ETV Bharat / state

ಫೆ.18ರಂದು ಮಳವಳ್ಳಿಯಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ; ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಮಳವಳ್ಳಿ ಪಟ್ಟಣದ ಪುರಸಭೆ ಮೈದಾನದಲ್ಲಿ ಫೆಬ್ರವರಿ 18ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ನರೇಂದ್ರ ಸ್ವಾಮಿ ತಿಳಿಸಿದರು.

MLA Narendra Swamy spoke at the press conference.
ಶಾಸಕ ನರೇಂದ್ರ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
author img

By ETV Bharat Karnataka Team

Published : Feb 15, 2024, 10:57 PM IST

Updated : Feb 15, 2024, 11:03 PM IST

ಶಾಸಕ ನರೇಂದ್ರ ಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮಂಡ್ಯ: ಮಳವಳ್ಳಿ ಪಟ್ಟಣದ ಶಾಂತಿ ಕಾಲೇಜಿನ ಮೈದಾನದಲ್ಲಿ ಫೆಬ್ರುವರಿ 18ರಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಗ್ಯಾರಂಟಿ ಫಲಾನುಭವಿಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಈ ವೇಳೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಶಾಸಕ ನರೇಂದ್ರ ಸ್ವಾಮಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಗ್ಯಾರಂಟಿ ಫಲಾನುಭವಿಗಳು ಸಮಾವೇಶದಲ್ಲಿ ಹೆಚ್ಚು ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕೆಂದು ಮನವಿ ಮಾಡಿದ ಅವರು, ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್​​ನ ಮೂವರು ಅಭ್ಯರ್ಥಿಗಳು ಗೆದ್ದೇ ಗೆಲ್ತಾರೆ. ನಮ್ಮಲ್ಲಿ ಸಂಖ್ಯೆ ಹೆಚ್ಚಿದ್ದು, ಗೆಲ್ತಾರೆ. ರಾಜಕಾರಣದಲ್ಲಿ ಊಹಾಪೋಹಗಳು, ಆಮಿಷ ಇದ್ದೇ ಇರುತ್ತೆ ಎಂದರು.

ನಮ್ಮ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಹಿರಿಯ ನಾಯಕರು ಮತ ಚದುರದ ರೀತಿ ನೋಡ್ಕೊಳ್ತಾರೆ. ಈ ಬಾರಿ ಬಿಜೆಪಿ-ಜೆಡಿಎಸ್​​ನವರ ಪ್ರಯತ್ನ ಫಲಿಸುವುದಿಲ್ಲ. ಇದು ಕರ್ನಾಟಕ. ಯಾವುದಕ್ಕೂ ಜಗ್ಗುವುದಿಲ್ಲ, ಬಗ್ಗುವುದಿಲ್ಲ. ಅಜಯ್ ಮಾಕೇನ್ ಪಕ್ಷದ ನಾಯಕತ್ವಕ್ಕೆ ಅವಶ್ಯಕತೆ ಇದೆ. ರಾಷ್ಟ್ರೀಯ ಪಕ್ಷ ಅವಶ್ಯಕತೆ ಇರುವ ನಾಯಕರಿಗೆ ಜವಾಬ್ದಾರಿ ಕೊಡುತ್ತೆ. ನಮ್ಮ ಪಕ್ಷದಲ್ಲಿ ಅವರ ಮನೆತನದ ಶ್ರಮವೂ ಇದೆ ಎಂದು ಸಮರ್ಥನೆ ಮಾಡಿಕೊಂಡರು.

ಬಿಜೆಪಿಯಿಂದ ಮಲತಾಯಿ ಧೋರಣೆ: ನಾನು ರಾಮಭಕ್ತ. ಆದ್ರೆ ಬಿಜೆಪಿಯ ರಾಮ, ಬಿಜೆಪಿ ಆಂಜನೇಯನ ಭಕ್ತರಲ್ಲ. ಬಿಜೆಪಿಯವರು ಊರು ಊರು ಮೇಲೆ ಭಾರತ್ ಅಕ್ಕಿ ಮಾರಾಟ ಮಾಡ್ತಿದ್ದಾರೆ. ಫುಡ್ ಸೆಕ್ಯುರಿಟಿ ಆ್ಯಕ್ಟ್ ತಂದಿದ್ದು ಮನಮೋಹನ್ ಸಿಂಗ್ ಕಾಲದಲ್ಲಿ, ಈ ಯೋಜನೆ ಬಿಜೆಪಿಯವರದ್ದಲ್ಲ. ಅದನ್ನು ನಮ್ಮ ಮೋದಿ ಕೊಡ್ತಿದ್ದಾರೆ ಅಂತ ಬಿಜೆಪಿಯವರು ಹೇಳ್ತಾರೆ. ಅಕ್ಕಿಗೆ 34 ರೂ ಕೊಡ್ತೇವೆ ಅಂದ್ರೆ ಕೇಂದ್ರ ಸರ್ಕಾರ ಅಕ್ಕಿ ಇಲ್ಲ ಅಂದ್ರು. ಈಗ ಬಿಜೆಪಿ ಭಾರತ್ ಅಕ್ಕಿ ಮಾರಾಟ ಮಾಡ್ತಿದೆ. 29 ರೂ ಗೆ ಮಾರಾಟ ಮಾಡ್ತಿದ್ದಾರೆ, ನಾವು ಇನ್ನು 5ರೂ ಜಾಸ್ತಿ ಕೊಡ್ತಿದ್ವಿ. ಬಡವರಿಗೆ ಉಚಿತವಾಗಿ ಅಕ್ಕಿ ಕೊಡಲು ಕೇಳಿದ್ರೆ ತಾರತಮ್ಯ ಮಾಡ್ತಿರಾ? ಬಿಜೆಪಿಯಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ರದ್ದಾಗಲ್ಲ‌. ಗ್ಯಾರಂಟಿ ಹಿಂದೆ ಸರ್ಕಾರ ಅಲ್ಲ, ನಮ್ಮ ನಾಯಕರು ಇದ್ದಾರೆ. ಅವರು ಬಡವರ ಪರ ಇದ್ದಾರೆ. ಬಜೆಟ್ ನಲ್ಲಿ ಮಂಡ್ಯ ಜಿಲ್ಲೆಗೆ ಸಿಎಂ ಆದ್ಯತೆ ನೀಡಲಿದ್ದಾರೆ. ಈ ಬಜೆಟ್​ದಲ್ಲಿ ಸಿಗದಿದ್ದರೂ, ಸಪ್ಲಿಮೆಂಟರಿ ಬಜೆಟ್ ನಲ್ಲಿಯಾದರೂ ಮಳವಳ್ಳಿ, ಮಂಡ್ಯ ಜಿಲ್ಲೆಗೆ ಹೆಚ್ಚು ಅನುದಾನ ನೀಡಬೇಕೆಂದು ಜಿಲ್ಲೆಯ ಎಲ್ಲ ಮುಖಂಡರು ಸಿಎಂಗೆ ಮನವರಿಕೆ ಮಾಡುತ್ತೇವೆ.

ಇದನ್ನೂಓದಿ: ಗುತ್ತಿಗೆ ಆಧಾರದ ಮೇಲೆ 337 ತಜ್ಞ ವೈದ್ಯರ ನೇಮಕಕ್ಕೆ ಕ್ರಮ: ಸಚಿವ ದಿನೇಶ್ ಗುಂಡೂರಾವ್

Last Updated : Feb 15, 2024, 11:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.