ETV Bharat / state

ಬೆಂಗಳೂರು ಕೇಂದ್ರ: ಸತತ ನಾಲ್ಕನೇ ಬಾರಿ ಗೆಲುವಿಗೆ ಪಿಸಿ ಮೋಹನ್ ಚಿತ್ತ; ಭದ್ರಕೋಟೆ ಛಿದ್ರಕ್ಕೆ ಕಾಂಗ್ರೆಸ್ ಪ್ರತಿತಂತ್ರ - Bengaluru Central - BENGALURU CENTRAL

ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್​ ಮತ್ತು ಬಿಜೆಪಿ-ಜೆಡಿಎಸ್​ ಮೈತ್ರಿಕೂಟದ ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಅಖಾಡ ರಂಗೇರುತ್ತಿದೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಇತಿಹಾಸ ಇಲ್ಲಿದೆ

History of Bengaluru Central Lok Sabha Constituency

author img

By ETV Bharat Karnataka Team

Published : Apr 6, 2024, 3:20 PM IST

ಬೆಂಗಳೂರು: ಬೆಂಗಳೂರಿನ ಪ್ರಮುಖ ಕ್ಷೇತ್ರಗಳಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರವೂ ಒಂದು. ಸದ್ಯ ಬಿಜೆಪಿಯ ಭದ್ರಕೋಟೆಯಾಗಿರುವ ಈ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಹಾಲಿ ಸಂಸದ ಪಿಸಿ ಮೋಹನ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದರೆ, ಕಾಂಗ್ರೆಸ್ ಈ ಹಿಂದಿನ ಚುನಾವಣೆಗಳಂತೆಯೇ ಹೊಸ ಅಭ್ಯರ್ಥಿಗೆ ಮಣೆ ಹಾಕಿದೆ. ಉತ್ತಮ ರಾಜಕಾರಣಿ ಹಿನ್ನೆಲೆ ಹೊಂದಿರುವ ಶಿಕ್ಷಣತಜ್ಞ ಮತ್ತು ಸಜ್ಜನ ಕಾರ್ಯಕರ್ತನಾಗಿ ಗುರುತಿಸಿಕೊಂಡಿರುವ ಮನ್ಸೂರ್ ಅಲಿಖಾನ್ ಅವರಿಗೆ ಕೈ ಪಕ್ಷ ಟಿಕೆಟ್ ನೀಡಿದೆ. ಕ್ಷೇತ್ರದ ಮತದಾರರ ಪ್ರಮಾಣ, ರಾಜಕೀಯ ಲೆಕ್ಕಾಚಾರಗಳ ಕುರಿತ ಸಂಕ್ಷಿಪ್ತ ಪಕ್ಷಿನೋಟ ಇಲ್ಲಿದೆ.

ಪಿಸಿ ಮೋಹನ್
ಪಿಸಿ ಮೋಹನ್

2008ರ ಕ್ಷೇತ್ರ ಪುನರ್​​ ವಿಂಗಡಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದಿತು. ಬೆಂಗಳೂರು ಉತ್ತರ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕೆಲವು ಕ್ಷೇತ್ರಗಳನ್ನು ವಿಭಜಿಸಿ, ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಸೃಷ್ಟಿ ಆಯಿತು. ಭಾಷಾ ಮತ್ತು ಧಾರ್ಮಿಕ ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿರುವ ಕ್ಷೇತ್ರ ಇದಾಗಿದೆ. ಬೆಂಗಳೂರು ಕೇಂದ್ರಭಾಗ ವೈವಿಧ್ಯಮಯ ಜನಸಮುದಾಯವನ್ನು ಹೊಂದಿದೆ.

ಬೆಂಗಳೂರು ಲೋಕಸಭೆ ಕ್ಷೇತ್ರದಲ್ಲಿ ಎಂಟು ವಿಧಾನಸಭೆ ಕ್ಷೇತ್ರಗಳು ಬರುತ್ತವೆ.‌ ಕ್ಷೇತ್ರದಲ್ಲಿ ಶ್ರೀಮಂತರು, ಮಧ್ಯಮ ವರ್ಗ ಹಾಗೂ ಸ್ಲಂಗಳನ್ನೊಳಗೊಂಡಿದೆ. ಕ್ಷೇತ್ರ ರಚನೆಯಾದಾಗಿನಿಂದ ಬಿಜೆಪಿಯ ಭದ್ರಕೋಟೆಯಾಗಿದೆ. 2009, 2014 ಮತ್ತು 2019ರ ಲೋಕಸಮರದಲ್ಲಿ ಬಿಜೆಪಿಯ ಪಿಸಿ ಮೋಹನ್ ಬೆಂಗಳೂರು ಕೇಂದ್ರ ಲೋಕಸಭೆ ಚುನಾವಣೆಯಲ್ಲಿ ಸತತವಾಗಿ ಗೆಲುವು ಸಾಧಿಸುತ್ತಾ ಬಂದಿದ್ದಾರೆ.

