ETV Bharat / state

'ಚನ್ನಪಟ್ಟಣದಲ್ಲಿ ನಾನೇ ಕ್ಯಾಂಡಿಡೇಟ್.. ಮತದಾರರು ವೋಟ್ ಹಾಕೋದೂ ನನಗೇ': ಡಿಸಿಎಂ ಡಿಕೆಶಿ - Channapatna candidate

ಚನ್ನಪಟ್ಟಣದಲ್ಲಿ ಕ್ಯಾಂಡಿಡೇಟ್, ಬಿ ಫಾರಂ ಬರೆಯೋನು, ಕ್ಯಾಂಡಿಡೇಟ್ ಹಾಕುವವನು ನಾನೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​​ ಹೇಳಿದ್ದಾರೆ.

ಡಿ.ಕೆ. ಶಿವಕುಮಾರ್
ಡಿ.ಕೆ. ಶಿವಕುಮಾರ್ (ETV Bharat)
author img

By ETV Bharat Karnataka Team

Published : Aug 30, 2024, 1:34 PM IST

ಡಿಸಿಎಂ ಡಿ.ಕೆ. ಶಿವಕುಮಾರ್​​ ಹೇಳಿಕೆ (ETV Bharat)

ಬೆಂಗಳೂರು: "ಚನ್ನಪಟ್ಟಣದಲ್ಲಿ ನಾನೇ ಕ್ಯಾಂಡಿಡೇಟ್, ಬಿ ಫಾರಂ ಬರೆಯೋನು ನಾನು, ಕ್ಯಾಂಡಿಡೇಟ್ ಹಾಕುವವನು ನಾನು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ ಹೇಳಿದ್ದಾರೆ.

ಚನ್ನಪಟ್ಟಣದಲ್ಲಿ ಯಾರು ಕಾಂಗ್ರೆಸ್​ ಅಭ್ಯರ್ಥಿ ಎಂಬ ವಿಚಾರಕ್ಕೆ " ನಾನೇ ರೀ ಕ್ಯಾಂಡಿಡೇಟ್, ಫಾರಂ ಬರೆಯೋನು ನಾನು, ಕ್ಯಾಂಡಿಡೇಟ್​ ಹಾಕುವವನು ನಾನು, ಅವರು ವೋಟ್ ಹಾಕುವುದು ನನಗೆ. ನಿಮ್ಮನ್ನು ನಿಲ್ಲಿಸಿದರೂ ನನಗೇ ವೋಟ್​ ಹಾಕುವುದು ಎಂದು ಗೆಲುವಿನ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಸಿ.ಪಿ. ಯೋಗೇಶ್ವರ್​ಗೆ ಟಿಕೆಟ್​ ಕೊಡುತ್ತೀರಾ ಎಂಬ ಪ್ರಶ್ನೆಗೆ "ಈಗ ಯಾಕೆ ರೀ ಅದರ ಬಗ್ಗೆ ಮಾತು. ಅವರು ಮೈತ್ರಿಯಲ್ಲಿದ್ದಾರೆ. ನಾನು ಈಗ ಯಾಕೆ ಮಾತನಾಡಲಿ. ನಿಮ್ಮ ಮಾತಿ‌ನಲ್ಲಿ ನನಗೆ ನಂಬಿಕೆ ಇಲ್ಲ" ಎಂದರು.

