ETV Bharat / state

ಗುಳಿಗ ಕೊರಗಜ್ಜನ ಆದಿಸ್ಥಳಕ್ಕೆ ದುನಿಯಾ ವಿಜಯ್ ಭೇಟಿ: ಮುಂದಿನ ಚಿತ್ರದ ಬಗ್ಗೆ ಹೊಸ ಅಪ್​ಡೇಟ್​ - DUNIYA VIJAY

ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜನ ಉದ್ಭವ ಶಿಲೆಯ ಆದಿಸ್ಥಳಕ್ಕೆ ನಟ ದುನಿಯಾ ವಿಜಯ್ ಭೇಟಿ ನೀಡಿ, ದರ್ಶನ ಪಡೆದರು.

duniya vijay
ಕೊರಗಜ್ಜನ ಆದಿಸ್ಥಳಕ್ಕೆ ದುನಿಯಾ ವಿಜಯ್ ಭೇಟಿ (ETV Bharat)
author img

By ETV Bharat Entertainment Team

Published : Oct 19, 2024, 11:08 AM IST

ಉಳ್ಳಾಲ: ''ಕೊರಗಜ್ಜನ ಬಗ್ಗೆ ಸಾಕಷ್ಟು ಕೇಳುತ್ತಾ ಬಂದಿದ್ದೇನೆ. ವಿಶೇಷ ಸ್ಥಳಕ್ಕೆ ಭೇಟಿ ನೀಡುವ ಉದ್ದೇಶದಿಂದ ಮಂಗಳೂರು ಶೂಟಿಂಗ್ ಇರುವ ಸಮಯದಲ್ಲಿ ಬಂದಿರುವೆನು. ಮುಂದಿನ ಪ್ರಾಜೆಕ್ಟ್ ಆಗಿ ಮಗಳಿಗಾಗಿಯೇ ಒಂದು ಸಿನಿಮಾ ಮಾಡುತ್ತಿದ್ದೇನೆ. ಸಿಟಿ ಲೈಫ್ಸ್ ಎನ್ನುವ ಶೀರ್ಷಿಕೆಯಡಿ ಚಿತ್ರವನ್ನು ನಾನೇ ನಿರ್ದೇಶಿಸಲಿದ್ದೇನೆ'' ಎಂದು ನಟ ದುನಿಯಾ ವಿಜಯ್ ಹೇಳಿದರು.

ಕಲ್ಲಾಪು ಬುರ್ದುಗೋಳಿ ಗುಳಿಗ ಕೊರಗಜ್ಜ ಉದ್ಭವ ಶಿಲೆಯ ಆದಿಸ್ಥಳಕ್ಕೆ ಭೇಟಿ ನೀಡಿದ್ದ ನಟ ದುನಿಯಾ ವಿಜಯ್, ದರ್ಶನ ಪಡೆದ ಬಳಿಕ ಈ ಬಗ್ಗೆ ಮಾಹಿತಿ ಹಂಚಿಕೊಂಡರು.

ಗುಳಿಗ ಕೊರಗಜ್ಜನ ಆದಿಸ್ಥಳಕ್ಕೆ ದುನಿಯಾ ವಿಜಯ್ ಭೇಟಿ (ETV Bharat)

''ಕುತ್ತಾರು ಆದಿಸ್ಥಳ ಮತ್ತು ಕಲ್ಲಾಪುವಿನ ಎರಡೂ ಕ್ಷೇತ್ರಗಳಲ್ಲಿ ವೈಬ್ರೇಷನ್ ಪವರ್ ಇದೆ. ನಾನು ಅಭಿನಯಿಸುತ್ತಿರುವ 29ನೇ ಚಿತ್ರವನ್ನು 'ಕಾಟೇರಾ'ದ ಜಡೇಶ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರನ್ನಿಟ್ಟಿಲ್ಲ. ಮೂರು ದಿನಗಳ ಕಾಲ ಮಂಗಳೂರಿನ ವಾಮಂಜೂರು ಸೇರಿದಂತೆ ವಿವಿಧೆಡೆ ಶೂಟಿಂಗ್ ನಡೆಯುತ್ತಿದೆ. ಹಾಗಾಗಿ, ಮಂಗಳೂರಿಗೆ ಭೇಟಿ ನೀಡಿದ್ದೇನೆ'' ಎಂದರು.

duniya vijay
ಗುಳಿಗ ಕೊರಗಜ್ಜನ ಆದಿಸ್ಥಳಕ್ಕೆ ದುನಿಯಾ ವಿಜಯ್ ಭೇಟಿ (ETV Bharat)

ಇದನ್ನೂ ಓದಿ: 'ದೇವರು ರುಜು ಮಾಡಿದನು': ಹೊಸ ಹೀರೋ ಜೊತೆ ಸಿಂಪಲ್ ಸುನಿ ಸಿನಿಮಾ ಘೋಷಣೆ

''ಕೊರಗಜ್ಜನ ಬಗ್ಗೆ ದಿನಾಲೂ ಕೇಳುತ್ತಲೇ ಇದ್ದೇನೆ. ಹಾಗಾಗಿ, ಭೇಟಿ ನೀಡಬೇಕೆಂಬ ಮನದಾಸೆಯಿತ್ತು. ಇಲ್ಲಿ ಬಂದು ಆಶೋತ್ತರಗಳನ್ನು ಈಡೇರಿಸುವಂತೆ ಬೇಡಿಕೊಂಡಿದ್ದೇನೆ. ನನ್ನ 'ಭೀಮ' ಚಿತ್ರಕ್ಕೆ ಮಂಗಳೂರು ಸೇರಿದಂತೆ ರಾಜ್ಯದ ಜನತೆ ಪ್ರೀತಿ, ವಿಶ್ವಾಸ ಇಟ್ಟು ಯಶಸ್ವಿಗೊಳಿಸಿದ್ದಾರೆ. ಈ ಮೂಲಕ ಸಿನೆಮಾದ ಗೌರವ ಉಳಿಸಿದ್ದಾರೆ'' ಎಂದು ಧನ್ಯವಾದ ತಿಳಿಸಿದರು.

ಇದನ್ನೂ ಓದಿ: 'ಸಿಂಹರೂಪಿಣಿ' ಕಥೆ ಹೇಳಿದ ಕೆಜಿಎಫ್ ಖ್ಯಾತಿಯ ಕಿನ್ನಾಳ್‌ರಾಜ್: ಹೇಗಿದೆ ಸಿನಿಮಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.