ಮತದಾರರ ಪ್ರಮಾಣ: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಒಟ್ಟು 23,89,761 ಮತದಾರರನ್ನು ಹೊಂದಿದೆ. ಅವುಗಳಲ್ಲಿ ಪುರುಷ ಮತದಾರರು 12,34,786, ಮಹಿಳಾ ಮತದಾರರು 11,54,511 ಮತ್ತು ಇತರರು 464 ಇದ್ದಾರೆ. ಈ ಕ್ಷೇತ್ರದಲ್ಲಿ ಮುಸ್ಲಿಮರು ಶೇ.17.5, ಎಸ್ಸಿ ಮತ್ತು ಎಸ್ಟಿ ಶೇ.18 ಮತ್ತು ಕ್ರಿಶ್ಚಿಯನ್ನರು ಶೇ.4.4ರಷ್ಟಿದ್ದಾರೆ. ಕ್ಷೇತ್ರದಲ್ಲಿ ಸುಮಾರು 5 ಲಕ್ಷ ತಮಿಳು ಭಾಷಿಕರಿದ್ದಾರೆ. ಸುಮಾರು 4 ಲಕ್ಷ ಮುಸ್ಲಿಂ ಸಮುದಾಯ ಹಾಗೂ ಸರಿಸುಮಾರು 2 ಲಕ್ಷ ಕ್ರಿಶ್ಚಿಯನ್ ಸಮುದಾಯದವರು ಇದ್ದಾರೆ. ಅದರ ಜೊತೆಗೆ ಮಾರವಾಡಿಗಳು ಹಾಗೂ ಗುಜರಾತಿ ಸಮುದಾಯದವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಇತಿಹಾಸ
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಇತಿಹಾಸ

ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿನ ಬಲಾಬಲ: ಒಂಬತ್ತು ತಿಂಗಳ ಹಿಂದೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 8 ಕ್ಷೇತ್ರಗಳಲ್ಲಿ ಕಾಂಗ್ರೆಸ್ 5 ಮತ್ತು ಬಿಜೆಪಿ 3 ರಲ್ಲಿ ಗೆಲುವು ಸಾಧಿಸಿದೆ. ಅಂದರೆ ಈ ಹಿಂದಿನಂತೆ ಯಥಾಸ್ಥಿತಿ ಕಾಯ್ದುಕೊಂಡಿದೆ. ಸರ್ವಜ್ಞನಗರ, ಗಾಂಧಿನಗರ, ಚಾಮರಾಜಪೇಟೆ, ಶಿವಾಜಿನಗರ, ಶಾಂತಿನಗರ, ರಾಜಾಜಿನಗರ, ಸಿ.ವಿ. ರಾಮನ್ ನಗರ ಹಾಗೂ ಮಹದೇವಪುರ ವಿಧಾನಸಭೆ ಕ್ಷೇತ್ರಗಳು ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತವೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಇತಿಹಾಸ
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಇತಿಹಾಸ

ಸರ್ವಜ್ಞ ನಗರದಲ್ಲಿ ಸಚಿವರಾದ ಕೆಜೆ ಜಾರ್ಜ್, ದಿನೇಶ್ ಗುಂಡೂರಾವ್(ಗಾಂಧಿನಗರ), ಜಮೀರ್ ಅಹಮದ್ ಖಾನ್(ಚಾಮರಾಜಪೇಟೆ) ರಿಜ್ವಾನ್ ಅರ್ಷದ್ (ಶಿವಾಜಿ ನಗರ), ಎನ್​ಎ ಹ್ಯಾರಿಸ್(ಶಾಂತಿನಗರ) ಕಾಂಗ್ರೆಸ್ ಶಾಸಕರು. ಸುರೇಶ್ ಕುಮಾರ್ (ರಾಜಾಜಿನಗರ), ರಘು(ಸಿವಿ ರಾಮನ್ ನಗರ) ಮತ್ತು ಮಂಜುಳ ಲಿಂಬಾವಳಿ(ಮಹದೇವಪುರ) ಬಿಜೆಪಿ ಶಾಸಕರಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಇತಿಹಾಸ
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಇತಿಹಾಸ

ರಾಜಕೀಯ ಲೆಕ್ಕಾಚಾರ ಏನು?: ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಪಿಸಿ ಮೋಹನ್ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕಾಂಗ್ರೆಸ್​ನಿಂದ ಹೊಸ ಮುಖ ಮನ್ಸೂರ್ ಅಲಿಖಾನ್ ಅವರನ್ನು ಕಣಕ್ಕಿಳಿಸಲಾಗಿದೆ. ಕ್ಷೇತ್ರ ಮೊದಲಿನಿಂದಲೂ ಬಿಜೆಪಿಯ ಭದ್ರಕೋಟೆಯಾಗಿದೆ.

