ಹುಬ್ಬಳ್ಳಿ: ಹು-ಧಾ ಅವಳಿ ನಗರದಲ್ಲಿ ನಡೆಯುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಖಾಕಿ ಪಡೆ ವಿಶೇಷ ಕಾರ್ಯಾಚರಣೆಗಿಳಿದಿದೆ. ಕಳೆದ ರಾತ್ರಿ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಸ್ವತಃ ಬೈಕ್ ಹತ್ತಿ ಫೀಲ್ಡ್ಗಿಳಿದು ಹುಬ್ಬಳ್ಳಿ ನಗರದ ವಿವಿಧೆಡೆ ಪರಿಶೀಲನೆ ನಡೆಸಿದರು.
ಈ ವೇಳೆ ಪೊಲೀಸರು ಮದ್ಯಪಾನ ಮಾಡಿ ಪುಂಡಾಟಿಕೆ ಮಾಡುವ, ಯಾವುದೇ ದಾಖಲೆಗಳಿಲ್ಲದೆ ಬೈಕ್ ಚಲಾಯಿಸುವ ಯುವಕರಿಗೆ ಬಿಸಿಮುಟ್ಟಿಸಿದರು. ಅನುಮಾನಾಸ್ಪದ ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದರು. ಕೆಲವು ಬೈಕ್, ಕಾರುಗಳನ್ನು ಸೀಜ್ ಮಾಡಿದರು.
ಸದ್ಯ ಅವಳಿ ನಗರದಲ್ಲಿ ರೌಡಿ ಚಟುವಟಿಕೆಗಳು ಕೊಂಚ ಕಡಿಮೆಯಾಗಿವೆ. ಆದರೆ, ರಾತ್ರಿ ವೇಳೆ ನಡೆಯುವ ಕೆಲ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕಮಿಷನರ್ ಸಿಟಿ ರೌಂಡ್ ನಡೆಸಿ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಬಾಡಿಗೆದಾರರ ಮನೆಯಲ್ಲೇ ಚಿನ್ನಾಭರಣ, ನಗದು ದೋಚಿದ ಆರೋಪಿ ಬಂಧನ