ETV Bharat / state

ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಸಜ್ಜು: ಜಿಲ್ಲಾಧಿಕಾರಿ ಜೊತೆ 'ಈಟಿವಿ ಭಾರತ' ವಿಶೇಷ ಸಂದರ್ಶನ - KARNATAKA WINTER SESSION

ಚಳಿಗಾಲ ಅಧಿವೇಶನದ ಸಿದ್ಧತೆ, ಇತರ ವಿಚಾರಗಳ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಜೊತೆ 'ಈಟಿವಿ ಭಾರತ'ದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಮ್ಮ ಪ್ರತಿನಿಧಿ ಸಿದ್ದನಗೌಡ ಪಾಟೀಲ ಅವರ ವಿಶೇಷ ವರದಿ ಇಲ್ಲಿದೆ.

belagavi session
ಬೆಳಗಾವಿ ಜಿಲ್ಲಾಧಿಕಾರಿ ಜೊತೆ 'ಈಟಿವಿ ಭಾರತ' ವಿಶೇಷ ಸಂದರ್ಶನ (ETV Bharat)
author img

By ETV Bharat Karnataka Team

Published : Dec 7, 2024, 8:25 AM IST

ಬೆಳಗಾವಿ: ''ಡಿ.9ರಿಂದ 19ರವರೆಗೆ ನಡೆಯಲಿರುವ ವಿಧಾನಮಂಡಲ ಚಳಿಗಾಲ ಅಧಿವೇಶನಕ್ಕೆ ಎಲ್ಲ ರೀತಿಯ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲಾಗಿದೆ. ಜಿಲ್ಲಾಡಳಿತದಿಂದ ವಸತಿ, ಊಟ, ಸಾರಿಗೆ, ಶಿಷ್ಟಾಚಾರ ಸೇರಿ 10 ಸಮಿತಿ ರಚಿಸಿದ್ದೇವೆ. ಹಿರಿಯ ಅಧಿಕಾರಿಗಳನ್ನು ಈ ಸಮಿತಿಗಳ ಚೇರ್ಮನ್ ಮಾಡಿದ್ದು, ಅಧಿವೇಶನ ಯಶಸ್ವಿಯಾಗಿ ಜರುಗಲಿದೆ. ಸಾರ್ವಜನಿಕರು ಕೂಡ ನಮ್ಮ ಜೊತೆ ಕೈ ಜೋಡಿಸಬೇಕು'' ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಕೋರಿದರು.

ಈಟಿವಿ ಭಾರತ ಪ್ರತಿನಿಧಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ''ಅಧಿವೇಶನವು ಅಚ್ಚಕಟ್ಟಾಗಿ ನಡೆಯಬೇಕು. ಶಾಸಕರು, ಸಚಿವರು ಸೇರಿ ಯಾರಿಗೂ ತೊಂದರೆ ಆಗದಂತೆ ಕ್ರಮ ವಹಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚಿಸಿದ್ದಾರೆ‌. ಹಾಗಾಗಿ, ನಮ್ಮ ಅಧಿಕಾರಿ ವರ್ಗ ಹಗಲಿರುಳು ಶ್ರಮಿಸುತ್ತಿದ್ದು, ಅಧಿವೇಶನ ಯಶಸ್ವಿಯಾಗಿ ನಡೆಯಲಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

2756 ಕೊಠಡಿ: ''ಚಳಿಗಾಲ ಅಧಿವೇಶನದ ಹಿನ್ನೆಲೆಯಲ್ಲಿ ಬೆಳಗಾವಿಗೆ ಆಗಮಿಸುವ ಸಚಿವರು, ಶಾಸಕರು, ಅಧಿಕಾರಿಗಳು, ಸಿಬ್ಬಂದಿ ಮತ್ತು ಪತ್ರಕರ್ತರಿಗಾಗಿ 2,756 ಕೊಠಡಿ ಕಾಯ್ದಿರಿಸಿದ್ದೇವೆ. ಇದಕ್ಕಾಗಿ ಪ್ರವಾಸಿ ಮಂದಿರಗಳು, ಖಾಸಗಿ ಹೋಟೆಲ್‌ಗಳು, ಕೆಎಲ್ಇ, ವಿಟಿಯು ಸೇರಿ ವಿವಿಧ ಸಂಸ್ಥೆಗಳ ಅತಿಥಿ ಗೃಹಗಳನ್ನು ಬಳಸಿಕೊಳ್ಳುತ್ತಿದ್ದೇವೆ'' ಎಂದು ಮೊಹಮ್ಮದ್ ರೋಷನ್ ತಿಳಿಸಿದರು.

