ETV Bharat / state

ಕಾಂಗ್ರೆಸ್​ ಹಂತಹಂತವಾಗಿ ನೆಲಕ್ಕಚ್ಚಲಿದೆ: ಹೆಚ್‌.ಡಿ.ದೇವೇಗೌಡ - Jagdish Shettar

ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಾಗಿರುವುದನ್ನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ಶೀಘ್ರವಾಗಿ ನೆಲಕ್ಕಚ್ಚಲಿದೆ ಎಂದು ಹೆಚ್.​ಡಿ.ದೇವೇಗೌಡ ಭವಿಷ್ಯ ನುಡಿದಿದ್ದಾರೆ.

hd-deve-gowda
ಮಾಜಿ ಪ್ರಧಾನಿ ದೇವೆಗೌಡ
author img

By ETV Bharat Karnataka Team

Published : Jan 26, 2024, 7:29 AM IST

Updated : Jan 26, 2024, 1:53 PM IST

ಹೆಚ್‌.ಡಿ.ದೇವೇಗೌಡ ಹೇಳಿಕೆ

ಹಾಸನ: ಜಗದೀಶ್​​ ಶೆಟ್ಟರ್​​ ಬಿಜೆಪಿಗೆ ಮರುಸೇರ್ಪಡೆಯಾಗಿರುವ ವಿಚಾರವಾಗಿ ಕಾಂಗ್ರೆಸ್​ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಶೀಘ್ರವಾಗಿ ನೆಲಕ್ಕಚ್ಚುತ್ತದೆ ಎಂದು ಟೀಕಿಸಿದರು.

ಹಾಸನ ಜಿಲ್ಲೆಯ ಆಲೂರಿನಲ್ಲಿ ಮಾತನಾಡಿದ ಅವರು, "ಜಗದೀಶ್ ಶೆಟ್ಟರ್ ಸಮರ್ಥ ನಾಯಕರು. ಮಾಜಿ ಮುಖ್ಯಮಂತ್ರಿಯಾಗಿದ್ದವರು. ಅವರನ್ನು ಕಾಂಗ್ರೆಸ್‌ನವರು ಪಕ್ಷಕ್ಕೆ ಉತ್ಸಾಹದಿಂದ ಸೇರಿಸಿಕೊಂಡರು. ಹೀಗೆ ಸೇರಿಸಿಕೊಂಡ ಮೇಲೆ ಅವರನ್ನು ಒಂದು ಮಂತ್ರಿ ಮಾಡುವಷ್ಟು ಸೌಜನ್ಯ ಬೇಡವೇ?. ನಾನು ಯಾರ ಬಗ್ಗೆಯೂ ನಿಂದನೆ ಮಾಡಲ್ಲ. ರಾಜ್ಯದ ಮುಖ್ಯಮಂತ್ರಿಯಾಗಿ, ಸಮರ್ಥ ನಾಯಕರಾಗಿ ಕೆಲಸ ಮಾಡಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಿದವರನ್ನು ಕರೆದುಕೊಂಡು ಬಂದು ಒಂದು ಮಂತ್ರಿ ಕೆಲಸ ಕೊಡಲಿಲ್ಲ. ಕಾಂಗ್ರೆಸ್ ಹೇಗೆ ಮೋಸ ಮಾಡುತ್ತದೆ ಅನ್ನುವುದಕ್ಕೆ ಈ ಉದಾಹರಣೆ ಸಾಕು. ಇದು ಕಾಂಗ್ರೆಸ್‌ನ ದೌರ್ಬಲ್ಯ. ಮುಂದಿನ ದಿನಗಳಲ್ಲಿ ಈ ದೇಶದಲ್ಲಿ ಕಾಂಗ್ರೆಸ್ ಹಂತಹಂತವಾಗಿ ನೆಲಕಚ್ಚುತ್ತೆ ಎಂದ ಅವರು, ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಾಗಿರುವುದು ಸ್ವಾಗತ. ಬಿಜೆಪಿಗೆ ಶಕ್ತಿ ಬರುತ್ತದೆ ಎನ್ನುವುದನ್ನು ಮನದಲ್ಲಿಟ್ಟುಕೊಂಡು ನಾಯಕರು ತೀರ್ಮಾನ ಮಾಡಿರುತ್ತಾರೆ" ಎಂದರು.

ಇದನ್ನೂ ಓದಿ: 27ಕ್ಕೆ ರಾಜ್ಯ ಬಿಜೆಪಿ ಕಾರ್ಯಕಾರಿಣಿ.. ಲೋಕಸಭೆ ಚುನಾವಣೆ ಸಿದ್ಧತೆ ಕುರಿತು ಚರ್ಚೆ: ಪ್ರೀತಂ ಗೌಡ

Last Updated : Jan 26, 2024, 1:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.