ETV Bharat / state

ಕೇಂದ್ರದ ನಡೆ ನೋಡಿಕೊಂಡು ಹೆಚ್​ವಿವಿ ವ್ಯಾಕ್ಸಿನ್ ಅಭಿಯಾನ; ದಿನೇಶ್ ಗುಂಡೂರಾವ್ - HVV vaccine campaign - HVV VACCINE CAMPAIGN

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಹೆಚ್​ವಿವಿ ವ್ಯಾಕ್ಸಿನ್ ಬಗ್ಗೆ ಮಾತನಾಡಿದ್ದಾರೆ. ಬಜೆಟ್​ನಲ್ಲಿ ಕೇಂದ್ರ ಸರ್ಕಾರ ಯಾವ ನಿರ್ಧಾರ ಪ್ರಕಟಿಸಲಿದೆ ಎನ್ನುವುದನ್ನು ನೋಡಿ ರಾಜ್ಯ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದಿದ್ದಾರೆ.

health-minister-dinesh-gundurao
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (ETV Bharat)
author img

By ETV Bharat Karnataka Team

Published : Jul 22, 2024, 9:32 PM IST

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (ETV Bharat)

ಬೆಂಗಳೂರು : ಗರ್ಭಕಂಠದ ಕ್ಯಾನ್ಸರ್​ಗೆ ಹೆಚ್.ವಿ.ವಿ ವ್ಯಾಕ್ಸಿನ್ ಕೊಡುವ ಕುರಿತು ಕೇಂದ್ರ ಸರ್ಕಾರ ಬಜೆಟ್​ನಲ್ಲಿ ಯಾವ ರೀತಿಯ ನಿರ್ಧಾರ ಪ್ರಕಟಿಸಲಿದೆ ಎನ್ನುವುದನ್ನು ನೋಡಿ ರಾಜ್ಯ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ವಿಧಾನ ಪರಿಷತ್​ನಲ್ಲಿ ಗರ್ಭಕಂಠದ ಕ್ಯಾನ್ಸರ್ ಕುರಿತಂತೆ ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಮ್ಮಲ್ಲಿ ಬರುವವರಿಗೆ ಚಿಕಿತ್ಸೆ ಕೊಡ್ತಾ ಇದ್ದೇವೆ. ಹೆಚ್​ವಿವಿ ವ್ಯಾಕ್ಸಿನ್ ಕೊಡುವ ಬಗ್ಗೆ ಕೇಂದ್ರ ಘೋಷಣೆ ಮಾಡಿದೆ. ನಾವು ಕೂಡ ಈಗಾಗಲೇ ಪತ್ರ ಬರೆದಿದ್ದೇವೆ. ನಾಳೆ ಬಜೆಟ್ ಇದೆ, ಅದರಲ್ಲಿ ಈ ಬಗ್ಗೆ ಏನಾದರೂ ಅನೌನ್ಸ್ ಮಾಡ್ತಾರಾ ನೋಡಬೇಕು. ನಾವು ಒಂದು ಬಾರಿ ವ್ಯಾಕ್ಸಿನ್ ಶುರು ಮಾಡಿದರೆ ಎಲ್ಲ ಕಡೆ ಮಾಡಬೇಕು. ಇದನ್ನ ಒಂದು ಬಾರಿ ಕೊಟ್ಟು ನಿಲ್ಲಿಸಲು ಆಗಲ್ಲ. ಇದಕ್ಕೆ ಎಷ್ಟು ಬಜೆಟ್ ಏನು ಅಂತ ನೋಡಬೇಕು. ಕೇಂದ್ರದಿಂದ ತೀರ್ಮಾನ ಬಂದ ನಂತರ ನಾವು ಅನುಷ್ಠಾನ ಮಾಡುತ್ತೇವೆ ಎಂದರು.

ನಕಲಿ ವೈದ್ಯರ ಹಾವಳಿ ತಡೆ : ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ತಡೆಗೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದ್ದಾರೆ.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಲಬುರಗಿಯಲ್ಲಿ ನಕಲಿ ವೈದ್ಯರ ಹಾವಳಿ ಕುರಿತು ತಿಪ್ಪಣ್ಣ ಕಮಕನೂರು ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಲಬುರಗಿಯಲ್ಲಿ ನೂರಾರು ಜನ ತೀರಿ ಹೋಗಿದ್ದಾರೆ ಎಂದು ಸದಸ್ಯ ಕಮಕನೂರು ಆರೋಪಿಸಿದ್ದಾರೆ, ನಕಲಿ ವೈದ್ಯರ ಕಾರಣದಿಂದ ನೂರಾರು ಜನ ಸತ್ತಿದ್ದಾರೆ ಎನ್ನುವಾಗ ದಾಖಲೆ ಇಟ್ಟು ಹೇಳಬೇಕು. ಈಗ ನಾವು ನಕಲಿ ವೈದ್ಯರ ಮಟ್ಟ ಹಾಕಲು ಪೂರಕವಾಗಿ ಯಾವ ಆಸ್ಪತ್ರೆಯಲ್ಲಿ ಯಾವ ಪದ್ದತಿಯ ಚಿಕಿತ್ಸೆ ಸಿಗಲಿದೆ ಎನ್ನುವ ಕುರಿತು ಮಾಹಿತಿ ಪ್ರಕಟಿಸಲು ಕಲರ್ ಕೋಡ್ ರೂಪಿಸಿದ್ದೇವೆ. ವೈದ್ಯರು ಯಾವ ಯಾವ ಕೆಟಗರಿಯವರು ಎಂದು ಟಿಕ್ ಹಾಕುತ್ತಿದ್ದೇವೆ. ಆಯುರ್ವೇದದಲ್ಲಿ ಪ್ರಾಕ್ಟೀಸ್ ಮಾಡಿದ್ದರೆ ಅಂತಹ ವೈದ್ಯರು ಗ್ರೀನ್ ಬಣ್ಣದ ನಾಮಫಲಕ ಹಾಕಬೇಕು. ಅಲೋಪತಿ ವೈದ್ಯರಾದರೆ ಬ್ಲ್ಯೂ ಬಣ್ಣದ ಬೋರ್ಡ್ ಹಾಕಬೇಕು ಎಂದರು.

