ETV Bharat / state

ದಸರಾ ಫಲಪುಷ್ಪ ಪ್ರದರ್ಶನ: ಗಮನ ಸೆಳೆಯುತ್ತಿದೆ ಪಂಚ ಗ್ಯಾರಂಟಿ - DASARA FLOWER SHOW

ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಸರ್ಕಾರದ ಪಂಚ ಗ್ಯಾರಂಟಿಗಳು ಗಮನ ಸೆಳೆಯುತ್ತಿವೆ.

dasara-flower-show
ದಸರಾ ಫಲಪುಷ್ಪ ಪ್ರದರ್ಶನ (ETV Bharat)
author img

By ETV Bharat Karnataka Team

Published : Oct 8, 2024, 8:36 PM IST

ಮೈಸೂರು: ನಾಡಹಬ್ಬ ಮೈಸೂರು ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಈ ಬಾರಿ ಸರ್ಕಾರದ ಪಂಚ ಗ್ಯಾರಂಟಿಗಳು, ಒಡೆಯರ್‌ ಕೊಡುಗೆಗಳು, ಚಂದ್ರಯಾನ, ವಿ‍ಶ್ವಕಪ್‌, ನೂತನ ಸಂಸತ್‌ ಭವನ, ಅನುಭವ ಮಂಟಪ ಹಾಗೂ ಚಾಮುಂಡೇಶ್ವರಿ ದೇವಾಲಯಗಳ ಮಾದರಿಗಳು ಗಮನಸೆಳೆಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ತೋಟಗಾರಿಕಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಮೈಸೂರು ಮತ್ತು ಜಿಲ್ಲಾ ತೋಟಗಾರಿಕೆ ಸಂಘದ ವತಿಯಿಂದ ನಗರದ ಕುಪ್ಪಣ್ಣ ಉದ್ಯಾನವನದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.

ದಸರಾ ಫಲಪುಷ್ಪ ಪ್ರದರ್ಶನದಲ್ಲಿ ಗಮನಸೆಳೆಯುತ್ತಿರುವ ಪಂಚ ಗ್ಯಾರಂಟಿಗಳು (ETV Bharat)

ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಯುವನಿಧಿ, ಗೃಹಜ್ಯೋತಿ, ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಗಳ ವಿಷಯಾಧಾರಿತವಾದ ಪುಷ್ಪ ಕಲಾಕೃತಿಗಳು, ಹೂವುಗಳಿಂದ ಅಲಂಕರಿಸಿ ಪ್ರವಾಸಿಗರಿಗೆ ಅರಿವು ಮೂಡಿಸುವ ಕಾರ್ಯ ನಡೆದಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಮೈಸೂರಿನಲ್ಲಾದಂತಹ ಭದ್ರಾವತಿ ಕಾರ್ಖಾನೆ, ಶಿವನಸಮುದ್ರ ವಿದ್ಯುತ್ ಉತ್ಪಾದನೆ, ಮೈಸೂರು ವಿಶ್ವವಿದ್ಯಾಲಯ ಹಾಗೂ ಮೈಸೂರು ಆಕಾಶವಾಣಿ ಸೇರಿದಂತೆ ಅಭಿವೃದ್ಧಿ ಸಾಧನೆಗಳ ಕುರಿತ ಪುಷ್ಪಗಳ ಮಧ್ಯೆ ಇದ್ದಂತಹ ಚಿತ್ರ ಪ್ರದರ್ಶನವೂ ಎಲ್ಲರ ಗಮನ ಸೆಳೆಯುತ್ತಿದೆ.

ಕರ್ನಾಟಕ ಸಂಭ್ರಮ 50: ಕುಪ್ಪಣ್ಣ ಪಾರ್ಕ್​ನ ಮುಖ್ಯದ್ವಾರದಲ್ಲಿ ಇತ್ತೀಚಿಗೆ ಸಂಭ್ರಮಿಸಿದ ಕನ್ನಡಿಗರ ಹೆಮ್ಮೆಯ ಕರ್ನಾಟಕ ಸಂಭ್ರಮ 50 ಕಾರ್ಯಕ್ರಮದ ಅಂಗವಾಗಿ ರಾಜ್ಯ ಸರ್ಕಾರವು ಕರ್ನಾಟಕದ ಭೂಪಟವನ್ನು ವಿವಿಧ ಬಗೆಯ ಹೂವುಗಳಿಂದ ರಚಿಸಿದೆ. ಒಳಗೆ ಬರುವ ಎಲ್ಲರಿಗೂ ಸ್ವಾಗತ ಕೋರುವಂತೆ ಮಾಡಲಾಗಿದೆ. ಹಳದಿ ಮತ್ತು ಕೆಂಪು ಬಣ್ಣದ ಗುಲಾಬಿ ಹೂವಿನಿಂದ ನಿರ್ಮಿಸಲಾದ ಕರ್ನಾಟಕ ಭೂಪಟ, ಎಡ ಬಲದಲ್ಲಿ ಆನೆಯ ಮಾದರಿ, ಅಲ್ಲದೆ ಹೂವಿನಿಂದ ಅರಳಿದ ಟೀಂ ಇಂಡಿಯಾ ವಿಶ್ವಕಪ್ ಮಾದರಿಯ ಹೂವಿನ ಕಲಾಕೃತಿ ಇಲ್ಲಿವೆ.

ಹುಲಿಯನ್ನೇರಿದ ಮಹದೇಶ್ವರ ಸ್ವಾಮಿಯ ಪ್ರತಿಮೆ: ಕರ್ನಾಟಕದ ಅತೀ ದೊಡ್ಡ ದೇವಾಲಯವಾದ ನಂಜನಗೂಡಿನ ಶ್ರೀಕಂಠೇಶ್ವರ ಹಾಗೂ ಶ್ರೀ ಚಾಮುಂಡೇಶ್ವರಿ ದೇವಾಲಯವನ್ನು ವಿವಿಧ ಬಣ್ಣದ ಹೂವುಗಳಿಂದ ಸೃಷ್ಟಿಸಲಾಗಿದೆ. ಹಾಗೆಯೇ ಹುಲಿಯನ್ನೇರಿದ ಮಹದೇಶ್ವರ ಸ್ವಾಮಿ ಪ್ರತಿಮೆಯನ್ನು ಭಕ್ತರಿಗೆ ದರ್ಶನ ನೀಡುವಂತೆ ಮಾಡಲಾಗಿದೆ.

ಆಫ್ರಿಕನ್ ಮಾರಿಗೋಲ್ಡ್, ಹಳದಿ, ಆರ್ಕಿಡ್​ಗಳು, ಸೆಲೋಸಿಯಾ, ಕಾರ್ನೇಷನ್, ಆಂಥೂರಿಯಂ, ಗರ್ಬೆರಾ, ರೋಸಸ್, ಕಾಸ್ಮೊಸ್, ಬ್ಲೂಡೈಸಿ, ಪಿಂಗ್ ಪಾಂಗ್, ಪೆಟುನಿಯಾ, ಟೊರೆನಿಯಾ, ಡ್ರಾಕೇನಾ, ಟಿಥೋನಿಯಾ, ಜಿನ್ನಿಯಾ ಹೀಗೆ ನಾನಾ ಬಗೆಯ ಹೂವುಗಳನ್ನು ಇದಕ್ಕಾಗಿ ಬಳಸಲಾಗಿದೆ.

ಇದನ್ನೂ ಓದಿ: ದಸರಾ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ - Mysuru Dasara Flower Show

ETV Bharat Logo

Copyright © 2024 Ushodaya Enterprises Pvt. Ltd., All Rights Reserved.