ETV Bharat / state

ಬೆಂಗಳೂರು: ಶಾಸಗಿ ಶಾಲೆಗೆ ಹುಸಿ ಬಾಂಬ್ ಸಂದೇಶ ಕಳುಹಿಸಿದ ದುಷ್ಕರ್ಮಿಗಳ ವಿರುದ್ಧ ಎಫ್ಐಆರ್ - fake bomb message

ಬೆಂಗಳೂರಲ್ಲಿ ಮತ್ತೊಂದು ಶಾಲೆಗೆ ಹುಸಿಬಾಂಬ್​ ಸಂದೇಶ ಬಂದಿದ್ದು, ಪೋಷಕರ ನಿದ್ದೆಗೆಡಿಸಿದೆ. ಈ ಹಿಂದೆಯೂ ಇಂತಹ ಹುಸಿ ಸಂದೇಶಗಳು ಸದ್ದು ಮಾಡಿದ್ದವು. ಇಂದು ದಿ ನ್ಯೂ ಇಂಡಿಯನ್ ಪಬ್ಲಿಕ್ ಶಾಲೆಗೆ ಬಾಂಬ್​ ಬೆದರಿಕೆ ಸಂದೇಶ ಕಳುಹಿಸಿದ್ದ ಆರೋಪಿಗಳ ವಿರುದ್ಧ ಗೋವಿಂದಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Bengaluru
ಬೆಂಗಳೂರು (ETV Bharat)
author img

By ETV Bharat Karnataka Team

Published : Aug 29, 2024, 7:13 PM IST

ಬೆಂಗಳೂರು : ಖಾಸಗಿ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ ಹಿನ್ನೆಲೆ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿ ಇಂಚಿಂಚೂ ತಪಾಸಣೆ ನಡೆಸಿ ಹುಸಿ ಬಾಂಬ್ ಸಂದೇಶವೆಂದು ಖಚಿತವಾಗುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು.

ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಾನ್ಯತಾ ಟೆಕ್​ಪಾರ್ಕ್ ಮುಂಭಾಗದಲ್ಲಿರುವ ದಿ ನ್ಯೂ ಇಂಡಿಯನ್ ಪಬ್ಲಿಕ್ ಶಾಲೆಗೆ ದುಷ್ಕರ್ಮಿಗಳು ಹುಸಿ ಬಾಂಬ್ ಸಂದೇಶ ಕಳುಹಿಸಿದ್ದರು.

ಇಂದು ಮುಂಜಾನೆ 6.57ರ ಸುಮಾರಿಗೆ ಇ-ಮೇಲ್ ಮಾಡಿರುವ ಆಗಂತುಕರು ಶಾಲೆ ಆವರಣದಲ್ಲಿ ಐದು ಪೈಪ್​ಲೈನ್​ಗಳಲ್ಲಿ ಬಾಂಬ್ ಇಡಲಾಗಿದೆ. ಮಧ್ಯಾಹ್ನ 1.30ಕ್ಕೆ ಬಾಂಬ್ ಸ್ಫೋಟಗೊಳ್ಳಲಿದೆ ಎಂದು ಫಾದರ್ ಕೊಡಾಚಿ ಹೆಸರಿನ coldghost456@gmail.com ಹಾಗೂ askbirnorth@tipsglobal.net ಎಂಬ ಐಡಿಯಿಂದ ಬೆದರಿಕೆ ಕಳುಹಿಸಿದ್ದರು. ಆತಂಕಗೊಂಡ ಶಾಲಾ ಆಡಳಿತ ಮಂಡಳಿಯು ಕೂಡಲೇ ಮಕ್ಕಳಿಗೆ ರಜೆ ನೀಡಿ ಪೊಲೀಸರಿಗೆ ಮಾಹಿತಿ ನೀಡಿತ್ತು.

ವಿಷಯ ತಿಳಿದು ಪೊಲೀಸರೊಂದಿಗೆ ಸ್ಥಳಕ್ಕೆ ಬಂದ ಬಾಂಬ್ ಸ್ಕ್ವಾಡ್​ ಪರಿಶೀಲಿಸಿದಾಗ ಹುಸಿ ಬಾಂಬ್ ಸಂದೇಶ ಎಂಬುದು ತಿಳಿದುಬಂದಿದೆ. ಶಾಲಾ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ದುಷ್ಕರ್ಮಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಪಗಾರ ಕೊಡದಿದ್ದಕ್ಕೆ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ: ರೆಸ್ಟೋರೆಂಟ್ ಮಾಜಿ ನೌಕರ ವಶಕ್ಕೆ - Hoax Bomb Call

ETV Bharat Logo

Copyright © 2024 Ushodaya Enterprises Pvt. Ltd., All Rights Reserved.