ETV Bharat / state

'ಹಣಕ್ಕಾಗಿ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ': ಯುವಕನ ವಿರುದ್ಧ ಎಫ್​ಐಆರ್ - Suraj Revanna - SURAJ REVANNA

ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಯುವಕನ ವಿರುದ್ಧ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jun 21, 2024, 9:54 PM IST

ಹಾಸನ: ಹಣ ನೀಡದಿದ್ದರೆ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಸುಳ್ಳು ಆರೋಪ ಮಾಡುವುದಾಗಿ ಯುವಕನೋರ್ವ ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎಂದು ಸೂರಜ್ ರೇವಣ್ಣ ಅವರ ಆಪ್ತ ಶಿವಕುಮಾರ್ ಎಂಬವರು ದೂರು ದಾಖಲಿಸಿದ್ದಾರೆ. ಈ ದೂರು ಆಧರಿಸಿ ಅರಕಲಗೂಡು ತಾಲೂಕಿನ 30 ವರ್ಷದ ಚೇತನ್ ಮತ್ತು ಅವರ ಭಾವನ ವಿರುದ್ಧ ಹೊಳೆನರಸೀಪುರ ಠಾಣೆಯಲ್ಲಿ ಇಂದು ಎಫ್​ಐಆರ್ ದಾಖಲಾಗಿದೆ.

ದೂರಿನಲ್ಲೇನಿದೆ?: "ಕೆಲಸ ಕೇಳುವ ನೆಪದಲ್ಲಿ ಯುವಕ ಚೇತನ್ ಎಂಬಾತ ಸೂರಜ್ ರೇವಣ್ಣ ಅವರನ್ನು ಜೂನ್ 16ರಂದು ಗನ್ನಿಕಡದ ತೋಟದ ಮನೆಯಲ್ಲಿ ಭೇಟಿಯಾಗಿದ್ದ. ಆದರೆ ಸದ್ಯ ಕೆಲಸ ಇಲ್ಲ, ಮುಂದೆ ಕೊಡಿಸುವುದಾಗಿ ಸೂರಜ್ ಹೇಳಿ ಕಳುಹಿಸಿದ್ದರು. ಆ ಬಳಿಕ ನನಗೆ ಚೇತನ್ ಕರೆ ಮಾಡಿ, ನಿಮ್ಮ ಬಾಸ್ (ಸೂರಜ್) ಹತ್ತಿರ 5 ಕೋಟಿ ರೂ ಹಣ ಕೊಡಿಸು. ಇಲ್ಲದಿದ್ದರೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ ಎಂದು ಸುಳ್ಳು ಹೇಳಿ ಸೂರಜ್ ಅವರ ಮಾನ ತೆಗೆಯುವುದಾಗಿ ಬೆದರಿಕೆ ಹಾಕಿದ್ದಾನೆ. ಹಣಕ್ಕೆ ಬೇಡಿಕೆಯಿಟ್ಟು ಹಲವು ಬಾರಿ ವಾಟ್ಸ್‌ಆ್ಯಪ್ ಕರೆ ಮಾಡಿದ್ದಲ್ಲದೇ, ಅವರ ಭಾವನಿಂದಲೂ ಕರೆ ಮಾಡಿಸಿ ಬೆದರಿಕೆ ಹಾಕಿದ್ದಾನೆ. 5 ಕೋಟಿ ಅಲ್ಲದಿದ್ದರೂ 2 ಕೋಟಿ ಕೊಡಿಸು. ಇಲ್ಲದಿದ್ದರೆ ಬೆಂಗಳೂರಿಗೆ ಹೋಗಿ ಪ್ರೆಸ್​ ಮೀಟ್ ಮಾಡಿ ದೊಡ್ಡವರ ಮನೆಯ ಮರ್ಯಾದೆ ಕಳೆಯುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದ" ಎಂದು ಆಪ್ತ ಶಿವಕುಮಾರ್ ದೂರಿನಲ್ಲಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಪ್ರಕರಣ: ಹಾಸನದ ಸಂಸದರ ಮನೆಯಲ್ಲಿ 4 ಗಂಟೆ ಸ್ಥಳ ಮಹಜರು - Prajwal Revanna Sexual Assault Case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.