ETV Bharat / state

ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಹೊಸ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು: ರಾಕೇಶ್ ಟಿಕಾಯತ್ - Rakesh Tikait

ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಹೊಸ ಸರ್ಕಾರ ರೈತರ ಆತ್ಮಹತ್ಯೆ ತಡೆಯಬೇಕು ಎಂದು ರೈತ ಮುಖಂಡ ರಾಕೇಶ್ ಟಿಕಾಯತ್ ಒತ್ತಾಯಿಸಿದ್ದಾರೆ.

ರಾಕೇಶ್ ಟಿಕಾಯತ್
ರಾಕೇಶ್ ಟಿಕಾಯತ್ (ETV Bharat)
author img

By ETV Bharat Karnataka Team

Published : May 26, 2024, 9:15 PM IST

ರಾಕೇಶ್ ಟಿಕಾಯತ್ (ETV Bharat)

ಹಾವೇರಿ: ಕೇಂದ್ರದಲ್ಲಿ ಈ ಬಾರಿ ಅಧಿಕಾರಕ್ಕೆ ಬರುವ ಹೊಸ ಸರ್ಕಾರ ರೈತರ ಆತ್ಮಹತ್ಯೆಯನ್ನು ಹೇಗೆ ತಡೆಗಟ್ಟಬಹುದು ಎಂಬುದರ ಮೇಲೆ ಕೆಲಸ ಮಾಡಬೇಕು ಎಂದು ಭಾರತೀಯ ಕಿಸಾನ್​ ಯೂನಿಯನ್​ ನಾಯಕ ರಾಕೇಶ್ ಟಿಕಾಯತ್ ಹೇಳಿದರು.

ಭಾನುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತತನಾಡಿದ ಅವರು, ರೈತರ ಆತ್ಮಹತ್ಯೆಗಳು ಏಕೆ ಆಗುತ್ತಿವೆ ಎಂಬುದರ ಬಗ್ಗೆ ಸರ್ಕಾರ ಸರ್ವೆ ಮಾಡಿಸಬೇಕು ಎಂದು ಒತ್ತಾಯಿಸಿದರು. ಬೆಳೆದ ಬೆಳೆಗಳಿಗೆ ಬೆಲೆ ಕಡಿಮೆಯಾದಾಗ, ಕೆಲಸವಿಲ್ಲದೆ ಹಣವಿಲ್ಲದಿದ್ದಾಗ, ಆರ್ಥಿಕ ಸಮಸ್ಯೆಗಳು ಎದುರಾದಾಗ ರೈತರು ಆತ್ಮಹತ್ಯೆಗೆ ಶರಣಾಗುತ್ತಾರೆ. ರೈತರು ತಮ್ಮ ಹೆಸರಲ್ಲಿ ಜಮೀನು ಇದೆಯೋ, ಇಲ್ಲವೋ ಎಂದು ನೋಡುವುದಿಲ್ಲ. ಆದರೆ ಸಮಸ್ಯೆ ಉಂಟಾದರೆ ಆತ್ಮಹತ್ಯೆ ದಾರಿ ಹಿಡಿಯುತ್ತಾರೆ. ಕೇಂದ್ರದಲ್ಲಿ ಹೊಸದಾಗಿ ಅಧಿಕಾರಕ್ಕೆ ಬರುವ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ಕೇಂದ್ರ ಸರ್ಕಾರದ ತಪ್ಪು ಕೃಷಿ ನೀತಿಗಳಿಂದಾಗಿ ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ ಎಂದರು.

ರೈತರು ಬೆಳೆದ ಬೆಳೆಗೆ ಬೆಂಬಲ ಬೆಲೆ ಒದಗಿಸುವ ಕಾನೂನು, ಸ್ವಾಮಿನಾಥನ್ ಆಯೋಗ ವರದಿ ಜಾರಿಗೆ ಕೇಂದ್ರ ಸರ್ಕಾರವೇ ಕ್ರಮ ಕೈಗೊಳ್ಳಬೇಕಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳ ಸರ್ಕಾರಗಳಿವೆ. ಆ ಸರ್ಕಾರಗಳು ಸಹ ರೈತರು, ಬಡವರು, ಆದಿವಾಸಿಗಳ ಅಭಿವೃದ್ಧಿ ಬಗ್ಗೆ ಗಮನಹರಿಸಬೇಕು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬರಲು ರೈತರು ಸಹ ಕಾರಣಿಕರ್ತರು. ರೈತರಿಗಾಗಿ ಸರ್ಕಾರ ಕೆಲಸ ಮಾಡಬೇಕು. ಅನ್ನದಾತರ ಮೇಲೆ ಸಾಲವಿರದಂತೆ ಮತ್ತು ಅವರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುವಂತೆ ಮಾಡಬೇಕು ಎಂದು ಟಿಕಾಯತ್​ ಆಗ್ರಹಿಸಿದರು.

