ETV Bharat / state

ಶಿವಮೊಗ್ಗದಲ್ಲಿ ಕುಡಿಯುವ ನೀರಿನ ಬಣ್ಣ ಬದಲು: ಗಾಬರಿ ಬೇಡ ಎಂದ ಅಧಿಕಾರಿಗಳು - K B PRASANNA KUMAR

ಕಳೆದ ಮೂರ್ನಾಲ್ಕು ದಿನಗಳಿಂದ ಶಿವಮೊಗ್ಗ ನಗರದಲ್ಲಿ ಮಣ್ಣುಮಿಶ್ರಿತ ಕುಡಿಯುವ ನೀರು ಸರಬರಾಜಾಗುತ್ತಿದ್ದು, ಜನರು ಆತಂಕಗೊಂಡಿದ್ದಾರೆ. ಮತ್ತೊಂದೆಡೆ ಅಧಿಕಾರಿಗಳು ನೀರನ್ನು ಕಾಯಿಸಿ, ಆರಿಸಿ ಕುಡಿಯುವಂತೆ ಮನವಿ ಮಾಡಿದ್ದಾರೆ.

ಬದಲಾಗಿರುವ ಕುಡಿಯುವ ನೀರಿನ ಬಣ್ಣ ಬದಲು
ಶಿವಮೊಗ್ಗ ನಗರಕ್ಕೆ ಸರಬರಾಜಾಗುತ್ತಿರುವ ಕುಡಿಯುವ ನೀರಿನ ಬಣ್ಣ ಬದಲು (ETV Bharat)
author img

By ETV Bharat Karnataka Team

Published : Oct 16, 2024, 4:08 PM IST

Updated : Oct 16, 2024, 4:31 PM IST

ಶಿವಮೊಗ್ಗ: ಕಳೆದ ಮೂರ್ನಾಲ್ಕು ದಿನಗಳಿಂದ ಶಿವಮೊಗ್ಗ ನಗರದಲ್ಲಿ ಮಣ್ಣುಮಿಶ್ರಿತ ಕುಡಿಯುವ ನೀರು ಸರಬರಾಜಾಗುತ್ತಿದ್ದು, ಕಲುಷಿತ ನೀರನ್ನು ಕುಡಿಯಲಾಗದೆ ಜನರು ಪರದಾಡುತ್ತಿದ್ದಾರೆ.

ಈ ಕುರಿತು ಇಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ಮಾತನಾಡಿ, "ಶಿವಮೊಗ್ಗ ನಗರದಲ್ಲಿ ಸರಬರಾಜಾಗುತ್ತಿರುವ ನೀರು ಕುಡಿಯಲು ಯೋಗ್ಯವಲ್ಲ. ಕುಡಿಯುವ ನೀರು ಕೆಂಪು ಬಣ್ಣಕ್ಕೆ ತಿರುಗಿದೆ. ಈ ನೀರನ್ನು ನೋಡಲೂ ಆಗುತ್ತಿಲ್ಲ, ಇನ್ನೂ ಕುಡಿಯಲು ಮನಸ್ಸು ಬರೋದಿಲ್ಲ. ಮಳೆಯಿಂದ ಮಣ್ಣು ಸೇರಿ ನೀರಿನ ಬಣ್ಣ ಬದಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಕಳೆದ ಒಂದು ವಾರದಿಂದ ನೀರು ಒಂದೇ ಬಣ್ಣದಲ್ಲಿದೆ. ಗಂಗಾ ಸ್ನಾನ, ತುಂಗಾ ಪಾನ ಎಂಬ ಮಾತನ್ನು ಅಧಿಕಾರಿಗಳು ಬದಲಾಯಿಸಲು ಹೊರಟಿದ್ದಾರೆ. ನಗರ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು" ಎಂದು ಒತ್ತಾಯಿಸಿದರು.

