ETV Bharat / state

ಮಂಗಳೂರಿನ ಫಲ್ಗುಣಿ ನದಿ ಪ್ರವಾಹ: ಮನೆ ಕುಸಿದು ಮಹಿಳೆ, ಶೆಡ್​​ ಬಿದ್ದು 5 ಸಾವಿರ ಕೋಳಿ ಸಾವು - Dakshina Kannada Rain Havoc

author img

By ETV Bharat Karnataka Team

Published : Aug 1, 2024, 8:21 PM IST

Updated : Aug 1, 2024, 10:32 PM IST

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ನಿಲ್ಲುತ್ತಿಲ್ಲ. ಫಲ್ಗುಣಿ ನದಿ ಉಕ್ಕಿ ಹರಿದು ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ಮೂಡುಬಿದಿರೆಯಲ್ಲಿ ಮನೆ ಕುಸಿದು ಓರ್ವ ಮಹಿಳೆ ಮೃತಪಟ್ಟಿದ್ದಾರೆ.

ಫಲ್ಗುಣಿ ನದಿಯಲ್ಲಿ ನೆರೆ
ಫಲ್ಗುಣಿ ನದಿಯಲ್ಲಿ ನೆರೆ (ETV Bharat)
ಫಲ್ಗುಣಿ ನದಿ ಪ್ರವಾಹದಿಂದ ಉಂಟಾದ ಅವಾಂತರ (ETV Bharat)

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಹಾಮಳೆ ಅನಾಹುತಗಳನ್ನು ಸೃಷ್ಟಿಸುತ್ತಲೇ ಇದೆ. ವಿಪರೀತ ಮಳೆಯಿಂದಾಗಿ ಫಲ್ಗುಣಿ ನದಿ ಉಕ್ಕಿ ಹರಿದು ಜನವಸತಿ ಪ್ರದೇಶಗಳಿಗೆ ನೀರು ನುಗ್ಗಿದೆ. ದೇವಸ್ಥಾನಗಳು ಜಲದಿಗ್ಬಂಧನಕ್ಕೊಳಗಾಗಿದ್ದು, ಹಲವು ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಮತ್ತೊಂದೆಡೆ, ಮನೆ ಕುಸಿದು ಓರ್ವ ಮಹಿಳೆ ಮೃತಪಟ್ಟಿದ್ದು, ಕಟ್ಟಡ ಕುಸಿದು 5 ಸಾವಿರ ಕೋಳಿಗಳು ಸಾವಿಗೀಡಾಗಿವೆ.

ಬುಧವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಫಲ್ಗುಣಿ ನದಿಯಲ್ಲಿ ಏಕಾಏಕಿ ನೀರಿನ ಹರಿವು ಹೆಚ್ಚಾಗಿದೆ. ಪಶ್ಚಿಮಘಟ್ಟದಲ್ಲಿ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿಸಮುದ್ರ ಸೇರುವ ಫಲ್ಗುಣಿ ನದಿ ತಾನು ಹರಿಯುವ ಜಾಗದಲ್ಲೆಲ್ಲ ಅವಾಂತರ ಸೃಷ್ಟಿ ಮಾಡಿದೆ. ವೇಣೂರು, ಅಂಗರಕರಿಯ, ಹೊಸಂಗಡಿ ಸೇತುವೆ, ಗುರುಪುರ ಸಮೀಪದ ಮರವೂರು, ಪಡುಶೆಡ್ಡೆ ಭಾಗದಲ್ಲಿ 20ಕ್ಕೂ ಅಧಿಕ ಮನೆಗಳು ಜಲಾವೃತವಾಗಿದೆ. ಕೃಷಿ ಭೂಮಿಗಳಿಗೆ ನೀರು‌ನುಗ್ಗಿ ಊರಿಗೇ ಊರೇ ದ್ವೀಪದಂತಾಗಿದೆ.

ಮಂಗಳೂರು ಹೊರವಲಯದ ವಾಮಂಜೂರು ಅಮೃತೇಶ್ವರ ದೇವಸ್ಥಾನಕ್ಕೆ 30 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನೀರು ನುಗ್ಗಿದೆ‌. ದೇವಸ್ಥಾನದ ಗದ್ದೆ, ದೇವಸ್ಥಾನದ ಒಳ ಪ್ರಾಂಗಣ ಜಲಾವೃತವಾಗಿದೆ. ಅಮೃತೇಶ್ವರ‌ ದೇವರಿಗೆ ಜಲದಿಗ್ಭಂಧನದ ನಡುವೆಯೂ ತ್ರಿಕಾಲ ಪೂಜೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ರೆಖ್ಯಾ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನ ಗರ್ಭಗುಡಿ ಮತ್ತು‌ ಸುತ್ತು ಪೌಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಭಾರಿ ಮಳೆಗೆ ಏಕಾಏಕಿ‌ ದೇವಸ್ಥಾನದ ಮೇಲೆ ಗುಡ್ಡ ಜರಿದು ಬಿದ್ದು ನೀರಿನ ಜೊತೆಗೆ ದೇವಸ್ಥಾನದ ಒಳಗೆ ಮಣ್ಣು ನುಗ್ಗಿದ್ದು, ಮಳೆ ಹೆಚ್ಚಾದರೆ ಮತ್ತಷ್ಟು ಗುಡ್ಡ ಕುಸಿಯುವ ಭೀತಿ ಎದುರಾಗಿದೆ.

