ETV Bharat / state

ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ ವೈಭವದ ಗಣೇಶೋತ್ಸವ; 36 ವಿಧದ ಹಣ್ಣು - ಹೂವುಗಳಿಂದ ಅಲಂಕಾರ - Sathyaganapati Temple - SATHYAGANAPATI TEMPLE

ಇಂದು ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮ ಮನೆಮಾಡಿದೆ. ಬೆಂಗಳೂರಿನ ಜೆ. ಪಿ ನಗರದ ಪುಟ್ಟೇನಹಳ್ಳಿ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲೂ ಅದ್ಧೂರಿ ಗಣೇಶೋತ್ಸವಕ್ಕೆ ಸಿದ್ಧತೆ ನಡೆದಿದೆ. ಈ ಬಾರಿ 36ಕ್ಕೂ ಹೆಚ್ಚು ವಿಧದ ಹಣ್ಣು ಹಾಗೂ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ.

sathyaganapati-temple
ಸತ್ಯಗಣಪತಿ ದೇವಸ್ಥಾನ (ETV Bharat)
author img

By ETV Bharat Karnataka Team

Published : Sep 7, 2024, 7:10 AM IST

Updated : Sep 7, 2024, 7:34 AM IST

ಮಾರುಕಟ್ಟೆಯಲ್ಲಿ ಹೂ ಹಣ್ಣುಗಳ ಖರೀದಿ (ETV Bharat)

ಬೆಂಗಳೂರು : ದೇಶಾದ್ಯಂತ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಪ್ರತಿವರ್ಷದಂತೆ ಈ ಬಾರಿಯೂ ಜೆ. ಪಿ ನಗರದ ಪುಟ್ಟೇನಹಳ್ಳಿ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿಯನ್ನು ವೈಭವದಿಂದ ಆಚರಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಟ್ರಸ್ಟಿ ರಾಮ್‌ ಮೋಹನ ರಾಜ್‌ ತಿಳಿಸಿದರು.

grand-preparations-for-ganesha-festival-in-sathyaganapati-temple
ದೇವಸ್ಥಾನದಲ್ಲಿ ಹೂ- ಹಣ್ಣಿನಿಂದ ಅಲಂಕಾರ ಮಾಡಿರುವುದು (ETV Bharat)

ಪ್ರತಿವರ್ಷ ಹೊಸದೊಂದು ಥೀಮ್​​ನಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಹಾಗೂ ವಿಶೇಷ ಅಲಂಕಾರದ ಮೂಲಕ ದೇಶದ ಗಮನವನ್ನು ಸೆಳೆಯುತ್ತಿದ್ದ ಶ್ರೀ ಸತ್ಯಗಣಪತಿ ಶಿರಡಿ ಸಾಯಿ ದೇವಸ್ಥಾನದಲ್ಲಿ ಈ ಬಾರಿ 36ಕ್ಕೂ ಹೆಚ್ಚು ವಿಧದ ಹಣ್ಣು ಹಾಗೂ ಹೂಗಳಿಂದ ವಿಶೇಷ ಅಲಂಕಾರ ಮಾಡಲಾಗಿದೆ ಎಂದರು.

ಇಂದು ಬೆಳಗ್ಗೆ 9 ಗಂಟೆಯಿಂದ ವಿಶೇಷ ಪೂಜಾಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹೂವು ಹಣ್ಣುಗಳಿಂದ ಸಿಂಗರಿಸಲಾಗಿರುವ ದೇವಸ್ಥಾನ ನೋಡಲು ಎರಡು ಕಣ್ಣುಗಳು ಸಾಲದಾಗಿದೆ. ಪ್ರತಿವರ್ಷ ಹೊಸದೊಂದು ಥೀಮ್‌ ಅಳವಡಿಸಿಕೊಂಡು ಭಕ್ತರಿಗೆ ಹೊಸ ಅನುಭವ ನೀಡುವುದು ನಮ್ಮ ಉದ್ದೇಶವಾಗಿದೆ. ವಿಶೇಷ ಪೂಜೆಯ ಜೊತೆಗೆ ಪ್ರಸಾದ ವಿತರಣೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Ganapati temple
ಗಣಪತಿ ದೇವಸ್ಥಾನದಲ್ಲಿ ಹೂ ಹಣ್ಣಿನಿಂದ ಅಲಂಕರಿಸಿರುವುದು (ETV Bharat)