ಶಿವಮೊಗ್ಗದಲ್ಲಿ ಕುಡಿಯುವ ನೀರಿನ ಬಣ್ಣ ಬದಲು (ETV Bharat)

ಕುಡಿಯುವ ನೀರು ಸರಬರಾಜು ವಿಭಾಗದ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಮಿಥುನ್ ಕುಮಾರ್ 'ಈಟಿವಿ ಭಾರತ'ದ ಜೊತೆ ಮಾತನಾಡಿ, "ಗಾಜನೂರು ಡ್ಯಾಂನಿಂದ ನೀರನ್ನು ಶಿವಮೊಗ್ಗದ ಮಂಡ್ಲಿಯ ಕೃಷ್ಣರಾಜ ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಿ ಶಿವಮೊಗ್ಗ ನಗರಕ್ಕೆ ಸರಬರಾಜು ಮಾಡಲಾಗುತ್ತದೆ" ಎಂದರು.

"ಕಳೆದ ವಾರ ಭಾರಿ ಮಳೆಯಿಂದಾಗಿ ಗಾಜನೂರಿನಿಂದ ಮಣ್ಣುಮಿಶ್ರಿತ ನೀರು ಬಂದಿದೆ. ಈ ನೀರಿನ ಟರ್ಬಿಡಿಟಿ ಚೆಕ್ ಮಾಡಿದಾಗ 421 NTU ಬಂದಿತ್ತು, ಇದು ತುಂಬಾ ಜಾಸ್ತಿ. ಸಾಮಾನ್ಯವಾಗಿ ಟರ್ಬಿಡಿಟಿ ನೀರು 250 NTU ಇರುತ್ತದೆ. ಆದರೆ ಏಕಾಏಕಿ 408ರಿಂದ 420 NTU ಪ್ರಮಾಣ ಕಂಡುಬಂದಿದೆ. ಇದರಿಂದ ನಾಗರಿಕರಿಗೆ ನೀರನ್ನು ಕಾಯಿಸಿ, ಆರಿಸಿ ಕುಡಿಯುವಂತೆ ಮನವಿ ಮಾಡಲಾಗಿದೆ. ಈಗ ಅಣೆಕಟ್ಟೆಯಿಂದ ಶುದ್ಧ ನೀರು ಬರುತ್ತಿದೆ. ಸರಬರಾಜು ಆಗುತ್ತಿರುವ ಶುದ್ಧ ಕುಡಿಯುವ ನೀರಿಗೆ ಯಾವುದೇ ಕಲುಷಿತ ಹಾಗೂ ಚರಂಡಿ ನೀರು ಸೇರಿಲ್ಲ" ಎಂದು ಸ್ಪಷ್ಟಪಡಿಸಿದರು.

ಭಯಪಡುವ ಅವಶ್ಯಕತೆ ಇಲ್ಲ-ಅಧಿಕಾರಿಗಳು: "ಇದು ಮಣ್ಣುಮಿಶ್ರಿತವಾಗಿ ಬಂದಿರುವ ನೀರು. ಇದರಿಂದ ಸಾರ್ವಜನಿಕರು ಭಯಪಡುವ ಅವಶ್ಯಕತೆ ಇಲ್ಲ. ಕಳೆದ ಮೂರು ದಿನಗಳಿಂದ ಸರಬರಾಜಾಗಿರುವ ಮಣ್ಣುಮಿಶ್ರಿತ ನೀರಿನಿಂದ ನೀರಿನ ತೊಟ್ಟಿ ಹಾಗೂ ಟ್ಯಾಂಕ್​ಗಳಲ್ಲಿ ಮಣ್ಣು ಸಂಗ್ರಹವಾಗಿರುತ್ತದೆ. ಹೀಗಾಗಿ ಟ್ಯಾಂಕ್ ಹಾಗೂ ತೊಟ್ಟಿಗಳನ್ನು ಸ್ವಚ್ಛಗೊಳಿಸಿ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ: ಸಿಟಿ ಬಸ್ ಪಲ್ಟಿಯಾಗಿ 20 ಪ್ರಯಾಣಿಕರಿಗೆ ಗಾಯ

Last Updated : Oct 16, 2024, 4:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.