ETV Bharat / state

ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಅಂದರೆ ರಾಜ್ಯಕ್ಕೆ ಅವಮಾನ, ಮೊದಲು ಕನ್ನಡ ಕಲಿಸಿ: ಸಿ ಟಿ ರವಿ - Former Minister C T Ravi

ಶಿಕ್ಷಣ ಸಚಿವರಿಗೆ ಮೊದಲು ಕನ್ನಡ ಕಲಿಸಿ ಎಂದು ಮಾಜಿ ಸಚಿವ ಸಿ. ಟಿ ರವಿ ಅವರು ಹೇಳಿದ್ದಾರೆ.

Former Minister C T Ravi
ಮಾಜಿ ಸಚಿವ ಸಿ. ಟಿ ರವಿ (ETV Bharat)
author img

By ETV Bharat Karnataka Team

Published : May 22, 2024, 6:37 PM IST

ಶಿಕ್ಷಣ ಸಚಿವರಿಗೆ ಕನ್ನಡ ಕಲಿಸುವಂತೆ ಸಿ ಟಿ ರವಿ ಒತ್ತಾಯ (ETV Bharat)

ಬೆಂಗಳೂರು : ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆ. ಆದರೆ ನಮ್ಮ ಶಿಕ್ಷಣ ಸಚಿವರಿಗೆ ಕನ್ನಡ ಓದಲು ಬರಲ್ಲವಂತೆ. ಮಕ್ಕಳಿಗೆ ಗ್ರೇಸ್ ಮಾರ್ಕ್ಸ್ ಕೊಟ್ಟಂತೆ ಈ ಸರ್ಕಾರ ಬಹುಶಃ ಶಿಕ್ಷಣ ಸಚಿವರಿಗೆ ಗ್ರೇಸ್ ಮಾರ್ಕ್ಸ್ ಕೊಟ್ಟಿರಬಹುದು. ಮೊದಲು ನಿಮ್ಮ ಸಚಿವರಿಗೆ ಕನ್ನಡ ಕಲಿಸಿ. ಶಿಕ್ಷಣ ಸಚಿವರಿಗೆ ಕನ್ನಡ ಬರಲ್ಲ ಅಂದರೆ ರಾಜ್ಯಕ್ಕೆ ಅವಮಾನ ಎಂದು ಮಾಜಿ ಸಚಿವ ಸಿ. ಟಿ ರವಿ ಟೀಕಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ತುಘಲಕ್ ನೀತಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕತ್ತಲು ತುಂಬಿದೆ. ಎಸ್‌ಎಸ್‌ಎಲ್‌ಸಿಯಲ್ಲಿ ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದೀರಿ. ಪಾಸೇ ಆಗದವರನ್ನು ಶಿಕ್ಷಣ ಸಚಿವರಾಗಿ ಮಾಡಿದರೆ ಹೀಗೇ ಆಗೋದು. ಫೇಲಾದವರಿಗೆ ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸ್ ಮಾಡೋಣ ಅಂತ ಅವರಿಗೆ ಅನ್ನಿಸಿರುತ್ತದೆ ಎಂದರು.

ಗ್ರೇಸ್ ಮಾರ್ಕ್ಸ್ ಕೊಟ್ಟ ಕಾರಣ ಏನು?. ಸಿಇಟಿಯಲ್ಲಿ ಇಲ್ಲದ ಪ್ರಶ್ನೆಗಳನ್ನು ಕೊಟ್ಟಿರಿ. ಶಿಕ್ಷಣ ಸಚಿವರು ತಮಗೆ ಕನ್ನಡ ಓದಲು ಬರಲ್ಲ ಅಂತ ಒಪ್ಕೊಂಡಿದ್ದಾರೆ. ಕನ್ನಡ ನಮ್ಮ ಆಡಳಿತ ಭಾಷೆ. ಶಿಕ್ಷಣ ಸಚಿವರಿಗೆ ಕನ್ನಡ ಬರದಿರುವುದರ ಬಗ್ಗೆ ಕನ್ನಡಿಗರು ಆಲೋಚಿಸುವ ಅಗತ್ಯವಿದೆ. ಬಹುಶಃ ಶಿಕ್ಷಣ ಸಚಿವರಿಗೆ ಸರ್ಕಾರ ಗ್ರೇಸ್ ಮಾರ್ಕ್ಸ್ ಕೊಟ್ಟಿರಬಹುದು ಎಂದು ವ್ಯಂಗ್ಯವಾಡಿದರು.