ಮನೆ ಕುಸಿದು ಮಹಿಳೆ ಸಾವು: ಭಾರೀ ಗಾಳಿ-ಮಳೆಗೆ ಮೂಡುಬಿದಿರೆಯ ನೆಲ್ಲಿಕಾರ್ ಗ್ರಾಮದ ಬೋರುಗುಡ್ಡೆ ಜನತಾ ಕಾಲೊನಿಯಲ್ಲಿ ಮನೆ ಕುಸಿದು ಮಹಿಳೆ ಗೋಪಿ ( 65) ಎಂಬವರು ಮೃತಪಟ್ಟಿದ್ದಾರೆ. ಮಹಿಳೆ ಮನೆಯ ಒಳಗಿದ್ದಾಗ ಅವರ ನಾಲ್ವರು ಗಂಡು ಮಕ್ಕಳು ಮಳೆಯಿಂದ ರಕ್ಷಣೆಗೆ ಮನೆಯ ಹೊರಗೆ ಟರ್ಪಾಲು ಕಟ್ಟುತ್ತಿದ್ದರು. ಈ ವೇಳೆ ಅವಘಡ ಸಂಭವಿಸಿದೆ.

8 ಕುಟುಂಬಗಳ ಸ್ಥಳಾಂತರ: ಫಲ್ಗುಣಿ ನದಿಯಲ್ಲಿ ಏಕಾಏಕಿ ನೆರೆ ಕಾಣಿಸಿಕೊಂಡ ಪರಿಣಾಮ ಬಂಟ್ವಾಳ ತಾಲೂಕಿನ ಅಮ್ಮುಂಜೆ ಮತ್ತು ಕರಿಯಂಗಳ ಗ್ರಾಮದ ಸುಮಾರು 8 ಕುಟುಂಬಗಳನ್ನು ಸ್ಥಳಾಂತರ ಮಾಡಲಾಗಿದೆ. ಮಂಗಳೂರು ನಗರದ ಹೊರವಲಯದಲ್ಲಿರುವ ಮೂಡುಶೆಡ್ಡೆ ಪ್ರದೇಶದಲ್ಲಿಯೂ ಹಲವು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

5 ಸಾವಿರ ಕೋಳಿಗಳ ಸಾವು: ಕೆದಂಬಾಡಿ ಗ್ರಾಮದ ಮಠ ಎಂಬಲ್ಲಿ ಚಂದ್ರಾವತಿ ರೈ ಎಂಬವರಿಗೆ ಸೇರಿದ ಕೋಳಿ ಸಾಕಾಣಿಕೆ ಶೆಡ್​​ನ ಮೇಲೆ ಮಣ್ಣು ಕುಸಿದು 5 ಸಾವಿರಕ್ಕೂ ಹೆಚ್ಚು ಕೋಳಿಗಳು ಸತ್ತಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಬಜಾಲ್ ಫೈಸಲ್ ನಗರದಲ್ಲಿ ಮನೆಯೊಂದು ಕುಸಿದಿದೆ. ಅದೃಷ್ಟವಶಾತ್​ ಅಜ್ಜಿ-ಮೊಮ್ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇನ್ನೊಂದೆಡೆ, ಯಮುನಾ ಎಂಬವರಿಗೆ ಸೇರಿದ ಮನೆಯ ಮೇಲ್ಛಾವಣಿ ಕುಸಿದಿದೆ. ಈ ವೇಳೆ ಯಮುನಾ ಹಾಗೂ ಅವರ ಮೊಮ್ಮಗಳು ಮನೆಯಲ್ಲಿ ಇದ್ದರು. ಮೇಲ್ಛಾವಣಿ ಕುಸಿಯುತ್ತಿದ್ದಾಗ ಅವರು ಮನೆಯಿಂದ ಹೊರ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಸ್ಥಳೀಯ ಕಾರ್ಪೊರೇಟ‌ರ್ ಅಶ್ರಫ್ ಬಜಾಲ್ ಸೇರಿದಂತೆ ಅಧಿಕಾರಿಗಳು, ತಾಲ್ಲೂಕು ವಿಎ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಲಿದೆ ಮಳೆ ಆರ್ಭಟ; ಈ ಎರಡು ಜಿಲ್ಲೆಗಳಿಗೆ ರೆಡ್ ಅಲರ್ಟ್ - MET Rain Alert

Last Updated : Aug 1, 2024, 10:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.