ಹಬ್ಬದ ಖರೀದಿಯಲ್ಲಿ ಮಗ್ನರಾದ ಜನತೆ: ಸಿಲಿಕಾನ್ ಸಿಟಿ ಜನರು ಗಣೇಶ ಹಬ್ಬ ಸ್ವಾಗತಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಈ ಹಿನ್ನೆಲೆ ಕೆ ಆರ್ ಮಾರ್ಕೆಟ್​ನಲ್ಲಿ ಖರೀದಿ ಜೋರಾಗಿತ್ತು. ಹೂವು, ಹಣ್ಣು, ಗರಿಕೆ, ಎಕ್ಕದ ಹಾರದ ಜೊತೆಗೆ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯಲ್ಲಿ ಗ್ರಾಹಕರು ಬ್ಯುಸಿಯಾಗಿದ್ದರು. ಇತ್ತ ಪ್ರತಿ ಬಾರಿಯಂತೆ ಈ ಸಲ ಕೂಡ ಹೂ, ಹಣ್ಣುಗಳ ಬೆಲೆ ಕೊಂಚ ಏರಿಕೆಯಾಗಿದೆ.

ಗಣಪನ ಮೂರ್ತಿಗಳ ಮಾರಾಟ ಬಲು ಜೋರು: ಒಂದೆಡೆ ಹಬ್ಬದ ಸಾಮಗ್ರಿಗಳ ಖರೀದಿಯಾದರೆ, ಮತ್ತೊಂದೆಡೆ ಮಾರ್ಕೆಟ್​ಗೆ ಎಂಟ್ರಿಕೊಟ್ಟಿದ್ದ ಬಣ್ಣ ಬಣ್ಣದ ಗಣಪ, ಪರಿಸರ ಸ್ನೇಹಿ ಗಣಪ, ಪೇಪರ್ ಗಣಪ, ಮುದ್ದುಮುಖದ ಗೌರಿ ವಿಗ್ರಹಗಳಿಗೂ ಬೇಡಿಕೆ ಕಂಡುಬಂತು. ಗೌರಿ ಗಣೇಶನ ಮೂರ್ತಿಗಳನ್ನು ಖರೀದಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಮುಂಬೈ, ಪುಣೆ ಸೇರಿದಂತೆ ಹಲವೆಡೆಯಿಂದ ಬಂದ ಗಣಪನ ಮೂರ್ತಿಗಳು ಮಾರಾಟವಾಗಿದ್ದಕ್ಕೆ ವ್ಯಾಪಾರಿಗಳು ಖುಷಿಪಟ್ಟಿದ್ದಾರೆ.

ಶ್ರೀ ಸತ್ಯಗಣಪತಿ ದೇವಸ್ಥಾನದಲ್ಲಿ ವೈಭವದ ಗಣೇಶೋತ್ಸವಕ್ಕೆ ಸಿದ್ದತೆ (ETV Bharat)

ಬಾಳೆಕಂದು- ಜೋಡಿಗೆ 60 ರೂ. ಮಾವಿನ ತೋರಣಕ್ಕೆ 20 ರೂ. ಗರಿಕೆ-ಕಟ್ಟಿಗೆ 30 ರೂ. ಬಿಲ್ವಪತ್ರೆಗೆ 20ರೂ. ಎಕ್ಕದಹಾರಕ್ಕೆ 50 ರಿಂದ 60 ರೂ. ಮಾರುಕಟ್ಟೆಯಲ್ಲಿ ದರ ನಿಗದಿಯಾಗಿದೆ.

ಮಾರುಕಟ್ಟೆಯಲ್ಲಿನ ಹಣ್ಣಿನ ದರ :

fruit price
ಮಾರುಕಟ್ಟೆಯಲ್ಲಿನ ಹಣ್ಣಿನ ದರ (ETV Bharat)

ಮಾರುಕಟ್ಟೆಯಲ್ಲಿ ಹೂವಿನ ದರ :

Flowers rate
ಹೂವಿನ ದರ (ETV Bharat)

ಇದನ್ನೂ ಓದಿ : ಎರಡು ಸಾವಿರ ಮಕ್ಕಳಿಂದ ಗಣೇಶ ಆಕೃತಿ: ಐನ್ನೂರು ಅಡಿ ಎತ್ತರದಿಂದ ಚಿತ್ರೀಕರಣ - Ganesh Idol

Last Updated : Sep 7, 2024, 7:34 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.