ಬೆಳಗಾವಿ ಜಿಲ್ಲಾಧಿಕಾರಿ ಜೊತೆ 'ಈಟಿವಿ ಭಾರತ' ವಿಶೇಷ ಸಂದರ್ಶನ (ETV Bharat)

ಶತಮಾನೋತ್ಸವಕ್ಕೆ ಗಾಂಧಿ ಪ್ರತಿಮೆ ಉದ್ಘಾಟನೆ: ''ಲೋಕೋಪಯೋಗಿ ಇಲಾಖೆಯಿಂದ 4.5 ಕೋಟಿ ರೂ. ಅನುದಾನದಲ್ಲಿ 25 ಅಡಿ ಎತ್ತರದ ಮಹಾತ್ಮಾ ಗಾಂಧೀಜಿ ಪ್ರತಿಮೆ ತಯಾರಾಗಿದೆ. ಸೌಧದ ಉತ್ತರ ಭಾಗದಲ್ಲಿ ಪ್ರತಿಷ್ಠಾಪನೆ ಆಗಲಿರುವ ಈ ಮೂರ್ತಿಯನ್ನು ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಂದರ್ಭದಲ್ಲಿ ಡಿ.26 ಅಥವಾ 27ರಂದು ಲೋಕಾರ್ಪಣೆ ಆಗಲಿದೆ'' ಎಂದು ತಿಳಿಸಿದರು.

ಸೌಧದ ಪಶ್ಚಿಮ ಭಾಗದಲ್ಲಿ ಉದ್ಯಾನ: ''ಸುವರ್ಣಸೌಧದ ಪಶ್ಚಿಮ ಭಾಗದಲ್ಲಿ ಗಾರ್ಡನ್ ಕಾರ್ಯ ನಡೆಯುತ್ತಿದೆ. ವಾಟರ್ ಫಾಲ್, ಲಾನ್ ಕೆಲಸ ಆಗುತ್ತಿದೆ. ಅದೇ ರೀತಿ ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಡಾ. ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಗಳ ಸುತ್ತಲೂ ಗಾರ್ಡನ್ ಮಾಡಲಾಗುತ್ತಿದೆ. ಅದೇ ರೀತಿ ಮಕ್ಕಳ ಅನುಕೂಲಕ್ಕಾಗಿ ಒಂದು ವಿಜ್ಞಾನ ಕೇಂದ್ರ ನಿರ್ಮಿಸಲಾಗುತ್ತಿದೆ. ಶತಮಾನೋತ್ಸವ ಅಂಗವಾಗಿ ಗಾಂಧಿ ಅವರ ಜೀವನಗಾಥೆ ಸಾರುವ ಛಾಯಾಚಿತ್ರ ಪ್ರದರ್ಶನ ಕೂಡ ಆಯೋಜಿಸಲಾಗಿದೆ. ಶಾಲಾ ಮಕ್ಕಳಿಗೆ ಆಡಿಟೋರಿಯಂನಲ್ಲಿ ಚರ್ಚಾಕೂಟ, ಭಾಷಣ, ಕಿರುಚಿತ್ರ ಪ್ರದರ್ಶನ ಸೇರಿದಂತೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ'' ಎಂದು ಜಿಲ್ಲಾಧಿಕಾರಿ ವಿವರಿಸಿದರು.

belagavi session
ಬೆಳಗಾವಿ ಸುವರ್ಣ ವಿಧಾನಸೌಧ (ETV Bharat)

ಇದನ್ನೂ ಓದಿ: ಚಳಿಗಾಲದ ಅಧಿವೇಶನ: ಬೆಂಗಳೂರು - ಬೆಳಗಾವಿ ನಡುವೆ ವಿಶೇಷ ವಿಮಾನ ಸೇವೆ

ಮೈಸೂರು ದಸರಾ ಮೀರಿಸುವ ದೀಪಾಲಂಕಾರ: ''ಡಿ.9ರಿಂದಲೇ ಬೆಳಗಾವಿ‌ ನಗರದ‌ 30 ವೃತ್ತಗಳಲ್ಲಿ 32 ಕಿ.ಮೀ. ಉದ್ಧ ದೀಪಾಲಂಕಾರ ಮಾಡಲಾಗುತ್ತಿದೆ. ಇದು ಮೈಸೂರು ದಸರಾವನ್ನೂ ಮೀರಿಸಲಿದೆ. ಇಡೀ ಬೆಳಗಾವಿ ಸುಂದರವಾಗಿ ಕಂಗೊಳಿಸಲಿದೆ'' ಎಂದ ಜಿಲ್ಲಾಧಿಕಾರಿಗಳು, ''ವಿವಿಧ ಬೇಡಿಕೆ ಹೊತ್ತು ಜನಪ್ರತಿನಿಧಿಗಳ ಭೇಟಿಗೆ ಮತ್ತು ಕಲಾಪ ವೀಕ್ಷಿಸಲು ಸುವರ್ಣ ವಿಧಾನಸೌಧಕ್ಕೆ ಬರುವ ಜನರಿಗೆ ಈ ಸಲ ಆನ್‌ಲೈನ್‌ ಮೂಲಕವೇ ಪಾಸ್ ನೀಡುವ ವ್ಯವಸ್ಥೆ ಮಾಡಿದ್ದೇವೆ. ಪಾಸ್ ನೀಡಲು ಜನಪ್ರತಿನಿಧಿಗಳ ಸಿಬ್ಬಂದಿಗೆ ಪ್ರತ್ಯೇಕ ಪೋರ್ಟಲ್ ಕೂಡ ರಚಿಸಿದ್ದೇವೆ'' ಎಂದು ಹೇಳಿದರು.