ಮತ್ತೊಂದು ಹೋರಾಟಕ್ಕೆ ಕರೆ; ವಿದೇಶಗಳಲ್ಲಿ ರೈತ ಆತ್ಮಹತ್ಯೆಗಳು ಹೇಗೆ ನಿಲ್ಲಿಸಲಾಗಿದೆ ಅದರ ಬಗ್ಗೆ ಸರ್ವೆ ಮಾಡಿ ದೇಶದಲ್ಲಿ ರೈತರ ಆತ್ಮಹತ್ಯೆ ತಡೆಯಬೇಕು. ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ರೈತ ಸಂಘಟನೆಗಳು ಸೇರಿ ದೇಶದಲ್ಲಿ ಆತ್ಮಹತ್ಯೆ ತಡೆಗಟ್ಟಬೇಕಿದೆ. ಕರ್ನಾಟಕದಲ್ಲಿ ಕೆಲ ಸಚಿವರು ತಪ್ಪು ಸಂದೇಶ ನೀಡುತ್ತಿದ್ದಾರೆ. ಅಂತವರ ಮೇಲೆ ಸಿಎಂ ಕ್ರಮ ಕೈಗೊಳ್ಳಬೇಕು. ರೈತ ಸಂಘಟನೆಗಳೆಲ್ಲಾ ಸೇರಿ ತಮ್ಮ ಹಕ್ಕುಗಳಿಗಾಗಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು. ಜೂನ್ 4 ರಂದು ಕೇಂದ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆ ಸರ್ಕಾರದ ನೀತಿಗಳನ್ನು ನೋಡಿಕೊಂಡು ಹೋರಾಟ ಮಾಡಬೇಕಿದೆ ಎಂದು ರೈತ ನಾಯಕ ಕರೆ ನೀಡಿದರು.

ದೆಹಲಿ ರೈತ ಹೋರಾಟದ ಬಗ್ಗೆ ಸಿನಿಮಾ; ಎಂಎಸ್‌ಪಿ, ಸ್ವಾಮಿನಾಥನ್ ಆಯೋಗದ ವರದಿ, ಆದಿವಾಸಿಗಳ ಮಸೂದೆ, ನಿರುದ್ಯೋಗದ ಕುರಿತು ಹೋರಾಟ ನಡೆಸಲಾಗುವುದು. ದೆಹಲಿಯ ಹೋರಾಟದ ಬಗ್ಗೆ ಪುಸ್ತಕಗಳನ್ನು ಬರೆಯಲಾಗುತ್ತಿದೆ. ಸಿನಿಮಾ ಮತ್ತು ಧಾರಾವಾಹಿಗಳನ್ನು ಮಾಡಲಾಗುತ್ತಿದೆ. ಈ ಸಿನಿಮಾನಗಳನ್ನು ದೇಶದ ಜನರು ವೀಕ್ಷಿಸಲಿ. ಪ್ರತಿಯೊಂದು ವಸ್ತುವಿನ ಬೆಲೆ ಹೆಚ್ಚಿಸುತ್ತಾರೆ, ಆದರೆ ರೈತರು ಬೆಳೆದ ಬೆಳೆಗಳಿಗೆ ಮಾತ್ರ ದರ ಹೆಚ್ಚಿಸುವುದಿಲ್ಲ. ಇದರಿಂದ ರೈತರು ಸಾಲ ಮಾಡುತ್ತಾರೆ. ನಂತರ ಸಾಲ ತೀರಿಸಲಾಗದೆ ಜಮೀನು ಮಾರಾಟ ಮಾಡುತ್ತಾರೆ ಎಂದು ಹೇಳಿದರು.

ಈ ವೇಳೆ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ್​ ಬಳ್ಳಾರಿ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: ಜೀವ ಇರೋಮಟ ಹೊಲದಾಗ ದುಡಿತೀನಿ ಎನ್ನುವ 80 ವರ್ಷದ ಅಜ್ಜಿ: ಇಳಿ ವಯಸ್ಸಲ್ಲೂ ಅಪರಿಮಿತ ಜೀವನೋತ್ಸಾಹ - Model Grandmother

ETV Bharat Logo

Copyright © 2024 Ushodaya Enterprises Pvt. Ltd., All Rights Reserved.