ETV Bharat / state

ಚಿಕ್ಕಮಗಳೂರು : ಕಾಡಾನೆ ಸಾವು ; ವಿದ್ಯುತ್ ತಂತಿ ತಗುಲಿ ಮೃತಪಟ್ಟಿರುವ ಶಂಕೆ - ELEPHANT DIED

ಕಂಚಿನ ಕಲ್ಲು ದುರ್ಗದ ಸಮೀಪದ ಗುಡ್ಡದೂರು ಕುಟುಂಬಕ್ಕೆ ಸೇರಿದ ಕೆರೆಹಕ್ಲು ಎಸ್ಟೇಟ್​ನಲ್ಲಿ ಕಾಡಾನೆ ಕಳೆಬರವೊಂದು ಕಂಡುಬಂದಿದೆ.

author img

By ETV Bharat Karnataka Team

Published : May 12, 2024, 6:37 PM IST

Elephant dead body
ಕಾಡಾನೆ ಕಳೆಬರ (ETV Bharat)

ಚಿಕ್ಕಮಗಳೂರು : ಜಿಲ್ಲೆಯ ಆಲ್ದೂರು ಸಮೀಪದ ಕಂಚಿನಕಲ್ಲು ದುರ್ಗದ ಖಾಸಗಿ ಕಾಫಿತೋಟದಲ್ಲಿ ಒಂಟಿ ಸಲಗವೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ಇಂದು ಆನೆಯ ಕಳೆಬರಹ ಕಂಚಿನ ಕಲ್ಲು ದುರ್ಗದ ಸಮೀಪದ ಗುಡ್ಡದೂರು ಕುಟುಂಬಕ್ಕೆ ಸೇರಿದ ಕೆರೆಹಕ್ಲು ಎಸ್ಟೇಟ್​ನಲ್ಲಿ ಪತ್ತೆಯಾಗಿದೆ.

ಆನೆಯು ವಿದ್ಯುತ್ ಪ್ರವಹಿಸಿದ್ದರಿಂದ ಮೃತಪಟ್ಟಿರುವಂತೆ ತೋರುತ್ತಿದ್ದು, ಆನೆ ಸಾವನ್ನಪ್ಪಿರುವ ಜಾಗದಲ್ಲಿ ವಿದ್ಯುತ್ ತಂತಿ ಹಾದು ಹೋಗಿದೆ. ವಿದ್ಯುತ್ ಲೈನ್ ಪಕ್ಕದಲ್ಲಿ ಹಲಸಿನ ಮರವೂ ಇದೆ. ಆನೆ ಹಲಸಿನ ಹಣ್ಣು ತಿನ್ನುವ ಪ್ರಯತ್ನದಲ್ಲಿ ವಿದ್ಯುತ್ ತಂತಿಗೆ ದೇಹ ತಾಗಿ ಮೃತಪಟ್ಟಿದೆ. ಪಕ್ಕದಲ್ಲಿರುವ ಹಲಸಿನ ಮರದ ಕೊಂಬೆ ಮುರಿದು ಬಿದ್ದಿದೆ.

ಇತ್ತೀಚೆಗೆ ಈ ಭಾಗದಲ್ಲಿ ಆನಂದ ಪೂಜಾರಿ ಎಂಬುವರನ್ನು ಕಾಡಾನೆ ತುಳಿದು ಸಾಯಿಸಿತ್ತು. ಕೆಲ ತಿಂಗಳ ಹಿಂದೆಯೂ ಇದೇ ಭಾಗದಲ್ಲಿ ಕಾರ್ಮಿಕರೊಬ್ಬರನ್ನು ತುಳಿದು ಸಾಯಿಸಿತ್ತು. ಹಾಗೆಯೇ ಆಲ್ದೂರು ಸಮೀಪ ಕಾರ್ಮಿಕ ಮಹಿಳೆಯೋರ್ವರನ್ನು ತುಳಿದು ಸಾಯಿಸಿತ್ತು. ಮನುಷ್ಯರ ಮೇಲೆ ದಾಳಿ ಮಾಡಿ ಸಾಯಿಸುತ್ತಿದ್ದ ಆನೆಯೇ ಈಗ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮತ್ತು ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ. ಸ್ಥಳಕ್ಕೆ ಚಿಕ್ಕಮಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ರಮೇಶ್ ಬಾಬು ಅವರು ಪ್ರತಿಕ್ರಿಯಿಸಿ, ''ಕಾಡಾನೆ ವಿದ್ಯುತ್ ತಂತಿಯಿಂದ ಸಾವನ್ನಪ್ಪಿದೆ. ಸ್ಥಳದಲ್ಲಿ 11 ಕೆ. ವಿ. ವಿದ್ಯುತ್ ಲೈನ್ ಹಾದುಹೋಗಿದ್ದು, ಆನೆ ಪಕ್ಕದಲ್ಲಿರುವ ಹಲಸಿನ ಮರದಿಂದ ಹಲಸಿನ ಕಾಯಿ ಕೀಳುವ ಪ್ರಯತ್ನದಲ್ಲಿ ಸೊಂಡಿಲು ಕೆಳ ಹಂತದಲ್ಲಿ ಜೋತುಬಿದ್ದಿದ್ದ ವಿದ್ಯುತ್ ಲೈನ್​ಗೆ ತಗುಲಿ ಸಾವನ್ನಪ್ಪಿದೆ. ಈ ಬಗ್ಗೆ ಪ್ರಕರಣ ದಾಖಲಿಸಿ ಮುಂದಿನ ಕ್ರಮ ವಹಿಸಲಾಗುವುದು. ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನಡೆಸಲಾಗುವುದು'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : Watch: ಚಿಕ್ಕಮಗಳೂರು ನಗರ ಪ್ರದೇಶಕ್ಕೆ ಒಂಟಿ ಸಲಗದ ದಾಳಿ: ಜಾನುವಾರುಗಳನ್ನು ಅಟ್ಟಾಡಿಸಿದ ಕಾಡಾನೆ - WILD ELEPHANT ATTACK

ETV Bharat Logo

Copyright © 2024 Ushodaya Enterprises Pvt. Ltd., All Rights Reserved.