ETV Bharat / state

ದೆಹಲಿ ಏರ್​ಪೋರ್ಟ್​ ಮೇಲ್ಛಾವಣಿ ಕುಸಿತ: ಬೆಂಗಳೂರು-ದೆಹಲಿ 18 ವಿಮಾನಗಳ ಹಾರಾಟ ರದ್ದು - Bengaluru Delhi Flights Cancelled

ದೆಹಲಿ ಏರ್​ಪೋರ್ಟ್​ನ ಮೇಲ್ಛಾವಣಿ ಕುಸಿದು ಬಿದ್ದಿದ್ದು, ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ.

delhi-airport-roof-collapse
ಕುಸಿದು ಬಿದ್ದ ದೆಹಲಿ ಏರ್​ಪೋರ್ಟ್​ ಮೇಲ್ಛಾವಣಿ (ETV Bharat)
author img

By ETV Bharat Karnataka Team

Published : Jun 28, 2024, 7:43 PM IST

Updated : Jun 28, 2024, 7:54 PM IST

ಬೆಂಗಳೂರು/ದೆಹಲಿ: ಭಾರೀ ಮಳೆಯಿಂದಾಗಿ ದೆಹಲಿ ಏರ್​ಪೋರ್ಟ್​ನ ಮೇಲ್ಛಾವಣಿ ಕುಸಿದು ಬಿದ್ದಿದ್ದು, ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಿದೆ. ಬೆಂಗಳೂರು-ದೆಹಲಿ ಮಾರ್ಗದ 18 ವಿಮಾನಗಳ ಹಾರಾಟ ರದ್ದಾಗಿದೆ.

ದೆಹಲಿಯಲ್ಲಿ ಮುಂಗಾರು ಮಳೆ ಆರಂಭವಾಗಿದೆ. ವರ್ಷದ ಮೊದಲ ಮಳೆಯ ಆರ್ಭಟ ಜೋರಾಗಿಯೇ ಇದೆ. ದೆಹಲಿ ಏರ್​ಪೋರ್ಟ್​ನ ಟರ್ಮಿನಲ್-1ರ ಮೇಲ್ಛಾವಣಿ ಕುಸಿದು ಬಿದ್ದಿದೆ. ಮೇಲ್ಛಾವಣಿ ಕುಸಿದ ಪರಿಣಾಮ, ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರೆ, 6 ಮಂದಿ ಗಾಯಗೊಂಡಿದ್ದಾರೆ.

ಹೀಗಾಗಿ, ಟರ್ಮಿನಲ್ -1ರಿಂದ ವಿಮಾನ ಹಾರಾಟ ರದ್ದುಗೊಳಿಸಲಾಗಿದೆ. ಇದರ ಹೊಡೆತ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೂ ತಟ್ಟಿದೆ.

ದೆಹಲಿ ಏರ್​ಪೋರ್ಟ್​ನ ಟರ್ಮಿನಲ್-1ರಿಂದ ಬೆಂಗಳೂರಿಗೆ ಬರಬೇಕಿದ್ದ ಇಂಡಿಗೊ ವಿಮಾನಯಾನ ಸಂಸ್ಥೆಯ 9 ವಿಮಾನಗಳ ಹಾರಾಟ ರದ್ದಾಗಿದೆ. ಹಾಗೆಯೇ ಬೆಂಗಳೂರಿನಿಂದ ದೆಹಲಿಯ ಟರ್ಮಿನಲ್-1ಕ್ಕೆ ಹೊರಟಿದ್ದ ಇಂಡಿಗೊ ಸಂಸ್ಥೆಯ 9 ವಿಮಾನಗಳ ಹಾರಾಟ ಸ್ಥಗಿತಗೊಂಡಿರುವ ಬಗ್ಗೆ ಇಂಡಿಗೊ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಯಾಣಿಕರ ಸಹಾಯಕ್ಕಾಗಿ ಸಹಾಯವಾಣಿ ತೆರೆಯಲಾಗಿದೆ.

ಇದನ್ನೂ ಓದಿ: ಲಗೇಜ್​ ಬಿಟ್ಟು ಬೆಳಗಾವಿಗೆ ಬಂದಿಳಿದ ವಿಮಾನ: ಪ್ರಯಾಣಿಕರ ಪರದಾಟ, ಪ್ರತಿಭಟನೆ - flight left passenger bags

Last Updated : Jun 28, 2024, 7:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.