ದಾವಣಗೆರೆ: ಮನೆ ಬಳಿ ಕಸದ ವಾಹನಗಳು ಬರದೇ ಇದ್ದಾಗ ಜನಸಾಮಾನ್ಯರು ಪಾಲಿಕೆಯ ಹೆಲ್ಪ್ಲೈನ್ಗೆ ಕರೆ ಮಾಡಿ ಅಳಲು ತೋಡಿಕೊಳ್ಳುತ್ತಿದ್ದರು. ಇದೀಗ ಪಾಲಿಕೆ ಸಮಸ್ಯೆ ದೂರ ಮಾಡಲು ಸನ್ನದ್ಧವಾಗಿದೆ.
ಕಸದ ಗಾಡಿ ಎಲ್ಲಿದೆ, ಎಷ್ಟೊತ್ತಿಗೆ ಬರಲಿದೆ. ಕಸದ ಗಾಡಿ ಬರುತ್ತೋ ಇಲ್ವೋ ಎಂಬ ಎಲ್ಲ ಪ್ರಶ್ನೆಗಳಿಗೆ ಪಾಲಿಕೆ ಜಿಪಿಎಸ್ ಮೂಲಕ ಉತ್ತರ ಕೊಡಲಿದೆ. ಕಸದ ವಾಹನಗಳಿಗೆ ಜಿಪಿಎಸ್ ಅಳವಡಿಕೆ ಮಾಡಿದೆ. ಅಲ್ಲದೇ 'ಡಿವಿಜಿ ಹೆಲ್ಪ್ ಆ್ಯಪ್' ಸಹಾಯದಿಂದ ಕಸದ ವಾಹನ ಎಲ್ಲಿದೆ ಎಂದು ಜನಸಾಮಾನ್ಯರು ಅಂಗೈಯಲ್ಲಿ ಮಾಹಿತಿ ಕಲೆ ಹಾಕಬಹುದಾಗಿದೆ.
'ಡಿವಿಜಿ ಹೆಲ್ಪ್' ಆ್ಯಪ್ಗೆ ಮುಂದಿನ ದಿನಗಳಲ್ಲಿ ಚಾಲನೆ ದೊರೆಯಲಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ಮಾಹಿತಿ ನೀಡಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಒಟ್ಟು 45 ವಾರ್ಡ್ಗಳಿದ್ದು, ನಿತ್ಯ ಸರಾಸರಿ 170 ಟನ್ ತ್ಯಾಜ್ಯ ಸಂಗ್ರಹವಾಗುತ್ತಿದೆ. ಪಾಲಿಕೆಯಲ್ಲಿ 102 ಕಸ ಸಂಗ್ರಹ ವಾಹನಗಳು ಕಸ ಸಂಗ್ರಹ ಮಾಡುತ್ತಿವೆ. ಪಾಲಿಕೆಯಿಂದ ಎಲ್ಲ ವಾಹನಗಳಿಗೂ ಜಿಪಿಎಸ್ ಅಳವಡಿಕೆ ಮಾಡಲಾಗಿದೆ. ಸ್ಮಾರ್ಟ್ ಸಿಟಿಯಿಂದ ಆ್ಯಪ್ ಮೂಲಕ ಸಾಫ್ಟ್‌ವೇರ್ ಇಟೀಗ್ರೇಷನ್ ಮಾಡಿದ್ದೇವೆ ಎಂದು ಆಯುಕ್ತೆ ರೇಣುಕಾ ಮಾಹಿತಿ ನೀಡಿದ್ದಾರೆ.
ಪಾಲಿಕೆ ಕಮಿಷನರ್ ರೇಣುಕಾ ಮಾಹಿತಿ: ದಾವಣಗೆರೆ ಮಹಾನಗರ ಪಾಲಿಕೆ ಕಮಿಷನರ್ ರೇಣುಕಾ ಅವರು ಪ್ರತಿಕ್ರಿಯಿಸಿ "ಪಾಲಿಕೆ ವ್ಯಾಪ್ತಿಯಲ್ಲಿ 45 ವಾರ್ಡ್ಗಳಿವೆ. 102 ಕಸ ಸಂಗ್ರಹ ವಾಹನಗಳಿವೆ. ಜಿಪಿಎಸ್ ಅಳವಡಿಕೆ ಮಾಡಲಾಗಿದೆ. ಸ್ಮಾರ್ಟ್ ಸಿಟಿಯಿಂದ ಆ್ಯಪ್ ಮೂಲಕ ಸಾಫ್ಟ್‌ವೇರ್ ಇಟೀಗ್ರೇಷನ್ ಮಾಡಿದ್ದೇವೆ. ಮೊದಲು ಮನೆ ಹತ್ತಿರ ಕಸದ ವಾಹನ ಸರಿಯಾಗಿ ಬರುತ್ತಿಲ್ಲ ಎಂದು ಜನರಿಂದ ದೂರ ಬರುತ್ತಿದ್ದವು. ಅದನ್ನು ಪರಿಶೀಲನೆ ಮಾಡಿ ಇದನ್ನು ಜಾರಿಗೆ ತಂದಿದ್ದೇವೆ. ಜಿಪಿಎಸ್ ಮೂಲಕ ವಾಹನ ಕಸ ಸಂಗ್ರಹಿಸಲು ಹೋಗದೇ ಇದ್ದಾಗ, ಅನಗತ್ಯವಾಗಿ ಕಾಲ ಕಳೆಯುತ್ತಿದ್ದರೆ ತಕ್ಷಣ ಸಂದೇಶ ಜಿಪಿಎಸ್ ಮೂಲಕ ಹೆಲ್ತ್ ಇನ್ಸ್ಪೆಕ್ಟರ್ ಸಂದೇಶ ಹೋಗಲಿದೆ. ಅಲ್ಲದೇ ಸ್ಮಾರ್ಟ್‌ಸಿಟಿಯ ನಿಯಂತ್ರಣಾ ಕೇಂದ್ರಕ್ಕೂ ಮಾಹಿತಿ ರವಾನೆ ಆಗಲಿದೆ. ಅಧಿಕಾರಿಗಳು ಕಾರ್ಯಪ್ರವೃತರಾಗಿ ಕಸದ ವಾಹನದವರಿಗೆ ಎಚ್ಚರಿಸುವ ಕೆಲಸ ಮಾಡಲಿದ್ದಾರೆ. ಜಿಪಿಎಸ್ ಅಳವಡಿಕೆ ಆದ ಬಳಿಕ ಆಪ್ ಮೂಲಕ ಕಸ ವಾಹನ ಎಲ್ಲಿದೆ ಎಂದು ಜನರೇ ಅದನ್ನು ನೋಡಬಹದಾಗಿದ್ದು, ಮುಂದಿನ ದಿನಗಳಲ್ಲಿ ಸಂಸದರ ಕೈಯಿಂದ ಉದ್ಘಾಟನೆ ಆಗಲಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಆಟೋಗಳಿಗೆ ಮೀಟರ್ ಕಡ್ಡಾಯ, ಒಂದು ತಿಂಗಳು ಗಡುವು: ಯಾರು, ಏನಂದ್ರು?