ಶಿವಮೊಗ್ಗ: ವಿದ್ಯುತ್ ತಂತಿ ತಗುಲಿ ಕ್ಯಾಂಟರ್ ಚಾಲಕ ಮೃತಪಟ್ಟ ಘಟನೆ ಸೊರಬ ತಾಲೂಕಿನ ಸುತ್ತುಕೋಟೆ ಗ್ರಾಮದಲ್ಲಿ ನಡೆದಿದೆ. ಶಿರಾಳಕೊಪ್ಪದ ಮಠದಗದ್ದೆ ನಿವಾಸಿ ಮೊಹಮ್ಮದ್ ಈಶಾಮ್ (32) ಮೃತರು.
ಡಿ.5ರಂದು ಶಿಕಾರಿಪುರ ತಾಲೂಕಿನ ಬಳ್ಳಿಗಾವಿಯಿಂದ ಸೊರಬ ತಾಲೂಕಿನ ಸುತ್ತಕೋಟೆಗೆ ತೆರಳುವ ರಸ್ತೆಮಾರ್ಗದಲ್ಲಿ ಸಾಸರಹಳ್ಳಿ ಸಮೀಪ ಜೋತು ಬಿದ್ದ ವಿದ್ಯುತ್ ತಂತಿ ಕ್ಯಾಂಟರ್ಗೆ ತಗುಲಿದೆ.
ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ದುರ್ಘಟನೆ ಸಂಭವಿಸಿದೆ ಎಂದು ಮೃತನ ತಂದೆ ರಿಯಾಜ್ ಅಹ್ಮದ್ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಕೆರೆಗೆ ಬಿದ್ದ ವಿದ್ಯಾರ್ಥಿನಿ ಪ್ರಾಣ ರಕ್ಷಿಸಿದ ಹೋಂಗಾರ್ಡ್