ETV Bharat / state

ಮೃತ ಮಗಳ‌ ಹೆಸರಲ್ಲಿ 600 ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿ ದಾನ: ಸಂಬಳವನ್ನೇ ಮೀಸಲಿಟ್ಟಿರುವ ASI ಲೋಕೇಶಪ್ಪ - Donation in daughter name - DONATION IN DAUGHTER NAME

ಎಎಸ್ಐ ಲೋಕೇಶಪ್ಪ ಅವರು ಬೆಂಕಿ ಅವಘಡದಲ್ಲಿ ತಮ್ಮ ಮಗಳನ್ನು ಕಳೆದುಕೊಂಡಿದ್ದರು. ಅದೇ ಮಗಳ ಹೆಸರಿನಲ್ಲಿ ಬಡ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಸೇರಿ‌ ಇನ್ನಿತರ ಶಾಲಾ ಸಾಮಗ್ರಿಗಳನ್ನು ದಾನ ಮಾಡುತ್ತಿದ್ದಾರೆ.

ಮೃತ ಮಗಳ‌ ಹೆಸರಿನಲ್ಲಿ 600 ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿ ದಾನ
ಮೃತ ಮಗಳ‌ ಹೆಸರಿನಲ್ಲಿ 600 ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿ ದಾನ (ETV Bharat)
author img

By ETV Bharat Karnataka Team

Published : Jul 1, 2024, 3:24 PM IST

ಬೆಂಗಳೂರು: ಐದು ವರ್ಷಗಳ ಹಿಂದೆ ಸಾವನ್ನಪ್ಪಿದ್ದ ತನ್ನ ಮಗಳ ಶಿಕ್ಷಣಕ್ಕೆ ಖರ್ಚಾಗುತ್ತಿದ್ದ ಹಣವನ್ನು ಬಡ ಶಾಲಾ ಮಕ್ಕಳಿಗೆ ಪುಸ್ತಕ ಸೇರಿ‌ ಇನ್ನಿತರ ಶಾಲಾ ಸಾಮಗ್ರಿಗಳನ್ನು ದಾನ ಮಾಡುವ ಮೂಲಕ ಎಎಸ್ಐ ತಮ್ಮ ಮಗಳನ್ನು ಸ್ಮರಿಸುತ್ತಿದ್ದಾರೆ.

ಶಿವಾಜಿನಗರದ‌ ಮಹಿಳಾ ಠಾಣೆಯಲ್ಲಿ ಎಎಸ್ಐ ಆಗಿ ಕೆಲಸ ಮಾಡುತ್ತಿರುವ ಲೋಕೇಶಪ್ಪ ಅವರು ಬಡ ಸರ್ಕಾರಿ ಶಾಲಾ‌‌‌‌ ಮಕ್ಕಳ ಪಾಲಿಗೆ ದೇವರಾಗಿದ್ದಾರೆ. ಅರ್ಥಾತ್ 600 ಶಾಲಾ ಮಕ್ಕಳಿಗೆ ಪುಸ್ತಕ ಸಾಮಗ್ರಿ ನೀಡಿದ್ದಾರೆ.‌ ಅಲ್ಲದೆ ತಮಗೆ ಬರುವ ಎರಡು ತಿಂಗಳ ಸಂಬಳವನ್ನು ಬಡಮಕ್ಕಳಿಗಾಗಿ ಸಮಾಜ ಕಾರ್ಯಕ್ಕೆ ವಿನಿಯೋಗಿಸಲು ಮುಂದಾಗಿದ್ದಾರೆ.

ಮೃತ ಮಗಳ‌ ಹೆಸರಿನಲ್ಲಿ 600 ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿ ದಾನ
ಮೃತ ಮಗಳ‌ ಹೆಸರಿನಲ್ಲಿ 600 ವಿದ್ಯಾರ್ಥಿಗಳಿಗೆ ಶಾಲಾ ಸಾಮಗ್ರಿ ದಾನ (ETV Bharat)

2019 ರಲ್ಲಿ ಶಿವಾಜಿನಗರದ ಪೊಲೀಸ್​​ ಕ್ವಾಟರ್ಸ್​​ ಬಳಿ ನಡೆದಿದ್ದ ಬೆಂಕಿ ಅನಾಹುತದಲ್ಲಿ ತಮ್ಮ ಮುದ್ದಿನ ಮಗಳು ಹರ್ಷಾಲಿ ಗಂಭೀರ ಗಾಯಗೊಂಡು 9 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ‌‌ ಪ್ರಯೋಜನವಾಗದೆ ಸಾವನ್ನಪ್ಪಿದ್ದಳು. ಈ ವೇಳೆ ಮಗಳ ಹೆಸರಿನಲ್ಲಿ ಎನ್​ಜಿಒ ಆರಂಭಿಸಿದ್ದರು.‌ ಇದಕ್ಕೆ ಕಾಲೇಜೊಂದರಲ್ಲಿ ಅಸ್ಟಿಸೆಂಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ಲೋಕೇಶಪ್ಪ ಪತ್ನಿ ಸಹ ಸಾಥ್ ನೀಡಿದ್ದರು.