ಕೋವಿಡ್ ಅವಧಿಯ ಅಕ್ರಮಗಳ ತನಿಖೆಗೆ ನ್ಯಾಯಾಂಗ ಸಮಿತಿ ರಚಿಸಿದರು. ಆ ವರದಿ ಬಂತಾ? ಜಲಜೀವನ್ ಮಿಷನ್​ನಡಿ ನಡೆದ ಅಕ್ರಮಗಳ ತನಿಖೆಗೂ ಸಮಿತಿ ರಚಿಸಿದಿರಿ. ವರದಿ ಬಂತಾ? ನಿವೃತ್ತ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಸಮಿತಿಯ ವರದಿ ಬಂತಾ? ಎಂದು ಪ್ರಶ್ನಿಸಿದರು.

ಬಿಬಿಎಂಪಿ ಗುತ್ತಿಗೆ ಕಮಿಷನ್, ಬಿಟ್ ಕಾಯಿನ್ ಪ್ರಕರಣಗಳ ತನಿಖೆಯ ವರದಿಗಳು ಬಂದ್ವಾ?. ಕಾಂಗ್ರೆಸ್​ ನಮ್ಮ ಸರ್ಕಾರದ ವಿರುದ್ಧ ಕಾಂಗ್ರೆಸ್ 40% ಆಪಾದನೆ ಮಾಡಿತ್ತು. ಆ ಮೂಲಕ ಬಿಜೆಪಿ ವಿರುದ್ಧ ಒಂದು ನರೇಷನ್ ಸೆಟ್ ಮಾಡಿದ್ದರು. ಈಗ ಕೆಲವು ಆರೋಪಗಳ ಕುರಿತು ಸಮಿತಿ ರಚಿಸಿದ್ದೀರಿ. ಒಂದು ವರ್ಷವಾದರೂ ವರದಿಗಳು ಬಂದಿಲ್ಲ. ನಿಮ್ಮದು ಒಂದು ಸರ್ಕಾರ, ನೂರಾರು ಗೊಂದಲ ಎಂದು ಟೀಕಿಸಿದರು.

ಸರ್ಕಾರ ಯಾವ ಹೊಸ ಯೋಜನೆಯನ್ನೂ ಈ ಒಂದು ವರ್ಷದಲ್ಲಿ ತಂದಿಲ್ಲ. ನೀವ್ಯಾರೂ ಅನಾನುಭವಿಗಳಲ್ಲ. ಒಂದು ವರ್ಷದಲ್ಲಿ ಯಾವ ದೂರದೃಷ್ಟಿಯ ಬುನಾದಿ ಹಾಕಿದ್ದೀರಿ ಹೇಳಿ? ಸರ್ಕಾರದ ಖಜಾನೆ ಖಾಲಿ ಮಾಡಿದ್ದೇ ಸರ್ಕಾರದ ಸಾಧನೆ ಆಗಲ್ಲ. ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸಂವೇದನೆ ರಹಿತವಾಗಿ ಸರ್ಕಾರ ನಡೆದುಕೊಂಡಿತು. ಬಾಂಬ್ ಬ್ಲಾಸ್ಟ್ ತೇಲಿಸಿ ಮಾತಾಡಿದರು. ಮತಾಂಧತೆ ಬೆಂಬಲಿಸಿದ್ದು ಇವರ ಸಾಧನೆ. ಮತಾಂಧತೆ ಬೆಂಬಲಿಸಿ ಮತಬ್ಯಾಂಕ್ ಗಟ್ಟಿ ಮಾಡಿಕೊಂಡಿದ್ದು ಇವರ ಸಾಧನೆ ಎಂದರು.

