ETV Bharat / state

ರಾಜ್ಯದ ಹಲವೆಡೆ 159 ಹೊಸ ಡೆಂಗ್ಯೂ ಪ್ರಕರಣ ಪತ್ತೆ; 3.18 ಕೋಟಿ ಪ್ಯಾರಸಿಟಮಾಲ್ ಮಾತ್ರೆ ದಾಸ್ತಾನು - Dengue Cases

ರಾಜ್ಯದ ಹಲವೆಡೆ 159 ಹೊಸ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

KARNATAKA STATE  PRECAUTION OF DENGUE  DENGUE FEVER  BENGALURU
ಸಾಂದರ್ಭಿಕ ಚಿತ್ರ (ETV Bharat)
author img

By ETV Bharat Karnataka Team

Published : Jul 8, 2024, 11:58 AM IST

ಬೆಂಗಳೂರು: ರಾಜ್ಯದ ಹಲವು ಕಡೆಗಳಲ್ಲಿ 159 ಹೊಸ ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 301ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆ ವಿವಿಧ ಉಪಕ್ರಮಗಳನ್ನು ಕೈಗೊಂಡಿದ್ದರೂ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿಲ್ಲ. ಕಳೆದ ಜನವರಿಯಿಂದ ಇದುವರೆಗೂ ಡೆಂಗ್ಯೂ ಜ್ವರದಿಂದ 6 ಮಂದಿ ಮೃತಪಟ್ಟಿದ್ದಾರೆ ಎಂದು ಇಲಾಖೆ ತಿಳಿಸಿದೆ.

ಕಳೆದ 24 ಗಂಟೆಯಲ್ಲಿ 954 ಮಂದಿಗೆ ಪರೀಕ್ಷೆ ಮಾಡಲಾಗಿದ್ದು, 159 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಅಂದರೆ, 80 ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಒಟ್ಟು ಪ್ರಕರಣಗಳ ಸಂಖ್ಯೆ 1,988 ತಲುಪಿದೆ.

ಡೆಂಗ್ಯೂಪೀಡಿತರಲ್ಲಿ ಸದ್ಯ 130 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಉಳಿದಂತೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 25, ಚಿಕ್ಕಬಳ್ಳಾಪುರ 8, ತುಮಕೂರು 12, ದಾವಣಗೆರೆ 10, ಗದಗ 5, ಯಾದಗಿರಿ 2, ಬೀದರ್ 13, ಕೊಪ್ಪಳ 1, ಹಾಸನ 3 ಪ್ರಕರಣಗಳು ಪತ್ತೆಯಾಗಿವೆ.

301 ಸಕ್ರಿಯ ಪ್ರಕರಣಗಳ ಪೈಕಿ 35 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸದಾಗಿ ಡೆಂಗ್ಯೂಪೀಡಿತರಾದವರಲ್ಲಿ ಮೂವರು ಒಂದು ವರ್ಷದೊಳಗಿನವರಾದರೆ, 48 ಮಂದಿ ಒಂದರಿಂದ 18 ವರ್ಷದೊಳಗಿನವರು. 108 ಮಂದಿ 18 ವರ್ಷ ಮೇಲ್ಪಟ್ಟವರು. ರಾಜ್ಯದಲ್ಲಿ ಈ ವರ್ಷ ವರದಿಯಾದ ಒಟ್ಟು ಡೆಂಗ್ಯೂ ಪ್ರಕರಣಗಳ ಸಂಖ್ಯೆ 7,165ಕ್ಕೆ ಏರಿಕೆಯಾಗಿದೆ.

"ರಾಜ್ಯದಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆ ಸೂಕ್ತ ಕ್ರಮಗಳನ್ನು ಕೈಗೊಂಡಿದೆ. ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಅಗತ್ಯಬಿದ್ದಲ್ಲಿ ಈಡಿಸ್ ಸೊಳ್ಳೆಗಳ ನಿಯಂತ್ರಣಕ್ಕೆ ಔಷಧ ಸಿಂಪಡಿಸುತ್ತಿದ್ದಾರೆ" ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಮಾಹಿತಿ ನೀಡಿದ್ದಾರೆ.

