ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶಾಲೆಗಳಿಗೆ ರಜೆ ನೀಡಲಾಗಿದೆ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಎಸ್ಪಿ, ಜಿಪಂ ಸಿಇಒ ಅವರೊಂದಿಗೆ ಶುಕ್ರವಾರ ಬಂಟ್ವಾಳದಲ್ಲಿ ಪ್ರಾಕೃತಿಕ ವಿಕೋಪ ನಡೆದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು. ಈ ವೇಳೆ, ಅಲ್ಲಿದ್ದ ಮಕ್ಕಳಿಗೆ ಹೀಗೆ ಓಡಾಡಿಕೊಂಡಿದ್ದರೆ ರಜೆ ಕೊಡಲ್ಲ ಎಂದು ಹೇಳಿದ್ದು, ಅದರ ವಿಡಿಯೋ ಇದೀಗ ವೈರಲ್ ಆಗಿದೆ.
ವಿಡಿಯೋದಲ್ಲೇನಿದೆ?: ವಿಡಿಯೋದಲ್ಲಿ ಜಿಲ್ಲಾಧಿಕಾರಿ, ಹೀಗೆ ಓಡಾಡಿಕೊಂಡಿದ್ದರೆ ರಜೆ ಕೊಡಲ್ಲ. ಮಳೆಯಲ್ಲಿ ಓಡಾಡಬಾರದು ಎಂದಿದ್ದಾರೆ. ಈ ವೇಳೆ ಅವರಲ್ಲೋರ್ವ ಹುಡುಗ "ನಾಳೆ ಮತ್ತೆ ರಜೆಯಾ?" ಎಂದು ಡಿಸಿಯವರನ್ನೇ ಪ್ರಶ್ನಿಸಿದ್ದಾನೆ. ಆಗ ಎಲ್ಲರೂ ನಗೆಗಡಲಲ್ಲಿ ತೇಲಿದರು. ವಿದ್ಯಾರ್ಥಿಯ ಈ ಮಾತಿನಿಂದ ಮುಗುಳ್ನಕ್ಕ ಡಿಸಿಯವರು ಹುಡುಗನ ಬೆನ್ನು ತಟ್ಟಿ, ಎಲ್ಲಿ ಸ್ಕೂಲ್? ಎಂದು ಪ್ರಶ್ನಿಸಿದ್ದಾರೆ. ಆಗ ಮಕ್ಕಳು ಗೂಡಿನ ಬಳಿ ಎಂದು ಹೇಳುತ್ತಾರೆ.
ಇದನ್ನೂ ಓದಿ: ಉಡುಪಿ: ದ್ವಿಚಕ್ರ ವಾಹನಕ್ಕೆ ನಾಯಿ ಕಟ್ಟಿ ಎಳೆದೊಯ್ದ ವ್ಯಕ್ತಿ, ಪ್ರಕರಣ ದಾಖಲು - man dragged a dog