ದೇವರಾಜೇಗೌಡ ಆರೋಪ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ ರವಿ, ಈ ವಿಚಾರದಲ್ಲಿ ನಾವು ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಅಂತ ಬಯಸುತ್ತೇವೆ. ಅದಕ್ಕೇ ನಾವು ಸಿಬಿಐಗೆ ಕೊಡಿ ಅಂತ ಕೇಳುತ್ತಿದ್ದೇವೆ. ಹಾಲಿ ಸುಪ್ರೀಂಕೋರ್ಟ್ ಅಥವಾ ಹೈಕೋರ್ಟ್​ನ ಮಹಿಳಾ ನ್ಯಾಯಮೂರ್ತಿ ನೇತೃತ್ವದಲ್ಲಿ ಎಸ್ಐಟಿ ಮಾಡಲಿ. ಇದರಲ್ಲಿ ಯಾರು ಯಾರು ಪಾಪ ಮಾಡಿದ್ದಾರೋ ಗೊತ್ತಿಲ್ಲ. ಇದರಲ್ಲಿ ಡಿಸಿಎಂ ಪಾತ್ರ ಇದ್ದರೆ ಎಸ್ಐಟಿ ತನಿಖೆ ಮಾಡುತ್ತಾ? ಹಾಗಾಗಿ ಇದರಲ್ಲಿ ಹಲವು ಅನುಮಾನಗಳಿವೆ. ಸರ್ಕಾರದ ನಡೆ ಅನುಮಾನಾಸ್ಪದವಾಗಿದೆ. ತಪ್ಪು ಮಾಡಿದವರಿಗೂ ಶಿಕ್ಷೆ ಆಗಬೇಕು. ಸರ್ಕಾರ ಈ ಪ್ರಕರಣದಲ್ಲಿ ತನ್ನ ಬೇಳೆ ಬೇಯಿಸಿಕೊಳ್ತಿದೆ ಅನ್ನಿಸುತ್ತಿದೆ ಎಂದು ದೂರಿದರು.

ದೇವರಾಜೇಗೌಡರು ಅಮಿತ್ ಶಾಗೆ ಪ್ರಜ್ವಲ್ ಬಗ್ಗೆ ಪತ್ರದ ಮೂಲಕ ಮಾಹಿತಿ ಕೊಟ್ಟಿದ್ದಾರೋ ಇಲ್ಲವೋ ಅಂತ ತನಿಖೆ ಮಾಡಲಿ. ಪ್ರಕರಣ ಸಿಬಿಐಗೆ ಕೊಡಲಿ. ಅದೂ ತನಿಖೆ ಆಗಲಿದೆ. ಪ್ರಜ್ವಲ್ ಮೇಲಿನ ಆರೋಪಗಳು ಏಳೆಂಟು ತಿಂಗಳ ಹಿಂದಿನವು ಅಂತಾರೆ. ಪ್ರಜ್ವಲ್ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮೂಲಕ ಗೆದ್ದಂಥವರು. ಈಗ ನಾವು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದೇವೆ. ಅವರು ಅವರ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ ಎಂದರು.

ಫೋನ್ ಟ್ಯಾಪಿಂಗ್ ಆರೋಪ ತನಿಖೆಗೆ ಕೊಡಿ : ಫೋನ್ ಟ್ಯಾಪಿಂಗ್ ಕುರಿತು ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಈ ಆರೋಪವನ್ನು ಸಾರ್ವಜನಿಕವಾಗಿ ಮಾಡಿದ್ದಾರೆ. ಹಾಗಾಗಿ ಇದನ್ನ ಅಲ್ಲಗಳೆಯಲು ಆಗಲ್ಲ. ಗಂಭೀರವಾಗಿ ಸರ್ಕಾರ ಪರಿಗಣಿಸಲಿ. ಸಿದ್ದರಾಮಯ್ಯ ಎಲ್ಲವನ್ನೂ ತನಿಖೆಗೆ ಕೊಡ್ತಾರೆ. ಫೋನ್ ಟ್ಯಾಪಿಂಗ್ ಅನ್ನೂ ತನಿಖೆಗೆ ಕೊಡಲಿ ಎಂದು ಸಿ ಟಿ ರವಿ ಒತ್ತಾಯಿಸಿದರು.

