ETV Bharat / state

ಆಹಾರ ಅಸುರಕ್ಷತೆ: ನಾಲ್ಕು ಆಹಾರ ಸಂಸ್ಥೆ ಮಳಿಗೆಗಳ ಲೈಸೆನ್ಸ್ ಅಮಾನತು - Suspension of licenses - SUSPENSION OF LICENSES

ಆಹಾರ ಸುರಕ್ಷತೆಯ ಬಗ್ಗೆ ರೆಸ್ಟೋರೆಂಟ್​, ಆಹಾರ ತಯಾರಿಕಾ ಕೇಂದ್ರಗಳಲ್ಲಿ ತಪಾಸಣೆ ಕೈಗೊಂಡಿರುವ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಬೆಂಗಳೂರಿನ ಕೆಎಫ್​ಸಿಯ ಒಂದು ಮಳಿಗೆ ಸೇರಿದಂತೆ ನಾಲ್ಕು ಆಹಾರ ಸಂಸ್ಥೆಯ ಲೈಸೆನ್ಸ್ ಅಮಾನತು ಮಾಡಿದ್ದಾರೆ.

Minister Dinesh Gundurao
ಸಚಿವ ದಿನೇಶ್​ ಗುಂಡೂರಾವ್​ (ETV Bharat)
author img

By ETV Bharat Karnataka Team

Published : Aug 30, 2024, 1:04 PM IST

Updated : Aug 30, 2024, 1:27 PM IST

ಮಂಗಳೂರು: "ಆಹಾರ ಅಸುರಕ್ಷತೆ ಬಗ್ಗೆ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈಗಾಗಲೇ ಬೆಂಗಳೂರಿನ ಕೆಎಫ್​ಸಿಯ ಒಂದು ಮಳಿಗೆ ಸೇರಿದಂತೆ ನಾಲ್ಕು ಆಹಾರ ಸಂಸ್ಥೆಯ ಲೈಸೆನ್ಸ್ ಅಮಾನತು ಪಡಿಸಲಾಗಿದೆ" ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಆರೋಗ್ಯ ಸಚಿವ ದಿನೇಶ್ ಗುಂಡುರಾವ್ (ETV Bharat)

ಮಂಗಳೂರಿನಲ್ಲಿ ಮಾತನಾಡಿದ ಅವರು "ಆಹಾರ ಸುರಕ್ಷಿತವಾಗಿ ಜನರಿಗೆ ಸಿಗಬೇಕು. ಆಹಾರದ ತಯಾರಿಕೆ ಹೇಗಾಗುತ್ತದೆ ಎಂಬುದನ್ನು ಅಧಿಕಾರಿಗಳು ಪತ್ತೆ ಮಾಡಬೇಕು. ಅದಕ್ಕಾಗಿ ರೆಸ್ಟೋರೆಂಟ್, ಆಹಾರ ತಯಾರಿಕಾ ಕೇಂದ್ರದಲ್ಲಿ ತಪಾಸಣೆ ನಡೆಸಬೇಕು. ಪ್ರತಿ ತಿಂಗಳು ವಿಶೇಷ ಡ್ರೈವ್ ಮಾಡಬೇಕು ಎಂದು ಸೂಚಿಸಲಾಗಿದೆ" ಎಂದರು.

ಮಾಂಸದಂಗಡಿ, ಆಹಾರದ ಉದ್ದಿಮೆಗಳನ್ನು ತಪಾಸಣೆ ನಡೆಸಬೇಕು. ಪ್ರತಿ ತಿಂಗಳು ಈ ಬಗ್ಗೆ ರಿಪೋರ್ಟ್ ಮಾಡಿ ಮಾಧ್ಯಮಕ್ಕೆ ಬಿಡುಗಡೆ ಮಾಡಬೇಕು. ಯಾವ ರೀತಿ ಕಲಬೆರಕೆ ಮಾಡುತ್ತಾರೆ. ಅಸುರಕ್ಷಿತ ಆಹಾರ ಕೊಡುತ್ತಿದ್ದಾರೆ ಎಂಬುದು ಜನರಿಗೆ ತಿಳಿಯಬೇಕು" ಎಂದರು.

"ಆಗಸ್ಟ್​ ತಿಂಗಳಲ್ಲಿ ಕೇಕ್, ಪೋವ ಬಗ್ಗೆ ತಪಾಸಣೆ ನಡೆಸಲಾಗಿತ್ತು. ಮುಂದಿನ ತಿಂಗಳು ಬೇರೆ ತಪಾಸಣೆ ನಡೆಯಲಿದೆ. ಈ ಮೊದಲು ಕಬಾಬ್, ಗೋಬಿ ಮಂಚೂರಿಗೆ ಕಲರ್ ಹಾಕಿರುವುದು ತಿಳಿದು ಬಂದಿತ್ತು. ತಯಾರು ಮಾಡುವವರಿಗೆ ಇದು ತಪ್ಪು ಎಂದು ಗೊತ್ತಿರುವುದಿಲ್ಲ. ಮಾರಾಟ ಬೇಗ ಆಗಲು ಇದೆಲ್ಲ ಮಾಡುತ್ತಿರುತ್ತಾರೆ. ಈ ಬಗ್ಗೆ ಅವರಿಗೂ ಮಾಹಿತಿ ಕೊಡುತ್ತೇವೆ" ಎಂದರು.

ಇದನ್ನೂ ಓದಿ: ರಾಜ್ಯಾದ್ಯಂತ ಮೀನು, ಚಿಕನ್‌ ಕಬಾಬ್​ಗೆ ಕೃತಕ ಬಣ್ಣ ಬಳಕೆ ನಿಷೇಧ: ಉಲ್ಲಂಘಿಸಿದರೆ ಜೈಲು ಶಿಕ್ಷೆ, ಭಾರೀ ದಂಡ! - ARTIFICIAL COLOURS BAN

Last Updated : Aug 30, 2024, 1:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.