ಬಳಿಕ ಚನ್ನಪಟ್ಟಣ ಉದ್ಯೋಗ‌ಮೇಳ ವಿಚಾರಕ್ಕೆ ಡಿಕೆಶಿ, "ಜನ ಅಧಿಕಾರ ಮಾಡಿ ಅಂತ ಅವಕಾಶ ಕೊಟ್ಟಿದ್ದಾರೆ. ಅಧಿಕಾರ ಉಪಯೋಗಿಸಿ ಜನರಿಗೆ ಒಳ್ಳೆಯದು ಮಾಡಬೇಕು. ನಿನ್ನೆ ಎತ್ತಿನ ಹೊಳೆಗೆ ಹೋಗಿದ್ದೆ, ನೀರನ್ನು ಚಾಲನೆ‌ ಮಾಡಿ ಬಂದಿದ್ದೇನೆ. ಅಧಿಕೃತ ಉದ್ಘಾಟನೆಗೆ ಒಳ್ಳೆಯ ಮುಹೂರ್ತ ನೋಡುತ್ತೇವೆ. ಸಿಎಂ ಜೊತೆಗೂ ಮಾತುಕತೆ ನಡೆಸಿದ್ದೇನೆ. ಈಗ ಉದ್ಯೋಗ ಮೇಳ ಮಾಡುತ್ತಿದ್ದೇವೆ. ಚನ್ನಪಟ್ಟಣಕ್ಕೆ ಹೋದಾಗೆಲೆಲ್ಲ ಹುಡುಗರು ಉದ್ಯೋಗ ಮೇಳದ ಬಗ್ಗೆ ಕೇಳುತ್ತಾ ಇರುತ್ತಾರೆ. ಹಾಗಾಗಿ ಉದ್ಯೋಗ ಮೇಳ ಮಾಡುತ್ತೇವೆ" ಎಂದು ತಿಳಿಸಿದರು.

ಬಿಎಸ್​ ಯಡಿಯೂರಪ್ಪ ಅವರ ಪೋಕ್ಸೋ ಕೇಸ್​ ವಿಚಾರವಾಗಿ ಪ್ರತಿಕ್ರಿಯಿಸಿದ ಡಿಕೆಶಿ ಶಿವಕುಮಾರ್​​, "ಕೋರ್ಟ್​ ವಿಚಾರವೆಲ್ಲಾ ನನಗೆ ಗೊತ್ತಿಲ್ಲ. ಕೋರ್ಟ್​ ತೀರ್ಪು ನೀಡುವುದು ಅಷ್ಟೇ ಗೊತ್ತು. ತೀರ್ಪು ಬಂದ ಮೇಲಷ್ಟೇ ನಾವು ಮಾತನಾಡೋಣ" ಎಂದು ಹೇಳಿದರು.

ಕೊನೆಗೆ ರಾಜಭವನ ಚಲೋ‌ ವಿಚಾರವಾಗಿ ಮಾತನಾಡಿ, "ರಾಜ್ಯಪಾಲರ ಭೇಟಿಗೆ ಸಮಯ ಕೇಳಿದ್ದೆವು, ಸಮಯ ಕೊಟ್ಟಿದ್ದಾರೆ. ಮೊನ್ನೆ ಬಿಜೆಪಿ ಶಾಸಕ ಎಸ್‌ಆರ್‌ ವಿಶ್ವನಾಥ್‌ ಪುತ್ರಿ ಹಾಗೂ ಕಾಂಗ್ರೆಸ್‌ ಸಚಿವ ಬೈರತಿ ಸುರೇಶ್‌ ಅವರ ಪುತ್ರನ ವಿವಾಹ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಸಿಕ್ಕಿದ್ದರು. ಯಾವಾಗ ಬರುತ್ತೀರಾ ಅಂತ ಕೇಳಿದ್ದರು. ನಮಗೆ ಸಮಯ ಕೊಟ್ಟಿದ್ದಾರೆ, ಭೇಟಿ ಮಾಡುತ್ತೇವೆ" ಎಂದರು.

ಇದನ್ನೂ ಓದಿ: ಆಹಾರ ಅಸುರಕ್ಷತೆ: ನಾಲ್ಕು ಆಹಾರ ಸಂಸ್ಥೆ ಮಳಿಗೆಗಳ ಲೈಸೆನ್ಸ್ ಅಮಾನತು - Suspension of licenses

ETV Bharat Logo

Copyright © 2024 Ushodaya Enterprises Pvt. Ltd., All Rights Reserved.