ETV Bharat / state

ಏ.16ರಿಂದ ಮೂರು ದಿನ ಕವೀಂದ್ರ ತೀರ್ಥರ ಆರಾಧನೆ; ಉತ್ತರಾಧಿ, ಮಂತ್ರಾಲಯ ಮಠಗಳಿಗೆ ಸಮನಾಗಿ ಹಂಚಿಕೆ - ANEGONDI NAVA VRINDAVAN GADDE - ANEGONDI NAVA VRINDAVAN GADDE

ಆನೆಗೊಂದಿಯ ತುಂಗಭದ್ರಾ ತಟದಲ್ಲಿರುವ ನವವೃಂದಾವನ ಗಡ್ಡೆಯಲ್ಲಿ ಏ.16ರಿಂದ ಮೂರು ದಿನಗಳ ಕಾಲ ಕವೀಂದ್ರ ತೀರ್ಥರ ಆರಾಧನೆ ಜರುಗಲಿದೆ.

Anegundi nava vrindavan
ಆನೆಗೊಂದಿಯ ನವವೃಂದಾವನ ಗಡ್ಡೆ
author img

By ETV Bharat Karnataka Team

Published : Apr 14, 2024, 10:50 PM IST

ಗಂಗಾವತಿ (ಕೊಪ್ಪಳ): ಮಧ್ವಮತದ ಅನುಯಾಯಿಗಳ ಪ್ರಮುಖ ಶ್ರದ್ಧಾ ಕೇಂದ್ರ ಆಗಿರುವ ತಾಲೂಕಿನ ಆನೆಗೊಂದಿಯ ತುಂಗಭದ್ರಾ ತಟದಲ್ಲಿರುವ ನವವೃಂದಾವನ ಗಡ್ಡೆಯಲ್ಲಿ ಏ.16ರಿಂದ ಮೂರು ದಿನಗಳ ಕಾಲ ಕವೀಂದ್ರ ತೀರ್ಥರ ಆರಾಧನೆ ನಡೆಯಲಿದೆ.

ವೃಂದಾವನಗಡ್ಡೆಯಲ್ಲಿನ ಪೂಜೆ, ಧಾರ್ಮಿಕ ವಾರಸ್ವತದ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಾಧಿ ಮಠ ಮತ್ತು ಮಂತ್ರಾಲಯದ ಶ್ರೀರಾಘವೇಂದ್ರ ಮಠದ ಮಧ್ಯೆ ವಿವಾದ ಇರುವ ಕಾರಣಕ್ಕೆ ವ್ಯಾಜ್ಯ ವಿವಾದ ಸದ್ಯ ಧಾರವಾಡದ ಹೈಕೋರ್ಟ್​ ಅಂಗಳದಲ್ಲಿದೆ. ಹೀಗಾಗಿ ಏ.16ರಿಂದ 18ರ ವರೆಗೆ ಮೂರು ದಿನಗಳ ಕಾಲ ನಡೆಯುವ ಕವೀಂದ್ರ ತೀರ್ಥರ ಆರಾಧನಾ ಮಹೋತ್ಸವವನ್ನು ತಲಾ ಒಂದೂವರೆ ದಿನ ಅವಕಾಶ ಕಲ್ಪಿಸಿ ಉಭಯ ಮಠಗಳಿಗೆ ಹಂಚಿಕೆ ಮಾಡಿ ನ್ಯಾಯಾಲಯ ಆದೇಶ ಮಾಡಿದೆ.

ಯಾರಿಗೆ ಯಾವಾಗ: ಏ.16ರಿಂದ ಕವೀಂದ್ರ ತೀರ್ಥರ ಆರಾಧನೆ ಆರಂಭವಾಗಲಿದ್ದು, ಮೊದಲ ದಿನ ಅಂದರೆ 16ರಂದು ಪೂರ್ಣ ದಿನ ಮತ್ತು 17ರಂದು ಮಧ್ಯಾಹ್ನ 1ಗಂಟೆಯವರೆಗೆ ಉತ್ತರಾಧಿ ಮಠಕ್ಕೆ ಆರಾಧನೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಬಳಿಕ ಏ.17ರ ಮಧ್ಯಾಹ್ನ 1 ಗಂಟೆಯಿಂದ ಅರ್ಧ ದಿನ ಮತ್ತು ಮರುದಿನ ದಿನ ಅಂದರೆ 18ರಂದು ಪೂರ್ಣ ದಿನ ಆರಾಧನಾ ಮಹೋತ್ಸವ ಆಚರಣೆಯ ಅವಕಾಶವನ್ನು ಮಂತ್ರಾಲಯದ ಮಠಕ್ಕೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ವಾಗೀಶ ತೀರ್ಥರ ಆರಾಧನೆ: ಏ.26ರಿಂದ ಮೂರು ದಿನಗಳ ಕಾಲ ಇದೇ ನವವೃಂದಾವನ ಗಡ್ಡೆಯಲ್ಲಿ ವಿರಾಜಮಾನರಾಗಿರುವ ಮತ್ತೊಬ್ಬ ಮಧ್ವಮತದ ಅಗ್ರ ಯತಿವರೇಣ್ಯ ವಾಗೀಶತೀರ್ಥರ ಆರಾಧನೆ ನಡೆಯಲಿದೆ. ಮೊದಲ ಒಂದೂವರೆ ದಿನ ಅಂದರೆ ಏ.26ರಂದು ಪೂರ್ಣ ದಿನ, ಏ.27ರಂದು ಮಧ್ಯಾಹ್ನದವರೆಗೆ ಮಂತ್ರಾಲಯದ ಮಠಕ್ಕೆ ಅವಕಾಶ ಸಿಕ್ಕಿದೆ. ಬಳಿಕ ಏ.27ರ ಮಧ್ಯಾಹ್ನ ಒಂದು ಗಂಟೆಯಿಂದ ಏ.28ರ ಪೂರ್ಣ ದಿನ ಧಾರ್ಮಿಕ ಆಚರಣೆಗೆ ಉತ್ತರಾಧಿ ಮಠಕ್ಕೆ ಅವಕಾಶ ನೀಡಿ, ಧಾರವಾಡದ ಹೈಕೋರ್ಟ್​ ಆದೇಶ ನೀಡಿದೆ.

ಇದನ್ನೂಓದಿ:ಮಂಗಳೂರಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ: ಕೇಸರಿಮಯವಾದ ಕುಡ್ಲ, ಘೋಷಣೆಗಳ ಅಬ್ಬರ - PM Modi Road Show

ETV Bharat Logo

Copyright © 2025 Ushodaya Enterprises Pvt. Ltd., All Rights Reserved.