ಮನ್ಸೂರ್ ಅಲಿಖಾನ್
ಮನ್ಸೂರ್ ಅಲಿಖಾನ್

2009ರ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಹೆಚ್​ಟಿ ಸಾಂಗ್ಲಿಯಾನ ವಿರುದ್ಧ ಬಿಜೆಪಿ ಪಿಸಿ ಮೋಹನ್ 35 ಸಾವಿರ ಮತಗಳ ಅಂತರದಿಂದ ಜಯ ದಾಖಲಿಸಿದ್ದರು. 2014 ಮತ್ತು 2019ರ ಎರಡು ಚುನಾವಣೆಯಲ್ಲಿ ಕಾಂಗ್ರೆಸ್​ನ ರಿಜ್ವಾನ್ ಅರ್ಷದ್ ವಿರುದ್ಧ ಮತ್ತೆ ಪಿಸಿ ಮೋಹನ್‌ ಅವರೇ ಮರು ಆಯ್ಕೆ ಆಗಿದ್ದರು. ಸದ್ಯ ಮತ್ತೊಮ್ಮೆ ಜಯ ದಾಖಲಿಸುವ ನಿರೀಕ್ಷೆಯಲ್ಲಿ ಪಿಸಿ ಮೋಹನ್ ಇದ್ದಾರೆ.‌ ಕ್ಷೇತ್ರದಲ್ಲಿನ ಅಭಿವೃದ್ಧಿ ಕೆಲಸ ಹಾಗೂ ಮೋದಿ ಶಕ್ತಿಯೊಂದಿಗೆ ನಾಲ್ಕನೇ ಬಾರಿ ಗೆಲ್ಲಲು ಮುಂದಾಗಿದ್ದಾರೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಇತಿಹಾಸ
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಇತಿಹಾಸ

2019ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ 2019ರ ಸಾರ್ವತ್ರಿಕ ಚುನಾವಣೆಯಲ್ಲಿ 70,968 ಮತಗಳ ಗೆಲುವಿನ ಅಂತರದಿಂದ ಗೆದ್ದಿದ್ದರು. ಒಟ್ಟು 6,02,853 ಮತಗಳನ್ನು ಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ 5,31,885 ಮತಗಳನ್ನು ಪಡೆದು ಸೋತಿದ್ದರು. ಆದರೆ, ಕಳೆದ ಎರಡು ಲೋಕಸಭೆ ಚುನಾವಣೆಯಲ್ಲಿ ಪಿಸಿ ಮೋಹನ್ ಗೆಲುವಿನ ಅಂತರ ಕಡಿಮೆಯಾಗುತ್ತಿದೆ. ಹೀಗಾಗಿ ಕಾಂಗ್ರೆಸ್ ಗ್ಯಾರಂಟಿ ಬಲ ಹಾಗೂ ಸಂಸದರ ವಿರುದ್ಧದ ವಿರೋಧಿ ಅಲೆ ಬಳಸಿ ಈ ಬಾರಿ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಮುಂದಾಗಿದೆ.

ಪಿಸಿ ಮೋಹನ್ ಸಾಧನೆ ಕಾರ್ಡ್: ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಬೆಂಗಳೂರಿನ ಕೆ.ಆ‌ರ್.ಪುರ ಮತ್ತು ವೈಟ್‌ಫೀಲ್ಡ್ ನಿಲ್ದಾಣ ನಿರ್ಮಾಣ, ಕಂಟೋನ್ಮಂಟ್ ರೈಲು ನಿಲ್ದಾಣವನ್ನು 480 ಕೋಟಿ ರೂ. ವೆಚ್ಚದಲ್ಲಿ ವಿಶ್ವ ದರ್ಜೆಯ ರಚನೆಯಾಗಿ ಮರು ಅಭಿವೃದ್ಧಿ ಸಂಸದ ಪಿಸಿ ಮೋಹನ್ ಅವರ ಪ್ರಮುಖ ಸಾಧನೆಯಾಗಿದೆ. ಉಳಿದಂತೆ ನಿರ್ಭಯ ಅನುದಾನದ ಅಡಿಯಲ್ಲಿ ಬೆಂಗಳೂರಿನ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸೇಫ್ ಸಿಟಿ ಕಮಾಂಡ್ ಸೆಂಟರ್ ಸ್ಥಾಪನೆ ಮಾಡಲಾಗಿದೆ. ಅಮೃತ್‌ ಯೋಜನೆಯಡಿ ಬೆಳ್ಳಂದೂರು, ವರ್ತೂರು ಮತ್ತು ರಾಂಪುರ ಕೆರೆಗಳ ಅಭಿವೃದ್ಧಿ ಸೇರಿ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ತೆಗೆದುಕೊಂಡ ಕೆಲ ಉಪಕ್ರಮಗಳನ್ನು ಜನರ ಮುಂದಿಟ್ಟುಕೊಂಡು ಪಿ.ಸಿ. ಮೋಹನ್ ಜನರ ಬಳಿ ಹೋಗುತ್ತಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳು
ಕಣದಲ್ಲಿರುವ ಅಭ್ಯರ್ಥಿಗಳು

