ETV Bharat / state

ಮೈಸೂರು: ರಾತ್ರಿ ಸುರಿದ ಮಳೆಗೆ ಕುಸಿದ ಮನೆ, ನೆಲೆ ಕಳೆದುಕೊಂಡು ಮಹಿಳೆಯ ಕಣ್ಣೀರು - House Collapsed - HOUSE COLLAPSED

ಸೋಮವಾರ ರಾತ್ರಿ ಸುರಿದ ಮಳೆಗೆ ಮೈಸೂರಿನಲ್ಲಿ ಮನೆ ಕುಸಿದು ಬಿದ್ದಿದೆ.

ಕುಸಿದ ಮನೆ ಮುಂದೆ ಮಹಿಳೆಯ ಆತಂಕ
ಕುಸಿದ ಮನೆ ಮುಂದೆ ಮಹಿಳೆಯ ಆತಂಕ (ETV Bharat)
author img

By ETV Bharat Karnataka Team

Published : May 14, 2024, 11:07 AM IST

Updated : May 14, 2024, 11:47 AM IST

ಮನೆ ಕಳೆದುಕೊಂಡ ಮಹಿಳೆಯ ಕಣ್ಣೀರು (ETV Bharat)

ಮೈಸೂರು: ಭಾರೀ ಮಳೆಗೆ ಮನೆ ಕುಸಿದು ಬಿದ್ದ ಘಟನೆ ಹುಣಸೂರು ತಾಲೂಕಿನ ಮೂಕನಹಳ್ಳಿ ಗ್ರಾಮದಲ್ಲಿ ಕಳೆದ ರಾತ್ರಿ ನಡೆದಿದೆ.

ಸೋಮವಾರ ರಾತ್ರಿಯಿಂದ ಮಂಗಳವಾರ ಮುಂಜಾನೆಯವರೆಗೂ ಸುರಿದ ಬಿರುಗಾಳಿಸಹಿತ ಮಳೆಗೆ ದಿವಗಂತ​ ನಾಗಯ್ಯ ಎಂಬವರ ಪತ್ನಿ ಭಾಗ್ಯಮ್ಮ ಅವರ ಮನೆ ಕುಸಿದು ಬಿದ್ದಿದೆ. ವಾಸ ಮಾಡಲು ಮನೆಯಿಲ್ಲದೆ ಇದೀಗ ಅವರು ಕಣ್ಣೀರು ಹಾಕುತ್ತಿದ್ದಾರೆ. ಮನೆಯಲ್ಲಿ ಆರು ತಿಂಗಳ ಮಗುವಿದ್ದು ಕುಟುಂಬ ಕಂಗಾಲಾಗಿದೆ. ಅಗತ್ಯ ವಸ್ತುಗಳು ನಾಶವಾಗಿದ್ದು, ಬೇರೆಯವರ ಆಸರೆಯಲ್ಲಿ ದಿನ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

''ನಮಗೆ ಆದಷ್ಟು ಬೇಗ ಸರ್ಕಾರ ಪರಿಹಾರ ನೀಡಬೇಕು. ಗ್ರಾಮ ಪಂಚಾಯತಿ ಪಿಡಿಒ, ತಹಶೀಲ್ದಾರ್, ಆರ್‌ಐ ಇತ್ತ ಗಮನಹರಿಸಲಿ" ಎಂದು ಭಾಗ್ಯಮ್ಮ ಮನವಿ ಮಾಡಿದರು.

ಸಹಾಯವಾಣಿ​: ಪೂರ್ವ ಮುಂಗಾರಿನ ಆರಂಭದಲ್ಲಿಯೇ ಮಳೆ ಅಬ್ಬರ ಹೆಚ್ಚಾಗಿರುವುದರಿಂದ ಜಿಲ್ಲಾಡಳಿತ ಎಚ್ಚರ ವಹಿಸಿದೆ. ಮೈಸೂರು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಅಕಾಲಿಕ ಅಥವಾ ಅತಿಯಾದ ಮಳೆಯಿಂದಾಗಿ ಪ್ರವಾಹ, ಮನೆ ಹಾನಿ, ಕುಡಿಯುವ ನೀರು ಮತ್ತು ಒಳಚರಂಡಿ ಸಂಪರ್ಕ ಸಮಸ್ಯೆಗಳು, ಸಾರ್ವಜನಿಕ ಆಸ್ತಿಗಳಿಗೆ ಹಾನಿ ಉಂಟಾಗುವುದು, ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳುವುದು ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗುವ ಸಂಭವವಿದೆ. ಹೀಗಾಗಿ ತಮ್ಮ ಬಡಾವಣೆಗಳ ವ್ಯಾಪ್ತಿಗಳಲ್ಲಿ ಎದುರಾಗಬಹುದಾದ ಸಮಸ್ಯೆಗಳಿಗೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸಾರ್ವಜನಿಕರು ಅಧಿಕಾರಿ ಅಥವಾ ಸಿಬ್ಬಂದಿಯನ್ನು ಸಹಾಯವಾಣಿ ಮೂಲಕ ಸಂಪರ್ಕಿಸಿ ಮಳೆ ಹಾನಿ ಸಂಬಂಧಿತ ಅಹವಾಲುಗಳನ್ನು ಸಲ್ಲಿಸಿ ಸೂಕ್ತ ಪರಿಹಾರ ಪಡೆದುಕೊಳ್ಳಲು ತಿಳಿಸಲಾಗಿದೆ.