ಹರೀಶ್ ಪೂಂಜಾ ಮೇಲೆ ಸುಳ್ಳು ಕೇಸ್ ದಾಖಲಿಸಿ ಎಫ್ಐಆರ್ ಹಾಕಿದ್ದಾರೆ. ಸರ್ಕಾರ ತನ್ನ ಪೌರುಷವನ್ನು ಕ್ರಿಮಿನಲ್​ಗಳ ಮೇಲೆ ತೋರಿಸದೆ ಶಾಸಕರ ಮೇಲೆ ತೋರಿಸ್ತಿರೋದು ಸರಿಯಲ್ಲ ಎಂದು ಟೀಕಿಸಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು ವರ್ಷ ಪೂರೈಸಿದೆ. ಈ ಸರ್ಕಾರಕ್ಕೆ ಹತ್ತಾರು ಪ್ರಶ್ನೆ ಕೇಳಲು ಬಯಸುತ್ತೇನೆ. ಸಾವಿರಾರು ಹತ್ಯೆ, ಆತ್ನಹತ್ಯೆಗಳೇ ನಿಮ್ಮ ವರ್ಷದ ಸಾಧನೆಯಾ?. ಎನ್​ಸಿ‌ಬಿಆರ್ ವರದಿ ಪ್ರಕಾರ, ಕಳೆದ ನಾಲ್ಕು ತಿಂಗಳಲ್ಲಿ 430 ಕೊಲೆ, 700+ ರೈತರ ಆತ್ಮಹತ್ಯೆ ಆಗಿವೆ. ಇಷ್ಟೆಲ್ಲ ಇದ್ದ ಮೇಲೆ ಈ ಸರ್ಕಾರ ಹತ್ಯೆ ಮತ್ತು ಆತ್ಮಹತ್ಯೆಯಲ್ಲಿ ಪ್ರತೀ ತಿಂಗಳು ಶತಕದ ಗಡಿ ದಾಟಿದಂತಲ್ಲವೇ? ಎಂದು ರಾಜ್ಯ ಸರ್ಕಾರಕ್ಕೆ ಸಿ ರವಿ ಪ್ರಶ್ನಿಸಿದರು.

ಎಂಎಲ್​ಸಿ ಆಗೋ ಬಗ್ಗೆ ಸಿ ಟಿ ರವಿ ಹೇಳಿದ್ದೇನು: ಪರಿಷತ್​ಗೆ ನಿಮ್ಮ ಹೆಸರು ಕೇಳಿ ಬರ್ತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿ ಟಿ ರವಿ, ಕಾಲಾಯಾ ತಸ್ಮೈ ನಮ: ಎಲ್ಲವನ್ನೂ ಕಾಲ ನಿರ್ಣಯಿಸುತ್ತದೆ ಎಂದರು.

ಇದನ್ನೂ ಓದಿ : ವಿದ್ಯಾ ಇಲಾಖೆಯನ್ನು ವಿಧೇಯತೆ ಗೊತ್ತಿಲ್ಲದವರ ಕೈಗೆ ಒಪ್ಪಿಸಿದ್ದಕ್ಕೆ ಪಶ್ಚಾತಾಪ ಪಡುವಂತಾಗಿದೆ: ಬಿ.ವೈ.ವಿಜಯೇಂದ್ರ - BY Vijayendra Post

ETV Bharat Logo

Copyright © 2024 Ushodaya Enterprises Pvt. Ltd., All Rights Reserved.