ಕ್ಷೇತ್ರದ ಸಮಸ್ಯೆಗಳೇನು?: ಕ್ಷೇತ್ರದ ಬಹುತೇಕ ಕಡೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕುಡಿಯುವ ನೀರಿನ ಕೊರತೆ ಈ ಬಾರಿ ಕ್ಷೇತ್ರದ ಹಲವೆಡೆ ಜನರನ್ನು ಪರದಾಡುವಂತೆ ಮಾಡುತ್ತಿದೆ.‌ ಸ್ಲಂ ಭಾಗದ ಜನರಿಗೆ ಹಕ್ಕುಪತ್ರ ನೀಡಿಲ್ಲ ಎಂಬ ಅಸಮಾಧಾನವೂ ಹಲವರಲ್ಲಿದೆ. ಉಳಿದಂತೆ ಕ್ಷೇತ್ರದ ವ್ಯಾಪ್ತಿಯಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಯಾಗದೇ ಇರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಮಹದೇವಪುರ, ಶಾಂತಿನಗರ, ಶಿವಾಜಿನಗರ, ಸಿ.ವಿ.ರಾಮನ್ ನಗರ ಕ್ಷೇತ್ರದ ಹಲವೆಡೆ ಈ ಬಾರಿ ಸೃಷ್ಟಿಸಿದ ಮಳೆ ಅವಾಂತರ ಸ್ಥಳೀಯರ ಕಣ್ಣು ಕೆಂಪಾಗಿಸಿದೆ.‌ ಶಾಶ್ವತ ಪರಿಹಾರ ಕಲ್ಪಿಸದೇ ಇರುವ ಬಗ್ಗೆ ಕ್ಷೇತ್ರದ ಜನರಲ್ಲಿ ಅಸಮಾಧಾನವೂ ಇದೆ.

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಇತಿಹಾಸ
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಇತಿಹಾಸ

2019ರ ಚುನಾವಣೆಯ ಹಣಾಹಣಿ: 2019ರಲ್ಲಿ ಕ್ಷೇತ್ರವು ಒಟ್ಟು 2204817ಮತದಾರರನ್ನು ಹೊಂದಿತ್ತು. ಈ ವೇಳೆ ಒಟ್ಟು ಮಾನ್ಯ ಮತಗಳ ಸಂಖ್ಯೆ 1186474. ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಪಿ ಸಿ ಮೋಹನ್ ಗೆದ್ದು ಸಂಸದರಾದರು. ಅವರು ಒಟ್ಟು 602853 ಮತಗಳನ್ನು ಪಡೆದರೆ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ 531885 ಮತಗಳೊಂದಿಗೆ ಎರಡನೇ ಕುಸಿದರು. ಈ ಚುನಾವಣೆಯಲ್ಲಿ 54.3 % ಮತಗಳ ಸಹಿತ 10760 ನೋಟಾ ಮತಗಳು ಕೂಡ ಚಲಾವಣೆಯಾಗಿದ್ದವು. ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಪಿಸಿ ಮೋಹನ್ ಮೂರು ಬಾರಿ ಗೆದ್ದಿದ್ದು ಇದೀಗ ನಾಲ್ಕನೇ ಬಾರಿ ಕಣಕ್ಕಿಳಿದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ದಕ್ಷಿಣದಲ್ಲಿ ಯಾರ ಕೊರಳಿಗೆ ವಿಜಯ ಮಾಲೆ? - Bengaluru South

ETV Bharat Logo

Copyright © 2024 Ushodaya Enterprises Pvt. Ltd., All Rights Reserved.