ತಮ್ಮ ಮಗಳ ಶಿಕ್ಷಣಕ್ಕೆ ತಗಲುವ ವೆಚ್ಚದಲ್ಲಿ ಬಡ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಿದರು. ಆರಂಭದಲ್ಲಿ‌ ಬೆಂಗಳೂರಿನ ಸರ್ಕಾರಿ ಶಾಲೆವೊಂದಕ್ಕೆ ಪುಸ್ತಕ ವಿತರಣೆ ಕಾರ್ಯ ಆರಂಭವಾಗಿ ಇದೀಗ ಆರು ಶಾಲೆಗಳಿಗೆ ಬಂದು ನಿಂತಿದೆ. ಮೈಸೂರು, ಹಾಸನ ಹಾಗೂ ಬೆಂಗಳೂರು ಸೇರಿ ಆರು ಸರ್ಕಾರಿ ಶಾಲೆಗಳಲ್ಲಿ ಒಟ್ಟು 600 ಮಂದಿ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಇನ್ನಿತರ ಸಾಮಗ್ರಿಗಳನ್ನು ನೀಡಿ ಅವರ ಪಾಲಿಗೆ ದೇವರಾಗಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊದಿಗೆ ಮಾತನಾಡಿದ ಲೋಕೇಶಪ್ಪ, "2019ರಲ್ಲಿ ನಮ್ಮ ಮಗಳು ಬೆಂಕಿ ಅನಾಹುತದಲ್ಲಿ ಸಾವನ್ನಪ್ಪಿದ್ದಳು. ಬಳಿಕ ಅವಳ ಹೆಸರಿನಲ್ಲಿ ಎನ್​ಜಿಒ ಆರಂಭಿಸಿದೆವು. ನಾನು ಶಾಲೆಗೆ ಹೋಗುವಾಗ ಎದುರಿಸುತ್ತಿದ್ದ ಸಮಸ್ಯೆ ಬಡ ಮಕ್ಕಳಿಗೆ ಬರಬಾರದೆಂದು ನಿರ್ಧರಿಸಿ ಪುಸ್ತಕ, ಪೆನ್ಸಿಲ್ ಹಾಗೂ ಬ್ಯಾಗ್ ಸೇರಿ ಇನ್ನಿತರ ವಸ್ತುಗಳನ್ನು ನೀಡುತ್ತಾ ಬರುತ್ತಿದ್ದೇವೆ.‌ ಗ್ರಾಮೀಣ ಭಾಗದ ಹಾಗೂ ತೀರ ಹಿಂದುಳಿದ ಶಾಲಾ ಮಕ್ಕಳಿಗೆ ಪುಸ್ತಕ ನೀಡಿದ್ದೇನೆ. ಅದರಂತೆ ನನ್ನ ಎರಡು ತಿಂಗಳ ಸಂಬಳವನ್ನು ಇದೇ ಕಾರ್ಯಕ್ಕೆ ಬಳಸಿಕೊಳ್ಳುತ್ತೇನೆ. ನನ್ನ ಈ ಕಾರ್ಯಕ್ಕೆ ಪೊಲೀಸ್​ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಬೆನ್ನು ತಟ್ಟಿರುವುದು ಸಂತೋಷ ತಂದಿದೆ' ಎಂದರು.

ಇದನ್ನೂ ಓದಿ: ಥಲಸ್ಸೆಮಿಯಾ ರೋಗಕ್ಕೆ ತುತ್ತಾದ ಕಂದಮ್ಮಗಳಿಗೆ ಬೇಕಿದೆ ಸಹೃದಯಿಗಳ ಸಹಾಯ ಹಸ್ತ - Thalassemia disease

ETV Bharat Logo

Copyright © 2025 Ushodaya Enterprises Pvt. Ltd., All Rights Reserved.