  • ನಂಜನಗೂಡು ನಗರಸಭೆ ಪೌರಾಯುಕ್ತ ಎಸ್.ನಂಜುಂಡಸ್ವಾಮಿ- ದೂರವಾಣಿ ಸಂಖ್ಯೆ- 9844532502.
  • ಹುಣಸೂರು ನಗರಸಭೆ ಪೌರಾಯುಕ್ತರಾದ ಶರ್ಮಿಳಾ- ದೂ.ಸಂ. 7022773424.
  • ಹೂಟಗಳ್ಳಿ ನಗರಸಭೆಯ ಪೌರಾಯುಕ್ತ ಬಿ.ಎನ್.ಚಂದ್ರಶೇಖರ್- ದೂ.ಸಂ.9880531555.
  • ಕೆ.ಆರ್.ನಗರ ಪುರಸಭೆ ಪೌರಾಯುಕ್ತ ಹೇಮಂತ್ ಎಸ್.ಡೊಳ್ಳೆ- ದೂ.ಸಂ. 9449987940.
  • ಬನ್ನೂರು ಪುರಸಭೆ ಪೌರಾಯುಕ್ತ ಹೇಮಂತರಾಜು- ದೂ.ಸಂ. 9448433142.
  • ತಿ.ನರಸೀಪುರ ಪುರಸಭೆ ಪೌರಾಯುಕ್ತ ಬಿ.ಕೆ.ವಸಂತಕುಮಾರಿ- ದೂ.ಸಂ. 6360281580.
  • ಪಿರಿಯಾಪಟ್ಟಣ ಪುರಸಭೆ ಪೌರಾಯುಕ್ತ ಕೆ.ಯು.ಮುತ್ತಪ್ಪ- ದೂ.ಸಂ. 9902880630.
  • ಹೆಚ್.ಡಿ.ಕೋಟೆ ಪುರಸಭೆ ಪೌರಾಯುಕ್ತ ಸುರೇಶ್ ಪಿ- ದೂ.ಸಂ.8884953484.
  • ಸರಗೂರು ಪಟ್ಟಣ ಪಂಚಾಯಿತಿ ಪೌರಾಯುಕ್ತ ಮಂಜುನಾಥ್ ಎಸ್.ಎಸ್.- ದೂ.ಸಂ.9844158823.
  • ಬೋಗಾದಿ ಪಟ್ಟಣ ಪಂಚಾಯಿತಿ ಪೌರಾಯುಕ್ತ ಕೊರಿಯಾಕೋಸ್.ಸಿ- ದೂ.ಸಂ. 9481653370.
  • ಕಡಕೊಳ ಪಟ್ಟಣ ಪಂಚಾಯಿತಿ ಪೌರಾಯುಕ್ತರಾದ ನಾಗರತ್ನ ಎಂ.ಸಿ - ದೂ.ಸಂ.9482058483.
  • ಶ್ರೀರಾಂಪುರ ಪಟ್ಟಣ ಪಂಚಾಯಿತಿ ಪೌರಾಯುಕ್ತ ಸುರೇಶ್ ಎಂ.ಕೆ.- ದೂ.ಸಂ. 9481915838.
  • ರಮ್ಮನಹಳ್ಳಿ ಪಟ್ಟಣ ಪಂಚಾಯಿತಿ ಪೌರಾಯುಕ್ತ ನರಸಿಂಹಮೂರ್ತಿ ಎಸ್.ಡಿ. - ದೂ.ಸಂ. 9964647243.

ಇದನ್ನೂ ಓದಿ: ಮಂಡ್ಯ: ಬಿರುಗಾಳಿಸಹಿತ ಮಳೆಗೆ ರೈಲಿನ ಮೇಲೆ ಬಿದ್ದ ಮರ; ಲೋಕೋ ಪೈಲಟ್‌ಗೆ ಗಾಯ - Mandya Rain

Last Updated : May 14, 2024, 11:47 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.