'ಪ್ಯಾರಸಿಟಮಾಲ್' ಮಾತ್ರೆ ದಾಸ್ತಾನು: ಡೆಂಗ್ಯೂ ಜ್ವರ ನಿಯಂತ್ರಿಸಲು ಸಹಕಾರಿಯಾಗಿರುವ 'ಪ್ಯಾರಸಿಟಮಾಲ್‌' ಅಗತ್ಯ ಪ್ರಮಾಣದಲ್ಲಿ ದಾಸ್ತಾನಿದೆ. ವೈದ್ಯಕೀಯ ಸಂಸ್ಥೆಗಳಿಂದ 8.72 ಕೋಟಿ ಪ್ಯಾರಸಿಟಮಾಲ್ 650 ಎಂ.ಜಿ ಮಾತ್ರೆಗಳಿಗೆ ಬೇಡಿಕೆ ಬಂದಿತ್ತು. ಈ ಔಷಧವನ್ನು ಸರಬರಾಜು ಮಾಡಲಾಗಿದೆ. ರಾಜ್ಯದ ಎಲ್ಲ ಔಷಧ ಉಗ್ರಾಣಗಳಲ್ಲಿ 3.7 ಕೋಟಿ ಮಾತ್ರೆಗಳು ಲಭ್ಯವಿವೆ. ರಾಜ್ಯದ ವಿವಿಧ ವೈದ್ಯಕೀಯ ಸಂಸ್ಥೆಗಳಲ್ಲಿ 3.18 ಕೋಟಿ ಮಾತ್ರೆಗಳ ದಾಸ್ತಾನಿದೆ ಎಂದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಮಕ್ಕಳಿಗೆ ನೀಡಬಹುದಾದ ಪ್ಯಾರಸಿಟಮಾಲ್ 250ಎಂ.ಜಿ /5 ಎಂಎಲ್‌ ಔಷಧಕ್ಕೆ ಸಂಬಂಧಿಸಿದಂತೆ ಔಷಧ ಉಗ್ರಾಣಗಳಲ್ಲಿ 5.76 ಲಕ್ಷ ಬಾಟಲ್‌ಗಳು, ವಿವಿಧ ವೈದ್ಯಕೀಯ ಸಂಸ್ಥೆಗಳಲ್ಲಿ 3.86 ಲಕ್ಷ ಬಾಟಲ್‌ಗಳು ಲಭ್ಯವಿವೆ. ಕ್ರಮವಾಗಿ ಪ್ಯಾರಸಿಟಮಾಲ್ ಸಿರಪ್ 25020.2 /5 ) 27.28 ಲಕ್ಷ ಮತ್ತು 5.81 ಲಕ್ಷ ಬಾಟಲ್‌ಗಳು ದಾಸ್ತಾನಿದೆ. ಬಾಯಿಗೆ ಹಾಕುವ ಪ್ಯಾರಸಿಟಮಾಲ್ ಹನಿ ಒಟ್ಟು 6.90 ಲಕ್ಷ ಬಾಟಲಿಗಳು ಲಭ್ಯವಿವೆ. ಪ್ಯಾರಸಿಟಮಾಲ್ 500 ಎಂ.ಜಿ ಮಾತ್ರೆ 10.04 ಕೋಟಿ ದಾಸ್ತಾನು ಇದೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ತುಮಕೂರಿನಲ್ಲಿ 182 ಡೆಂಗ್ಯೂ ಪ್ರಕರಣ: ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಗೃಹ ಸಚಿವರ ಸೂಚನೆ - Tumkur Dengue Cases

ETV Bharat Logo

Copyright © 2024 Ushodaya Enterprises Pvt. Ltd., All Rights Reserved.