿ ಉಪನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಆನಂದನಗರದ ಮಹಾಂತೇಶ ಕಲಾಲ ಬಂಧಿತ ಆರೋಪಿ.

12 ಬೈಕ್ ವಶ: ಬಂಧಿತನಿಂದ 5.80 ಲಕ್ಷ ರೂ. ಮೌಲ್ಯದ ವಿವಿಧ ಕಂಪನಿಗಳ 12 ಬೈಕ್‌ಗಳು, 1.10 ಲಕ್ಷ ರೂಪಾಯಿ - ಸೇರಿ ಒಟ್ಟು 6.90 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಇತ್ತೀಚೆಗೆ ದ್ವಿಚಕ್ರ ಕಳ್ಳತನವಾಗುತ್ತಿರುವ ಕುರಿತು ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೊಲೀಸ್ ಇನ್ಸ್​ಪೆಕ್ಟರ್ ಎಂ.ಎಸ್. ಹೂಗಾರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಇದನ್ನೂ ಓದಿ: ಡೇಟಿಂಗ್ ಆ್ಯಪ್​ ಗೆಳತಿಯ ದೋಖಾ: ಮಂಗಳೂರಿನ ವ್ಯಕ್ತಿಗೆ ನಕಲಿ ಟ್ರೇಡಿಂಗ್​​ನಲ್ಲಿ 1.12 ಕೋಟಿ ರೂ. ವಂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.