ಕಲಬುರಗಿಯಲ್ಲಿ 23 ನಕಲಿ ವೈದ್ಯರನ್ನು ಗುರುತಿಸಲಾಗಿದೆ. ನಕಲಿ ವೈದ್ಯರ ಹಾವಳಿ ಇಡೀ ರಾಜ್ಯದಲ್ಲಿ ಇದೆ. ಅಂತಹವರ ಬಂಧನ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ನಕಲಿ ವೈದ್ಯರ ಬಂಧನ ಮಾಡಿದಾಗ ಅವರ ಪರ ವಕಾಲತ್ತು ಮಾಡುವವರೂ ಇದ್ದಾರೆ. ಇನ್ನೊಮ್ಮೆ ಪರಿಶೀಲಿಸಿ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.

ಬೆಂಗಳೂರು ಜಿಲ್ಲೆ ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಆಯುಷ್ ಚಿಕಿತ್ಸಾಲಯದಲ್ಲಿ ದೂರುಗಳು ಬರ್ತಾ ಇವೆ. ಸರಿಯಾದ ಔಷಧ ಸಿಕ್ತಾ ಇಲ್ಲ ಅನ್ನುವ ದೂರು ಬಂದಿದೆ. ಹೆಚ್ಚಿನ ಸಿಬ್ಬಂದಿ ಇಲ್ಲದ ಕಾರಣ ಬಂದ ರೋಗಿಗಳನ್ನ ಅಟೆಂಡ್ ಮಾಡ್ತಾ ಇಲ್ಲ ಎಂಬ ಆರೋಪವಿದೆ. ಆದರೆ, ಔಷಧಗಳ ಕೊರತೆ ಇಲ್ಲ. ನಿರ್ದಿಷ್ಟ ಆಸ್ಪತ್ರೆ ಅಂದರೆ ಅದಕ್ಕೆ ನಾವು ಕ್ರಮ ವಹಿಸುತ್ತೇವೆ. ಹುದ್ದೆಗಳ ಭರ್ತಿ ಮಾಡೋದಕ್ಕೂ ಕ್ರಮ ವಹಿಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಕೊಪ್ಪಳದಲ್ಲಿ ಮೂರು ತಿಂಗಳಲ್ಲಿ ಹೊಸ ಆಸ್ಪತ್ರೆ : ಕೊಪ್ಪಳ‌ ಜಿಲ್ಲಾ ಆಸ್ಪತ್ರೆಯಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ, ಐಸಿಯು ಬೆಡ್ ಕಡಿಮೆ ಇದೆ, ಸೂಕ್ತ ಚಿಕಿತ್ಸೆ ಕೂಡ ಸಿಗುತ್ತಿಲ್ಲ, ಇದಕ್ಕೆ ಪರಿಹಾರ ಏಕಿಲ್ಲ ಎಂದು ಹೇಮಲತಾ ನಾಯಕ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್, ಕೊಪ್ಪಳಕ್ಕೆ 450 ಬೆಡ್​ನ ಆಸ್ಪತ್ರೆ ಮಂಜೂರಾಗಿದೆ. ಮೂರು ತಿಂಗಳಲ್ಲಿ ಕೆಲಸ ಆಗಲಿದೆ, ಮೆಡಿಕಲ್ ಕಾಲೇಜ್ ಮಾಡಿದ ಮೇಲೆ ಜಿಲ್ಲಾಸ್ಪತ್ರೆ ಮೇಲೆ ಒತ್ತಡ ಹೆಚ್ಚಾಗಿದೆ. ಆಪರೇಷನ್​ಗೆ ಮೂರು ತಿಂಗಳ ಸಮಯ ಕೊಡುತ್ತಿದ್ದಾರೆ ಎಂಬ ಮಾಹಿತಿ ಇದೆ. ಈ ಬಗ್ಗೆ ನೋಟಿಸ್​ ಕೊಟ್ಟಿದ್ದೇವೆ, ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ : ಗರ್ಭಕಂಠ ಕ್ಯಾನ್ಸರ್​​ ತಡೆಗೆ ಎಷ್ಟು ವರ್ಷದವರೆಗೆ ಎಚ್​ಪಿವಿ ಲಸಿಕೆ ಪಡೆಯಬಹುದು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.