ETV Bharat / state

ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ನಿಂದ ಎರಡು ಬಾರಿ ₹2.32 ಕೋಟಿ ಸಾಲ: ಐವರ ವಿರುದ್ಧ ಎಫ್ಐಆರ್ - Fake Document Case

ನಿವೇಶನ ಖರೀದಿಗಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ 2.32 ಕೋಟಿ ರೂ. ಸಾಲ ಪಡೆದಿದ್ದ ಆರೋಪದಡಿ ಐವರ ವಿರುದ್ಧ ಸಿಸಿಬಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಕೇಂದ್ರ ಅಪರಾಧ ವಿಭಾಗ
ಕೇಂದ್ರ ಅಪರಾಧ ವಿಭಾಗದ ಕಚೇರಿ (ETV Bharat)
author img

By ETV Bharat Karnataka Team

Published : Jul 8, 2024, 4:02 PM IST

ಬೆಂಗಳೂರು: ನಕಲಿ ದಾಖಲೆಗಳನ್ನು ಸೃಷ್ಟಿಸಿ, ನಿವೇಶನ ಖರೀದಿಗಾಗಿ ಬರೋಬ್ಬರಿ 2.32 ಕೋಟಿ ರೂಪಾಯಿ ಸಾಲ ಪಡೆದಿದ್ದ ಆರೋಪದಡಿ ಐವರ ವಿರುದ್ಧ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ಕೇಂದ್ರ ಶಾಖೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ನೀಡಿರುವ ದೂರಿನ ಅನ್ವಯ ಶಿವಣ್ಣ, ಅಚ್ಚುಕುಟ್ಟನ್.ಪಿ, ಮೊಹಮ್ಮದ್ ಫೈಯಾಜ್, ವೀರಭದ್ರಪ್ಪ ಹಾಗೂ ಸೈಯದ್ ಹಾಶೀಂ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ.

ಬೆಂಗಳೂರು ಉತ್ತರ ತಾಲೂಕಿನ ಮಲ್ಲತ್ತಹಳ್ಳಿ ಗ್ರಾಮದಲ್ಲಿರುವ ಆಸ್ತಿಯನ್ನ ಶಿವಣ್ಣ ಎಂಬುವವರಿಂದ ಖರೀದಿಸಲು ಸಾಲಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಅಚ್ಚುಕುಟ್ಟನ್ ಅರ್ಜಿ ಸಲ್ಲಿಸಿದ್ದರು. ಅದರನ್ವಯ 2023ರ ಜನವರಿಯಲ್ಲಿ 1.16 ಕೋಟಿ ರೂ. ಸಾಲವನ್ನ ಬ್ಯಾಂಕ್ ಮಂಜೂರು ಮಾಡಿತ್ತು. ಸಾಲ ಮರುಪಾವತಿಸದಿದ್ದಾಗ ಬ್ಯಾಂಕ್‌ನಿಂದ ಅಚ್ಚುಕುಟ್ಟನ್‌ಗೆ ನೋಟಿಸ್ ಜಾರಿಯಾಗಿತ್ತು. ಆದರೆ ನೋಟಿಸ್ ಸ್ವೀಕೃತವಾಗದಿದ್ದಾಗ ಬ್ಯಾಂಕ್ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ನಿವೇಶನ ಬೇರೆಯವರ ಹೆಸರಿನಲ್ಲಿರುವುದು ಪತ್ತೆಯಾಗಿದೆ.

ಅನುಮಾನಗೊಂಡ ಬ್ಯಾಂಕ್ ಅಧಿಕಾರಿಗಳು ಪರಿಶೀಲಿಸಿದಾಗ ಅದೇ ನಿವೇಶನ ಖರೀದಿಯ ಕಾರಣ ನೀಡಿ 2022ರ ಅಕ್ಟೋಬರ್‌ನಲ್ಲಿ ಮೊಹಮ್ಮದ್ ಫೈಯಾಜ್ ಎಂಬಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದಲೇ 1.16 ಕೋಟಿ ರೂ. ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ ಮತ್ತು ಖರೀದಿದಾರರ ತಪ್ಪು ಮಾಹಿತಿಯನ್ನ ಸೈಯದ್ ಹಾಶೀಂ ಎಂಬಾತ ನೀಡಿರುವುದು ಕಂಡು ಬಂದಿದೆ.

ಸದ್ಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ಕೇಂದ್ರ ಶಾಖೆಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ನೀಡಿರುವ ದೂರಿನ ಮೇರೆಗೆ ಸಿಸಿಬಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಹೊರವಲಯದಲ್ಲಿ ಎಟಿಎಂ ಕಳ್ಳರ ಗ್ಯಾಂಗ್ ಸಕ್ರಿಯ; ಒಂದೇ ದಿನ ಎರಡು ಕಡೆ ಕೈಚಳಕ - ATM Thieves Gang

ETV Bharat Logo

Copyright © 2024 Ushodaya Enterprises Pvt. Ltd., All Rights Reserved.