ಉತ್ತರ ಕರ್ನಾಟಕದ ತಿನಿಸುಗಳ ಮಾರಾಟ: ''ಕಲಾಪ ಕಣ್ತುಂಬಿಕೊಳ್ಳಲು ಬರುವ ಜನರಿಗೆ ಅನುಕೂಲವಾಗಲೆಂದು ಎಂಟು ಕಡೆ ಪಾವತಿ ಆಧಾರದಲ್ಲಿ ಕ್ಯಾಂಟೀನ್ ವ್ಯವಸ್ಥೆ ಮಾಡುತ್ತಿದ್ದೇವೆ.‌ ಮಹಿಳಾ ಸ್ವ-ಸಹಾಯ ಸಂಘಗಳು ಸೇರಿದಂತೆ ವಿವಿಧ ಸಂಸ್ಥೆಗಳಿಗೆ ವಿವಿಧ ಬಗೆಯ 38 ಮಳಿಗೆ ತೆರೆಯಲು ಅವಕಾಶ ಮಾಡಿಕೊಟ್ಟಿದ್ದೇವೆ. ಅಲ್ಲಿ ಕುಂದಾ ಸೇರಿದಂತೆ ಉತ್ತರ ಕರ್ನಾಟಕದ ಸಿಹಿ ತಿನಿಸುಗಳ ಮಾರಾಟವಾಗಲಿವೆ'' ಎಂದು ಮೊಹಮ್ಮದ್ ರೋಷನ್ ತಿಳಿಸಿದರು.

belagavi session
ಬೆಳಗಾವಿ ಸುವರ್ಣ ವಿಧಾನಸೌಧ (ETV Bharat)

ಇದನ್ನೂ ಓದಿ: ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಆಗುವ ಖರ್ಚೆಷ್ಟು? ಏನಂತಾರೆ ಜಿಲ್ಲಾಧಿಕಾರಿ?

''ಇದೇ ವರ್ಷ ರಾಣಿ ಚನ್ನಮ್ಮನವರ 200ನೇ ವಿಜಯೋತ್ಸವ ಪ್ರಯುಕ್ತ ಕಿತ್ತೂರು ಉತ್ಸವ ಅದ್ಧೂರಿಯಾಗಿ ಆಯೋಜಿಸಿದ್ದು, ಈಗ ಚಳಿಗಾಲ ಅಧಿವೇಶನ ನಡೆಯುತ್ತಿದೆ. ಇದಾದ ಬಳಿಕ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಸಮಾರಂಭ ಕೂಡ ವಿಜೃಂಭಣೆಯಿಂದ ಜರುಗಲಿದೆ'' ಎಂದು ಜಿಲ್ಲಾಧಿಕಾರಿ ವಿಶ್ವಾಸ ವ್ಯಕ್ತಪಡಿಸಿದರು.

ಮಹಾಮೇಳಾವ್​ಗೆ ನಿರ್ಬಂಧ: ''ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ಮಹಾಮೇಳಾವ್‌ ಮಾಡದಂತೆ ಎಂಇಎಸ್ ಮುಖಂಡರಿಗೆ ಸೂಚಿಸಿದ್ದೇವೆ‌. ಮಹಾಮೇಳಾವ್​ಗೆ ಯಾವುದೇ ರೀತಿ ಅನುಮತಿ ನೀಡುವುದಿಲ್ಲ. ಏನಾದರೂ ಕಾರ್ಯಕ್ರಮ ಯೋಜಿಸಲು ಪ್ರಯತ್ನಿಸಿದರೆ, ಅದು ಕಾನೂನುಬಾಹಿರ. ನಮ್ಮ ಸಲಹೆ ತಿರಸ್ಕರಿಸಿ ಮಹಾಮೇಳಾವ್ ಆಯೋಜಿಸಿದರೆ ಕಠಿಣ ಕಾನೂನು ಕ್ರಮ ನಿಶ್ಚಿತ'' ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

ಇದನ್ನೂ ಓದಿ: ಮತ್ತೆ ಬಂತು ಬೆಳಗಾವಿ ಅಧಿವೇಶನ: ಕಾಟಾಚಾರಕ್ಕೆ ಬರಬೇಡಿ; ಉತ್ತರ ಕರ್ನಾಟಕದ ಬಗ್ಗೆ ಚರ್ಚಿಸಲು ಬನ್ನಿ ಅಂತಿದಾರೆ ಇಲ್ಲಿನ ಜನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.