ETV Bharat / state

ಎಕ್ಸ್​ ಪೋಸ್ಟ್​ ನೋಡಿ ನಿರಾಶ್ರಿತ ವೃದ್ಧನ ರಕ್ಷಣೆಗೆ ಶೀಘ್ರ ಸ್ಪಂದಿಸಿದ ಧಾರವಾಡ ಜಿಲ್ಲಾಡಳಿತ - Rescue of homeless old man

author img

By ETV Bharat Karnataka Team

Published : Aug 24, 2024, 2:52 PM IST

ನಿರಾರ್ಶರಿತ ವೃದ್ಧನ ಬಗ್ಗೆ ಹಿರಿಯ ಪತ್ರಕರ್ತ ಹರ್ಷವರ್ಧನ್ ಶೀಲವಂತ, ಆರ್. ಶ್ರೀನಿಧಿ ಅವರು ಎಕ್ಸ್​ನಲ್ಲಿ ಹಂಚಿಕೊಂಡ ಟ್ವೀಟ್‍ಗೆ ಕೂಡಲೇ ಸ್ಪಂದಿಸಿದ ಡಿಸಿ ದಿವ್ಯಪ್ರಭು ವೃದ್ಧನಿಗೆ ಕೂಡಲೇ ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸಲು ಸಂಬಂಧಿತ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

rescue of homeless old man
ನಿರಾಶ್ರಿತ ವೃದ್ಧನ ರಕ್ಷಣೆ (ETV Bharat)
ನಿರಾಶ್ರಿತ ವೃದ್ಧನ ರಕ್ಷಣೆ (ETV Bharat)

ಧಾರವಾಡ: ಕಳೆದ 15 ದಿನಗಳಿಂದ ನಿರಾಶ್ರಿತ ವೃದ್ಧ ಬೀದಿಬದಿ ಮಲಗಿಕೊಂಡಿರುವುದನ್ನು ಗಮನಿಸಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಕ್ಕೆ ಧಾರವಾಡ ಜಿಲ್ಲಾಡಳಿತ ಶೀಘ್ರವಾಗಿ ಸ್ಪಂದಿಸಿದೆ. ನಗರದ ಜನನಿಬಿಡ ಹಾಗೂ ವಾಹನನಿಬಿಡ ಸ್ಥಳವಾದ ಆಲೂರು ವೆಂಕಟರಾವ ವೃತ್ತ (ಜ್ಯುಬಿಲಿ ಸರ್ಕಲ್) ಬಳಿಯ ಪಿಜ್ಜಾ ಅಡ್ಡದ ಬುಡದ ಬೃಹತ್ ಗಟಾರು ಬಳಿ ವೃದ್ಧ ತಂಗಿದ್ದರು.

ಮುರಕಟ್ಟಿ ಗ್ರಾಮದ ಕೃಷಿಕ ಶಿವಪ್ಪ ಎಂದು ಅವರು ಹೇಳಿಕೊಳ್ಳುತ್ತಿದ್ದರು. ಮನನೊಂದು ಊರು ಬಿಟ್ಟು, ಭಿಕ್ಷಾಟನೆಯಲ್ಲಿ ತೊಡಗಿದ್ದರು. ಶಕ್ತಿ ಕುಂದಿ ಮಳೆಯಲ್ಲಿ ನೆನೆಯುತ್ತ ಸಾವು ಬದುಕಿನ ಹೋರಾಟ ನಡೆಸುತ್ತಿದ್ದರು. ಹಿರಿಯ ಪತ್ರಕರ್ತ ಹರ್ಷವರ್ಧನ್ ಶೀಲವಂತ, ಆರ್. ಶ್ರೀನಿಧಿ ಅವರು ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಹಂಚಿಕೊಂಡ ಟ್ವೀಟ್‍ಗೆ ಕೂಡಲೇ ಸ್ಪಂದಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು, ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶನ ನೀಡಿ, ಕೂಡಲೇ ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸಲು ಆದೇಶಿಸಿದ್ದಾರೆ.

ಹಿರಿಯ ಜೀವ ಸದ್ಯಕ್ಕೆ ತುಸು ಉಸಿರಾಡುವಂತಾಗಿದೆ. ಹಿರಿಯ ನಾಗರಿಕರ ಇಲಾಖೆಯ ಜಿಲ್ಲಾ ಅಧಿಕಾರಿ ಜಗದೀಶ, ಉಪ ನಗರ ಠಾಣೆಯ ಪೊಲೀಸ್ ಸಿಬ್ಬಂದಿ, ಡಿಮ್ಹಾನ್ಸ್ ಸಿಬ್ಬಂದಿ ಹಾಗೂ ರಾಯಪುರ ನಿರಾಶ್ರಿತರ ಪುನರ್ವಸತಿ ಕೇಂದ್ರದ ಸಿಬ್ಬಂದಿಯ ಸಕಾಲಿಕ ಪ್ರಯತ್ನ, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಬೆಳಗಾವಿ: ನಿರಾಶ್ರಿತ ಕೇಂದ್ರಗಳಲ್ಲಿ ನಿರ್ಗತಿಕರಿಗೆ ಅನ್ನ, ಆಶ್ರಯದ ಜೊತೆಗೆ ಕೌಶಲ್ಯ ತರಬೇತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.